ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ಅಂದರೆ ಅದು ದರ್ಶನ್ ಅಂತಾನೆ ಹೇಳಬಹುದು, ದರ್ಶನ್ ಅವರ ಮಾತು ಒರಟಾಗಿರುತ್ತದೆ ಆದರೆ ಮನಸ್ಸಿನಲ್ಲಿ ಯಾವುದನ್ನು ಇಟ್ಟುಕೊಳ್ಳುವುದಿಲ್ಲ ಮನಸ್ಸಿನಲ್ಲಿ ಒಂದು ಮಾತಿನಲ್ಲಿ ಒಂದು ಹೇಳುವುದಿಲ್ಲ ಇದ್ದ ವಿಚಾರವನ್ನು ಇದ್ದಹಾಗೆ ನೇರವಾಗಿ ಹೇಳುತ್ತಾರೆ. ಈ ವ್ಯಕ್ತಿತ್ವಕ್ಕಾಗಿಯೇ ಬಹಳಷ್ಟು ಜನ ಇವರನ್ನು ಇಷ್ಟಪಟ್ಟರು ಇನ್ನೂ ಕೆಲವು ಜನ ಇವರನ್ನು ದ್ವೇಷ ಮಾಡುತ್ತಾರೆ. ಆದರೆ ಇವರು ಯಾವುದಕ್ಕೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ ಇರೋ ಸತ್ಯವನ್ನು ಇದ್ದ ಹಾಗೆಯೇ ಹೇಳುತ್ತಾರೆ.
ದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳಾಗಿದೆ ಇವರು ಕೇವಲ ಸಿನಿಮಾದಲ್ಲಿ ಮಾತ್ರ ನಟನೆ ಮಾಡುತ್ತಿದ್ದರೆ ಇದನ್ನು ಹೊರತು ಪಡಿಸಿದರೆ ಯಾವುದೇ ರಿಯಾಲಿಟಿ ಶೋನಲ್ಲಿ ಭಾಗಿಯಾಗಿಲ್ಲ ಹಾಗಾಗಿ ಕೆಲವು ಅಭಿಮಾನಿಗಳು ದರ್ಶನ್ ಅವರನ್ನು ರಿಯಾಲಿಟಿ ಶೋ ಗೆ ಯಾಕೆ ಬರುವುದಿಲ್ಲ ಹಾಗು ರಿಯಾಲಿಟಿ ಶೋಗಳನ್ನು ಯಾಕೆ ನಡೆಸಿಕೊಡುತ್ತಿಲ್ಲ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ದರ್ಶನ್ ಅವರು ಸಂದರ್ಶನ ಒಂದರಲ್ಲಿ ನೇರವಾಗಿ ಉತ್ತರ ಹೇಳಿದ್ದಾರೆ ಈ ಉತ್ತರ ಕೇಳಿದರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ ಅಷ್ಟೇ ಅಲ್ಲದೆ ದರ್ಶನ್ ಅವರು ಹೇಳಿದ್ದು ಸತ್ಯ ಅಂತ ಒಂದು ಕಡೆ ಎಲ್ಲೋ ಅನಿಸುತ್ತದೆ.
ಹೌದು ಇತ್ತೀಚಿನ ದಿನದಲ್ಲಿ ಸೀರಿಯಲ್ ಹಾಗೂ ಸಿನಿಮಾಗಳಿಗಿಂತಲೂ ಹೆಚ್ಚು ಮನ್ನಣೆ ಮತ್ತು ಖ್ಯಾತಿಯನ್ನು ಗಳಿಸಿಕೊಳ್ಳುತ್ತಿರುವುದು ಅಂದರೆ ರಿಯಾಲಿಟಿ ಶೋ ಅಂತಾನೇ ಹೇಳಬಹುದು. ಅದರಲ್ಲಿಯೂ ಕೂಡ ಬಿಗ್ ಬಾಸ್ ಅಂತ ದೊಡ್ಡ ದೊಡ್ಡ ರಿಯಾಲಿಟಿ ಶೋಗಳನ್ನು ಜನರು ಹುಚ್ಚೆದ್ದು ನೋಡುತ್ತಾರೆ. ಇತ್ತೀಚಿನ ಯುವ ಪೀಳಿಗೆಗೆ ಬಿಗ್ ಬಾಸ್ ಎಂಬುದು ಒಂದು ದೊಡ್ಡ ಜನಪ್ರಿಯ ಕಾರ್ಯಕ್ರಮವಾಗಿದೆ ಹಾಗಾಗಿ ಈ ಮನೆಯಲ್ಲಿ ನಡೆಯುವಂತಹ ಪ್ರತಿನಿತ್ಯದ ದಿನಚರಿಯನ್ನು ನೋಡುವುದಕ್ಕೆ ಕಾತುರದಿಂದ ಕಾದು ಕುಳಿತಿರುತ್ತಾರೆ. ಆದರೆ ಬಿಗ್ ಬಾಸ್ ನೋಡುವ ಕೆಲವು ಜನ ಇದನ್ನು ಸ್ಕ್ರಿಪ್ಟೆಡ್ ಅಂತ ಹೇಳುತ್ತಾರೆ ಆದರೆ ಬಿಗ್ ಬಾಸ್ ಮನೆಗೆ ಹೋಗಿ ಬಂದಂತಹ ವ್ಯಕ್ತಿಗಳು ಮಾತ್ರ ಇದು ಸ್ಕ್ರಿಪ್ಟೆಡ್ ಅಲ್ಲ ರಿಯಾಲಿಟಿ ಶೋ ಅಲ್ಲಿ ನಡೆಯುವುದೆಲ್ಲವೂ ನೈಜವಾಗಿಯೇ ಇರುತ್ತದೆ ಯಾವುದೇ ರೀತಿಯಾದಂತಹ ಸುಳ್ಳು ಮೋಸ ಇಲ್ಲ ಎಂಬುದನ್ನು ತಿಳಿಸುತ್ತಾರೆ.
ನಾವು ಇಲ್ಲಿ ಕೇವಲ ಬಿಗ್ ಬಾಸ್ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ ಬಿಗ್ ಬಾಸ್ ಅನ್ನು ಹೊರತುಪಡಿಸಿ ಸಾಕಷ್ಟು ರಿಯಾಲಿಟಿ ಶೋಗಳಿವೆ. ಹಳ್ಳಿ ಹುಡುಗಿ ಪ್ಯಾಟೆಗ್ ಬಂದ, ಪ್ಯಾಟೆ ಮಂದಿ ಹಳ್ಳಿ ಬಂದ್ರು, ಇನ್ನು ಸಾಕಷ್ಟು ರಿಯಾಲಿಟಿ ಶೋಗಳು ಕನ್ನಡದಲ್ಲಿ ಇವೆ ಸಾಕಷ್ಟು ರಿಯಾಲಿಟಿ ಶೋಗಳು ಕೂಡ ಬಂದು ಹೋಗಿದೆ. ಆದರೆ ಹೆಚ್ಚು ಜನಪ್ರಿಯಗೊಳಿಸಿದ ರಿಯಾಲಿಟಿ ಶೋ ಅಂದರೆ ಬಿಗ್ ಬಾಸ್ ಹಾಗೂ ಕರ್ನಾಟಕದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. ಹಾಗಾಗಿಬಿದನ್ನು ಉದಾಹರಣೆಯಾಗಿ ಇಟ್ಟುಕೊಂಡು ಹೇಳುತ್ತಿದ್ದೇವೆ ಅಷ್ಟೇ ಅದನ್ನು ಹೊರತುಪಡಿಸಿ ಬಿಗ್ ಬಾಸ್ ಗೆ ಅವಮಾನ ಮಾಡಬೇಕು ಅಥವಾ ಬಿಗ್ ಬಾಸ್ ಕಾರ್ಯಕ್ರಮವನ್ನು ಕೀಳಾಗಿ ತೋರಿಸಬೇಕು ಎಂಬ ಮನೋಭಾವನೆ ನಮಗಿಲ್ಲ.
ಜನರಿಗೆ ಅರ್ಥ ಮಾಡಿಸುವ ಸಲುವಾಗಿ ಈ ಒಂದು ಬಿಗ್ ಬಾಸ್ ಎಂಬ ಕಾನ್ಸೆಪ್ಟನ್ನು ಗಣನೆಗೆ ತೆಗೆದುಕೊಂಡು ಅದರ ಒಳಗಿರುವ ಸತ್ಯವನ್ನು ಹೊರ ಹಾಕುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ. ಹೌದು ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಪಾಲ್ಗೊಂಡಂತಹ ದರ್ಶನ್ ಅವರನ್ನು ನೀವ್ಯಾಕೆ ರಿಯಾಲಿಟಿ ಶೋ ಗಳಲ್ಲಿ ಪಾಲ್ಗೊಳ್ಳುವುದಿಲ್ಲ ಹಾಗೂ ರಿಯಾಲಿಟಿ ಶೋಗಳನ್ನು ನಡೆಸುವುದಿಲ್ಲ ಅಂತ ಹೇಳುತ್ತಾರೆ ಇದಕ್ಕೆ ಖಡಕ್ಕಾಗಿ ಉತ್ತರ ನೀಡಿರುವ ದರ್ಶನ್ ಅವರು ರಿಯಾಲಿಟಿ ಶೋ ಗೆ ಹೋಗಿ ಯಾರೋ ಹೇಳಿದ್ದನ್ನು ಮಾಡಲು ನನಗೆ ಇಷ್ಟ ಇಲ್ಲ ಅಷ್ಟೇ ಅಲ್ಲದೆ ಸ್ಪರ್ಧಿಗಳು ಚೆನ್ನಾಗಿ ಆಟ ಆಡುತ್ತಾರೆ ಆದರೆ ಚೆನ್ನಾಗಿ ಆಟನಾಡಿದರು ಕೂಡ ಅವರಿಗೆ ಬೈಯ ಬೇಕಾದ ಅನಿವಾರ್ಯ ಎದುರಾಗುತ್ತದೆ ಇದರಿಂದ ನಾನು ಅವರಿಗೆ ಮೋಸ ಮಾಡಿದಂತಾಗುತ್ತದೆ ಹಾಗಾಗಿ ನಾನು ರಿಯಾಲಿಟಿ ಶೋ ಗೆ ಹೋಗುವುದಿಲ್ಲ.
ಅಷ್ಟೇ ಅಲ್ಲದೆ ರಿಯಾಲಿಟಿ ಶೋನಲ್ಲಿ ಬೇರೆಯವರು ಹೇಳಿದ ಹಾಗೆಯೇ ಕೇಳಬೇಕಾಗುತ್ತದೆ ಅವರನ್ನು ಬೈಯಿ ಅಂದಾಗ ನಾನು ಅವರನ್ನು ಬೈಯಬೇಕಾಗುತ್ತದೆ ಇವೆಲ್ಲ ಯಾಕೆ ಬೇಕು. ದೇವರು ನನಗೆ ಸಾಕಷ್ಟು ಸಿನಿಮಾ ಅವಕಾಶ ಕೊಟ್ಟಿದ್ದಾನೆ ಏನು ನೋಡಿದರು ಕೂಡ ತೆಗೆದುಕೊಳ್ಳುವಷ್ಟು ಶಕ್ತಿಯನ್ನು ಅಭಿಮಾನಿಗಳು ನನಗೆ ನೀಡಿದ್ದರೆ. ಇದಿಷ್ಟೇ ಸಾಕು ಜೀವನ ಸಾಗಿಸುವುದಕ್ಕೆ ಅತಿ ಆಸೆ ಪಡಬಾರದು ಅಲ್ಲೇ ನಾನು ನೆಮ್ಮದಿಯುತವಾದ ಜೀವನವನ್ನು ಸಾಗಿಸುತ್ತಿದ್ದೇನೆ ಹಾಗಾಗಿ ಇದಕ್ಕಿಂತ ಹೆಚ್ಚು ಸಂಪಾದನೆ ಮಾಡಬೇಕು ಎಂಬ ಮನೋಭಾವನೆ ನನಗೆ ಇಲ್ಲ ಅಂತ ಹೇಳಿದ್ದಾರೆ. ಇದೆಲ್ಲವನ್ನು ನೋಡಿದಂತಹ ಕೆಲವು ಅಭಿಮಾನಿಗಳು ದರ್ಶನವರು ಬಿಗ್ ಬಾಸ್ ಕಾರ್ಯಕ್ರಮ ನೋಡಿ ಈ ರೀತಿ ಹೇಳಿಕೆ ಕೊಟ್ಟಿರಬಹುದು ಅಂತ ಹೇಳಿದ್ದಾರೆ ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಷ್ಟರ ಮಟ್ಟಿಗೆ ಸುಳ್ಳು ಎಂಬುದು ಮಾತ್ರ ತಿಳಿದಿಲ್ಲ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ದರ್ಶನ್ ಅವರು ಮಾತನಾಡಿರುವ ವಿಡಿಯೋ ಈ ಕೆಳಗಿದೆ ನೋಡಿ.