ಕರ್ನಾಟಕದಲ್ಲಿರೋ ಮಾಧ್ಯಮ ಬ್ಯಾನ್ ಗೆ ಕೇರ್ ಮಾಡದ ಇಂಟರ್ನ್ಯಾಷನಲ್ ಚಾನಲ್ ಒಂದು ಇಂದು ದರ್ಶನ್ ಅವರನ್ನು ಇಂಟರ್ವ್ಯೂ ಮಾಡಲು ಮನೆ ಬಾಗಿಲಿಗೆ ಬಂದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈಗಾಗಲೇ ಕ್ರಾಂತಿ (Kranthi Movie hit) ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ಸಂಭ್ರಮದಲ್ಲಿರುವ ಬಾಕ್ಸ್ ಆಫೀಸ್ ಸುಲ್ತಾನನಿಗೆ ಇದು 46ರ ವಸಂತ. ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟ ಎನ್ನುವ ಖ್ಯಾತಿಗೆ ಒಳಗಾಗಿರುವ ದರ್ಶನ್ ಅವರು ಮೂರು ವರ್ಷಗಳ ಬಳಿಕ ತಮ್ಮ ಸೆಲೆಬ್ರಿಟಿಸ್ ಜೊತೆ ಅರ್ಥಪೂರ್ಣವಾಗಿ ಹುಟ್ಟು ಹಬ್ಬ (Birthday) ಆಚರಿಸಿಕೊಂಡಿದ್ದಾರೆ.

ಇದುವರೆಗೆ ದರ್ಶನ್ ಅವರು ಎಷ್ಟೇ ಬಾರಿ ವಿವಾದಕ್ಕೆ ಒಳಗಾಗಿದ್ದರು ಅಥವಾ ಸೋತಿದ್ದರೂ ಪ್ರತಿಬಾರಿಯೂ ದರ್ಶನ್ ಅವರಿಗೆ ಬೆಂಬಲವಾಗಿ ನಿಂತಿದ್ದು ಅವರ ಸೆಲೆಬ್ರಿಟಿಗಳು ಮಾತ್ರ. ಈಗಷ್ಟೇ ಅವರು ಅಭಿಮಾನಿಗಳಿಗೆ ಟ್ರಿಬ್ಯೂಟ್ (tribute for fans) ಕೊಡುವ ಸಲುವಾಗಿ ಎದೆ ಮೇಲೆ ನನ್ನ ಸೆಲೆಬ್ರೇಟೀಸ್ ಎಂದು ಹಚ್ಚೆ (tattoo) ಕೂಡ ಹಾಕಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಕನ್ನಡಿಗರಿಂದ ಪ್ರೀತಿ ಪಡೆದಿರುವ ದರ್ಶನ್ ಅವರಿಗೆ ಅದ್ಯಾಕೋ ವಿವಾದಗಳು (Controversy) ಸದಾ ಬೆನ್ನು ಬಿಡದೆ ಕಾಡುತ್ತಿವೆ.

ದರ್ಶನ್ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ವಿವಾದದಲ್ಲೇ ಇರುತ್ತಾರೆ. ಅದು ವೈಯಕ್ತಿಕ, ಕೌಟುಂಬಿಕ ವಿಚಾರ ಅಥವಾ ಸಿನಿಮಾಗಳ ವಿಚಾರವಾಗಿ ಕೂಡ. ಇತ್ತೀಚೆಗಂತೂ ದರ್ಶನ್ ಅವರ ಪ್ರತಿ ನಡೆಯು ಕೂಡ ವಿವಾದ ಎನ್ನುವ ರೀತಿ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿ ಕೇಡಿಗಳು ಕಿಚ್ಚು ಹಚ್ಚುತ್ತಿದ್ದಾರೆ. ಇದರಲ್ಲಿ ಎಲ್ಲಕ್ಕಿಂತ ಈ ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಆಗಿದ್ದು ಮಾಧ್ಯಮಗಳ ಬ್ಯಾನ್ ವಿಚಾರ.

ವರ್ಷದ ಹಿಂದೆ ಮೈಸೂರಿನ ಹೋಟೆಲ್ ವಿವಾದದಲ್ಲಿ ಮಾಧ್ಯಮಗಳನ್ನು ಏಕವಚನದಲ್ಲಿ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ ಆರೋಪದಿಂದ ದರ್ಶನ್ ಅವರ ಕುರಿತ ಯಾವುದೇ ಮಾಹಿತಿಗಳನ್ನು ನ್ಯೂಸ್ ಚಾನೆಲ್ ಗಳು ಪ್ರಸಾರ ಮಾಡುವುದಿಲ್ಲ ಎಂದು ದರ್ಶನ್ ಅವರನ್ನು ಕನ್ನಡದ ಎಲ್ಲ ಮಾಧ್ಯಮಗಳು (Kannada news channels) ಸೇರಿ ಬ್ಯಾನ್ (ban) ಮಾಡಿದ್ದವು. ಇದರ ನಡುವೆ ಅಭಿಮಾನಿಗಳಿಗೆ ಕ್ರಾಂತಿ ಸಿನಿಮಾದ ಪ್ರಚಾರ ಹೇಗೆ ಮಾಡುವುದು ಎನ್ನುವ ಪ್ರಶ್ನೆ ಎದುರಾಗಿತ್ತು.

ಮಾಧ್ಯಮಗಳಿಗೆ ಸೆಡ್ಡು ಹೊಡೆದು ನೆಚ್ಚಿನ ನಟನ ಬೆಂಬಲಕ್ಕೆ ನಿಂತ ಅಭಿಮಾನಿಗಳು ಕ್ರಾಂತಿ ಸಿನಿಮಾ ಬಗ್ಗೆ ಹಳ್ಳಿಹಳ್ಳಿಗೂ ಕೂಡ ವಿಚಾರ ತಲುಪುವ ರೀತಿ ಮಾಡಿ ಸಿನಿಮಾವನ್ನು ದಾಖಲೆ ಮಾಡಿದರು. ಸಿನಿಮಾದ ಒಂದು ವಿಚಾರವನ್ನು ಕೂಡ ಸುದ್ದಿ ಮಾಧ್ಯಮಗಳು ಬಿತ್ತರಿಸಲೇ ಇಲ್ಲ ಬದಲಾಗಿ ಸೋಶಿಯಲ್ ಮೀಡಿಯವನ್ನೇ ಪ್ಲಾಟ್ಫಾರ್ಮ್ ಮಾಡಿಕೊಂಡ ಸಿನಿಮಾ ತಂಡ ನಿರಂತರವಾಗಿ ಸಂದರ್ಶನಗಳನ್ನು ಕೊಟ್ಟು ಸಿನಿಮಾದ ಪ್ರಚಾರಕಾರ್ಯದಲ್ಲಿ ತೊಡಗಿಕೊಂಡು, ಆಡಿಯೋ ಲಾಂಚ್ ಅನ್ನು ಕೂಡ ವಿಭಿನ್ನವಾಗಿ ಮಾಡಿ ಜನರಿಗೆ ವಿಷಯ ಮುಟ್ಟಿಸಿದರು.

ನಂತರ ಆದ ಕ್ರಾಂತಿ ಸಿನಿಮಾದ ಮೊದಲ ದಿನದ ಕಲೆಕ್ಷನ್ ವಿಚಾರವೇ ಆಗಲಿ ಮತ್ತು ಇಲ್ಲಿನ ತನಕ ಗಳಿಕೆ ವಿಚಾರವೇ ಆಗಲಿ ಅದು ಚಿತ್ರರಂಗದ ಇತಿಹಾಸ ಪುಟದಲ್ಲಿ ಬರೆದಿಡುವ ಒಂದು ಸಾಧನೆಯೇ ಸರಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಮೊದಲ ದಿನದಿಂದಲೂ ಇಂತಹ ಚಾಲೆಂಜ್ ಗಳನ್ನೇ ಎದುರಿಸಿಕೊಂಡು ಗೆದ್ದು ನಿಂತಿರುವ ಈ ಚಾಲೆಂಜಿಂಗ್ ಸ್ಟಾರ್ ನ ಇಂಟರ್ವ್ಯೂ ಮಾಡಲು ಹಿಂದಿ ಸುದ್ದಿ ಮಾಧ್ಯಮ (Hindi News Channel) ಒಂದು ಬಂದಿದೆ.

ಇಂದು ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ಆಜ್ ತಕ್ (Aj Thak) ಎನ್ನುವ ನ್ಯೂಸ್ ಚಾನೆಲ್ ದರ್ಶನ್ ಅವರ ಇಂಟರ್ವ್ಯೂ ಮಾಡಿದೆ. ಇದರಿಂದ ಕರ್ನಾಟಕದಾದ್ಯಂತ ಅಭಿಮಾನಿಗಳ ಮನದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದ್ದು ಕನ್ನಡ ಸುದ್ದಿ ಮಾಧ್ಯಮಗಳು ನಡೆದುಕೊಂಡ ನಡೆಗೆ ಇದು ತಕ್ಕ ಶಾಸ್ತಿ ಎನ್ನುವ ರೀತಿ ಅಭಿಮಾನಿಗಳಿಂದ ಪ್ರತಿಕ್ರಿಯೆ ಕೇಳಿ ಬರುತ್ತಿವೆ. ಮತ್ತೊಮ್ಮೆ ದರ್ಶನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಹಾಗೂ ಈ ಮನಸ್ತಾಪಗಳೆಲ್ಲವೂ ಸರಿ ಹೋಗುವಂತೆ ಆಗಲಿ ಎಂದು ಹಾರೈಸೋಣ.

Leave a Comment