Sunday, June 4, 2023
HomeEntertainmentಸರ್ಕಾರಿ ಶಾಲೆ ಬಗ್ಗೆ ಗಂಟೆಗಟ್ಟಲೆ ಮಾತಾಡೋ ದರ್ಶನ್ ಪ್ರೈವೇಟ್ ಸ್ಕೂಲ್ ನಲ್ಲಿ ತಮ್ಮ ಮಗನಿಗೆ ಕಟ್ತಾ...

ಸರ್ಕಾರಿ ಶಾಲೆ ಬಗ್ಗೆ ಗಂಟೆಗಟ್ಟಲೆ ಮಾತಾಡೋ ದರ್ಶನ್ ಪ್ರೈವೇಟ್ ಸ್ಕೂಲ್ ನಲ್ಲಿ ತಮ್ಮ ಮಗನಿಗೆ ಕಟ್ತಾ ಇರೋ ಸ್ಕೂಲ್ ಫೀಸ್ ಎಷ್ಟು ಗೊತ್ತ.? ನಿಜಕ್ಕೂ ತಲೆ ತಿರುಗುತ್ತೆ ಈ ವಿಡಿಯೋ ನೋಡಿ

ಸದ್ಯಕ್ಕೆ ಕರ್ನಾಟಕದಾದ್ಯಂತ ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾಗಳಲ್ಲಿ ಒಂದು ಕ್ರಾಂತಿ. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಎನ್ನುವ ಕಾರಣಕ್ಕೆ ಅವರ ಅಭಿಮಾನಿಗಳು ಕಾಯುತ್ತಿದ್ದರೆ ಇದುವರೆಗೆ ಯಾವ ಮಾಧ್ಯಮ ಕೂಡ ಕ್ರಾಂತಿ ಸಿನಿಮಾದ ಬಗ್ಗೆ ಪ್ರಚಾರ ನೀಡದ ಕಾರಣ ಇದು ಯಾವ ವಿಷಯದ ಕ್ರಾಂತಿ ಮಾಡುವ ಸಲುವಾಗಿ ತಯಾರಾಗಿರುವ ಸಿನಿಮಾ ಆಗಿರಬಹುದು ಎನ್ನುವ ಕುತೂಹಲಕ್ಕಾಗಿಯೇ ಹಲವು ಮಂದಿ ಕಾಯುತ್ತಿದ್ದಾರೆ.

ಈಗಾಗಲೇ ಈ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಆಗುತ್ತದೆ ಎಂದೇ ಬಹುತೇಕ ನಿರೀಕ್ಷೆ ಇತ್ತು, ಆದರೆ ಸಿನಿಮಾದ ಅಂತಿಮ ಭಾಗದ ಕೆಲಸ ಬಾಕಿ ಇರುವುದರಿಂದ ಸಿನಿಮಾ ತಂಡ ಕೊಟ್ಟಿರುವ ಮಾಹಿತಿ ಪ್ರಕಾರ 2023 ಜನವರಿ 26 ನೇ ತಾರೀಖಿನಂದು ರಾಜ್ಯದೆಲ್ಲೆಡೆ ಸಿನಿಮಾ ಬಿಡುಗಡೆ ಅಗಲಿದೆ. ಈ ನಡುವೆ ಕ್ರಾಂತಿ ಸಿನಿಮಾ ಬಗ್ಗೆ ಪ್ರಚಾರ ಕೂಡ ಶುರು ಮಾಡಿದ್ದು ಸಿನಿಮಾದ ಡೈರೆಕ್ಟರ್ ಗಳಾದ ಆದ ಬಿ ಸುರೇಶ್ ಹಾಗೂ ಹರಿಕೃಷ್ಣ ಮತ್ತು ನಾಯಕ ನಟ ದರ್ಶನ್ ಅವರು ಈ ಸಂಬಂಧಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ ಮಾತನಾಡಿದ ದರ್ಶನ್ ಅವರು ಕ್ರಾಂತಿ ಸಿನಿಮಾದ ಕುರಿತು ಜನರಿಗಿರುವ ಆಸಕ್ತಿಯನ್ನು ಅರಿತು ಸಿನಿಮಾ ಬಗ್ಗೆ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ತಿಳಿಸಿ, ಸಿನಿಮಾ ಯಾವ ರೀತಿ ಇರಲಿದೆ ಎನ್ನುವುದರ ಬಗ್ಗೆ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಜೊತೆಗೆ ಮಾತಿನ ಮಧ್ಯೆ ಅವರು ಅವರ ಮಗನಿಗಾಗಿ ವರ್ಷಕ್ಕೆ ಕಟ್ಟುತ್ತಿರುವ ಶಾಲಾ ಫೀಸ್ ಬಗ್ಗೆ ಕೂಡ ಹೇಳಿದ್ದಾರೆ. ಕ್ರಾಂತಿ ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ನಾವು ಕನ್ನಡದಲ್ಲಿ ಸಿನಿಮಾ ಮಾಡಿದ್ದೇವೆ ಬೇಕಾದರೆ ಡಬ್ಬಿಂಗ್ ಮಾಡಿಕೊಡುತ್ತೇವೆ ಅಷ್ಟೇ.

ಅಲ್ಲಿಗೆ ಹೋಗಿ ಪ್ರಚಾರ ಮಾಡುವ ಯಾವ ಆಲೋಚನೆಯಲ್ಲಿ ನಾನಂತೂ ಇಲ್ಲ ಎಂದು ಹೇಳಿರುವ ಇವರು, ಕ್ರಾಂತಿ ಸಿನಿಮಾವು ಶಿಕ್ಷಣದ ಕ್ರಾಂತಿ ವಿಷಯ ತಿಳಿಸಲು ಬರುತ್ತಿದೆ ಇಂದು ಎಜುಕೇಶನ್ ಸಿಸ್ಟಮ್ ಯಾವ ರೀತಿ ಇದೆ ಎಂದು ಎಲ್ಲರಿಗೂ ತಿಳಿದಿದೆ. ಕೆಲವು ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಎರಡು ಉಚಿತವಾಗಿ ಸಿಗುತ್ತಿದೆ. ಆದರೆ ನಮ್ಮ ದೇಶದಲ್ಲಿ ವ್ಯವಸ್ಥೆ ಹೇಗಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಇಂದು ಶಿಕ್ಷಣ ವಿಷಯದಲ್ಲಿ ಹೇಗೆ ಜನರ ದುಡ್ಡು ಹೀರುತ್ತಿದ್ದಾರೆ ಎಂದರೆ ನಾನೇ ನನ್ನ ಮಗನಿಗೆ ವರ್ಷಕ್ಕೆ 8 ಲಕ್ಷ ಫೀಸ್ ಕಟ್ಟುತ್ತಿದ್ದೇನೆ.

ಆದರೆ ನಮ್ಮ ಕಾಲದಲ್ಲಿ ತಿಂಗಳಿಗೆ 40 ರೂಪಾಯಿಯಲ್ಲೇ ಮುಗಿಯುತಿತ್ತು. ದೇಶವೇ ಮೆಚ್ಚುವಂತಹ ಸಾಧನೆ ಮಾಡಿದಂತಹ ವಿಶ್ವೇಶ್ವರಯ್ಯ ಮುಂತಾದವರು ಸರಕಾರಿ ಶಾಲೆಯಲ್ಲಿ ಓದಿಯೇ ದೊಡ್ಡವರಾದವರು ಆದರೆ ಈಗ ಯಾಕೆ ಆ ರೀತಿ ಒಳ್ಳೆಯ ಶಿಕ್ಷಣ ಸಿಗುತ್ತಿಲ್ಲ ಇಷ್ಟೆಲ್ಲ ಹೇಗೆ ಬದಲಾಯಿತು ಎನ್ನುವ ವಿಷಯದ ಬಗ್ಗೆ ಬೆಳಕು ಚೆಲ್ಲಿದ್ದೇವೆ. ಸಿನಿಮಾದಲ್ಲಿ ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಯ ನಡುವಿನ ವ್ಯತ್ಯಾಸ ತಿಳಿಸಿದ್ದೇವೆ ಎಂದರು.

ನಾವು ಹೇಳಿದ ತಕ್ಷಣವೇ ಎಲ್ಲಾ ಬದಲಾಗಿಬಿಡುತ್ತದೆ ಎಂದಲ್ಲಾ ಹೇಗೆ ಯಜಮಾನ ಸಿನಿಮಾ ನೋಡಿದ ಬಳಿಕ ಅನೇಕ ಮಂದಿ ಗಾಣದ ಎಣ್ಣೆ ಬಳಸಲು ಶುರು ಮಾಡಿದರು ಹಾಗೆ ಕ್ರಾಂತಿ ಸಿನಿಮಾ ನೋಡಿದ ಬಳಿಕ ಕೂಡ ಸರ್ಕಾರಿ ಶಾಲೆಗಳ ಉದ್ದಾರದತ್ತ ಎಲ್ಲರ ಗಮನ ಹೋಗಬಹುದು ಎನ್ನುವುದು ನಮ್ಮ ಉದ್ದೇಶ ಎಂದು ಕೂಡ ನುಡಿದರು. ಆ ಪ್ರಯತ್ನದಲ್ಲಂತೂ ನಾವಿದ್ದೇವೆ. ಅದ್ಭುತವಾದ ಸಿನಿಮಾ ಮಾಡಿದ್ದೇನೆ ಎಂದಲ್ಲ ಒಂದು ವಿಶೇಷವಾದ ವಿಷಯ ಇಟ್ಟುಕೊಂಡು ಒಳ್ಳೆ ಸಿನಿಮಾ ಮಾಡಿದ್ದೇನೆ, 6 ರಿಂದ 60 ವರ್ಷದವರೆಗೆ ಮನೆ ಮಂದಿ ಕುಟುಂಬದವರೆಲ್ಲರ ಜೊತೆ ಕೂತು ನೋಡುವಂತ ಸಿನಿಮಾ ಮಾಡಿದ್ದೇನೆ ಎನ್ನುವ ಸಮಾಧಾನದಲ್ಲಿದ್ದೇನೆ ಎಂದು ಸಿನಿಮಾ ಕುರಿತು ಮಾಹಿತಿ ನೀಡಿದರು.