Sunday, May 28, 2023
HomeEntertainmentಕಾಂತಾರ ಸಿನಿಮಾದ ಸಕ್ಸಸ್ ನಂತರ ತೆಲುಗಿನಲ್ಲು ರಿಷಬ್ ಶೆಟ್ಟಿಗೆ ಆಫರ್ ಬಂದಿದೆ ಯಾವ ಸಿನಿಮಾದಲ್ಲಿ ಗೊತ್ತಾ.?

ಕಾಂತಾರ ಸಿನಿಮಾದ ಸಕ್ಸಸ್ ನಂತರ ತೆಲುಗಿನಲ್ಲು ರಿಷಬ್ ಶೆಟ್ಟಿಗೆ ಆಫರ್ ಬಂದಿದೆ ಯಾವ ಸಿನಿಮಾದಲ್ಲಿ ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಾಂತಾರ ಸಿನಿಮಾ ಕನ್ನಡದಲ್ಲಿ ಒಂದು ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡುತ್ತಿರುವ ಸಿನಿಮಾ ಅಂತಾನೆ ಹೇಳಬಹುದು. ಹೌದು ಕೆಜಿಎಫ್ ಸಿನಿಮಾದ ನಂತರ ಅತಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ಇದೀಗ ಕಾಂತರಾ ಸಿನಿಮಾ ಹೊರ ಹೊಮ್ಮಿದೆ. ಈ ಒಂದು ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಮಾಡಿದ ಅಭಿನಯವನ್ನು ಮತ್ಯಾರು ಮಾಡುವುದಕ್ಕೆ ಸಾಧ್ಯವಿಲ್ಲ ಅಂತಾನೆ ಹೇಳಬಹುದು. ಕೊನೆಯ 20 ನಿಮಿಷಗಳು ಮಾತ್ರ ರೋಮಾಂಚನವಾಗುತ್ತದೆ ಪ್ರೇಕ್ಷಕರು ಕಣ್ಣು ಮಿಟಿಕಿಸಿದೆ ಈ ಒಂದು ದೈವದ ನಟನೆಯನ್ನು ನೋಡುತ್ತಾರೆ.

ಇವೆಲ್ಲ ಒಂದು ಕಡೆಯಾದರೆ ಇದೀಗ ಕಾಂತರಾ ಸಿನಿಮಾ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಯಶಸ್ಸನ್ನು ಸಾಧಿಸುತ್ತಿದೆ ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಕೂಡ ಇದರ ಸದ್ದು ಜೋರಾಗಿಯೇ ಇದೆ. ಇದರಿಂದಾಗಿ ರಿಷಬ್ ಶೆಟ್ಟಿ ಅವರ ನಸೀಬೆ ಬದಲಾಗಿದೆ ಅಂತಾನೆ ಹೇಳಬಹುದು ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಾಂತರಾ ಸಿನಿಮಾ ನೋಡಿದ ಮೇಲೆ ಎಲ್ಲಾ ಸೆಲೆಬ್ರಿಟಿಗಳು ಕೂಡ ರಿಷಬ್ ಶೆಟ್ಟಿ ಅವರನ್ನು ಹಾಡಿ ಹೊಗಳುತ್ತಿದ್ದರೆ. ಈ ಸಿನಿಮಾದಿಂದ ರಿಷಬ್ ಶೆಟ್ಟಿ ಅವರ ಬದುಕೆ ಬದಲಾಗಿದೆ ಈ ಸಿನಿಮಾದಿಂದ ರಿಷಬ್ ಶೆಟ್ಟಿಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ಹೌದು ಕೇವಲ ಕನ್ನಡಕ್ಕೆ ಸೀಮಿತವಾಗಿದಂತಹ ರಿಷಬ್ ಶೆಟ್ಟಿ ಅವರು ಇದೀಗ ತೆಲುಗಿನಲ್ಲಿಯೂ ಕೂಡ ನಟನೆ ಮಾಡಲು ಒಪ್ಪಿಕೊಂಡಿದ್ದಾರಂತೆ.

ಅಂದಾಗೆ ಈ ವಿಚಾರವನ್ನು ಸ್ವತಃ ರಿಷಬ್ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ ತೆಲುಗಿನ ಕಾಂತರಾ ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ಭಾಗಿಯಾಗಿದಂತಹ ರಿಷಬ್ ಶೆಟ್ಟಿ ಸಪ್ತಮಿ ಗೌಡ ಸೇರಿದಂತೆ ಕಾಂತರಾ ಸಿನಿಮಾದ ಇಡೀ ಚಿತ್ರತಂಡವೇ ಇಲ್ಲಿ ನೆರದಿತ್ತು. ಈ ಒಂದು ಕಾರ್ಯಕ್ರಮದಲ್ಲಿ ಸ್ಟೈಲಿಸ್ ಸ್ಟಾರ್ ಅಲ್ಲು ಅರ್ಜುನ್ ಅವರ ತಂದೆ ಅಲ್ಲೂ ಅರವಿಂದ್ ಅವರು ಕೂಡ ಪಾಲ್ಗೊಂಡಿದ್ದರು ಈ ಸಮಯದಲ್ಲಿ ನಮ್ಮ ಮುಂದಿನ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ನಟನೆ ಮಾಡಲಿದ್ದಾರೆ ಈ ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ರಿಶಬ್ ಶೆಟ್ಟಿ ಒಪ್ಪಿಕೊಂಡಿರುವುದು ನಿಜಕ್ಕೂ ಕೂಡ ಸಂತೋಷವಾದ ವಿಚಾರವೇ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಅಂದ ಹಾಗೆ ಅಲ್ಲೂ ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅಂದಿನ ಕಾಲದಿಂದಲೂ ಕೂಡ ಸಾಕಷ್ಟು ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ. ಗೀತಾ ಪ್ರೊಡಕ್ಷನ್ ಎಂಬ ಸಂಸ್ಥೆ ಅಡಿಯಲ್ಲಿ ಇಲಿಯವರೆಗು ಕೂಡ ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಹಾಗಾಗಿ ಕಾಂತಾರ ಸಿನಿಮಾದಲ್ಲಿ ನಟ ರಿಶಬ್ ಶೆಟ್ಟಿ ಮಾಡಿದ ಅಭಿನಯವನ್ನು ನೋಡಿ ಇವರಿಗಾಗಿಯೇ ವಿಶೇಷವಾದ ಚಿತ್ರ ಒಂದನ್ನು ನಿರ್ಮಾಣ ಮಾಡಬೇಕು ಎಂದು ಅಂದುಕೊಂಡಿದ್ದಾರಂತೆ. ಅದರಂತೆ ರಿಶಬ್ ಶೆಟ್ಟಿ ಅವರ ಒಪ್ಪಿಗೆಯನ್ನು ಪಡೆದು ಹೊಸ ಸಿನಿಮಾ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗುತ್ತದೆ ಅಂತ ಹೇಳಿದ್ದಾರೆ.

ಆದರೆ ಈ ಒಂದು ಸಿನಿಮಾ ಯಾವ ರೀತಿ ಇರಲಿದೆ ಹಾಗೂ ಈ ಸಿನಿಮಾದ ಟೈಟಲ್ ಏನು ಎಂಬುದರ ಬಗ್ಗೆ ಎಲ್ಲಿಯೂ ಕೂಡ ರಿವಿಲ್ ಮಾಡಿಲ್ಲ ಆದರೆ ರಿಷಬ್ ಶೆಟ್ಟಿ ಅವರು ನಟನೆ ಮಾಡುತ್ತಾರೆ ಎಂಬ ವಿಚಾರವನ್ನಷ್ಟೇ ಹೇಳಿದ್ದಾರೆ. ಇನ್ನು ರಿಷಬ್ ಶೆಟ್ಟಿಯವರು ನಾನು ತೆಲುಗಿನಲ್ಲಿ ನಟನೆ ಮಾಡುತ್ತೇನೆ ಅದಕ್ಕೂ ಮುಂಚೆ ನನಗೆ ಸ್ವಲ್ಪ ಬ್ರೇಕ್ ಬೇಕು ಎಂದು ಕೇಳಿದ್ದಾರೆ. ಏಕೆಂದರೆ ರಿಷಬ್ ಶೆಟ್ಟಿಯವರು ಈಗಾಗಲೇ ಒಂದು ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ ಇದರ ಜೊತೆಗೆ ಮತ್ತೆರಡು ಸಿನಿಮಾದಲ್ಲಿ ನಟನಾಗಿ ಅಭಿನಯಿಸುವುದಕ್ಕೆ ಒಪ್ಪಿಗೆಯನ್ನು ಕೂಡ ಸೂಚಿಸಿದ್ದಾರೆ ಹಾಗಾಗಿ ಈ ಎಲ್ಲಾ ಕೆಲಸ ಕಾರ್ಯಗಳು ಮುಗಿದ ನಂತರವಷ್ಟೇ ತೆಲುಗಿನಲ್ಲಿ ನಟನೆ ಮಾಡಲಿದ್ದಾರಂತೆ. ಒಟ್ಟಾರೆಯಾಗಿ ಹೇಳುವುದಾದರೆ ಕಾಂತರಾ ಸಿನಿಮಾದ ನಂತರ ರಿಶಬ್ ಶೆಟ್ಟಿ ಅವರು ಇದೀಗ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಕೂಡ ನಾಯಕ ನಟನಾಗಿ ಅಭಿನಯ ಮಾಡುವುದಕ್ಕೆ ಸಿದ್ಧರಾಗಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.