Home Entertainment ವಸಿಷ್ಟ ಸಿಂಹ ಜೊತೆ ನಟಿ ಹರಿಪ್ರಿಯ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿ ಎಷ್ಟು ಮಸ್ತಾಗಿದೆ.

ವಸಿಷ್ಟ ಸಿಂಹ ಜೊತೆ ನಟಿ ಹರಿಪ್ರಿಯ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿ ಎಷ್ಟು ಮಸ್ತಾಗಿದೆ.

0
ವಸಿಷ್ಟ ಸಿಂಹ ಜೊತೆ ನಟಿ ಹರಿಪ್ರಿಯ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿ ಎಷ್ಟು ಮಸ್ತಾಗಿದೆ.

ವಶಿಷ್ಟ ಸಿಂಹ ತಮ್ಮ ಕಂಚಿನ ಕಂಠದ ಮೂಲಕ ಕರ್ನಾಟಕದ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದ್ದಾರೆ ಹೌದು ಕವಚ ಸಿನಿಮಾದಲ್ಲಿ ಇವರು ಮಾಡಿರುವ ಅಮೋಘ ಅಭಿನಯವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ಇನ್ನು ವಸಿಷ್ಟ ಸಿಂಹ ಲವ್ಲಿ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ ಗೌರಿ ಗಣೇಶದ ಹಬ್ಬದ ದಿನದಂದೇ ಈ ಒಂದು ಸಿನಿಮಾದ ಪೋಸ್ಟರ್ ಅನ್ನು ಕೂಡ ರಿಲೀಸ್ ಮಾಡಿದರು. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ವಂಶಿಕಾ ಅಂಜನಿ ಕಶ್ಯಪ್ ಅವರು ಕೂಡ ಬಾಲನಟಿಯಾಗಿ ಅಭಿನಯ ಮಾಡುತ್ತಿದ್ದಾರೆ.

ಮತ್ತೊಂದು ಕಡೆ ನಟಿ ಹರಿಪ್ರಿಯ ಅವರು ಕೂಡ ಕನ್ನಡದ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಹೌದು. ರಕ್ಷಿತ್ ಶೆಟ್ಟಿ ಅವರ ಜೊತೆಗಿನ ರಿಕ್ಕಿ ಸಿನಿಮಾ ಇವರಿಗೆ ಹೆಚ್ಚು ಹೆಸರು ಮತ್ತು ಖ್ಯಾತಿಯನ್ನು ಗಳಿಸಿಕೊಟ್ಟಂತಹ ಸಿನಿಮಾ ಅಂತಾನೆ ಹೇಳಬಹುದು. ಇದಾದ ನಂತರ ನೀರ್ದೋಸೆ ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯ ಮಾಡಿದ್ದಾರೆ ಈ ಒಂದು ಸಿನಿಮಾಗೂ ಕೂಡ ಇವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ನೀರ್ ದೋಸೆ ಸಿನಿಮಾದಲ್ಲಿ ಅಭಿನಯ ಮಾಡಿದ ನಂತರ ನಟಿ ಹರಿಪ್ರಿಯಾ ಅವರಿಗೆ ಒಂದರ ಮೇಲೆ ಮತ್ತೊಂದರಂತೆ ಸಿನಿಮಾ ಅವಕಾಶಗಳು ಬರತೊಡಗಿದವು ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ತೆಲಗಿನಲ್ಲಿಯೂ ಕೂಡ ನಟಿ ಹರಿಪ್ರಿಯಾ ಅವರು ಅಭಿನಯಿಸಿದ್ದಾರೆ.

2007ರಲ್ಲಿ ಬಡಿ ಎಂಬ ತುಳು ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ಮೊಟ್ಟ ಮೊದಲ ಬಾರಿಗೆ ಚಿತ್ರರಂಗಕ್ಕೆ ಪಾದರಪಣೆ ಮಾಡಿದರು ತದನಂತರ 2008ರಲ್ಲಿ ಮನಸುಗಳ ಮಾತು ಮಧುರ ಎಂಬ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಕಾಣಿಸಿಕೊಂಡರು. ಇದಾದ ನಂತರ ರಿಕ್ಕಿ, ಬುಲೆಟ್ ಬಸ್ಯ, ರನ್ನ, ಡಾಟರ್ ಆಫ್ ಪಾರ್ವತಮ್ಮ, ಕಳ್ಳರ ಸಂತೆ, ಚೆಲುವೆ ನಿನ್ನ ನೋಡಲು, ಉಗ್ರಂ, ಭಲೇ ಜೋಡಿ, ಸಾಗರ್, ಸೂಪರ್ ಶಾಸ್ತ್ರಿ, ಭರ್ಜ,ರಿ ಅಂಜನಿಪುತ್ರ, ಕನಕ, ಲೈಫ್ ಜೊತೆ ಒಂದು ಸೆಲ್ಫಿ, ಜೈ ಸಿಂಹ, ಬೆಲ್ ಬಾಟಂ, ಕುರುಕ್ಷೇತ್ರ ಕನ್ನಡ ಗೊತ್ತಿಲ್, ಎಲ್ಲಿದ್ದೆ ಇಲ್ಲಿ ತನಕ, ಪೆಟ್ರೋಮ್ಯಾಕ್ಸ್ ಹೀಗೆ ಕನ್ನಡದಲ್ಲಿ ಸುಮಾರು 30ಕ್ಕೂ ಅಧಿಕ ಚಲನಚಿತ್ರದಲ್ಲಿ ನಟಿಯಾಗಿ ನಟನೆ ಮಾಡಿದ್ದಾರೆ. ಪರಭಾಷೆಯಲ್ಲಿ ಸೇರಿದರೆ ಒಟ್ಟಾರೆಯಾಗಿ ಹರಿಪ್ರಿಯ ಅವರು ಐವತ್ತಕ್ಕೂ ಹೆಚ್ಚಿನ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಸದ್ಯಕ್ಕೆ ಹರಿಪ್ರಿಯಾ ಅವರ ಕೈನಲ್ಲಿ ಸಾಲು ಸಾಲು ಸಿನಿಮಾಗಳಿದೆ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯ ನಟನೆ ಮಾಡಿದಂತಹ ಬೆಲ್ ಬಾಟಮ್ ಸಿನಿಮಾದ ಚಾಪ್ಟರ್ ಟು ಭಾಗ ಕೆಲವೇ ದಿನದಲ್ಲಿ ಚಿತ್ರೀಕರಣ ನಡೆಯಲಿದೆ, ಇದರ ಜೊತೆಗೆ ಹೆಸರಿಡಿದ ಇನ್ನು ನಾಲ್ಕು ಸಿನಿಮಾಗಳಿಗೆ ಸಹಿಯನ್ನು ಹಾಕಿದ್ದಾರೆ ಹೇಳುವುದಾದರೆ ಸಾಲು ಸಾಲು ಸಿನಿಮಾದ ಪ್ರಾಜೆಕ್ಟ್ ಅನ್ನು ತಮ್ಮ ಕೈನಲ್ಲಿ ಇಟ್ಟುಕೊಂಡಿದ್ದಾರೆ. ಇಷ್ಟೆಲ್ಲ ಬಿಜಿ ಇದ್ದರೂ ಕೂಡ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋಸ್ ಮತ್ತು ಫೋಟೋಸ್ ಗಳನ್ನು ತಮ್ಮ ಅಭಿಮಾನಿಗಳ ಜೊತೆ ನಟಿ ಹರಿಪ್ರಿಯಾ ಆಗಾಗ ಹಂಚಿಕೊಳ್ಳುತ್ತಾರೆ. ಇತ್ತೀಚಿಗಷ್ಟೇ ನಟ ವಸಿಷ್ಠ ಅವರನ್ನು ಭೇಟಿ ಮಾಡಿದ್ದಾರೆ ಜೊತೆಗೆ ಅವರ ಜೊತೆ ರೀಲ್ಸ್ ಒಂದನ್ನು ಮಾಡಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನಟಿ ಹರಿಪ್ರಿಯ ಅವರು ವಶಿಷ್ಠ ಅವರ ಜೊತೆ ಮಾಡಿದಂತಹ ಡ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

LEAVE A REPLY

Please enter your comment!
Please enter your name here