Friday, June 9, 2023
HomeEntertainmentಡಿ ಬಾಸ್ ಕ್ರಾಂತಿ ಸಿನಿಮಾದ ಪ್ರೋಮೊಷನ್ ನಲ್ಲಿ ಭಾಗಿಯಾದ ನಟ ಕಿಚ್ಚ ಸುದೀಪ್, ದಚ್ಚು-ಕಿಚ್ಚ ಒಟ್ಟಾಗಿರುವ...

ಡಿ ಬಾಸ್ ಕ್ರಾಂತಿ ಸಿನಿಮಾದ ಪ್ರೋಮೊಷನ್ ನಲ್ಲಿ ಭಾಗಿಯಾದ ನಟ ಕಿಚ್ಚ ಸುದೀಪ್, ದಚ್ಚು-ಕಿಚ್ಚ ಒಟ್ಟಾಗಿರುವ ಪೋಟೋ ಕಂಡು ಬೆಚ್ಚಿಬಿದ್ದ ಇಂಡಸ್ಟ್ರಿ

ನಟ ದರ್ಶನ್ ಹಾಗೂ ಸುದೀಪ್ ಇಬ್ಬರೂ ಕೂಡ ಒಂದಾಗಬೇಕು ಅಂತ ಇಡೀ ಚಿತ್ರರಂಗವೇ ಕಾದು ಕುಳಿತಿರುವ ವಿಚಾರ ನಿಮಗೆ ತಿಳಿದೇ ಇದೆ ಅದರಲ್ಲೂ ಕೂಡ ದರ್ಶನ್ ಅಭಿಮಾನಿಗಳು ಮತ್ತು ಕಿಚ್ಚ ಅಭಿಮಾನಿಗಳು ಕೂಡ ಇವರಿಬ್ಬರನ್ನು ಒಂದು ಮಾಡುವುದಕ್ಕೆ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದಂತಹ ಕಿಚ್ಚ ಸುದೀಪ್ ಹಾಗೂ ದರ್ಶನ್ ಇದೀಗ ಉತ್ತರ ಮತ್ತು ದಕ್ಷಿಣವಾಗಿದ್ದರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಹೌದು ಕಳೆದ ಐದಾರು ವರ್ಷಗಳಿಂದಲೂ ಕೂಡ ಸುದೀಪ್ ಹಾಗೂ ದರ್ಶನ್ ಇಬ್ಬರೂ ಕೂಡ ಬದ್ಧ ವೈರಿಗಳಂತೆ ಆಡುತ್ತಿದ್ದಾರೆ ಮೇಲ್ನೋಟಕ್ಕೆ ಇಬ್ಬರು ಕೂಡ ಒಬ್ಬರ ಬಗ್ಗೆ ಮತ್ತೊಬ್ಬರು ಮಾತನಾಡದೆ ಇದ್ದರೂ ಕೂಡ ಒಳ ಮನಸ್ಸಿನಲ್ಲಿ ಇಬ್ಬರಲ್ಲಿಯೂ ಕೂಡ ಅಸಮಾಧಾನ ಇರುವುದಂತೂ ಖಚಿತ. ಈ ಕಾರಣಕ್ಕಾಗಿ ದರ್ಶನ್ ಅವರು ಹಾಜರಾಗುವಂತಹ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಪಾಲ್ಗೊಳ್ಳುವುದಿಲ್ಲ ಅದೇ ರೀತಿಯಾಗಿ ಕಿಚ್ಚ ಸುದೀಪ್ ಅವರು ಭಾಗಿಯಾಗುವಂತಹ ಕಾರ್ಯಕ್ರಮದಲ್ಲಿ ದರ್ಶನವರು ಇರುವುದಿಲ್ಲ.

ಇವರಿಬ್ಬರನ್ನು ಒಂದು ಮಾಡಬೇಕು ಎಂದು ಸಾಕಷ್ಟು ಬಾರಿ ಅಂದುಕೊಂಡಿದ್ದರೆ ಹೌದು ಕಳೆದ ವಾರ ಅವಸ್ಥೆ ನಡೆದಂತಹ ಪುನೀತ ಪರ್ವ ಕಾರ್ಯಕ್ರಮಕ್ಕೆ ಇಬ್ಬರು ಕೂಡ ಬರುತ್ತಾರೆ. ಈ ವೇದಿಕೆಯ ಮೇಲೆ ಇಬ್ಬರೂ ಕೂಡ ಭೇಟಿಯಾಗುತ್ತಾರೆ ತಮ್ಮ ಮನಸ್ಸಿನಲ್ಲಿ ಇರುವಂತಹ ಎಲ್ಲಾ ವೈ ಮನಸನ್ನು ಬಿಟ್ಟು ಅಪ್ಪುಗಾಗಿ ಒಂದಾಗುತ್ತಾರೆ ಅಂತ ಬಹಳಷ್ಟು ನಿರೀಕ್ಷಿ ಇಟ್ಟುಕೊಂಡಿದ್ದರು. ಆದರೆ ಸುದೀಪ್ ಆಗಲಿ ಮತ್ತು ದರ್ಶನ್ ಆಗಲಿ ಇಬ್ಬರೂ ಕೂಡ ಈ ಕಾರ್ಯಕ್ರಮಕ್ಕೆ ಹಾಜರಾಗಲೇ ಇಲ್ಲ ಇದು ಅಭಿಮಾನಿಗಳಲ್ಲಿ ಬಹಳಷ್ಟು ಬೇಸರವನ್ನು ಉಂಟು ಮಾಡಿತು.

ಎಲ್ಲೋ ಒಂದು ಕಡೆ ಅಂಬರೀಶ್ ಅವರು ಇದ್ದಿದ್ದರೆ ಇಲ್ಲಿಯವರೆಗೂ ಕೂಡ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರು ಇಷ್ಟು ದೂರ ಆಗುವುದಕ್ಕೆ ಬಿಡುತ್ತಿರಲಿಲ್ಲ ಹೇಗಾದರೂ ಮಾಡಿ ಇವರಿಬ್ಬರನ್ನು ಒಂದು ಮಾಡುತ್ತಿದ್ದರು ಎಂದು ಗಾಂಧಿನಗರದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ದರ್ಶನ್ ಅವರು ಯಾರಿಗೂ ಕೂಡ ಬಾಗುವುದಿಲ್ಲ ಅವರು ಅಂಬರೀಶ್ ಮಾತನ್ನು ಮಾತ್ರ ಕೇಳುತ್ತಿದ್ದರು. ಹಾಗಾಗಿ ಅಂಬರೀಶ್ ಇದ್ದಿದ್ದರೆ ಖಂಡಿತವಾಗಿಯೂ ಇವರಿಬ್ಬರೂ ಒಂದಾಗುತ್ತಿದ್ದರು ಅಂತ ಕೆಲ ಸಿನಿ ರಸಿಕರು ಮಾತನಾಡಿಕೊಂಡಿದ್ದಾರೆ.

ಅದೇನೇ ಆಗಲಿ ಸದ್ಯಕಂತು ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ ಕಳೆದ ಒಂದು ವಾರದಿಂದಲೂ ಕೂಡ ಮಾಧ್ಯಮದವರೊಟ್ಟಿಗೆ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ನೆನ್ನೆಯು ಕೂಡ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಏರ್ಪಡಿಸಲಾಗಿದೆ.

ಈ ಸಮಯದಲ್ಲಿ ಮಾಧ್ಯಮದವರು ಕ್ರಾಂತಿ ಸಿನಿಮಾದ ಬಗ್ಗೆ ಒಂದಷ್ಟು ಪ್ರಶ್ನೆಯನ್ನು ಕೇಳಿದ್ದಾರೆ ಎಲ್ಲಾ ಪ್ರಶ್ನೆಗೂ ದರ್ಶನ್ ಅವರು ಉತ್ತರ ಕೊಟ್ಟಿದ್ದಾರೆ. ಕ್ರಾಂತಿ ಸಿನಿಮಾದಲ್ಲಿ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ ಸಂಪೂರ್ಣವಾಗಿ ಸರ್ಕಾರಿ ಶಿಕ್ಷಣ ಮತ್ತು ಖಾಸಗಿ ಶಿಕ್ಷಣ ಇವೆರಡ ನಡುವಿನ ವ್ಯತ್ಯಾಸ ಹಾಗೂ ಇವೆರಡರಿಂದ ಸಮಾಜಕ್ಕೆ ಏನು ಒಳಿತು ಮತ್ತು ಕೆಡತು ಇವುಗಳನ್ನು ಎತ್ತಿ ತೋರಿಸುವಂತಹ ಕಾರ್ಯವನ್ನು ಈ ಸಿನಿಮಾದಲ್ಲಿ ಮಾಡಿದ್ದೇವೆ ಅಂತ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಈ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಆದರೆ ಐದು ಭಾಷೆಯಲ್ಲೂ ಕೂಡ ಡಬ್ಬಿಂಗ್ ಮಾಡುತ್ತಿದ್ದೇವೆ ಎಂದು ಸ್ವತಃ ದರ್ಶನ ಅವರೆ ಹೇಳಿಕೊಂಡಿದ್ದಾರೆ. ಇದೆಲ್ಲ ಒಂದು ಕಡೆಯಾದರೆ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ. ಈ ಫೋಟೋ ಶೂಟ್ ನಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಕೂಡ ಒಟ್ಟಾಗಿ ನಿಂತಿರುವಂತಹ ಫೋಟೋ ಒಂದನ್ನು ಅಭಿಮಾನಿಯೊಬ್ಬರು ಎಡಿಟ್ ಮಾಡಿ ಅದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹರಿಬಿಟ್ಟಿದ್ದಾರೆ.

ಸದ್ಯಕ್ಕೆ ಈ ಎಡಿಟೆಡ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಅಷ್ಟೇ ಅಲ್ಲದೆ ಕೆಲವು ಅಭಿಮಾನಿಗಳು ಇದನ್ನು ನೋಡಿ ದರ್ಶನ್ ಮತ್ತು ಸುದೀಪ್ ಇಬ್ಬರೂ ಕೂಡ ಮತ್ತೆ ಒಂದಾಗಿದ್ದಾರೆ ಇವರಿಬ್ಬರ ನಡುವೆ ಇದ್ದಂತಹ ವೈ ಮನಸು ದೂರವಾಗಿದೆ. ಇನ್ನು ಮುಂದೆ ಚಿತ್ರರಂಗದಲ್ಲಿ ಇವರಿಬ್ಬರು ಆತ್ಮೀಯ ಸ್ನೇಹಿತರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಇದು ಕಲ್ಪನೆ ಅಷ್ಟೇ ಇದು ನಿಜವಲ್ಲ ಕೇವಲ ಎಡಿಟೆಡ್ ಫೋಟೋ ಈ ವಿಚಾರ ತಿಳಿಯುತ್ತಿದ್ದ ಹಾಗೆ ಕೆಲವು ಅಭಿಮಾನಿಗಳು ಈ ವಿಚಾರ ಸತ್ಯವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ