Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮದುವೆ ಪ್ರಮಾಣ ಪತ್ರಕ್ಕೆ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು ಹೇಗೆ ಗೊತ್ತಾ.?.

Posted on March 18, 2024 By Kannada Trend News No Comments on ಮದುವೆ ಪ್ರಮಾಣ ಪತ್ರಕ್ಕೆ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು ಹೇಗೆ ಗೊತ್ತಾ.?.

 

ಪ್ರತಿಯೊಂದು ನವ ವಿವಾಹಿತ ಜೋಡಿಯು ವಿವಾಹವನ್ನು ನೋಂದಣಿ ಮಾಡಿಸಿ ತಪ್ಪದೇ ಮದುವೆ ಪ್ರಮಾಣ ಪತ್ರವನ್ನು (Marriage Certificate) ಪಡೆದುಕೊಳ್ಳಬೇಕು. ಯಾಕೆಂದರೆ ಮುಂದಿನ ದಿನಗಳಲ್ಲಿ ನಾನ ಕಾರಣಗಳಿಂದಾಗಿ ವಿವಾಹ ಪ್ರಮಾಣ ಪತ್ರಗಳನ್ನು ದಾಖಲೆಯಾಗಿ ಕೇಳಲಾಗುತ್ತದೆ.

ಆಧಾರ್ ಕಾರ್ಡ್ ಗಳಲ್ಲಿ ವಿಳಾಸ ಬದಲಾಯಿಸಲು, ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಲು ಮತ್ತು ಕೆಲವು ವರ್ಗಗಳಿಗೆ ಸರ್ಕಾರದಿಂದ ವಿವಾಹಕ್ಕೆ ಸಿಗುವ ಪ್ರೋತ್ಸಾಹ ಧನವನ್ನು ಪಡೆಯಲು ಸೇರಿದಂತೆ ಇತ್ಯಾದಿ ನಾನ ಕಾರಣಗಳಿಂದಾಗಿ ವಿವಾಹ ಪ್ರಮಾಣ ಪತ್ರ ಒಂದು ಅಗತ್ಯ ದಾಖಲೆ.

ಈ ಕಾರಣಗಳಿಗೆ ಮಾತ್ರವಲ್ಲದೆ ಪ್ರತಿಯೊಬ್ಬರೂ ಕೂಡ ವಿವಾಹ ಪ್ರಮಾಣ ಪತ್ರ ಪಡೆದುಕೊಳ್ಳಬೇಕು ಎನ್ನುವುದು ಸರ್ಕಾರದ (Government) ಉದ್ದೇಶ. ಆದರೆ ಇದುವರೆಗೂ ಕೂಡ ಉಪ ನೊಂದಣಿ ಕಚೇರಿಗೆ (Sub Register office) ಹೋಗಿ ಸಾಕ್ಷಿಗಳ ಸಮ್ಮುಖದಲ್ಲಿ ಅರ್ಜಿ ಸಲ್ಲಿಸಿ ಹತ್ತಾರು ದಾಖಲೆಗಳನ್ನು ನೀಡಿ ಪ್ರಮಾಣ ಪತ್ರವನ್ನು ಪಡೆಯಬೇಕಿತ್ತು.

ಈ ಸುದ್ದಿ ಓದಿ:- ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಹೊಸ ಅಪ್ಡೇಟ್.!

ಆದರೆ ವಿವಾಹ ಸಂಭ್ರಮದ ಗಡಿಬಿಡಿಯಲ್ಲಿ ಇದು ಸ್ವಲ್ಪ ರೌಸ್ಕ್ ಕೆಲಸ ಎಂದು ಅನೇಕರು ಇದನ್ನು ಹಾಗೆಯೇ ಬಿಟ್ಟು ಬಿಡುತ್ತಿದ್ದರು. ಮದುವೆಯಾದ ಆರು ತಿಂಗಳವರೆಗೂ ಕೂಡ ವಿವಾಹ ಪ್ರಮಾಣ ಪತ್ರ ಪಡೆದುಕೊಳ್ಳುವುದಕ್ಕೆ ಅವಕಾಶ ಇರುತ್ತದೆ ಮತ್ತು ಈಗ ಕರ್ನಾಟಕ ಸರ್ಕಾರವು ಈ ವಿಚಾರ ಬಗ್ಗೆ ಇನ್ನಷ್ಟು ಅನುಕೂಲತೆ ಮಾಡಿಕೊಟ್ಟಿದೆ.

ಅದೇನೆಂದರೆ ಇನ್ನು ಮುಂದೆ ಹಿಂದೂ ವಿವಾಹ ನೋಂದಣಿ, ಋುಣಭಾರ ಪ್ರಮಾಣ ಪತ್ರ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳನ್ನು ಪಡೆಯಲು ಸಾರ್ವಜನಿಕರು ಅನಗತ್ಯವಾಗಿ ಉಪನೋಂದಣಿ ಕಚೇರಿಗೆ ಅಲೆಯುವ ಬದಲು ಆನ್‌ಲೈನ್‌ ಮೂಲಕವೇ ಪಡೆದುಕೊಳ್ಳಲು ಅನುಕೂಲವಾಗುವ ವ್ಯವಸ್ಥೆಯನ್ನು ಕಂದಾಯ, ಮುಂದ್ರಾಂಕ ಮತ್ತು ನೋಂದಣಿ ಇಲಾಖೆಯು ಕಲ್ಪಿಸಿ ಕೊಟ್ಟಿದೆ.

ಕಾವೇರಿ .2 ತಂತ್ರಾಂಶವನ್ನು ಇನ್ನಷ್ಟು ಸರಳೀಕರಣಗೊಳಿಸಿರುವ ಕಂದಾಯ ಇಲಾಖೆಯು ಜನಸ್ನೇಹಿ ಆನ್‌ಲೈನ್‌ ಸೇವೆಗಳನ್ನು ಕಲ್ಪಿಸಬೇಕೆಂಬ ಎಂಬ ಉದ್ದೇಶದಿಂದ ನಾಗರಿಕ ಸ್ನೇಹಿ ಆನ್‌ಲೈನ್‌ ಸೇವೆಗಳ ಸಪ್ತ ತಂತ್ರಾಂಶಗಳ ಗುಚ್ಛವನ್ನು ಕಳೆದ ತಿಂಗಳಿನಲ್ಲಿ ಪರಿಚಯಿಸಿದೆ.

ಈ ಸುದ್ದಿ ಓದಿ:-ಸಾಲ ಬಾಧೆಯಿಂದ ನರಳುತ್ತಿರುವವರು ಮಂಗಳವಾರ ಈ ಉಪಾಯವನ್ನು ಮಾಡಿದರೆ ಸಾಕು, ಕೋಟಿ ಸಾಲ ಇದ್ದರೂ ತೀರುತ್ತದೆ.

ಬೆಂಗಳೂರಿನ ಕಚೇರಿ ಒಂದರಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರೇ (Minister Krishna Bairegowda) ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದರು. ಹಿಂದೂ ವಿವಾಹಗಳ ನೋಂದಣಿ ಕಾಯಿದೆ 1995ರಡಿ ವಿವಾಹ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದ್ದು, ವಿವಾಹಿತರು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಿ..

ಉಪನೋಂದಣಾಧಿಕಾರಿಗಳು ಅನುಮೋದಿಸಿದ ನಂತರ ನಿಗದಿತ ಶುಲ್ಕ ಪಾವತಿಸಿ ಆನ್‌ಲೈನ್‌ನಲ್ಲಿಯೇ ವಿವಾಹ ದೃಢೀಕರಣ ಪತ್ರ ಪಡೆಯಲು ಆನ್‌ಲೈನ್‌ ಹಿಂದೂ ವಿವಾಹ ನೋಂದಣಿ ತಂತ್ರಾಂಶ ವ್ಯವಸ್ಥೆಯಡಿ ಅವಕಾಶ ಮಾಡಿಕೊಡಲಾಗಿದೆ. ಇದರ ಪ್ರಯುಕ್ತವಾಗಿ ವಿವಾಹಿತರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ಕಾವೇರಿ 2.0 ತಂತ್ರಾಂಶಕ್ಕೆ ಭೇಟಿಕೊಟ್ಟು ಅರ್ಜಿ ಸಲ್ಲಿಸಬಹುದು.

ಅರ್ಜಿ ಭರ್ತಿ ಮಾಡಿ, ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಿದರೆ ಅರ್ಜಿ ಪರಿಶೀಲನೆ ಯಾದ ಮೇಲೆ ವೆರಿಫಿಕೇಶನ್ ನಡೆದು ಸರ್ಟಿಫಿಕೇಟ್ ಸಿಗುತ್ತದೆ ಇದರ ಎಲ್ಲಾ ಸ್ಟೇಟಸ್ ನ್ನು ಆನ್ಲೈನ್ ನಲ್ಲಿ ಚೆಕ್ ಮಾಡಲು ಅವಕಾಶವೂ ಕೂಡ ಮಾಡಿಕೊಡಲಾಗುತ್ತದೆ.

ಈ ಸುದ್ದಿ ಓದಿ:-ಸ್ನಾನದ ನೀರಿನಲ್ಲಿ ಇದನ್ನು ಬೆರೆಸಿ ಕೋಟಿ ಸಾಲ ಇದ್ದರೂ ತೀರುತ್ತದೆ…

ಅಥವಾ ಹತ್ತಿರದ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ CSC ಸೆಂಟರ್ ಗಳಿಂದ ಕೂಡ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ತಪ್ಪದೇ ಈ ಉಪಯುಕ್ತ ವಿಷಯವನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಂಡು ಎಲ್ಲರಿಗೂ ಮಾಹಿತಿ ತಿಳಿಯುವಂತೆ ಮಾಡಿ.

Useful Information
WhatsApp Group Join Now
Telegram Group Join Now

Post navigation

Previous Post: ನಿಮ್ಮ ಮನೆ ಅಕ್ಕ ಪಕ್ಕ ಯಾವ ರೀತಿಯ ಗಿಡ ಇದ್ದರೆ ಏನು ಫಲ ತಿಳಿದುಕೊಳ್ಳಿ.!
Next Post: ನಮ್ಮ ದೇಶದ ದುಡ್ಡಿನ ನೋಟುಗಳು ಯಾವ ಪೇಪರ್ ನಲ್ಲಿ ಪ್ರಿಂಟ್ ಆಗುತ್ತವೆ ಗೊತ್ತಾ? ನೋಟುಗಳ ಕಲರ್ ಸೀಕ್ರೆಟ್ ಮಾಹಿತಿ ಹೀಗಿದೆ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore