ಸಾಮಾನ್ಯವಾಗಿ ಎಲ್ಲರಿಗೂ ಬೇಸಿಗೆಯಲ್ಲಿ ಬಾಡಿ ಹೀಟ್ ಹೆಚ್ಚಾಗುತ್ತದೆ. ಇನ್ನು ಕೆಲವರಿಗೆ ವರ್ಷಪೂರ್ತಿ ದೇಹದ ಉಷ್ಣಾಂಶ ಹೆಚ್ಚು ಇರುತ್ತದೆ ಇದರಿಂದ ಅವರಿಗೆ ಕಣ್ಣು ಉರಿ, ಕೈಕಾಲು ಉರಿ, ಹೊಟ್ಟೆ ಉರಿ, ಯೂರಿನ್ ಇನ್ಫೆಕ್ಷನ್ ಮುಂತಾದ ಸಮಸ್ಯೆಗಳು ಕಾಡುತ್ತಿರುತ್ತವೆ.
ಇದರ ಜೊತೆ ಯಾವುದರಲ್ಲೂ ಆಸಕ್ತಿ ಇಲ್ಲದೆ ಇರುವುದು, ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುವುದು, ಮಂಕಾಗಿ ಇರುವುದು ರಾತ್ರಿ ನಿದ್ದೆ ಬರದೆ ಇರುವುದು ಹೀಗಾಗುತ್ತದೆ ಇನ್ನು ಕೆಲವರಿಗೆ ಕೈ ಕಾಲು ಜೋಮು ಹಿಡಿಯುವುದು, ವಿಪರೀತ ಕೈಕಾಲುಗಳಲ್ಲಿ ಸೆಳೆತ ಬರುವುದು ಇಂತಹ ಸಮಸ್ಯೆಗಳು ಇರುತ್ತವೆ, ಇದಕ್ಕೆಲ್ಲ ಕಾರಣ ರಕ್ತಹೀನತೆ, ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಆಗಿರುವುದು.
ಈ ಎಲ್ಲಾ ಸಮಸ್ಯೆಗೂ ಒಂದು ಉತ್ತಮವಾದ ಪರಿಹಾರವನ್ನು ಇಂದು ನಾವು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಈ ಒಂದು ಮನೆ ಮದ್ದು ನಿಮ್ಮ ಎಲ್ಲಾ ಸಮಸ್ಯೆಗೂ ಖಂಡಿತ ಪರಿಹಾರ ನೀಡಲಿದೆ. ಆಯುರ್ವೇದದ ಅಂಗಡಿಯಲ್ಲಿ ಗೋಂದ್ ಕಟೀರಾ (GOND KATIRA) ಎನ್ನುವ ಒಂದು ಪದಾರ್ಥ ಸಿಗುತ್ತದೆ.
ಈ ಸುದ್ದಿ ಓದಿ:- ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!
ಆನ್ಲೈನ್ ನಲ್ಲಿ ಕೂಡ ಆರ್ಡರ್ ಮಾಡಬಹುದು ಇದು ನಾವು ಪುಸ್ತಕಗಳನ್ನು ಅಂಟಿಸುವ ಗೋಂದ್ ಅಲ್ಲ. ಇದನ್ನು ಉತ್ತರ ಭಾರತದ ಕಡೆಯಲ್ಲಿ ಹೆಚ್ಚಾಗಿ ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆ, ಇದು ತಿನ್ನಲು ಅರ್ಹವಾದ ಪದಾರ್ಥವಾಗಿದೆ. ಈ ಗೋಂದ್ ಕಟೀರವನ್ನು ಕನಿಷ್ಠ 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಬಳಸಬೇಕು ಹಾಗಾಗಿ ಪ್ರತಿ ರಾತ್ರಿ ಅರ್ಧ ಚಮಚದಷ್ಟು ಗೋಂದ್ ಕಟೀರಾವನ್ನು ಅರ್ಧ ಲೋಟ ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಸೇವಿಸಬೇಕು.
ಇದರಿಂದ ದೇಶದ ಉಷ್ಣತೆ ತಕ್ಷಣ ಕಡಿಮೆ ಆಗುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಇದನ್ನು ಹೀಗೆ ಮಾಡುವುದರ ಬದಲು ಇನ್ನೂ ರುಚಿಕರವಾಗಿ ಮತ್ತು ಇನ್ನು ಹೆಚ್ಚಿನ ಪೋಷಕಾಂಶಗಳು ಸಿಗುವ ರೀತಿ ಸೇವಿಸಬಹುದು. ಅದಕ್ಕಾಗಿ ಗೋಂದ್ ಕಟೀರಾ ಮತ್ತು ಸಬ್ಬಕ್ಕಿಯ ಪಾಯಸ ಮಾಡಬೇಕು.
ಇದನ್ನು ಮಾಡುವುದು ಹೇಗೆಂದರೆ ರಾತ್ರಿ ಹೊತ್ತು ಗೋಂದ್ ಕಟೀರಾ ನೆನೆಸುವ ಸಮಯದಲ್ಲಿ ಎರಡರಿಂದ ಮೂರು ಚಮಚದಷ್ಟು ಸಬ್ಬಕ್ಕಿ ಕೂಡ ನೆನಸಿ, ಆದರೆ ಎರಡನ್ನು ಒಟ್ಟಿಗೆ ನೆನಸಬೇಡಿ. ಬೇರೆ ಬೇರೆ ಬೌಲ್ ಗಳಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ನೆನೆದ ಸಬ್ಬಕ್ಕಿಯನ್ನು ಅದಕ್ಕೆ ಬೇಯಲು ಬೇಕಾದ ಅಳತೆಯ ನೀರನ್ನು ಹಾಕಿ ಚೆನ್ನಾಗಿ ಬೇಯಿಸಿ ಅದು ಬೆಂದ ಮೇಲೆ ಒಂದು ಬೌಲ್ ಹಾಲನ್ನು ಹಾಕಿ ಸ್ವಲ್ಪ ಏಲಕ್ಕಿ ಹಾಗೂ ಡ್ರೈ ಫ್ರೂಟ್ಸ್ ಇದ್ದರೆ ತುಪ್ಪದಲ್ಲಿ ಕರಿದು ಹಾಕಿ ಬಾದಾಮಿಯನ್ನು ಕೂಡ ಪುಡಿ ಮಾಡಿ ಹಾಕಿ.
ಈ ಸುದ್ದಿ ಓದಿ:- ನಿಮ್ಮ ರಾಶಿ ಪ್ರಕಾರವಾಗಿ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಿ ಎಂದು ತಿಳಿಯಿರಿ.!
ಎಲ್ಲವೂ ಒಂದು ಹದಕ್ಕೆ ಬೆಂದು ಕುದಿದ ಮೇಲೆ ಇದನ್ನು ಒಂದು ಲೋಟಕ್ಕೆ ಹಾಕಿಕೊಂಡು ಆರಿದ ಮೇಲೆ ನೀವು ನೆನಸಿಟ್ಟಿದ್ದ ಆ ಗೋಂದ್ ಕಟೀರವನ್ನು ಕೂಡ ಹಾಕಿ ಸೇವಿಸಿ ಈ ಪಾಯಸವು ರಕ್ತ ಹೀನತೆ ಕಡಿಮೆ ಮಾಡುತ್ತದೆ. ವಿಪರೀತವಾದ ಸುಸ್ತು ಇರುವವರಿಗೆ ಅತ್ಯುತ್ತಮ ಔಷಧಿಯಾಗಿದೆ ಹಾಗೆಯೇ ದೇಹದ ಉಷ್ಣತೆ ಹೆಚ್ಚಾಗಿ ಇರುವವರು ತಕ್ಷಣ ಕಡಿಮೆ ಮಾಡಿಕೊಳ್ಳಬಹುದು.
ಮತ್ತು ದೇಹದ ಉಷ್ಣತೆ ಜಾಸ್ತಿಯಾದಾಗ ಕಾಡುವಂತಹ ಎಲ್ಲ ಸಮಸ್ಯೆಗಳಿಗೂ ಇದು ರಾಮಬಾಣವಾಗಿದೆ. ಮತ್ತು ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳು ಗ್ಯಾಸ್ಟಿಕ್ ಸಮಸ್ಯೆ, ಎದೆ ಉರಿ, ಹೊಟ್ಟೆ ಉರಿ, ಹೊಟ್ಟೆ ನೋವು ಇದೆಲ್ಲಕ್ಕೂ ಕೂಡ ಈ ಪಾಯಸ ಪರಿಹಾರವಾಗಿದೆ. ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ ಒಮ್ಮೆ ಟ್ರೈ ಮಾಡಿ ನೋಡಿ.