ಎಲ್ಲಿ ಅರ್ಜಿ ಸಲ್ಲಿಸಬೇಕು ಏನೆಲ್ಲ ದಾಖಲೆಗಳು ಬೇಕು ಮತ್ತು ಯಾವ ದಿನಾಂಕದಿಂದ ಅರ್ಜಿ ಸಲ್ಲಿಸಬಹುದು ಮಾಹಿತಿ ಹೀಗಿದೆ ನೋಡಿ ಪ್ರತಿ ಕುಟುಂಬವು ಕೂಡ ಒಂದು ರೇಷನ್ ಕಾರ್ಡ್ (Ration Card) ಹೊಂದಿರಬೇಕು ಮತ್ತು ಆ ಕುಟುಂಬದ ಸದಸ್ಯರ ಹೆಸರು ರೇಷನ್ ಕಾರ್ಡ್ ನಲ್ಲಿ ಇರಬೇಕು.
ಈ ರೀತಿ ಇದ್ದಾಗ ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ಪಡೆಯಬಹುದು APL / BPL ಯಾವುದಾದರೂ ಒಂದು ರೇಷನ್ ಕಾರ್ಡ್ ಇರಲೇಬೇಕು APL ಕಾರ್ಡ್ ಗಳಿಗೂ ಕೂಡ ಈಗ ಸರ್ಕಾರದಿಂದ ಸಾಕಷ್ಟು ನೆರವು ಸಿಗುತ್ತಿದೆ. ಇತ್ತೀಚಿಗೆ ಬಂದ ಎರಡು ಪ್ರಮುಖ ಯೋಜನೆಗಳನ್ನು ಹೇಳುವುದಾದರೆ ಕೇಂದ್ರ ಸರ್ಕಾರದಿಂದ ನೀಡಲಾದ ಆಯುಷ್ಮಾನ್ ಹೆಲ್ತ್ ಕಾರ್ಡ್ (Ayushman Health Card) ಪಡೆದ APL ಕುಟುಂಬಗಳಿಗೆ.
ಈ ಸುದ್ದಿ ಓದಿ:- ಈ ವರ್ಷದಲ್ಲಿ ಮನೆ ಕಟ್ಟುವ ಯೋಗ ಪಡೆದಿವೆ ಈ 5 ರಾಶಿಗಳು, ಆ ರಾಶಿಗಳು ಯಾವುವು ಗೊತ್ತಾ.?
1.5 ಲಕ್ಷದವರೆಗೆ ಉಚಿತ ಚಿಕಿತ್ಸೆ ಮತ್ತು ರಾಜ್ಯ ಸರ್ಕಾರದ ವತಿಯಿಂದ APL ರೇಷನ್ ಕಾರ್ಡ್ ಹೊಂದಿದ್ದರು ಕೂಡ ಆ ಕುಟುಂಬದ ಮುಖ್ಯಸ್ಥರಿಗೆ ಗೃಹಲಕ್ಷ್ಮಿ ಯೋಜನೆ (Gruhalakshmi) ಮೂಲಕ ರೂ.2000 ಸಹಾಯ ಸಿಗುತ್ತದೆ. ಹೀಗಾಗಿ ಯಾವುದಾದರೂ ರೇಷನ್ ಕಾರ್ಡ್ ಹೊಂದುವುದು ಮತ್ತು ಅದರಲ್ಲಿ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡರೆ ಇರಬೇಕಾದದ್ದು ಬಹಳ ಮುಖ್ಯ.
ಆದರೆ ಅನೇಕರು ಇದುವರೆಗೂ ಕೂಡ ರೇಷನ್ ಕಾರ್ಡ್ ನ ಬಗ್ಗೆ ಬಹಳ ನಿರ್ಲಕ್ಷ ತೋರಿದ್ದಾರೆ. ರೇಷನ್ ಕಾರ್ಡ್ ಗಳಲ್ಲಿ ದಾಖಲೆ ಸರಿಯಿಲ್ಲದೆ ಇದ್ದರೂ ಇದನ್ನು ತಿದ್ದುಪಡಿ ಮಾಡಿಸಿಕೊಳ್ಳದೇ ಉಡಾಫೆ ಮಾಡಿದ್ದರು. ಈಗ ಅವರಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ಸಿಗದೇ ಇರುವ ಕಾರಣ ಇವುಗಳನ್ನು ಸರಿ ಪಡಿಸಿಕೊಳ್ಳಲು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕಾಗಿ ಕಾಯುತ್ತಿದ್ದಾರೆ.
ಈ ಸುದ್ದಿ ಓದಿ:- ಈ ಲಕ್ಷಣಗಳು ಇದ್ದರೆ ಕಿಡ್ನಿ ಸಮಸ್ಯೆಯಾಗಿರುತ್ತದೆ, ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬೇಡಿ…
ಇನ್ನು ಅನೇಕರು ಇದುವರೆಗೂ ರೇಷನ್ ಕಾರ್ಡ್ ಗಳನ್ನೇ ಪಡೆದಿಲ್ಲ, ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡುವಂತೆ ಇವರಿಂದ ಸರ್ಕಾರಕ್ಕೆ ಪದೇಪದೇ ಮನವಿ ಸಲ್ಲಿಕೆ ಆಗುತ್ತಿತ್ತು. ಇದರ ಕುರಿತಾದ ಒಂದು ಮಹತ್ವದ ಸುದ್ದಿಯನ್ನು ಎಂದು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಅದರಿಂದ ಈಗಾಗಲೇ ಸಾಕಷ್ಟು ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದ್ದ ಸರ್ಕಾರವು ಇನ್ನು ಸಹ ತಾಂತ್ರಿಕ ಸಮಸ್ಯೆ ಮತ್ತು ಇನ್ನಿತರ ಕಾರಣಗಳಿಂದ ಸಂಪೂರ್ಣವಾಗಿ ಈ ಪ್ರಕ್ರಿಯೆ ಪೂರ್ತಿಗೊಳದ ಕಾರಣ ಮತ್ತೊಂದು ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಅನುಮತಿ ನೀಡಲಾಗುತ್ತಿದೆ.
ಈ ಸುದ್ದಿ ಓದಿ:- ಗರ್ಭಕೋಶದಲ್ಲಿ ಗಡ್ಡೆ ಎಂದರೇನು.? ಇದು ಮರಣಾಂತಿಕ ಆರೋಗ್ಯ ಸಮಸ್ಯೆಯೇ? ಪ್ರತಿ ಹೆಣ್ಣು ಮಗಳು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.!
ಮತ್ತು ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ಈಗಾಗಲೇ ಅರ್ಜಿ ಸಲ್ಲಿಸಿ ಕಳೆದ ಮೂರು ವರ್ಷಗಳಿಂದ BPL ರೇಷನ್ ಕಾರ್ಡ್ ಪಡೆಯಲು ಕಾಯುತ್ತಿರುವ ಫಲಾನುಭವಿಗಳಿಗೆ ಕೂಡ ಸಿಹಿ ಸುದ್ದಿ ಇದೆ. ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪನವರೇ (K.H Muniyappa) ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಯಾವಾಗ?
* ಮಾರ್ಚ್ 31ನೇ ತಾರೀಖಿನೊಳಗೆ ಅನುಮೋದನೆಯಾಗಿದ್ದ ಎಲ್ಲಾ BPL ರೇಷನ್ ಕಾರ್ಡ್ ಗಳ ವಿತರಣೆಯಾಗಲಿದೆ
* ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ ಮತ್ತು ತಿದ್ದುಪಡಿಗಾಗಿ ಅನುಮತಿ ನೀಡಲಾಗುತ್ತಿದೆ ಎಂದು ವಿಷಯ ತಿಳಿಸಿದ್ದಾರೆ.
ಯಾರಿಗೆಲ್ಲ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅನುಮತಿ:-
* ಹೊಸದಾಗಿ ಮದುವೆಯಾಗಿ ಸಂಸಾರ ಆರಂಭಿಸುವ ದಂಪತಿಗಳು
* ಮದುವೆಯಾಗಿ ಈಗ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುವ ದಂಪತಿಗಳು
ಯಾವೆಲ್ಲಾ ತಿದ್ದುಪಡಿಗೆ ಅವಕಾಶ:-
* ಹೊಸ ಸದಸ್ಯರ ಸೇರ್ಪಡೆ
* ಹೆಸರಿನಲ್ಲಿ ಆಗಿರುವ ತಪ್ಪುಗಳ ತಿದ್ದುಪಡಿ
* ವಿಳಾಸ ಬದಲಾವಣೆ
* ಕುಟುಂಬದ ಮುಖ್ಯಸ್ಥರ ಸ್ಥಾನ ಬದಲಾವಣೆ
* ಮ.ರಣ ಹೊಂದಿರುವ ಸದಸ್ಯರ ಹೆಸರು ತೆಗೆದುಹಾಕಿಸುವುದು
ಎಲ್ಲಿ ಮತ್ತು ಹೀಗೆ ಅರ್ಜಿ ಸಲ್ಲಿಸಬೇಕು:-
* ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
* ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಇನ್ನಿತರ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
* ಆನ್ಲೈನ್ ಪೋರ್ಟಲ್ ನಿರ್ದಿಷ್ಟ ಸಮಯದಲ್ಲಿ ಮಾತ್ರ ತೆರೆದಿರುತ್ತದೆ. ಸೇವಾ ಕೇಂದ್ರದ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ.