Sunday, June 4, 2023
HomeEntertainmentಕಾಂತಾರ ಸಿನಿಮಾದ ಭೂತಕೋಲ, ಗುಳಿಕ ದೈವ, ಪಂಜುರ್ಲಿ ಹಿಂದು ಧರ್ಮದಲ್ಲ, ರಿಷಬ್ ಶೆಟ್ಟಿ ಮೋಸ ಮಾಡಿದ್ದಾರೆ...

ಕಾಂತಾರ ಸಿನಿಮಾದ ಭೂತಕೋಲ, ಗುಳಿಕ ದೈವ, ಪಂಜುರ್ಲಿ ಹಿಂದು ಧರ್ಮದಲ್ಲ, ರಿಷಬ್ ಶೆಟ್ಟಿ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ ನಟ ಚೇತನ್, ಕಾಂತಾರ ಸಿನಿಮಾದ ಬಗ್ಗೆ ಈತ ಹೇಳಿದ್ದೇನು ನೋಡಿ

ಕಳೆದ 15 ದಿನಗಳಿಂದ ಎಲ್ಲೇ ನೋಡಿದರೂ ಕೂಡ ಕಾಂತಾರ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದಾರೆ ಮೊದಲ ಎರಡು ವಾರವು ಕೂಡ ಈ ಕನ್ನಡ ಸಿನಿಮಾವನ್ನು ಎಲ್ಲಾ ನಟ ನಟಿಯರು ಹಾಡಿ ಹೊಗಳಿದ್ದರೂ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದಾದ್ಯಂತ ಕಾಂತರಾ ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಅಷ್ಟೇ ಅಲ್ಲದೆ ನಮ್ಮ ಭಾಷೆಗೂ ಕೂಡ ಈ ಸಿನಿಮಾವನ್ನು ಡಬ್ ಮಾಡಿ ಕೊಡಿ ಎಂದು ಬೇಡಿಕೆ ಇಟ್ಟಿದ್ದರು ಈ ಕಾರಣಕ್ಕಾಗಿ ಕೇವಲ ಕನ್ನಡದಲ್ಲಿ ಮಾತ್ರ ಮೊದಲ ಬಾರಿಗೆ ನಿರ್ಮಾಣವಾಗಿದ್ದಂತಹ ಸಿನಿಮಾ ದಿನ ಕಳೆದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಸಾಕಷ್ಟು ಭಾಷೆಯಲ್ಲಿ ಡಬ್ ಆಗಿ ಪರಭಾಷೆಯಲ್ಲಿ ಕೂಡ ಇದೀಗ ಕಾಂತರಾ ಸಿನಿಮಾ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ವೀಕ್ಷಣೆಯನ್ನು ಪಡೆಯುತ್ತಿದೆ.

ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಸ್ಟಾರ್ ನಟ ನಟಿಯರು ಕೂಡ ಕಾಂತರಾ ಸಿನಿಮಾವನ್ನು ಮೆಚ್ಚಿಕೊಂಡು ರಿಷಬ್ ಶೆಟ್ಟಿ ಅವರ ಅಭಿನಯವನ್ನು ನೋಡಿ ಹೊಗಳಿದ್ದಾರೆ. ಅಷ್ಟೇ ಅಲ್ಲದೆ ಇವತ್ತು ಕಾಂತಾರ ಸಿನಿಮಾದಲ್ಲಿ ಇರುವಂತಹ ದೈವ ಆರಾಧನೆಯ ಬಗ್ಗೆ ಮೆಚ್ಚಿಕೊಂಡಿದ್ದಾರೆ ಪ್ರಕೃತಿಯ ಮುಂದೆ ಮತ್ತು ದೇವರ ಮುಂದೆ ಮನುಷ್ಯನ ಆಟ ನಡೆಯುವುದಿಲ್ಲ ಎಂಬುದನ್ನು ಈ ಚಿತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ತೋರಿಸಿಕೊಟ್ಟಿದ್ದಾರೆ. ಪರಭಾಷೆಯಲ್ಲಿ ಶ್ಲಾಘನೀಯ ದೊರೆಯುತ್ತಿರುವ ಈ ಚಿತ್ರಕ್ಕೆ ಇದೀಗ ನಮ್ಮವರೇ ಬತ್ತಿಯನ್ನು ಇಡುವಂತಹ ಕೆಲಸವನ್ನು ಮಾಡುತ್ತಿದ್ದರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಇದೀಗ ರಿಷಬ್ ಶೆಟ್ಟಿ ಅವರ ಕಾಂತರಾದ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಅಷ್ಟೇ ಅಲ್ಲದೆ ಕಾಂತಾರಾ ಚಿತ್ರದಲ್ಲಿ ಬರುವಂತಹ ಭೂತ ಕೋಲು ಪಂಜುರ್ಲಿ, ಗುಳಿಕ ದೈವದ ಬಗ್ಗೆ ಯಾರಿಗೂ ತಿಳಿದ ಮಾಹಿತಿಯನ್ನು ಹೇಳಿದ್ದಾರೆ ಅಷ್ಟಕ್ಕೂ ಚೇತನ್ ಹೇಳಿದ್ದಾದರೂ ಏನು ಎಂಬುದನ್ನು ನೋಡುವುದಾದರೆ. “ಕಾಂತಾರ ಚಿತ್ರದ ಭೂತಕೋಲ ಹಿಂದೂ ಸಂಸ್ಕಂತಿಗೆ ಸೇರಿಲ್ಲ ಎಂದು ಟ್ವೀಟ್ ಮಾಡಿದ್ದಾರೆ ತಮ್ಮ ಟ್ವೀಟ್‍ನಲ್ಲಿ ಚೇತನ್ ಅವರು, ನಮ್ಮ ಕನ್ನಡದ ಚಲನಚಿತ್ರ ಕಾಂತಾರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ತಮ್ಮ ಫೇಸ್‍ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ನೋಡಿದಂತಹ ಕೆಲವು ನೆಟ್ಟಿಗರು ಮತ್ತು ಅಭಿಮಾನಿಗಳು ಚೇತನ್ ಅವರನ್ನು ಇದೀಗ ತರಾಟೆಗೆ ತೆಗೆದುಕೊಂಡಿದ್ದಾರೆ ಹೌದು ಕನ್ನಡ ಸಿನಿಮಾ ಮೊದಲು ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿತ್ತು ಆದರೆ ಇದೀಗ ಇಡೀ ದೇಶಾದ್ಯಂತ ಹಾಗೂ ಪ್ರಪಂಚದಾದ್ಯಂತ ವ್ಯಾಪ್ತಿಯಾಗುತ್ತಿದೆ ಇದು ಖುಷಿಯ ಸಂಗತಿ. ಈ ವಿಚಾರವನ್ನು ಕೇಳಿ ನೀವು ಖುಷಿ ಪಡಬೇಕು ಅಥವಾ ಪ್ರೋತ್ಸಾಹ ನೀಡಬೇಕು ಅದನ್ನು ಬಿಟ್ಟು ಸಿನಿಮಾದಲ್ಲಿಯೂ ಕೂಡ ಜಾತಿ ಧರ್ಮ ಹಾಗೂ ತೊಡಕುಗಳನ್ನು ಹುಡುಕುತ್ತಿದ್ದೀರಲ್ಲ ಎಂದು ನಟ ಚೇತನ್ ಅವರಿಗೆ ಹಿಗ್ಗ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ನಟ ಚೇತನ್ ಅವರಿಗೆ ಇದೀಗ ಹೊಟ್ಟೆಕಿಚ್ಚು ಬಂದಿದೆ ಅವರ ಸಿನಿಮಾಗಳು ಹೆಚ್ಚಾಗಿ ಓಡುತ್ತಿಲ್ಲ ಯಾವುದೂ ಕೂಡ ತೆರೆ ಕಾಣುತ್ತಿಲ್ಲ ಎಂಬ ಕಾರಣಕ್ಕಾಗಿ ಇದೀಗ ಕಾಂತರಾ ಸಿನಿಮಾದ ಯಶಸ್ಸನ್ನು ನೋಡಿ ಸಹಿಸದೆ ಈ ರೀತಿ ತಂಟೆ ತೆಗೆದಿದ್ದಾರೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ.

ಅದೇನೆ ಆಗಲಿ ನಮ್ಮವರೇ ನಮಗೆ ಆಗುವುದಿಲ್ಲ ಎಂಬುದು ಇದೇ ಕಾರಣಕ್ಕೆ ನೋಡಿ ಇಡೀ ಪ್ರಪಂಚದಾದ್ಯಂತ ಕಾಂತರಾ ಸಿನಿಮಾವನ್ನು ಎಲ್ಲರೂ ಮೆಚ್ಚಿಕೊಂಡು ಇದರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಚೇತನ್ ಅವರು ಮಾತ್ರ ಈ ಒಂದು ದೈವದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಅಷ್ಟೇ ಅಲ್ಲದೆ ಇದು ನಮ್ಮ ಹಿಂದೂ ಧರ್ಮಕ್ಕೆ ಸೇರಿದೆ ಆಚರಣೆಗೆ ಅಲ್ಲ ಎಂಬ ರೋಚಕ ಮಾಹಿತಿಯನ್ನು ಹೊರ ಹಾಕಿದ್ದಾರೆ. ಮುಂದಿನ ದಿನದಲ್ಲಿ ಈ ಒಂದು ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಾಗಿದೆ ನಿಮ್ಮ ಪ್ರಕಾರ ನಟ ಚೇತನ್ ಅವರ ಹೇಳಿಕೆ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.