Sunday, June 4, 2023
HomeEntertainmentಮೈ ಚಳಿ ಬಿಟ್ಟು ಸ್ಟೇಜ್ ಮೇಲೆ ನಟಿ ರಾಧಿಕಾ ಪಂಡಿತ್ ಮಾಡಿದ ಈ ಡ್ಯಾನ್ಸ್ ನೋಡಿ...

ಮೈ ಚಳಿ ಬಿಟ್ಟು ಸ್ಟೇಜ್ ಮೇಲೆ ನಟಿ ರಾಧಿಕಾ ಪಂಡಿತ್ ಮಾಡಿದ ಈ ಡ್ಯಾನ್ಸ್ ನೋಡಿ ನಿಜಕ್ಕೂ ಬೆರಗಾಗುತ್ತಿರ.

ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಉತ್ತಮ ಡ್ಯಾನ್ಸರ್ ಕೂಡ ಹೌದು. ನಟಿ ರಾಧಿಕಾ ಕುಮಾರಸ್ವಾಮಿ ಉತ್ತಮ ಡ್ಯಾನ್ಸರ್ ಅನ್ನೋದು ಆಟೋ ಶಂಕರ್ ಮಂಡ್ಯ ಸ್ವೀಟಿ ನನ್ನ ಜೋಡಿ ಮುಂತಾದ ಸಿನಿಮಾಗಳಲ್ಲಿ ಸಾಬೀತಾಗಿದೆ.ರಾಧಿಕಾ ಕುಮಾರಸ್ವಾಮಿ 9ನೇ ತರಗತಿ ಓದುತ್ತಿರುವಾಗಲೇ ಸೂಪರ್ ಹಿಟ್ ಸಿನಿಮಾದಲ್ಲಿ ಅಭಿನಯಿಸಿ ಫೇಮಸ್ ಆದವರು. 2002ರಲ್ಲಿ ತೆರೆಕಂಡ ವಿಜಯ ರಾಘವೇಂದ್ರ ಹಾಗೂ ರಾಧಿಕಾ ಕುಮಾರಸ್ವಾಮಿ ಅವರು ಅಭಿನಯಿಸಿದ ಮೊದಲ ಸಿನಿಮಾವಾದ ನಿನಗಾಗಿ ಸಿನಿಮಾವು ಈ ಇಬ್ಬರ ಕೆರಿಯರ್ ಅಲ್ಲಿ ಶಾಶ್ವತವಾಗಿ ದಾಖಲಾಗುವಷ್ಟು ಯಶಸ್ಸು ತಂದುಕೊಟ್ಟಿತ್ತು. ಇದಾದ ಬಳಿಕವೂ ಕೂಡ ವಿಜಯ್ ರಾಘವೇಂದ್ರ ಅವರೊಂದಿಗೆ ಪ್ರೇಮ ಖೈದಿ, ರೋಮಿಯೋ ಜೂಲಿಯೆಟ್, ರಿಷಿ ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು

ಆ ಸಮಯದಲ್ಲಿ ಇವರಿಬ್ಬರ ಕಾಂಬಿನೇಷನ್ ಅಲ್ಲಿ ಮೂಡಿಬಂದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳಾದ ಕಾರಣ ಇವರಿಬ್ಬರನ್ನು ಯಶಸ್ವಿ ಜೋಡಿಗಳು ಎಂದು ಗುರುತಿಸುತ್ತಿದ್ದರು. ನಂತರ ಲವ್ ಸ್ಟೋರಿ ಓರಿಯೆಂಟೆಡ್ ಸಿನಿಮಾ ಗಳಿಗಿಂತ ಸಾಂಸರಿಕ ಚಿತ್ರಗಳ ಕಡೆಗೆ ರಾಧಿಕಾ ಕುಮಾರಸ್ವಾಮಿ ಮುಖ ಮಾಡಿದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ತವರಿಗೆ ಬಾ ತಂಗಿ ಎನ್ನುವ ಸಿನಿಮಾದಲ್ಲಿ ಅದ್ಭುತವಾದ ಪಾತ್ರದಲ್ಲಿ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ ಅವರು ಎಲ್ಲರ ಹೃದಯ ಕರಗುವಷ್ಟು ಸಹಜ ಅಭಿನಯ ಮಾಡಿ ಕನ್ನಡದಲ್ಲಿ ಮತ್ತೊಬ್ಬ ಕಣ್ಣೀರನ್ನು ನಟಿ ಎನ್ನುವ ಖ್ಯಾತಿ ಪಡೆದರು

ಈ ಸಿನಿಮಾವು ಕೂಡ ನಿರೀಕ್ಷೆಗೂ ಮೀರಿದಷ್ಟು ಗೆಲುವು ತಂದು ಕೊಟ್ಟಿದ್ದು ಹಾಗೂ ಶಾಶ್ವತವಾಗಿ ಶಿವರಾಜ್ಕುಮಾರ್ ಅವರನ್ನು ಶಿವಣ್ಣನಾಗಿ ಹಾಗೂ ರಾಧಿಕಾ ಕುಮಾರಸ್ವಾಮಿ ಅವರು ತಂಗಿ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗೆ ಇರುವುದರಿಂದ ಇವರಿಬ್ಬರು ನಿಜ ಅಣ್ಣ ತಂಗಿ ಎಂದೇ ಭಾಸವಾಗುವಂತೆ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಮತ್ತೊಮ್ಮೆ ಇಬ್ಬರ ಕಾಂಬಿನೇಷನ್ ಅಲ್ಲಿ ಅಣ್ಣ ತಂಗಿ ಎನ್ನುವ ಮತ್ತೊಂದು ಸೆಂಟಿಮೆಂಟ್ ಸಿನಿಮಾ ಬಂತು ಆ ಸಿನಿಮಾ ಕೂಡ ಇದೇ ರೀತಿ ಸೂಪರ್ ಹಿಟ್ ಆಯ್ತು ಸಿನಿ ಜರ್ನಿಯಲ್ಲಿ ಸತತವಾಗಿ ಯಶಸ್ಸು ಕಂಡಿರುವ ರಾಧಿಕಾ ಅವರು ವೈಯುಕ್ತಿಕ ಜೀವನದಲ್ಲಿ ಆ ಮಟ್ಟದ ಸಂತಸ ಕಂಡಿಲ್ಲ ಎಂದು ಹೇಳಬಹುದು. ಕಾರಣ ಇವರ ಮೊದಲ ವಿವಾಹ 14ನೇ ವಯಸ್ಸಿನಿಗೆ ಜರುಗಿತು. ಬಾಲ್ಯ ವಿವಾಹವಾಗಿದ್ದ ಇವರು 2002ರಲ್ಲಿ ತಮ್ಮ ಪತಿ ರತನ್ ಕುಮಾರ್ ಅವರನ್ನು ಕಳೆದುಕೊಂಡರು. ಬಳಿಕ 2006ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ವಿವಾಹವಾದರು.

ಮೊದರಿಂದಲೂ ಡ್ಯಾನ್ಸ್ ಬಗ್ಗೆ ಬಹಳ ಆಸಕ್ತಿ ಹೊಂದಿರುವ ಇವರು ತಮ್ಮ ಖಾತೆಯಲ್ಲಿ ಆಗಾಗ ಅವರು ನೃತ್ಯ ಮಾಡಿರುವ ವಿಡಿಯೋ ಬೈಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲೀ ಸಕ್ಕತ್ ಆಕ್ಟಿವ್ ಆಗಿರುವ ಇವರ ರೋಮ್ಯಾಂಟಿಕ್ ಡ್ಯಾನ್ಸ್ ವಿಡಿಯೋ ಇಂಟರ್ನೆಟ್ ಅಲ್ಲಿ ಮತ್ತೆ ವೈರಲ್ ಆಗುತ್ತಿದೆ. ವೇದಿಕೆ ಮೇಲೆ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ನ ಮತ್ತೊಬ್ಬ ಜಡ್ಜ್ ಆಗಿದ್ದ ಸಲ್ಮಾನ್ ಅವರೊಂದಿಗೆ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ ಹಾಡೊಂದಕ್ಕೆ ಹಾಗೂ ಹಿಂದಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ ಆ ನೃತ್ಯದ ವಿಡಿಯೋ ಇದಾಗಿದೆ. ಡ್ಯಾನ್ಸ್ ಮಾಡೋದೆಂದರೆ ನನಗೆ ತುಂಬಾ ಖುಷಿ ಅಂತ ರಾಧಿಕಾ ಕುಮಾರಸ್ವಾಮಿ ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ. ಆಗಾಗ ರಾಧಿಕಾ ಕುಮಾರಸ್ವಾಮಿ ಅವರ ಡ್ಯಾನ್ಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಧಿಕಾ ಕುಮಾರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. 2012ರಲ್ಲಿ ಬಿಡುಗಡೆಯಾದ ಲಕ್ಕಿ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ಬಂಡವಾಳ ಹಾಕಿದ್ದರು. ‘ಲಕ್ಕಿ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೋಲ್ಡನ್ ಕ್ವೀನ್ ರಮ್ಯಾ ಮುಂತಾದವರು ಅಭಿನಯಿಸಿದ್ದರು. ಇನ್ನೂ, 2013ರಲ್ಲಿ ರಿಲೀಸ್ ಆದ ಸ್ವೀಟಿ ನನ್ನ ಜೋಡಿ ಚಿತ್ರವನ್ನೂ ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದರು.