Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentನನ್ನ ಮದುವೆ ಸಿನಿಮಾ ಸ್ಟೈಲ್ ನಲ್ಲಿ ನೆಡೆದು ಹೋಯ್ತು ಹೀಗೆಲ್ಲಾ ಆಗುತ್ತೆ ಅಂತ ನಾನು ಕನಸಲ್ಲೂ...

ನನ್ನ ಮದುವೆ ಸಿನಿಮಾ ಸ್ಟೈಲ್ ನಲ್ಲಿ ನೆಡೆದು ಹೋಯ್ತು ಹೀಗೆಲ್ಲಾ ಆಗುತ್ತೆ ಅಂತ ನಾನು ಕನಸಲ್ಲೂ ಕೂಡ ಅನ್ಕೊಂಡಿರಲಿಲ್ಲ ಎಂದ ನೋವು ಹಂಚಿಕೊಂಡ ನಟಿ ಭವ್ಯಶ್ರೀ ರೈ.

 

ಸಿನಿಮಾ ರೀತಿ ನಡೆದು ಹೋದ ಭವ್ಯಶ್ರೀ ರೈ ಅವರ ಮದುವೆ ಕಥೆ ಭವ್ಯಶ್ರೀ ರೈ (Bhavyashree Rai ) ಅವರು 90ರ ದಶಕದಿಂದಲೂ ಕನ್ನಡ ಕಿರುತೆರೆಯ ಧಾರಾವಾಹಿ ಹಾಗೂ ಬೆಳ್ಳಿತೆರೆಯ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಬಹಳ ಹತ್ತಿರವಾಗಿರುವ ನಟಿ. ಕಿರುತೆರೆಯ ಕುಂಕುಮ ಭಾಗ್ಯ, ನಿತ್ಯಶ್ರೀ, ಮನೆಯೊಂದು ಮೂರು ಬಾಗಿಲು ಮತ್ತು ಇತ್ತೀಚೆಗಿನ ಕಮಲಿ ಧಾರವಾಹಿ ವರೆಗೂ ಜನರಿಗೆ ಪ್ರತಿದಿನ ಟಿವಿ ಮೂಲಕ ಭೇಟಿಯಾಗುವ ಈ ನಟಿ ಶಿವಣ್ಣನ ತಂಗಿಯಾಗಿ ಕೂಡ ಮುತ್ತಣ್ಣ (Muththanna) ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಶಿವರಾಜ್ ಕುಮಾರ್, ವಿಷ್ಣುವರ್ಧನ್, ರಮೇಶ್ ಅರವಿಂದ್, ಶಶಿಕುಮಾರ್, ಅಂಬರೀಶ್ ಹೀಗೆ ಕನ್ನಡದ ಬಹುತೇಕ ಎಲ್ಲಾ ಮೇರು ನಟರ ಜೊತೆ ತೆರೆ ಹಂಚಿಕೊಂಡಿರುವ ಇವರು ನೋಡಲು ಬಹಳ ಸಿಂಪಲ್ ಆದರೆ ಅಭಿನಯದಲ್ಲಿ ಮಾತ್ರ ಬಹಳ ಗ್ರೇಟ್. ಈಗ ಮದುವೆಯಾಗಿ ಮಗು ಕೂಡ ಪಡೆದಿರುವ ಇವರ ದಾಂಪತ್ಯ ಜೀವನ ಸುಖಮಯವಾಗಿದೆ, ಆದರೆ ಇವರ ಮದುವೆ ನಡೆದಿದ್ದೇ ಸಿನಿಮಾ ರೀತಿಯಲ್ಲಿ ಎನ್ನುವುದು ಹೆಚ್ಚಿನ ಜನರಿಗೆ ತಿಳಿದಿಲ್ಲ.

ಹಲವು ಸಂದರ್ಶನಗಳಲ್ಲಿ ಈ ವಿಷಯವನ್ನು ಭವ್ಯಶ್ರೀ ರೈ ಅವರು ಹಾಗೂ ಅವರ ಪತಿ ಸುರೇಶ್ ರೈ (Suresh Rai) ಅವರು ಹೇಳಿಕೊಂಡಿದ್ದಾರೆ. ಅದೇನೆಂದರೆ ಭವ್ಯಶ್ರೀ ಅವರಿಗೆ ಅವರ ತಂದೆ ತಾಯಿ ಬಿಟ್ಟು ಇರಲು ಇಷ್ಟ ಇರಲಿಲ್ಲವಂತೆ. ಹಾಗಾಗಿ ಅವರು ಮದುವೆ ಆಗುವುದೇ ಇಲ್ಲ ಎಂದು ಡಿಸೈಡ್ ಮಾಡಿದ್ದರಂತೆ. ಯಾವುದೇ ಪ್ರಪೋಸಲ್ ಬಂದರೂ ಉಪವಾಸ ಮಾಡಿ ಅದನ್ನು ಮುರಿದು ಬಿಡುತ್ತಿದ್ದರಂತೆ.

ಹೀಗಾಗಿ ಮನೆಯವರೆಲ್ಲಾ ನಿರ್ಧಾರ ಮಾಡಿ ಇವರಿಗೆ ಹೇಳದೆ ಮದುವೆ ಫಿಕ್ಸ್ ಮಾಡಿಬಿಡಬೇಕು ಎಂದು ನಿರ್ಧಾರ ಮಾಡಿಕೊಂಡು ಸುರೇಶ್ ರೈ ಅವರ ಜೊತೆ ಮದುವೆ ಫಿಕ್ಸ್ ಮಾಡಿದರಂತೆ. ಸುರೇಶ್ ರೈ ಅವದಿಗೆ ಭವ್ಯಶ್ರೀ ಅವರ ತಾಯಿ ಮಗಳನ್ನು ಮದುವೆಗೆ ಒಪ್ಪಿಸುವುದಾಗಿ ಮಾತು ಕೊಟ್ಟಿದ್ದಾರಂತೆ. ಒಮ್ಮೆ ಸುರೇಶ್ ರೈ ಅವರು ಮದುವೆ ವಿಚಾರವಾಗಿ ಮನೆಗೆ ಬಂದಿದ್ದಾಗ ಶೂಟಿಂಗ್ ಸೆಟ್ ಇಂದ ತಾಯಿಗೆ ಫೋನ್ ಮಾಡಿದ್ದ ಭವ್ಯಶ್ರೀ ರೈ ಅವರು ಸುರೇಶ್ ರೈ ಅವರು ಬಂದಿರುವ ವಿಚಾರ ತಿಳಿದು ಅವರ ಜೊತೆ ಮಾತನಾಡಿದರಂತೆ.

ಅವರ ತಾಯಿ ಮದುವೆ ವಿಚಾರವಾಗಿ ಬಂದಿದ್ದಾರೆ ಎಂದು ಹೇಳಿದ್ದಕ್ಕೆ ಮದುವೆಗೆ ಇನ್ವಿಟೇಶನ್ ಕೊಡಲು ಬಂದಿರಬಹುದು ಎಂದು ತಿಳಿದು ಮದುವೆ ಫಿಕ್ಸ್ ಆಗಿರುವುದಕ್ಕೆ ಕಂಗ್ರಾಜುಲೇಷನ್ಸ್ ಮನೆಯವರೆಲ್ಲ ಬರುತ್ತೇವೆ ಎಂದು ಹೇಳಿ ಬಿಟ್ಟಿದ್ದರಂತೆ. ಆದರೆ ಪಾಪ ಅವರಿಗೆ ಗೊತ್ತಿರಲಿಲ್ಲ ಅವರ ಜೊತೆಗೆ ಮದುವೆ ಫಿಕ್ಸ್ ಆಗುತ್ತಿರುವುದು ಎಂದು. ಕೊನೆಗೆ ಒಂದು ದಿನ ಅಮ್ಮನ ಜೊತೆ ಹೊರಗೆ ಹೋಗಿದ್ದಾಗ ಇವರ ತಾಯಿ ಸ್ನೇಹಿತೆಯೊಬ್ಬರಿಗೆ ನನ್ನ ಮಗಳ ಮದುವೆ ಇದೆ ಬರಬೇಕು ಎಂದು ಕರೆಯುತ್ತಿದ್ದರಂತೆ.

ಮನೆಯಲ್ಲಿ ಅಕ್ಕನಿಗೆ ಮದುವೆ ಆಗಿದೆ ಯಾರ ಮದುವೆಗೆ ಕರೆಯುತ್ತಿದ್ದಾರೆ ಎಂದು ಮನೆಗೆ ಬಂದು ಕೇಳಿದಾಗ ನಿನಗೆ ಮದುವೆ ಫಿಕ್ಸ್ ಮಾಡಿದ್ದೇವೆ ಎಂದು ಆಗ ನಿಜ ಹೇಳಿದರಂತೆ. ಆಗಲೂ ಹಠ ಬಿಡದೆ ಮದುವೆಗೆ ಒಪ್ಪುವುದಿಲ್ಲ ಎಂದು ಹೇಳುತ್ತಿದ್ದಾಗ ಅವರ ತಾಯಿ ನಿನ್ನನ್ನು ನಂಬಿ ಮಾತು ಕೊಟ್ಟಿದ್ದೇನೆ ಇನ್ವಿಟೇಶನ್ ಎಲ್ಲಾ ಪ್ರಿಂಟ್ ಆಗಿದೆ ಎಲ್ಲರಿಗೆ ಹೇಳಿಯೂ ಆಗಿದೆ ನಮ್ಮ ಮಾತು ಉಳಿಸುತ್ತಿಯಾ ಇಲ್ಲ ನಮ್ಮ ಮರ್ಯಾದೆ ತೆಗಿಯುತೀಯ ನಿನಗೆ ಬಿಟ್ಟಿದ್ದು ಎಂದು ಹೇಳಿದರಂತೆ. ಆದರೆ ಇಂದು ಸುರೇಶ ರೈ ಅಂತಹ ಬಾಳ ಸಂಗಾತಿ ಪಡೆದು ಬಹಳ ಸಂತೋಷದಿಂದ ಇದ್ದೇನೆ ಖುಷಿ ಖುಷಿಯಾಗಿ ಮದುವೆ ಕಥೆಯನ್ನು ಹೇಳಿಕೊಳ್ಳುತ್ತಾರೆ ಭವ್ಯಶ್ರೀ ರೈ ಅವರು.