ಮದುವೆ ಎನ್ನುವುದು ಮನುಷ್ಯರ ಜೀವನದ ಮಹತ್ವದ ಘಟನೆ ಆದರೆ ಕೆಲವರಿಗೆ ಸರಿಯಾದ ಸಮಯಕ್ಕೆ ಕಂಕಣ ಭಾಗ್ಯ ಕೂಡಿ ಬರದೆ ವಿವಾಹ ವಿಳಂಬವಾಗುತ್ತಿರುತ್ತದೆ. ಇದಕ್ಕೆ ಕಾರಣ ನಮ್ಮ ಪೂರ್ವಜನ್ಮದ ಕರ್ಮಗಳು ಅನ್ನುವುದು ನಮ್ಮ ಹಿರಿಯರ ಮಾತುಗಳು. ಹೌದು ಈ ಮಾತು ಖಂಡಿತವಾಗಿಯೂ ನಿಜ ಎನ್ನುತ್ತವೆ ನಮ್ಮ ಶಾಸ್ತ್ರಗಳು. ನಾವು ಮಾಡಿದಂತಹ ಒಳ್ಳೆಯ ಕೆಲಸಗಳು ಅಥವಾ ಪಾಪಗಳು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಅಂತ ಹಿಂದೂ ಧರ್ಮದಲ್ಲಿ ಹೇಳಲಾಗಿದೆ.
ಒಳ್ಳೆಯ ಕೆಲಸ ಮಾಡಿದರೆ ಅದರಿಂದ ನಮ್ಮ ಮುಂದಿನ ಪೀಳಿಗೆಗೂ ಕೂಡ ಒಳ್ಳೆಯದಾಗುತ್ತದೆ ಅದೇ ಪಾಪ ಕರ್ಮಗಳನ್ನು ಮಾಡಿದರೆ ಮುಂದಿನ ಪೀಳಿಗೆಗೂ ಕೂಡ ಕಾಡುತ್ತದೆ ಎನ್ನಲಾಗುತ್ತದೆ. ಕೆಲವೊಮ್ಮೆ ನಾವು ಜೀವನದಲ್ಲಿ ಎಷ್ಟೇ ಕಷ್ಟಪಟ್ಟರು ನಮಗೆ ಏಳಿಗೆ ಆಗುವುದಿಲ್ಲ.
ಅದಕ್ಕೆ ಮುಖ್ಯ ಕಾರಣ ನಮ್ಮ ಹಿಂದಿನವರು ಮಾಡಿದ ಪಾಪ ಕರ್ಮಗಳು ಮದುವೆ ವಿಳಂಬ ಆಗುವುದು ಕೂಡ ನಮ್ಮ ಹಿರಿಯರು ಮಾಡಿದ ಪಾಪ ಕರ್ಮಗಳಿಂದ ಅಂತ ಹೇಳಲಾಗುತ್ತದೆ. ಕೆಲವರು ಎಷ್ಟೇ ಹುಡುಕಾಟ ಮಾಡಿದರೂ ಸರಿಯಾದ ಸಂಗಾತಿ ಸಿಗದೇ ಮದುವೆ ವಿಳಂಬ ಆಗುತ್ತದೆ ಇದಕ್ಕೆ ಹಿಂದೂ ಧರ್ಮದ ಪ್ರಕಾರ ಪಿತೃ ದೋಷ ಅಥವಾ ಸರ್ಪದೋಷ ಕಾರಣ ಎನ್ನಲಾಗುತ್ತದೆ.
ಈ ಆಕಾರದ ಗಡಿಯಾರ ಮನೆಯಲ್ಲಿ ಇರಲೇ ಬಾರದು.!
ಆಧ್ಯಾತ್ಮದಲ್ಲಿ ಇಂತಹ ದೋಷಗಳ ನಿವಾರಣೆಗೆ ಸರಳ ಪರಿಹಾರಗಳು ಇವೆ. ಪಿತೃ ದೋಷವನ್ನು ನಿವಾರಣೆ ಮಾಡಿ ಕೊಂಡರೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎನ್ನಲಾಗುತ್ತದೆ. ಪಿತೃ ದೋಷ ನಿವಾರಣೆಯಾಗಬೇಕು ಎಂದರೆ ಒಳ್ಳೆಯ ಕರ್ಮಗಳನ್ನು ಮಾಡಬೇಕು ಬಡವರಿಗೆ ಬಟ್ಟೆ ಆಹಾರ ಹಣವನ್ನು ಕೈಲಾದಷ್ಟು ದಾನ ಮಾಡಬೇಕು.
ಶನಿವಾರದಂದು ಅನ್ನದ ಉಂಡೆಯನ್ನು ಮಾಡಿ ಗೋವು, ಕಾಗೆ, ಮೀನು ಗಳಿಗೆ ನೀಡಬೇಕು. ಸೋಮವಾರದಂದು ಶಿವನಿಗೆ ಹಾಲು ಮೊಸರು ಹೂವು ಎಳನೀರು ಜೇನುತುಪ್ಪ ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿದರೆ ಶೀಘ್ರ ಕಲ್ಯಾಣವಾಗುತ್ತದೆ ವ್ಯಾಪಾರ ಅಥವಾ ಮದುವೆಗೆ ಸರ್ಪದೋಷ ಅಡ್ಡಿ ಉಂಟು ಮಾಡುತ್ತದೆ. ಇದಕ್ಕೆ ಪರಿಹಾರ ಸುಬ್ರಮಣ್ಯನ ಆರಾಧನೆ.
ಯಾಕೆ ಎಂದರೆ ಸುಬ್ರಹ್ಮಣ್ಯನನ್ನು ಸರ್ಪದೋಷ ನಿವಾರಕ ಅಂತ ನಂಬಲಾಗಿದೆ. ವಿವಾಹ ವಿಳಂಬಕ್ಕೆ ನಾಗದೋಷ ಇರುವವರು ಸಾಮೂಹಿಕವಾಗಿ ಪರಿಹಾರವನ್ನು ಮಾಡಿಸಿಕೊಂಡಿರು ತ್ತಾರೆ. 100 ರಿಂದ 200 ಜನ ಸೇರಿರುವಂತಹ ಸ್ಥಳದಲ್ಲಿ ದೋಷ ಪರಿಹಾರ ಮಾಡಿಸುವುದಕ್ಕೆ ಮುಂದಾಗುತ್ತಾರೆ.
ಹೆಣ್ಣು ಮಕ್ಕಳು ಜೀವನದಲ್ಲಿ ಒಂದು ಬಾರಿ ಆದರೂ ಈ ಮೂರು ವಸ್ತುಗಳ ದಾನ ಮಾಡಲೇಬೇಕು.!
ಕೆಲವರಿಗೆ ಅಲ್ಪ ದೋಷದ ಪ್ರಭಾವ ಇರುತ್ತದೆ ಅಂತವರು ಇಂತಹ ಕಡೆ ಪರಿಹಾರ ಮಾಡಿಸಿದರೆ ಸಾಕು ದೋಷ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಆದರೆ ಕೆಲವರಿಗೆ ಈ ಪೂಜೆ ಹವನ ಸಾಕಾಗುವುದಿಲ್ಲ ಹಾಗಾಗಿ ಅಂತವರು ನಾಲ್ಕೈದು ಬಾರಿ ಪರಿಹಾರವನ್ನು ಮಾಡಿಸಬೇಕಾಗುತ್ತದೆ ಇನ್ನು ಸರ್ಪಸಂಸ್ಕಾರವನ್ನು ಯಾರು ಮಾಡಬೇಕು ಎನ್ನುವಂತಹ ಪ್ರಶ್ನೆ ಹಲವರನ್ನು ಕಾಡುತ್ತದೆ.
ತಾವೇ ಸ್ವತಹ ಸರ್ಪದ ಹತ್ಯೆಯನ್ನು ಮಾಡಿದ ವರು, ಸರ್ಪ ಹತ್ಯೆ ನೋಡಿದವರು, ಅಥವಾ ಹತ್ಯೆಗೆ ಕಾರಣರಾದವರು ಮಾತ್ರ ಸರ್ಪಸಂಸ್ಕಾರವನ್ನು ಮಾಡಬೇಕಾಗುತ್ತದೆ. ವಿಶೇಷವಾಗಿ ಗಮನಿಸಬೇಕಾದಂತಹ ಸಂಗತಿ ಏನು ಎಂದರೆ ತಂದೆ ತಾಯಿ ಬದುಕಿ ದ್ದಂತವರು ಸರ್ಪ ಸಂಸ್ಕಾರವನ್ನು ಮಾಡಬಾರದು ಇದು ಶ್ರೇಯಸ್ಕರ ವಲ್ಲ ಅಂತ ನಮ್ಮ ಶಾಸ್ತ್ರ ಪುರಾಣಗಳು ಸ್ಪಷ್ಟವಾಗಿ ಉಲ್ಲೇಖಿಸಿದೆ.
ಇನ್ನು ಕೆಲವರ ವಿವಾಹಕ್ಕೆ ವಿಘ್ನಗಳೇ ಸಾಲಾಗಿ ಇರುತ್ತದೆ ಇನ್ನೇನು ಎಲ್ಲವೂ ಹೊಂದಿ ವಿವಾಹವಾಗಬೇಕು ಎನ್ನುವ ಸಮಯಕ್ಕೆ ಹೊಸ ತೊಂದರೆ ಎದುರಾಗುತ್ತದೆ. ಇವೆಲ್ಲದಕ್ಕೆ ಜಾತಕದಲ್ಲಿರುವ ಗ್ರಹ ನಕ್ಷತ್ರಗಳು ಕಾರಣವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.