ನಮ್ಮಲ್ಲಿ ಒಂದು ಜನಪ್ರಿಯ ಗಾದೆ ಇದೆ ಹೊಸ ನೀರು ಬರುವಾಗ ಹಳೆ ನೀರು ಕೊಚ್ಚಿಕೊಂಡು ಹೋಗುತ್ತದೆ ಎಂದು ಅದಕ್ಕೆ ಅನ್ವರ್ಥವಾಗಿ ಅನೇಕ ಘಟನೆಗಳು ನಮ್ಮ ಜೀವನದಲ್ಲಿ ಇರುತ್ತವೆ. ಅದು ಬದುಕಿಗೆ ಅನಿವಾರ್ಯ ಕೂಡ ಹೌದು. ಹೇಗೆ ಹೊಸ ಎಲೆ ಚಿಗುರಲು ಹಳೆ ಬಾಡಿದ ಎಲೆಗಳು ಉದುರಲೇ ಬೇಕೋ, ಹಾಗೆ ಹೊಸ ವಿಷಯ ಶುರು ಆಗುವಾಗ ಇರುವುದರಲ್ಲಿ ಯಾವುದಾದರೂ ಬಿಟ್ಟು ಅವಕಾಶ ಮಾಡಿಕೊಡಲೇಬೇಕು. ಇದು ಬದುಕಿನ ಜೊತೆ ಪ್ರಪಂಚದ ಎಲ್ಲಾ ಆಗುಹೋಗುಗಳಿಗೂ ಕೂಡ ಅನ್ವಯವಾಗುತ್ತದೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಸದ್ಯಕ್ಕೆ ಇದನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಕಾರ್ಯಕ್ರಮದ ಉದಾಹರಣೆಯಲ್ಲಿ ಹೇಳಬಹುದು. ಅಲ್ಲೂ ಕೂಡ ಇದೇ ರೀತಿ ಯಾವುದಾದರೂ ಹೊಸ ಕಾರ್ಯಕ್ರಮ ಅಥವಾ ಧಾರಾವಾಹಿ ಶುರು ಆಗುತ್ತಿದೆ ಅದನ್ನು ಟಿವಿಯಲ್ಲಿ ಪ್ರಸಾರ ಮಾಡಬೇಕು ಎಂದರೆ ಈಗಾಗಲೇ ಇದನ್ನು ಯಾವ ಸಮಯಕ್ಕೆ ನಿಗದ ಪಡಿಸಬೇಕು ಮತ್ತು ಆ ಸಮಯದಲ್ಲಿ ಈಗಾಗಲೇ ಇರುವುದನ್ನು ಜನ ಒಪ್ಪಿಕೊಂಡಿದ್ದರೆ ಅದನ್ನು ಏನು ಮಾಡಬೇಕು.
ಯಾವುದನ್ನು ತೆಗೆದು ಯಾವುದಕ್ಕೆ ಜಾಗ ಮಾಡಿಕೊಡಬೇಕು ಈ ರೀತಿಯ ನಾನಾ ಲೆಕ್ಕಾಚಾರಗಳೊಂದಿಗೆ ಮನೋರಂಜನಾ ವಿಭಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಚಾನೆಲ್ ಗಳು ಇರುವುದೇ ಜನರನ್ನು ರಂಜಿಸಲು ಹಾಗೂ ಆ ವಿಭಾಗದ ಹಣ ಮಾಡುವ ಟೆಕ್ನಿಕ್ ಕೂಡ ಅದೇ ಆಗಿರುವುದರಿಂದ ಇಲ್ಲಿ ಪ್ರೇಕ್ಷಕರ ಆಸೆ ಅಭಿರುಚಿಗಳು ಅಷ್ಟೇ ಮುಖ್ಯವಾಗುತ್ತವೆ. ಸದ್ಯಕ್ಕೆ ಕರ್ನಾಟಕದ ಎಲ್ಲರ ಫೇವರೆಟ್ ಶೋ ಹಾಗೂ ಎಲ್ಲಾ ರಿಯಾಲಿಟಿ ಶೋಗಳ ಬಾಸ್ ಎಂದು ಕರೆಸಿಕೊಳ್ಳುವ ಬಿಗ್ ಬಾಸ್ ಕಿರುತೆರೆಯಲ್ಲಿ ಪ್ರಸಾರವಾಗಲು ಕ್ಷಣಗಣನೆ ಆರಂಭವಾಗಿದೆ.
ಈಗಾಗಲೇ ಓ ಟಿ ಟಿ ಯಲ್ಲಿ ಪ್ರಸಾರವಾಗುತ್ತಿದ್ದ 42 ದಿನಗಳ ಕಿರು ಬಿಗ್ ಬಾಸ್ ಮುಕ್ತಾಯದ ಹಂತ ತಲುಪಿದ್ದು ಅಂತ್ಯದಲ್ಲಿ ನಾಲ್ಕು ಜನ 9ನೇ ಆವೃತ್ತಿಯ ಕನ್ನಡದ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಇವರ ಜೊತೆ ಇನ್ನೂ 14 ಜನ ಜೊತೆಯಾಗಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಆಟವಾಡಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳು ತಯಾರಾಗಿದ್ದು ಅಂತಿಮ ಹಂತದಲ್ಲಿ ಬಂದು ನಿಂತಿದೆ ಇನ್ನೂ ಒಳ ಹೋಗಬೇಕಾದವರ ಪರಿಚಯ ಮಾಡಿ ಕೊಟ್ಟು ಮನೆ ಒಳಗೆ ಸ್ವಾಗತ ಕೋರಿಕೊಳ್ಳುವುದಷ್ಟೇ ಬಾಕಿ.
ಆದರೆ ಪ್ರತಿವರ್ಷ ಕೂಡ ಇದು ಒಂದು ಗಂಟೆ 30 ನಿಮಿಷಗಳ ಬಿಗ್ ಎಪಿಸೋಡ್ ಆಗಿ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಹೆಚ್ಚಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಇದು ಪ್ರಸಾರವಾಗಿರುವುದರಿಂದ ಈ ಬಾರಿ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಆದರೆ ಈ ಕಾರ್ಯಕ್ರಮಕ್ಕೆ ಸಮಯ ಕೊಡಬೇಕು ಎಂದರೆ ಈಗಾಗಲೇ ಆ ಸಮಯದಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳನ್ನು ನಿಲ್ಲಿಸಲೇಬೇಕಾದದ್ದು ಅನಿವಾರ್ಯವಾಗಿದೆ. ಹಾಗಾಗಿ ಕಲರ್ಸ್ ಕನ್ನಡ ವಾಹಿನಿಯು ತನ್ನ ಜನಪ್ರಿಯ ಕೆಲವು ಧಾರಾವಾಹಿಗಳಲ್ಲಿ ಟಿ ಆರ್ ಪಿ ಕಡಿಮೆ ಇರುವ ದಾರಿಗಳನ್ನು ಎತ್ತಂಗಡಿ ಮಾಡಲು ನಿರ್ಧರಿಸಿದೆ.
ಈ ಲಿಸ್ಟಿನಲ್ಲಿ ಸಾವಿರ ಸಂಚಿಕೆ ಪೂರೈಸಿರುವ ನಮ್ಮನೆ ಯುವರಾಣಿ ಹಾಗೂ ಮಂಗಳ ಗೌರಿ ಮದುವೆ ದಾರವಾಹಿ ಇದೆ 650 ಎಪಿಸೋಡ್ ಗಳನ್ನು ಪೂರೈಸಿರುವ ನನ್ನರಸಿ ರಾಧೆ ಹಾಗೂ ಈಗಷ್ಟೇ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದ ಆದರೂ ಸಾಕಷ್ಟು ಸದ್ದು ಮಾಡಿದ್ದ 300 ಎಪಿಸೋಡ್ ಪೂರೈಸಿರುವ ಕನ್ಯಾಕುಮಾರಿ ಧಾರಾವಾಹಿ ಕೂಡ ಸೇರಿದೆ. ಇದನ್ನು ಪೂರ್ತಿಯಾಗಿ ನಿಲ್ಲಿಸಲು ಅಥವಾ ಸಮಯ ಬದಲಾವಣೆ ಮಾಡಿ ಬೇರೆ ಸಮಾಜದಲ್ಲಿ ಪ್ರಸಾರ ಮಾಡಲು ಚಾನೆಲ್ ನಿರ್ಧರಿಸಿದೆಯೋ ಎನ್ನುವ ಕನ್ಫ್ಯೂಷನ್ ಕೂಡ ಇದೆ. ಇದರ ನಡುವೆ ಕೆಲವು ಧಾರಾವಾಹಿಗಳು ಕ್ಲೈಮ್ಯಾಕ್ಸ್ ಹಂತ ತಲುಪಿದೆ ಎನ್ನುವ ಭಾವನೆ ಕೂಡ ಮೂಡಿಬರುತ್ತದೆ ಸದ್ಯದಲ್ಲೇ ಎಲ್ಲದಕ್ಕೂ ತೆರೆ ಬೀಳಲಿದೆ.