Sunday, June 4, 2023
HomeEntertainmentದರ್ಶನ್ ಹುಟ್ಟುಹಬ್ಬಕ್ಕೆ ಖರ್ಚು ಆಗಿದ್ದು ಬರೊಬ್ಬರಿ ಎಷ್ಟು ಕೋಟಿ ಗೊತ್ತ.? ಇಷ್ಟು ಹಣವನ್ನು ಖರ್ಚು ಮಾಡಿದ...

ದರ್ಶನ್ ಹುಟ್ಟುಹಬ್ಬಕ್ಕೆ ಖರ್ಚು ಆಗಿದ್ದು ಬರೊಬ್ಬರಿ ಎಷ್ಟು ಕೋಟಿ ಗೊತ್ತ.? ಇಷ್ಟು ಹಣವನ್ನು ಖರ್ಚು ಮಾಡಿದ ಪುಣ್ಯತ್ಮ ಯಾರು ಅಂತ ಗೊತ್ತದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

 

ದರ್ಶನ್ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಬಂದ 30 ಸಾವಿರ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಖರ್ಚು ಭರಿಸಿದ್ದು ಯಾರು ಗೊತ್ತಾ.? ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ (Box office Sulthan Darshan) ಅವರಿಗೆ ನೆನ್ನೆ ಹುಟ್ಟುಹಬ್ಬದ ಸಂಭ್ರಮ (Birthday celebration). ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಡೀ ರಾಜ್ಯದಾದ್ಯಂತ ಕೋಟಿಗಟ್ಟಲೇ ಅಭಿಮಾನಿಗಳಿದ್ದಾರೆ. ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಟ್ಟೆಕಿಚ್ಚು ಪಡುವಷ್ಟು ದರ್ಶನ್ ಅಭಿಮಾನಿಗಳು ದರ್ಶನ್ ಅವರ ಮೇಲೆ ಅಭಿಮಾನ ತೋರುತ್ತಾರೆ.

ಇದಕ್ಕೆ ದರ್ಶನ್ ಅವರು ಸಹ ತಲೆ ಬಾಗಿದ್ದು, ಅವರನ್ನು ಅಭಿಮಾನಿಗಳು ಎಂದು ಕರೆಯದೆ ನನ್ನ ಸೆಲೆಬ್ರಿಟಿಸ್ (Darshan’s celebrates) ಎಂದು ಎದೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಅದೇ ಕಾರಣಕ್ಕಾಗಿ ಅವರ ಹೆಸರು ಶಾಶ್ವತವಾಗಿ ಇರಬೇಕು ಎಂದು ಎದೆ ಮೇಲೆ ನನ್ನ ಸೆಲೆಬ್ರಿಸ್ ಎಂದು ಪ್ರೀತಿಯಿಂದ ಹಚ್ಚೆ (tattoo) ಕೂಡ ಹಾಕಿಸಿಕೊಂಡಿದ್ದಾರೆ. ನಿನ್ನೆ ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬ ಇತ್ತು, ಮಧ್ಯರಾತ್ರಿ ಇಂದಲೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ಕಾಣಲು ಧಾವಿಸಿದ್ದರು.

ದರ್ಶನ್ ಅವರ ಹುಟ್ಟು ಹಬ್ಬವನ್ನು ಪ್ರತಿ ವರ್ಷ ಕೂಡ ಇಷ್ಟೇ ಅದ್ದೂರಿಯಾಗಿ ಅಭಿಮಾನಿಗಳು ಆಚರಿಸುತ್ತಿದ್ದರು. ಆದರೆ ಮೂರು ವರ್ಷದಿಂದ ಈ ಸಂಭ್ರಮ ನಿಂತು ಹೋಗಿತ್ತು. ಎರಡು ವರ್ಷ ಕರೋನ ಲಾಕ್ ಡೌನ್ ನಿಯಮಾವಳಿಗಳು ಮತ್ತು ಕಳೆದ ವರ್ಷ ಪುನೀತ್ ಅವರ ಅಗಲಿಕೆ ನೋವಿಂದ ದರ್ಶನ್ ಅವರು ಹುಟ್ಟು ಹಬ್ಬ ಆಚರಿಸಿಕೊಂಡಿರಲಿಲ್ಲ. ಅದಲ್ಲದೆ ಈ ಬಾರಿ ವಿಶೇಷವಾಗಿ ಅರ್ಥ ಪೂರ್ಣವಾಗಿ ಅವರ ಹುಟ್ಟು ಹಬ್ಬದ ಆಚರಣೆ ನಡೆದಿತ್ತು.

ಯಾಕೆಂದರೆ ದರ್ಶನ್ ಅವರು ಈ ಮೊದಲೇ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದರು. ನನ್ನ ಹುಟ್ಟು ಹಬ್ಬಕ್ಕೆ ಯಾರು ಕೂಡ ಕೇಕು, ಹಾರ, ತುರಾಯಿ, ಕಟೌಟ್ ಕಟ್ಟುವುದು, ಹಾಲಿನ ಅಭಿಷೇಕ ಮಾಡುವುದು ಈ ರೀತಿಯೆಲ್ಲಾ ಮಾಡಿ ಹಣ ವ್ಯಯ ಮಾಡಬಾರದು. ಸಾಧ್ಯವಾದರೆ ಕೈಲಾದಷ್ಟು ದವಸ ಧಾನ್ಯ ತಂದುಕೊಡಿ ಅಗತ್ಯ ಇರುವವರಿಗೆ ತಲುಪಿಸುತ್ತೇನೆ ಎಂದು ಹೇಳಿದ್ದರು.

ದರ್ಶನ್ ಅವರ ಪ್ರತಿ ಮಾತನ್ನು ಕೂಡ ನಡೆಸಿಕೊಡುವ ಅವರ ಅಭಿಮಾನಿಗಳು ದಾಸನ ಆಜ್ಞೆಗೆ ಒಪ್ಪಿ ಮೂಟೆಗಟ್ಟಲೆ ದವಸ ಧಾನ್ಯಗಳ ಲೋಡನ್ನು ದರ್ಶನ್ ಮನೆ ಮುಂದೆ ಇಳಿಸಿದ್ದಾರೆ, ಈಗಾಗಲೇ ದರ್ಶನ್ ಕಡೆಯವರು ಅದನ್ನು ಹಂಚುವ ಕೆಲಸದಲ್ಲೂ ತೊಡಗಿಕೊಂಡಿದ್ದಾರೆ. ದರ್ಶನ್ ಅವರ ಹುಟ್ಟು ಹಬ್ಬದ ದಿನದಂದು ದಿನಪೂರ್ತಿ ಅವರು ಅಭಿಮಾನಿಗಳ ಜೊತೆ ಬ್ಯುಸಿ ಆಗಿರುತ್ತಾರೆ. ಯಾಕೆಂದರೆ ಅಭಿಮಾನಿಗಳಿಂದಲೇ ತಾನು ಇನ್ನು ಈ ಪಟ್ಟದಲ್ಲಿ ಇರುವುದು ಎನ್ನುವುದು ಅವರಿಗೆ ಚೆನ್ನಾಗಿ ಅರಿವಾಗಿದೆ.

ಅದರಲ್ಲೂ ದರ್ಶನ್ ಅವರ ಅಷ್ಟೊಂದು ವಿವಾದದ ನಡುವೆಯೂ ಕಿಂಚಿತ್ತೂ ಕೂಡ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲದೆ ಇರುವುದು ಒಂದು ರೀತಿಯ ಅದೃಷ್ಟ ಎನಬೇಕು ಅಥವಾ ಆತನ ವ್ಯಕ್ತಿತ್ವವನ್ನೇ ಇದ್ದಹಾಗೆ ಅಭಿಮಾನಿಗಳು ಸ್ವೀಕರಿಸಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕೋ ತಿಳಿಯದು. ಒಟ್ಟಿನಲ್ಲಿ ದರ್ಶನ್ ಮತ್ತು ಅವರ ಅಭಿಮಾನಿಗಳ ನಡುವೆ ಇಂತಹದೊಂದು ಬಾಂಧವ್ಯ ಏರ್ಪಟ್ಟಿದೆ ಹಾಗೂ ಅದು ಕಡೆತನಕವೂ ಕೂಡ ಶಾಶ್ವತವಾಗಿಯೂ ಇರುತ್ತದೆ.

ದರ್ಶನ್ ಅವರು ಮಧ್ಯರಾತ್ರಿಯಿಂದಲೇ ತನ್ನ ಮನೆ ಮುಂದೆ ಬಂದು ಕಾಯುವ ತನ್ನ ಅಭಿಮಾನಿಗೋಸ್ಕರ. ಅಲ್ಲದೆ ದೂರದ ಬೀದರ್ ಗುಲ್ಬರ್ಗ ಕಲಬುರ್ಗಿ ಇತ್ಯಾದಿ ರಾಜ್ಯದ ನಾನಾ ಭಾಗಗಳಿಂದಲೂ ಬರುವ ಅಭಿಮಾನಿಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಹುಟ್ಟು ಹಬ್ಬದ ದಿನದಂದು ಮನೆಯ ಪಕ್ಕದಲ್ಲಿ ಊಟದ ವ್ಯವಸ್ಥೆಯನ್ನು ಮಾಡಿಸಿದ್ದಾರೆ. ಆ ದಿನ ಪೂರ್ತಿ ಅಭಿಮಾನಿಗಳು ದರ್ಶನ್ ಹುಟ್ಟು ಹಬ್ಬದ ಔತಣಕೂಟವನ್ನು ಸವಿದಿದ್ದಾರೆ ಮತ್ತು ಇದಕ್ಕೆಲ್ಲಾ ಹೆಚ್ಚು ಕಡಿಮೆ ನಾಲ್ಕು ಕೋಟಿ ರೂಗಳು ಖರ್ಚು ಆಗಿದೆ ಎನ್ನುವ ಮಾತುಗಳು ಕೇಳಿ ಬಂದಿರುತ್ತಿವೆ.

ದರ್ಶನ್ ಅವರು ಇದನ್ನೆಲ್ಲ ನಾನೇ ನೋಡಿಕೊಳ್ಳುತ್ತೇನೆ ಎಂದರು ಸಹ ಅಭಿಮಾನಿಗಳು ಅದಕ್ಕೆ ಎಡೆ ಮಾಡಿಕೊಡದೆ ನಾವು ಪ್ರೀತಿಯಿಂದ ಹುಟ್ಟು ಹಬ್ಬ ಆಚರಿಸುತ್ತಿದ್ದೇವೆ ಇದರ ಖರ್ಚೆಲ್ಲಾ ನಮ್ಮದೇ ಎಂದು ಅಭಿಮಾನಿಗಳೆಲ್ಲ ದುಡ್ಡು ಹಾಕಿ ಊಟದ ವ್ಯವಸ್ಥೆಯನ್ನು ನೋಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೂಡ ಇವೆ. ಇಂತಹ ಅಭಿಮಾನಿ ಬಳಗವನ್ನು ಪಡೆದ ದರ್ಶನ್ ಅವರೇ ಧನ್ಯರು ಎನ್ನಬಹುದು.