ತಾಯಿ ಚಾಮುಂಡೇಶ್ವರಿ ಮೈಸೂರಿನ ಅಧಿದೇವತೆ ಹಾಗೂ ಕರ್ನಾಟಕವನ್ನು ಕಾಯುತ್ತಿರುವ ನಮ್ಮೆಲ್ಲರ ಇಷ್ಟ ದೈವ ಎನ್ನಬಹುದು. ಮೈಸೂರು ರಾಜಮನೆತನದ ಒಡೆಯರ್ ವಂಶದ ಕುಲದೇವತೆ ಆಗಿದ್ದ ಚಾಮುಂಡೇಶ್ವರಿ ಅವರ ವೈಭವ ಹಾಗೂ ಮಹಾತ್ಮೆಯ ಬಗ್ಗೆ ತಿಳಿಯದವರೇ ಇಲ್ಲ. ಮೈಸೂರು ಭಾಗದವರ ಪಾಲಿನ ಅಮ್ಮನಾಗಿರುವ ತಾಯಿ ಚಾಮುಂಡೇಶ್ವರಿಯನ್ನು ನಿತ್ಯ ನೆನೆಯದವರು ಇಲ್ಲ. ಅದರಲ್ಲೂ ಕೂಡ ಆಷಾಢದ ದಿನಗಳು ಎಂದರೆ ಮೈಸೂರಿನ ಜನತೆಗೆ ಸ್ವಲ್ಪ ಹೆಚ್ಚು ಎಮೋಷನ್ ಯಾಕೆಂದರೆ ತಾಯಿ ಚಾಮುಂಡೇಶ್ವರಿಯ ಜನ್ಮದಿನೋತ್ಸವ ಕೂಡ ಆಷಾಢದಲ್ಲಿ ಬರುವುದರಿಂದ ಪ್ರತಿ ಆಷಾಡ ಶುಕ್ರವಾರಗಳು ಹಾಗೂ ಆಷಾಡದ ಎಲ್ಲಾ ದಿನಗಳು ಕೂಡ ಚಾಮುಂಡೇಶ್ವರಿ ತಾಯಿಯ ಸನ್ನಿಧಾನದಲ್ಲಿ ವಿಶೇಷವಾಗಿರುತ್ತದೆ. ಈ ಸಮಯದಲ್ಲಿ ತಾಯಿಯ ದರ್ಶನ ಪಡೆಯಲು ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ಭಕ್ತರು ಬಂದು ಕಾಯುತ್ತಿರುತ್ತಾರೆ. ಈ ಸಮಯದಲ್ಲಿ ತಾಯಿ ತಪ್ಪಲನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದು ಹೇಳಬಹುದು.
ನಮ್ಮಲ್ಲೂ ಕೂಡ ಮೈಸೂರಿನ ಭಾಗದವರಿಗೆ ಯಾವಾಗಲೂ ಏನಾದರೂ ಖುಷಿಯಾದಾಗಲೂ ಕಷ್ಟ ಬಂದಾಗಲೂ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗುವುದು ವಾಡಿಕೆ. ಆದರೆ ಉದ್ಯೋಗ ಅಥವಾ ಇನ್ಯಾವುದೋ ಕಾರಣಕ್ಕಾಗಿ ಮೈಸೂರಿನ ಹೊರಗೆ ಉಳಿದ ಜನರು ಆಗಾಗ ತಾಯಿಯ ದರ್ಶನ ಮಾಡಲು ಬಯಸುವುದು ಸರ್ವೇಸಾಮಾನ್ಯ. ಅಂಥವರು ವರ್ಷಕ್ಕೊಮ್ಮೆಯಾದರೂ ಅಥವಾ ಆಷಾಡ ದಿನಗಳಲ್ಲಿ ಆದರೂ ಬಂದು ತಾಯಿಯನ್ನು ನೋಡಿ ಕಣ್ತುಂಬಿಕೊಂಡು ಹೋಗುತ್ತಾರೆ. ಈ ಲಿಸ್ಟಿನಲ್ಲಿ ನಮ್ಮ ಸ್ಯಾಂಡಲ್ ವುಡ್ ನಟರುಗಳು ಕೂಡ ಇದ್ದಾರೆ. ಅದರಲ್ಲಿ ಮೊದಲನೆಯದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೂಲತಃ ಮೈಸೂರಿನವರು ಅವರು ಹುಟ್ಟಿ ಬೆಳೆದಿದ್ದು ಹಾಗೂ ವಿದ್ಯಾಭ್ಯಾಸವನ್ನೆಲ್ಲ ಮೈಸೂರಿನಲ್ಲಿ ಮುಗಿಸಿದ್ದಾರೆ. ಹಾಗಾಗಿ ಇವರು ಮೈಸೂರಿನ ಬಗ್ಗೆ ಬಹಳ ಸೆಂಟಿಮೆಂಟ್ ಇಟ್ಟುಕೊಂಡಿದ್ದಾರೆ.
ಅದರಲ್ಲೂ ಮೈಸೂರಿನ ತಾಯಿ ಚಾಮುಂಡೇಶ್ವರಿ ಅವರು ಎಂದರೆ ದರ್ಶನ್ ಅವರಿಗೆ ಬಹಳ ಭಕ್ತಿ ಹಾಗೂ ಪ್ರೀತಿ. ಯಾವಾಗಲೂ ತಾಯಿಯ ದರ್ಶನವನ್ನು ಪಡೆಯುವ ಇವರು ಪ್ರತಿ ವರ್ಷ ಆಷಾಡ ಶುಕ್ರವಾರದಂದು ಬಂದು ತಾಯಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಹೋಗುತ್ತಾರೆ. ಹಾಗೆ ಮೊನ್ನೆ ಕೂಡ ಆಷಾಢ ಕೊನೆಯ ಶುಕ್ರವಾರ ಆಗಿರುವುದರಿಂದ ದೇವಿ ಸನ್ನಿಧಾನಕ್ಕೆ ಬಂದು ಪೂಜೆ ಮಾಡಿಸಿ ಹೋಗಿದ್ದಾರೆ. ಹಾಗೂ ತಮ್ಮ ಜೀವನದ ಯಾವುದೇ ಪ್ರಮುಖ ಘಟನೆಗಳು ನಡೆದರು ಕೂಡ ಮೊದಲು ಬಂದು ತಾಯಿಯ ದರ್ಶನ ಪಡೆದುಕೊಂಡು ನಂತರ ಹೋಗಿ ಮುಂದಿನ ಕೆಲಸಗಳನ್ನು ಶುರು ಮಾಡುತ್ತಾರೆ. ಅಲ್ಲದೆ ನಟ ದರ್ಶನ್ ಅವರು ಕಾರುಗಳ ಬಗ್ಗೆ ವಿಶೇಷ ಪ್ಯಾಶನ್ ಹೊಂದಿದ್ದಾರೆ ಅವರು ಎಂತಹ ಕಂಪನಿಯ ಎಷ್ಟೇ ದುಬಾರಿ ಕಾರು ಖರೀದಿಸಿದರು ಕೂಡ ಮೊದಲು ತಂದು ಪೂಜೆ ಮಾಡಿಸುವುದು ತಾಯಿ ಚಾಮುಂಡೇಶ್ವರಿ ಅವರ ಸನ್ನಿಧಾನದಲ್ಲಿಯೇ.
ಮೊದಲಿನಿಂದಲೂ ದರ್ಶನ್ ಅವರು ಮೈಸೂರು ಬಗ್ಗೆ ಸಿಕ್ಕಾಪಟ್ಟೆ ಒಲವು ಹೊಂದಿರುವ ಇವರು ಮೈಸೂರಿನ ಪಕ್ಕದಲ್ಲಿಯೇ ಒಂದು ಫಾರಂ ಹೌಸ್ ಕೂಡ ನಡೆಸುತ್ತಿದ್ದಾರೆ ಹಾಗೂ ತಮಗೆ ಬಿಡುವಾಗದೆಲ್ಲ ಬಂದು ಅಲ್ಲಿ ಸಮಯ ಕಳೆಯುತ್ತಾರೆ. ಸದ್ಯಕ್ಕೆ ದರ್ಶನ್ ಅವರು ತಮ್ಮ 55ನೇ ಸಿನಿಮಾವಾದ ಕ್ರಾಂತಿ ಸಿನಿಮಾದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಕ್ರಾಂತಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು ಅಭಿಮಾನಿಗಳು ಅದಕ್ಕೆ ಸಿಕ್ಕಾಪಟ್ಟೆ ಪ್ರಚಾರವನ್ನು ಸ್ವಯಂ ಪ್ರೇರಿತವಾಗಿ ಕೊಡುತ್ತಿದ್ದಾರೆ. ಅಲ್ಲದೆ ಇನ್ನೂ ಅನೇಕ ಪ್ರಾಜೆಕ್ಟ್ ಗಳು ದರ್ಶನ್ ಅವರ ಕೈಯಲ್ಲಿ ಇವೆ ಇವರ ಅಭಿಮಾನಿಗಳು ಮಾತ್ರ ಡಿ ಬಾಸ್ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಚಾಮುಂಡೇಶ್ವರಿ ಸನ್ನಿಧನಕ್ಕೆ ಬಂದ ದರ್ಶನ್ ಸಿನಿಮಾದ ಪ್ರಚಾರ ಕಾರ್ಯಕ್ಕೆ ಯಾವುದೇ ರೀತಿಯ ಅಡ್ಡಿ ಬರದಿರಲಿ ಎಂದು ಪೂಜೆ ಸಲ್ಲಿಸಿ ಹೋಗಿದ್ದಾರೆ. ಡಿ ಬಾಸ್ ಅವರ ಸಿನಿಮಾಗಾಗಿ ನೀವು ಕಾಯುತ್ತಿದ್ದರೆ ತಪ್ಪದೆ ಕ್ರಾಂತಿ ಎಂದು ಕಾಮೆಂಟ್ ಮಾಡಿ.