ನಾಳೆ ಮಾರ್ಚ್ 8 ಮಹಾಶಿವರಾತ್ರಿ ದಿನ. ಶಿವನ ಭಕ್ತರಿಗೆ ಇಂದು ಬಹಳ ದೊಡ್ಡ ಹಬ್ಬ. ಮಹಾದೇವನ ಕೃಪಾಕಟಾಕ್ಷಕ್ಕಾಗಿ ಪ್ರಾರ್ಥಿಸುವುದಕ್ಕೆ ಅತ್ಯಂತ ಶುಭದಿನ. ತ್ರಿಮೂರ್ತಿಗಳಲ್ಲಿ ಬೇಡಿದವರಗಳನ್ನು ತಕ್ಷಣವೇ ನೀಡುವ ಭಗವಂತ ಈಶ್ವರ. ಬಹಳ ಸರಳವಾದ ವಿಧಾನಗಳಿಂದ ಕೂಡ ಪೂಜಿಸಿದರೂ ಪ್ರಸನ್ನನಾಗುವ ಪರಮೇಶ್ವರನ ಆರಾಧನೆಗೆ ಮಹಾಶಿವರಾತ್ರಿಯು ಬಹಳ ಪ್ರಾಶಸ್ಯ್ತವಾದ ದಿನವಾಗಿದೆ.
ಬೈರಾಗಿಯಾದ ಗಂಗಾಧರನನ್ನು ಶ್ರದ್ಧಾಭಕ್ತಿಯಿಂದ ಸರಿಯಾದ ವಿಧಿ ವಿಧಾನಗಳಿಂದ ಪೂಜಿಸಿದರೆ ನೀವು ಕೋರಿಕೊಂಡ ಕೋರಿಕೆ ವರ್ಷದೊಳಗೆ ಈಡೇರುವುದಲ್ಲಿ ಅನುಮಾನವೇ ಬೇಡ. ಆದರೆ ನೀವು ಪೂಜಿಸುವ ಪದ್ಧತಿ ಸರಿಯಾಗಿರಬೇಕು. ನೀವು ಪೂಜೆ ವೇಳೆ ಮಾಡುವ ಕೆಲ ತಪ್ಪುಗಳಿಂದ ನಿಮ್ಮ ಪೂಜೆಗೆ ಫಲ ಸಿಗದೇ ಇರಬಹುದು ಅಥವಾ ಮಹದೇವನ ಕೋಪಕ್ಕೆ ನೀವು ಗುರಿಯಾಗಬಹುದು.
ಮೊದಲಿಗೆ ಯಾವ ರೀತಿ ಶಿವರಾತ್ರಿ ಆಚರಿಸಬೇಕು ಎನ್ನುವ ವಿಷಯದೊಂದಿಗೆ ಈ ದಿನ ಮಾಡಲೇ ಬಾರದ ಕೆಲ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ನೀವು ಶಿವರಾತ್ರಿ ಹಬ್ಬದ ದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಡಿ ಉಟ್ಟುಕೊಳ್ಳಬೇಕು. ಅದರಲ್ಲೂ ಹೊಲಿಗೆ ಬೀಳದಂತಹ ವಸ್ತುಗಳನ್ನು ಉಟ್ಟುಕೊಳ್ಳುವುದು ಬಹಳ ಶುಭ ಎಂದು ಹೇಳಲಾಗುತ್ತದೆ.
ಈ ಸುದ್ದಿ ಓದಿ:-ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!
ಅಂದರೆ ಮಹಿಳೆಯರು ಸಾಂಪ್ರದಾಯಕವಾಗಿ ಸೀರೆ ಹಾಗೂ ಪುರುಷರು ಪಂಚೆ ಮತ್ತು ಶಲ್ಯ ಧರಿಸಿ ಶಿವನ ಪೂಜೆಗೆ ಕುಳಿತುಕೊಳ್ಳುವುದು ಶ್ರೇಷ್ಠ ಎನ್ನುವುದು ಅನಾಧಿ ಕಾಲದಿಂದ ರೂಢಿಯಾಗಿರುವ ಪದ್ಧತಿ ಮತ್ತು ಈ ದಿನದಂದು ಮುಂಜಾನೆ ಜೊತೆಗೆ ರಾತ್ರಿ ಸಮಯ ಕೂಡ ಶಿವ ಪೂಜೆ ಮಾಡಿರುವುದು ಅತ್ಯಂತ ಶುಭಕರ ಹೀಗೆ ಶುಭ ಪೂಜೆ ಮಾಡುವಾಗ ಶಿವನಿಗೆ ಪ್ರಿಯವಾದ ಕೆಲ ವಸ್ತುಗಳನ್ನು ಅರ್ಪಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು.
ಈ ದಿನ ಉಪವಾಸ ಇದ್ದು ರಾತ್ರಿ ಪೂರ್ತಿ ಜಾಗರಣೆ ಇರುತ್ತಾರೆ ಹಾಗೂ ಪ್ರತಿದಿನವ ಶಿವಪೂಜೆ ಮಾಡಲು ಸಾಧ್ಯವಾಗದೆ ಇದ್ದವರು ಶಿವರಾತ್ರಿಯ ಈ ದಿನದಂದು ಆದರೂ ಶುಭ ಪೂಜೆ ಮಾಡಲು ಬಯಸುತ್ತಾರೆ. ಹೀಗೆ ಶಿವ ಪೂಜೆ ಮಾಡುವಾಗ ನೀವು ಬಿಲ್ಪತ್ರೆ, ತುಂಬೆ ಹೂವು, ಮಲ್ಲಿಗೆ ಹೂವು, ಪಾರಿಜಾತ ಹೂ ಈ ರೀತಿ ಹೂವುಗಳಿಂದ ಶಿವಲಿಂಗವನ್ನು ಪೂಜಿಸಿ ಮನೆಯಲ್ಲಿ ನರ್ಮದೇಶ್ವರ ಅಥವಾ ಸ್ಪಟಿಕಲಿಂಗ ಇದ್ದರೆ ಅದಕ್ಕೆ ಪೂಜಿಸಬಹುದು.
ಯಾವುದೇ ಕಾರಣಕ್ಕೂ ಶಿವಲಿಂಗಕ್ಕೆ ಅರಿಶಿನವನ್ನು ಹಚ್ಚಬೇಡಿ ಮತ್ತು ಅಭಿಷೇಕ ಪ್ರಿಯನಾದ ಶಿವನಿಗೆ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಕಬ್ಬಿನರಸ, ಪಂಚಾಮೃತ ಗಂಗಾಜಲ, ನೀರು, ಎಳನೀರು ಇವುಗಳಿಂದ ಅಭಿಷೇಕ ಮಾಡಿ ಆದರೆ ಈ ರೀತಿ ಅಭಿಷೇಕ ಮಾಡುವಾಗ ಶಂಖದಿಂದ ಮಾತ್ರ ಅಭಿಷೇಕ ಮಾಡಬೇಡಿ ಹಾಗೂ ಪೂಜೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ.
ಈ ಸುದ್ದಿ ಓದಿ:-1 ರೂಪಾಯಿ ಬಂಡವಾಳ ಇಲ್ಲದೆ ಮನೆಯಲ್ಲಿಯೇ ಕೂತು ಲಕ್ಷ ಹಣ ಸಂಪಾದನೆ ಮಾಡಬಹುದು.!
ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಕಾರಣಕ್ಕೂ ಈ ದಿನ ಸಂಪಿಗೆ ಕೇದಿಗೆ ಹಾಗೂ ತುಳಸಿ ಹೂವುಗಳನ್ನು ಶಿವಲಿಂಗಕ್ಕೆ ಅರ್ಪಿಸಲೇಬಾರದು. ಇದರಿಂದ ನೀವು ಶಿವನ ಕೋಪಕ್ಕೆ ಗುರಿಯಾಗುತ್ತಿರಿ ಅದೇ ರೀತಿಯಾಗಿ ನೀವು ಸಾಧ್ಯವಾದಷ್ಟು ಶಿವನ ನಾಮಾವಳಿಗಳನ್ನು ಪಂಚಾಕ್ಷರಿ ಮಂತ್ರವನ್ನು ಅಷ್ಟೋತ್ತರಗಳನ್ನು ಮತ್ತು ಶಿವನ ಕಥೆಗಳನ್ನು ಹೇಳುತ್ತಾ ಕೇಳುತ್ತಾ ಸಮಯ ಕಳೆಯಿರಿ.
ನಿಮ್ಮ ಮನೆಯಲ್ಲಿ ಶಿವ ಪೂಜೆ ಮಾಡಲು ಅವಕಾಶವಾಗದೇ ಹೋದರೆ ಈ ಪೂಜಾ ವಸ್ತುಗಳನ್ನು ಹತ್ತಿರದಲ್ಲಿರುವ ಶಿವ ದೇವಾಲಯಕ್ಕೆ ಅರ್ಪಿಸಬಹುದು ಮತ್ತು ಈ ದಿನ ಪೂರ್ತಿ ಉಪವಾಸ ಇದ್ದು ಜಾಗರಣೆ ಮಾಡುವ ಪದ್ಧತಿ ಇರುವುದರಿಂದ ಜಾಗರಣೆ ಸಮಯದಲ್ಲೂ ಕೂಡ ಶಿವನ ಧ್ಯಾನವನ್ನು ಮಾಡಬೇಕು.
ಜಾಗರಣೆ ಸಮಯವನ್ನು ಹಾಳು ಹರಟೆ ಮಾಡಿ ಕಾಲಹರಣ ಮಾಡಬಾರದು ಹಾಗೆಯೇ ಪೂರ್ತಿ ದಿನ ಉಪವಾಸ ಇರಲು ಆಗದೆ ಇದ್ದವರು ಹಾಲು ಮತ್ತು ಹಣ್ಣುಗಳನ್ನು ಸೇವಿಸಬಹುದು. ಆದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಮಾಂಸ ಮೊಟ್ಟೆ ಇಂತಹ ಪದಾರ್ಥಗಳನ್ನು ಇಂದು ಸೇವಿಸಲೇಬಾರದು ಮಧ್ಯಪಾನ ಮಾಡಲೇಬಾರದು. ಇದನ್ನು ಪಾಲಿಸಿದರೆ ಖಂಡಿತ ಶಿವನ ಆಶೀರ್ವಾದ ನಿಮಗೆ ದೊರೆಯುತ್ತದೆ.