Sunday, June 4, 2023
HomeEntertainmentಹಿಂದಿ ಡ್ಯಾನ್ಸಿಂಗ್ ಶೋನಲ್ಲಿ ಕನ್ನಡ ಮಾತನಾಡಿದ ಶಿಲ್ಪ ಶೆಟ್ಟಿ, ಈ ವಿಡಿಯೋ ನೋಡಿ ನಿಜಕ್ಕೂ ಅದ್ಭುತ,...

ಹಿಂದಿ ಡ್ಯಾನ್ಸಿಂಗ್ ಶೋನಲ್ಲಿ ಕನ್ನಡ ಮಾತನಾಡಿದ ಶಿಲ್ಪ ಶೆಟ್ಟಿ, ಈ ವಿಡಿಯೋ ನೋಡಿ ನಿಜಕ್ಕೂ ಅದ್ಭುತ, ಇವರ ಕನ್ನಡ ಪ್ರೇಮವನ್ನು ಮೆಚ್ಚಲೇಬೇಕು

https://youtu.be/fa1spDkB4i4

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟಿ ಶಿಲ್ಪಾ ಶೆಟ್ಟಿಯವರು ಇದೀಗ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ ಆದರೂ ಕೂಡ ಇವರು ಕನ್ನಡದವರೇ ಕರ್ನಾಟಕದ ಮಂಗಳೂರಿನವರು ಎಂಬುದು ಸಾಕಷ್ಟು ಜನರಿಗೆ ತಿಳಿದೇ ಇದೆ. ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ಪ್ರೀತ್ಸೋದ್ ತಪ್ಪ ಎಂಬ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಈ ಸಿನಿಮಾದ ನಂತರ ಇವರು ಕನ್ನಡದ ಯಾವ ಸಿನಿಮಾದಲ್ಲಿಯೂ ನಟನೆ ಮಾಡಿಲ್ಲ. ತದನಂತರ ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಮಾಡೆಲಿಂಗ್ ಕ್ಷೇತ್ರದಲ್ಲಿ ಅತಿವ ಆಸಕ್ತಿ ಹೊಂದಿದ ಇವರು ಮುಂಬೈ ನಗರಕ್ಕೆ ಸೇರುತ್ತಾರೆ. ತದನಂತರ ಬಾಲಿವುಡ್ ಚಿತ್ರರಂಗದಲ್ಲಿ ಅಭಿನಯ ಮಾಡಲು ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ ತದನಂತರ ಇವರು ಸಿಕ್ಕಾಪಟ್ಟೆ ಫೇಮಸ್ ಆಗಿ ಸಾಕಷ್ಟು ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿಕೊಳ್ಳುತ್ತಾರೆ.

ಇದೇ ಸಮಯದಲ್ಲಿ ಉದ್ಯಮಿ ಆದಂತಹ ರಾಜ್ ಕುಂದ್ರ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಶಿಲ್ಪ ಶೆಟ್ಟಿ ಅವರಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಇನ್ನು ರಾಜ್ ಕುಂದ್ರ ಬಿಸಿನೆಸ್ ಮ್ಯಾನ್ ಮಾತ್ರವಲ್ಲದೆ ಹಲವಾರು ಸಿನಿಮಾಗಳಿಗೂ ಕೂಡ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ. ಶಿಲ್ಪಾ ಶೆಟ್ಟಿಯವರು ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದಿದ್ದರೂ ಕೂಡ ಹಲವಾರು ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ಸಾಕಷ್ಟು ಸಕ್ರಿಯರಾಗಿದ್ದಾರೆ. ಹೌದು ಸದ್ಯಕ್ಕೆ ಶಿಲ್ಪಾ ಶೆಟ್ಟಿಯವರು ಹಿಂದಿ ಕಾರ್ಯಕ್ರಮದ ಡ್ಯಾನ್ಸಿಂಗ್ ಶೋನಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದಾರೆ. ಈ ವೇದಿಕೆಗೆ ಕರ್ನಾಟಕ ಮೂಲದ ಗುಲ್ಬರ್ಗದ ಹುಡುಗನೊಬ್ಬ ತನ್ನ ಪ್ರತಿಭೆಯನ್ನು ತೋರಿಸುವುದಕ್ಕೆ ಹೋಗಿದ್ದಾನೆ.

ಕುಂದಾ ನಗರಿ ಬೆಳಗಾವಿ ಹುಡುಗನೊಬ್ಬರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಬಳಿ ಕನ್ನಡ ಮಾತನಾಡಿಸಿದ್ದು ಅಷ್ಟೇ ಅಲ್ಲದೆ ಡ್ಯಾನ್ಸ್ ಮೂಲಕ ಹೊಗಳಿಸಿ ಕೊಂಡಿದ್ದಾನೆ. ಮೂಲತಃ ಬೆಳಗಾವಿಯ ಪೃಥ್ವಿರಾಜ್ ಅಶೋಕ್ ಕೊಂಗಾರಿ ಎನ್ನುವ ಕೇವಲ 9 ವರ್ಷದ ಹುಡುಗ ಸೋನಿ ಟಿವಿಯ ಸೂಪರ್ ಡ್ಯಾನ್ಸರ್ ಕಾರ್ಯಕ್ರಮದ ಆಡಿಶನ್‌ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದು ಇದನ್ನು ಕಂಡಂತಹ ನಟಿ ಶಿಲ್ಪಾ ಶೆಟ್ಟಿ ಮನಸಾರೆ ಹೊಗಳಿದ್ದಾರೆ. ಅಷ್ಟೇ ಅಲ್ಲದೆ ಹೆಮ್ಮೆಯ ಕನ್ನಡಿಗ ಎಂದಿದ್ದು ನಿಮ್ಮ ಪರ್ಫಾಮೆನ್ಸ್ ತುಂಬ ತುಂಬ ಚೆನ್ನಾಗಿತ್ತು ನಮಸ್ತೆ ಹೇಗಿದ್ದೀರಾ.? ಚೆನ್ನಾಗಿದ್ದೀರಾ.? ಎಂದು ಶಿಲ್ಪಾ ಶೆಟ್ಟಿ ಕನ್ನಡದಲ್ಲಿ ಹೇಳಿದ ಮಾತು ಕನ್ನಡಿಗರಿಗೆ ಬಹಳ ಖುಷಿ ನೀಡಿದೆ.

ಇನ್ನು  ಪೃಥ್ವಿರಾಜ್ ರವರು ಬಡಕುಟುಂಬದಿಂದ ಬಂದ ಹುಡುಗನಾಗಿದ್ದು ಆತನ ಅಪ್ಪ ಸೀರೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾರೆ. ಸೂಪರ್ ಡಾನ್ಸರ್ ಕಾರ್ಯಕ್ರಮದಲ್ಲಿ  ಯಾರಿಗೆ ಯಾವ ಗಿಫ್ಟ್ ನೀಡುತ್ತೀರಾ ಎಂದು ಪ್ರಶ್ನೆ ಮಾಡಿದಾಗ ಪೃಥ್ವಿರಾಜ್ ರವರು ನನ್ನ ಹತ್ತಿರ ಶೂ ಇದೆ ಅಪ್ಪನ ಚಪ್ಪಲಿ ಹಾಕಿಕೊಂಡು ಫ್ಯಾಕ್ಟರಿ ಹೋಗ್ತಾರೆ ನಾನು ಅವರಿಗೆ ಶೂ ಕೊಡ್ತೀನಿ ಎಂದಿರೋದು ಎಲ್ಲರ ಮೆಚ್ಚುಗೆ ಗಳಿಸಿದೆ. ಹೌದು ನಾನು ದೊಡ್ಡವನಾದ ಮೇಲೆ ತುಂಬ ಬಡತನ ಬಂತು. ದುಡ್ಡಿನ ತೊಂದರೆ ಆಯ್ತು ದುಡ್ಡಿಲ್ಲ ಅಂದರೆ ಮನೆ ಖಾಲಿಮಾಡು ಅಂತ ಮನೆಯ ಮಾಲೀಕರು ಹೇಳುತ್ತಾರೆ. ಅಮ್ಮನಿಗೆ ಬೆನ್ನು ನೋವಿನ ಸಮಸ್ಯೆ ಇದ್ದು ಅವರು ಹಾಸಿಗೆ ಮೇಲೆ ಇರುತ್ತಾರೆ. ಅಮ್ಮನಿಗೆ ನೋವು ಹೆಚ್ಚಾದರೆ ಅಪ್ಪ ಊಟ ಮಾಡೋದಿಲ್ಲ ಎನ್ನುತ್ತಾ ಕಣ್ಣೀರು ಹಾಕಿದ್ದಾನೆ ಪೃಥ್ವಿ.

ಇನ್ನು ಶಿಲ್ಪ ಶೆಟ್ಟಿ ಅವರು ನಾನು ಮೂರು ಕನ್ನಡ ಸಿನಿಮಾ ಮಾಡಿದ್ದು ಕನ್ನಡ ಅರ್ಥವಾಗುತ್ತದೆ ಅಷ್ಟೊಂದು ಕನ್ನಡ ಮಾತನಾಡೋಕೆ ಬರಲ್ಲ ಪೃಥ್ವಿರಾಜ್ ಮುಖದಲ್ಲಿ ಭರವಸೆ ಕಾಣುತ್ತಿದ್ದು ಆತನ ಹಾವಭಾವ ಅದ್ಭುತವಾಗಿತ್ತು. ಹೆಸರಿನಲ್ಲಿಯೇ ರಾಜ ಇರುವಂತೆ ಡ್ಯಾನ್ಸ್ ಸಹ ರಾಜನಂತೆ ಮಾಡಿದ್ದಾರೆ ಆತನ ಡ್ಯಾನ್ಸ್ ನೋಡಿ ರೋಮಾಂಚನವಾಗಿದ್ದು ತುಂಬ ಹೆಮ್ಮೆಯಾಯ್ತು. ನಿಮ್ಮ ಪರ್ಫಾಮೆನ್ಸ್ ತುಂಬ ತುಂಬ ಚೆನ್ನಾಗಿದ್ದು ನಿಮ್ಮ ಕಣ್ಣುಗಳು ಬಲ್ಬ್ ರೀತಿ ಹೊಳೆಯುತ್ತಿತ್ತು. ಪವರ್ ಫುಲ್ ಪರ್ಫಾಮೆನ್ಸ್ ಎಂದು ಶಿಲ್ಪಾ ಶೆಟ್ಟಿ ಅವರು ಪೃಥ್ವಿರಾಜ್ ಡ್ಯಾನ್ಸ್ ಬಗ್ಗೆ ಹೇಳಿದ್ದಾರೆ ಸದ್ಯ ಇದೀಗ ಶಿಲ್ಪಾಶೆಟ್ಟಿ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದೆ.

ನಮ್ಮಲ್ಲಿನ ಸಾಕಷ್ಟು ನಟಿಯರು ಕನ್ನಡದಿಂದ ಅವಕಾಶ ಪಡೆದುಕೊಂಡು ಹೋಗಿ ಬೇರೆ ರಾಜ್ಯದಲ್ಲಿ ಕನ್ನಡ ಮಾತನಾಡುವುದಕ್ಕೆ ಬರುವುದಿಲ್ಲ ಕನ್ನಡ ಅಂದರೆ ನನಗೆ ಇಷ್ಟ ಇಲ್ಲ ಅಂತ ಹೇಳುತ್ತಾರೆ. ಆ ವ್ಯಕ್ತಿ ಯಾರು ಎಂಬುದು ನಿಮಗೆ ತಿಳಿದೇ ಇದೆ ಹೌದು ರಶ್ಮಿಕ ಅವರು ಪರರಾಜ್ಯದಲ್ಲಿ ಕನ್ನಡದ ಬಗ್ಗೆ ಅಸಡ್ಡೆಯನ್ನು ತೋರಿಸುತ್ತಾರೆ. ಆದರೆ ಶಿಲ್ಪಾ ಶೆಟ್ಟಿ ಅವರು ಕರ್ನಾಟಕ ಬಿಟ್ಟು ಹೋಗಿ ಬಹಳಷ್ಟು ವರ್ಷಗಳೇ ಆಗಿದೆ ಆದರೂ ಕೂಡ ಹಿಂದಿ ವೇದಿಕೆಯಲ್ಲಿ ಕನ್ನಡಿಗನನ್ನು ಕಂಡು ಕನ್ನಡದಲ್ಲಿಯೇ ಮಾತನಾಡಿಸಿದ್ದಾರೆ. ನಿಜಕ್ಕೂ ಇವರ ಕನ್ನಡ ಪ್ರೀತಿಯನ್ನು ನಾವೆಲ್ಲರೂ ಮೆಚ್ಚಲೇಬೇಕು ಶಿಲ್ಪ ಶೆಟ್ಟಿ ಮಾತನಾಡಿರುವ ವಿಡಿಯೋ ಈ ಕೆಳಗಿನ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.