Sunday, May 28, 2023
HomeEntertainmentಮದುವೆಗೂ ಮುನ್ನವೇ ಗರ್ಭಿಣಿ ಆದ ನಟಿ ನಿತ್ಯ ಮೆನನ್, ವಿಚಾರ ಕೇಳಿ ಇಡೀ ಚಿತ್ರರಂಗವೇ ಶಾ-ಕ್.

ಮದುವೆಗೂ ಮುನ್ನವೇ ಗರ್ಭಿಣಿ ಆದ ನಟಿ ನಿತ್ಯ ಮೆನನ್, ವಿಚಾರ ಕೇಳಿ ಇಡೀ ಚಿತ್ರರಂಗವೇ ಶಾ-ಕ್.

 

ತಾಯಿ ಆಗುವುದು ಪ್ರತಿ ಹೆಣ್ಣಿನ ಜೀವನದಲ್ಲೂ ಒಂದು ವಿಶೇಷ ಸಂದರ್ಭ. ಆಕೆ ಜನ್ಮ ಸಂಪೂರ್ಣವಾಗುವುದು ಆಗಲೇ ಎಂದು ನಮ್ಮಲ್ಲಿನ ನಂಬಿಕೆ. ಪ್ರತಿಯೊಬ್ಬ ಹೆಣ್ಣು ಕೂಡ ತಾನೊಂದು ಜೀವಕ್ಕೆ ತಾಯಿ ಆಗಬೇಕು, ತಾಯಿ ಆಗುವ ಅನುಭವ ಪಡೆಯಬೇಕು ಎನ್ನುವ ಆಸೆ ಹೊತ್ತಿರುತ್ತಾಳೆ. ತಾಯಿ ಆಗಲು ಮದುವೆ ಆಗಲೇಬೇಕು ಎಂದಿಲ್ಲ ಆದರೆ ನಮ್ಮ ಭಾರತೀಯ ಸಂಸ್ಕೃತಿಯ ಪ್ರಕಾರ ನಾವು ಅಳವಡಿಸಿಕೊಂಡಿರುವ ಕುಟುಂಬ ಪದ್ಧತಿಯಲ್ಲಿ ಎಲ್ಲದಕ್ಕೂ ನೀತಿ ನಿಯಮಗಳಿವೆ.

ನಮ್ಮಲ್ಲಿ ವಿವಾಹ ಕ್ಕೂ ಮುನ್ನ ತಾಯಿ ಆದರೆ ಅದನ್ನು ಪಾಪ ಎನ್ನುವ ರೀತಿ ನೋಡಲಾಗುತ್ತದೆ. ಹಾಗೂ ನಮ್ಮ ಸಮಾಜ ಅದನ್ನು ಒಪ್ಪುವುದು ಕೂಡ ಇಲ್ಲ. ಆದರೆ ವಿವಾಹಪೂರ್ವ ತಾಯಿ ಆಗಿರುವ ಪ್ರಕ್ರಿಯೆ ಈಗೇನು ಹೊಸತಲ್ಲ ಮಹಾಭಾರತ ಕಾಲದಲ್ಲಿ ತಾಯಿ ಕುಂತಿಯು ಕೂಡ ಕರ್ಣನಿಗೆ ವಿವಾಹಕ್ಕೂ ಮುನ್ನ ಮಂತ್ರ ಉಚ್ಚಾರದಿಂದ ಜನ್ಮ ನೀಡಿದ್ದರು.

ನಾವೀಗ 21ನೇ ಶತಮಾನದಲ್ಲಿದ್ದೇವೆ. ಈಗ ಕಾಲ ಎಷ್ಟು ಬದಲಾಗಿದೆ ಎಂದರೆ ಎಣ್ಣೆ ಇಲ್ಲದೆ ದೀಪ ಕೂಡ ಉರಿಯುತ್ತದೆ, ರೆಕ್ಕೆ ಇಲ್ಲದಿದ್ದರೂ ಆಕಾಶದಲ್ಲೂ ಹಾರಬಹುದು. ವಿಜ್ಞಾನದ ಪ್ರಕಾರ ಮಗು ಜನ್ಮ ತಾಳಲು ಅಂಡಾಣು ಹಾಗೂ ವೀರ್ಯಾಣ ಸಂಯೋಗ ಸಾಕು. ಮದುವೆ ಹಾಗೂ ಮತ್ತಿತರ ಸಂಪ್ರದಾಯಗಳ ಸೆಂಟಿಮೆಂಟ್ ಸೈನ್ಸ್ ಗೆ ತಿಳಿದಿರುವುದಿಲ್ಲ. ಹೀಗಾಗಿ ಸ್ವತಂತ್ರವಾಗಿ ಈಗಿನ ಕಾಲದ ಎಷ್ಟೋ ಸೆಲೆಬ್ರಿಟಿಗಳು ಅದರಲ್ಲೂ ಪ್ರಮುಖವಾಗಿ ನಟಿಮಣಿಯರು ಈ ರೀತಿ ಮದುವೆ ಆಗದೆ ತಾಯಿ ಆಗುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.

ಕಳೆದ ತಿಂಗಳಷ್ಟೇ ತಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರು ಈ ರೀತಿ ಮದುವೆ ಮುನ್ನವೇ ಬಾಡಿಗೆ ತಾಯಿ ಆಗಿ ಈಗ ಅವರು ಅವಳಿ ಮಕ್ಕಳನ್ನು ಪಡೆದಿರುವ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ನೆನ್ನೆ ಮೊನ್ನೆಯಿಂದ ಜಯ ಬಚ್ಚನ್ ಅವರು ತಮ್ಮ ಮೊಮ್ಮಗಳಿಗೆ ಇದೇ ರೀತಿ ಮದುವೆ ಆಗದೆ ಮಗು ಹಡೆದರೂ ತಪ್ಪಿಲ್ಲ ಎಂದು ಸಲಹೆ ನೀಡಿದ್ದಾರೆ ಎನ್ನುವ ಸುದ್ದಿಗಳು ಭಾರಿ ಹರಿದಾಡುತ್ತಿವೆ.

ಇದೇ ಬೆನ್ನಲ್ಲೇ ಮತ್ತೊಬ್ಬ ನಟಿಮಣಿ ಮದುವೆ ಆಗದೆ ಇದ್ದರೂ ತಮ್ಮ instagram ಖಾತೆಯಲ್ಲಿ ಪ್ರಗ್ನೆನ್ಸಿ ಟೆಸ್ಟ್ ಮಾಡಿರುವ ಕಿಟ್ ಅಲ್ಲಿ ಪಾಸಿಟಿವ್ ಬಂದಿರುವ ಫೋಟೋ ಶೇರ್ ಮಾಡಿ ದ ವಂಡರ್ ಬಿಗಿನ್ಸ್ ಎಂದು ಶೀರ್ಷಿಕೆ ಕೊಟ್ಟು ಅಭಿಮಾನಿಗಳಿಗೆಲ್ಲರಿಗೂ ಗೊಂದಲ ಕ್ರಿಯೇಟ್ ಮಾಡಿದ್ದಾರೆ. ಕನ್ನಡದಲ್ಲಿ ಮೈನಾ ಹಾಗೂ ಕೋಟಿಗೊಬ್ಬ 2 ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಿತ್ಯ ಮೆನನ್ ಅವರು ಈಗ ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲೂ ಬಹಳ ಬೇಡಿಕೆ ಇರುವ ನಟಿ.

ಇವರ ಇನ್ಸ್ಟಾಗ್ರಾಮ್ ಖಾತೆಯಿಂದ ಈ ರೀತಿ ಫೋಟೋ ಅಪ್ಲೋಡ್ ಆಗಿದ್ದು ಈ ವಿಷಯದ ಬಗ್ಗೆ ಮತ್ತೇನು ಹೇಳಿಕೊಂಡಿಲ್ಲ ಆದರೆ ಇದೇ ಸಮಯಕ್ಕೆ ಪೃಥ್ವಿ ಹಾಗೂ ಮಿಲನ ಸಿನಿಮಾ ಖ್ಯಾತಿಯ ನಟಿ ಪಾರ್ವತಿ ಮೆನನ್ ಕೂಡ ಇದೇ ರೀತಿಯ ಫೋಟೋ ಶೇರ್ ಮಾಡಿದ್ದಾರೆ. ಅವರು ಕೂಡ ಕನ್ನಡದ ಜೊತೆ ಮಲಯಾಳಂ ಸಿನಿಮಾಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನೆಟ್ಟಿಗರೆಲ್ಲರೂ ಖಂಡಿತ ಇದು ಮುಂದಿನ ಸಿನಿಮಾದ ಗಿಮಿಕ್ ಇರಬಹುದು ಎಂದೇ ಭಾವಿಸಿಕೊಳ್ಳುತ್ತಿದ್ದಾರೆ.

ಇವರಷ್ಟೇ ಅಲ್ಲದೆ ಬಾಲಿವುಡ್ ನಟಿಮಣಿಯರಾದ ಸ್ವರ ಮಲ್ಲಿಕ್, ರಿಮಾ ಕಲ್ಲಿಂಗಲ್, ನಿರ್ಮಾಪಕಿ ಗುನೀತ್ ಮೊಂಗ, ಗಾಯಕಿ ಚಿನ್ಮಯಿ ಶ್ರೀಪಾದ ಇದೇ ರೀತಿ ಪ್ರೆಗ್ನನ್ಸಿ ಟೆಸ್ಟ್ ಕಿಟ್ ಫೋಟೋ ತೆಗೆದು ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಇದು ಸಿನಿಮಾ ವಿಚಾರದ್ದೇ ವಿಷಯ ಇರಬಹುದು ಎನ್ನುವ ಊಹೆ ಬಲವಾಗುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.