Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಹೊಸಪೇಟೆ ಘಟನೆ ನಂತರ ಕ್ರಾಂತಿ ಸಿನಿಮಾದ ಮೂರನೇ ಹಾಡು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡುತ್ತಿರುವ ದರ್ಶನ್ ಲೈವ್...

ಹೊಸಪೇಟೆ ಘಟನೆ ನಂತರ ಕ್ರಾಂತಿ ಸಿನಿಮಾದ ಮೂರನೇ ಹಾಡು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡುತ್ತಿರುವ ದರ್ಶನ್ ಲೈವ್ ಬಂದು ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ.?

ಫ್ಯಾನ್ಸ್ ಗೆ ವಿಶೇಷ ಮನವಿ ಮಾಡಿದ ಡಿ ಬಾಸ್

ಹೊಸಪೇಟೆಯ ಘಟನೆಯ ನಂತರ ದರ್ಶನ್ ಅವರು ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಕೆಲವು ಗುಂಪುಗಳು ಮಾತನಾಡುತ್ತಿದ್ದವು. ಆದರೆ ಇದೀಗ ಆ ಎಲ್ಲಾ ಸುದ್ದಿಗಳನ್ನು ಸುಳ್ಳು ಮಾಡಲು ದರ್ಶನ್ ಅವರು ಲೈವ್ ಬಂದು ವಿಡಿಯೋ ಒಂದನ್ನು ಮಾಡಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಸಿನಿಮಾದ ಮೂರನೇ ಹಾಡು ಪುಷ್ಪವತಿ ಎಂಬ ಹಾಡನ್ನು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಲು ಇದೀಗ ಚಿತ್ರ ತಂಡ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಈ ವಿಚಾರವನ್ನು ಮೊನೆಯಷ್ಟೇ ದರ್ಶನ್ ಅವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವ್ಯಕ್ತಪಡಿಸಿದ್ದರು.

ಇದಾದ ನಂತರ ಇಂದು ಸಂಜೆ ಲೈವ್ ಬಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ ಕ್ರಾಂತಿ ಸಿನಿಮಾದ ಮೊದಲ ಹಾಡು ಮೈಸೂರಿನ ಕೆ.ಆರ್ ಪೇಟೆಯಲ್ಲಿ ಬಿಡುಗಡೆ ಮಾಡಿದರು. ಇದಾದ ನಂತರ ಎರಡನೇ ಹಾಡು ಹೊಸಪೇಟೆಯಲ್ಲಿ ಬಿಡುಗಡೆ ಮಾಡಿದ್ದರು ಆದರೆ ಈ ಸಮಯದಲ್ಲಿ ದರ್ಶನ್ ಮೇಲೆ ಕಿಡಿಗೇಡಿ ಒಬ್ಬರು ಚಪ್ಪಲಿಯನ್ನು ಎಸೆದರು. ಇದು ನಿಜಕ್ಕೂ ಕೂಡ ತುಂಬಾನೇ ನೋವಿನ ಸಂಗತಿ ಆದರೂ ಕೂಡ ದರ್ಶನ್ ಅವರು ದೊಡ್ಡವರಾಗಿ “ಪರವಾಗಿಲ್ಲ ಬಿಡು ಚಿನ್ನ” ಎಂಬ ಮಾತನ್ನು ಹೇಳುವ ಮೂಲಕ ಈ ಒಂದು ಘಟನೆಗೆ ಮುಕ್ತಾಯವನ್ನು ಹಾಡಿದರು. ಇದಾದ ನಂತರ ಸಾಕಷ್ಟು ಚರ್ಚೆ ವಿವಾದಗಳು ಎಲ್ಲವೂ ಕೂಡ ಏರ್ಪಟ್ಟವು ಆದರೆ ಇದು ಯಾವುದಕ್ಕೂ ದರ್ಶನ್ ತಲೆ ಕೆಡಿಸಿಕೊಳ್ಳಲಿಲ್ಲ.

“ಈ ಘಟನೆಯಿಂದ ನನಗಿಂತಲೂ ನನ್ನ ಸೆಲೆಬ್ರಿಟಿ ಗಳಿಗೆ ಹೆಚ್ಚು ನೋವಾಗಿದೆ, ನನ್ನ ಬೆನ್ನೆಲುಬಾಗಿ ನಿಂತ ಎಲ್ಲಾ ನನ್ನ ಸೆಲೆಬ್ರಿಟಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು ಅಂತ ಹೇಳಿದರು”. ವಿಶೇಷ ಏನೆಂದರೆ ಕಳೆದ ಐದು ವರ್ಷಗಳಿಂದಲೂ ಸುದೀಪ್ ಅವರ ಜೊತೆ ದರ್ಶನ್ ಅವರ ಟಚ್ ನಲ್ಲಿ ಇರಲಿಲ್ಲ, ಆದರೆ ಈ ಒಂದು ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಸುದೀಪ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘ ಸಾಲುಗಳನ್ನು ಬರೆದುಕೊಂಡಿದ್ದರು. ದರ್ಶನ್ ಅವರು ಇದನ್ನು ನೋಡಿ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ಕಿಚ್ಚ ಸುದೀಪ್ ಅವರಿಗೆ ಮೆಸೇಜ್ ಕೂಡ ಮಾಡಿದರು ಇವೆಲ್ಲವನ್ನು ನೋಡುತ್ತಿದ್ದರೆ ಒಂದು ರೀತಿಯಲ್ಲಿ ಇಂಡಸ್ಟ್ರಿಯಲ್ಲಿ ಇಬ್ಬರು ಮತ್ತೆ ಒಂದಾಗುವ ಸಾಧ್ಯತೆ ಇದೆ ಅಂತ ಹೇಳಬಹುದು.

ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾದ ಮೂರನೇ ಹಾಡು ಆದಂತಹ ಪುಷ್ಪವತಿ ಎಂಬ ಹಾಡನ್ನು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ‌. ಹಾಗಾಗಿ ದರ್ಶನ್ ಲೈವ್ ಬಂದು ತಮ್ಮ ಅಭಿಮಾನಿಗಳಲ್ಲಿ ಕ್ರಾಂತಿ ಸಿನಿಮಾದ ಮೂರನೇ ಹಾಡನ್ನು ಹುಬ್ಬಳ್ಳಿಯಲ್ಲಿ ನಾಳೆ ಸಂಜೆ 7 ಗಂಟೆಗೆ ಬಿಡುಗಡೆ ಮಾಡುತ್ತೇವೆ. ಅಭಿಮಾನಿಗಳ ಸಮ್ಮುಖದಲ್ಲಿ ಅಭಿಮಾನಿಯೊಬ್ಬರು ಈ ಹಾಡನ್ನು ಬಿಡುಗಡೆ ಮಾಡುತ್ತಾರೆ. ನಾನೊಬ್ಬ ನಟನಾಗಿ ಅಲ್ಲ ನಿರೂಪಕನಾಗಿ ನಿಮ್ಮ ಜೊತೆ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ ಎಂದು ಹೇಳಿದ್ದಾರೆ ಹಾಗೂ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.

ಆದರೆ ಅಭಿಮಾನಿಗಳದಂತೂ ಒಂದೇ ಮನವಿ ಹೊಸಪೇಟೆಯಲ್ಲಿ ಆದಂತಹ ಘಟನೆ ಯಾವುದೇ ಕಾರಣಕ್ಕೂ ಹುಬ್ಬಳ್ಳಿಯಲ್ಲಿ ನಡೆದೆ ಇದ್ದರೆ ಸಾಕು ಎಂದು ಕೇಳಿ ಕೊಳ್ಳುತ್ತಿದ್ದಾರೆ. ಒಂದು ವೇಳೆ ಹುಬ್ಬಳ್ಳಿಯಲು ಇಂತಹದ್ದೇ ಘಟನೆ ನಡೆದರೆ ನಿಜಕ್ಕೂ ಕೂಡ ದರ್ಶನ್ ವಿರುದ್ಧ ಯಾರೋ ಷಡ್ಯಂತರ ರೂಪಿಸುತ್ತಿದ್ದಾರೆ ಎಂಬುದು ಸಾಬೀತು ಆಗುತ್ತದೆ. ಅದೇನೇ ಆಗಲಿ ಎಲ್ಲಾ ಅವಮಾನ ಅಪಮಾನಗಳನ್ನು ಮೆಟ್ಟಿ ನಿಂತ ಈ ನಟನಿಗೆ ಅವರ ಅಭಿಮಾನಿಗಳು ಎಂದಿಗೂ ಕೈ ಬಿಡುವುದಿಲ್ಲ ಎಂಬುದಂತೂ ಸತ್ಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮಾಡಿ.