ನೋಟಿನ ಇತಿಹಾಸದ ಬಗ್ಗೆ ಹೇಳುವುದಾದರೆ ಮೊಟ್ಟ ಮೊದಲ ಬಾರಿಗೆ ಕಾಗದ ನೋಟುಗಳನ್ನು 1862ರಲ್ಲಿ ಬ್ರಿಟಿಷ್ ಸರ್ಕಾರ ಬ್ರಿಟನ್ ಕಂಪನಿಗೆ ನೋಟು ತಯಾರಿಸಲು ಅನುಮತಿ ನೀಡಿತು. 1920ರ ವರೆಗೂ ಕೂಡ ಈ ರೀತಿ ಬ್ರಿಟನ್ ಕಂಪನಿ ತಯಾರಿಸಿಕೊಟ್ಟ ನೋಟುಗಳನ್ನು ಭಾರತದಲ್ಲಿ ಚಲಾವಣೆ ಮಾಡಲಾಗುತ್ತಿತ್ತು.
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ 1920 ರಲ್ಲಿ ಮಹಾರಾಷ್ಟ್ರದ ನಾಸಿಕ್ ನಲ್ಲಿ ಭಾರತದ ರೂಪಾಯಿ ನೋಟುಗಳನ್ನು ಪ್ರಿಂಟ್ ಮಾಡಲು ಶುರು ಮಾಡಲಾಯಿತು. ಹಾಗೆಂದ ಮಾತ್ರಕ್ಕೆ ಬ್ರಿಟನ್ ಕಂಪನಿ ಪ್ರಿಂಟಿಂಗ್ ಸ್ಥಗಿತಗೊಳ್ಳಲಿಲ್ಲ ನೋಟುಗಳಿಗೆ ಬೇಡಿಕೆ ಹೆಚ್ಚಿದ್ದ ಕಾರಣ ಎರಡು ಕಡೆ ಪ್ರಿಂಟ್ ಆಗುತ್ತಿತ್ತು.
ಭಾರತಕ್ಕೆ ಸ್ವತಂತ್ರ ಸಿಕ್ಕಿದ ಮೇಲೆ 1975ರಲ್ಲಿ ಮಧ್ಯಪ್ರದೇಶದ ದೇವಾಸ್ ಎನ್ನುವಲ್ಲಿ ಎರಡನೇ ನೋಟ್ ಪ್ರಿಂಟಿಂಗ್ ಪ್ರೆಸ್ ಆರಂಭವಾಗುತ್ತದೆ. ಆ ಸಮಯದಲ್ಲೂ ನೋಟಿಗೆ ಬೇಡಿಕೆ ಹೆಚ್ಚಿದ್ದರಿಂದ ಬ್ರಿಟನ್ ಮಾತ್ರವಲ್ಲದೆ ಅಮೆರಿಕ ಹಾಗೂ ಕೆನಡಾ ದೇಶಗಳಿಂದ ಕೂಡ ಭಾರತದ ರೂಪಾಯಿ ನೋಟುಗಳನ್ನು ಪ್ರಿಂಟ್ ಮಾಡಿಸಿ ಆಮದು ಮಾಡಿಸಿಕೊಳ್ಳಲಾಗುತ್ತಿತ್ತು.
ಈ ಸುದ್ದಿ ಓದಿ:- ನಿಮ್ಮ ಮನೆ ಅಕ್ಕ ಪಕ್ಕ ಯಾವ ರೀತಿಯ ಗಿಡ ಇದ್ದರೆ ಏನು ಫಲ ತಿಳಿದುಕೊಳ್ಳಿ.!
1999ರಲ್ಲಿ ಕರ್ನಾಟಕದ ಮೈಸೂರಿನಲ್ಲಿ ಮೂರನೇ ಪ್ರಿಂಟಿಂಗ್ ಪ್ರೆಸ್ ಆರಂಭವಾಗುತ್ತದೆ, ಇದಾದ ಒಂದು ವರ್ಷದ ಬಳಿಕ 2000 ಇಸ್ವಿಯಲ್ಲಿ ಪಶ್ಚಿಮ ಬಂಗಾಳದ ಸಲ್ಬೋನಿಯಲ್ಲೂ ನೋಟ್ ಪ್ರಿಂಟಿಂಗ್ ಪ್ರೆಸ್ ಆರಂಭವಾಗುತ್ತದೆ. ಸದ್ಯಕ್ಕೆ ಈಗ ಈ ನಾಲ್ಕು ಕಡೆಗಳಲ್ಲಿ ಮಾತ್ರ ಭಾರತದ ರೂಪಾಯಿ ನೋಟುಗಳು ಪ್ರಿಂಟ್ ಆಗುತ್ತಿವೆ.
ಹಾಗೆ ನಾಣ್ಯಗಳು ಭಾರತದ ಟಂಕ ಶಾಲೆಗಳಲ್ಲಿ ತಯಾರಾಗುತ್ತವೆ ಮುಂಬೈ, ಹೈದರಬಾದ್, ಕೊಲ್ಕತ್ತಾ, ಹಾಗೂ ನೋಯ್ಡದಲ್ಲಿವೆ. ನಾಣ್ಯದ ಇಸವಿ ಕೆಳಗೆ ಇರುವ ಚಿತ್ರದಿಂದ ಎಲ್ಲಿ ತಯಾರಾಗಿದೆ ಎಂದು ಗುರುತಿಸಬಹುದು. ಡೈಮಂಡ್ ಶೇಪ್ ಇದ್ದರೆ ಹೈದರಾಬಾದ್, ಚುಕ್ಕಿ ಇದ್ದರೆ ನೋಯ್ಡಾ, ಸ್ಕ್ವೇರ್ ಶೇಪ್ ಇದ್ದರೆ ಮುಂಬೈ, ಯಾವುದೇ ಚಿಹ್ನೆ ಇಲ್ಲದಿದ್ದರೆ ಕೊಲ್ಕತ್ತಾದಲ್ಲಿ ತಯಾರಾಗಿದೆ ಎಂದು ಅರ್ಥ.
ನೋಟುಗಳ ಬಗ್ಗೆ ಹೇಳುವುದಾದರೆ ಮಧ್ಯಪ್ರದೇಶದ ದೇವಾಸ್ ನಲ್ಲಿ 10 ರೂಪಾಯಿ, 50 ರೂಪಾಯಿ ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳು 265 ಕೋಟಿ ನೋಟುಗಳು ಪ್ರಿಂಟ್ ಆಗುತ್ತದೆ, ಕರ್ನಾಟಕದ ಮೈಸೂರಿನಲ್ಲಿ 2000 ಮುಖಬೆಲೆಯ ನೋಟುಗಳು ಪ್ರಿಂಟ್ ಆಗುತ್ತಿದ್ದವು, RBI ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಪ್ರತಿವರ್ಷ 2000 ಕೋಟಿ ಮೊತ್ತಕ್ಕೆ ಕಾಗದದ ನೋಟ್ ಗಳು ಪ್ರಿಂಟ್ ಆಗುತ್ತದೆ.
ಈ ಸುದ್ದಿ ಓದಿ:- ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇದ್ದರೆ ಈ ಸರಳ ಪರಿಹಾರ ಮಾಡಿ.!
ಆದರೆ ಇವುಗಳ ತಯಾರಿಕೆಗೆ ಬೇಕಾದ ಕಾಗದ, ಬಣ್ಣ ಹೀಗೆ ಮುದ್ರಣಕ್ಕಾಗಿಯೇ ಅದರಲ್ಲಿ 60% ಹಣವನ್ನು ಖರ್ಚು ಮಾಡಲಾಗುತ್ತದೆ. ಪ್ರಿಂಟ್ ಮಾಡಿದ ನೋಟುಗಳಲ್ಲಿ ಅರ್ಧದಷ್ಟು ನೋಟ್ ಗಳನ್ನು ವೇಸ್ಟ್ ಮಾಡಲಾಗುತ್ತದೆ.
ಈ ನೋಟ್ ಗಳನ್ನು ತಯಾರಿಸಲು ಕಾಟನ್ ರೀತಿಯ ಕಾಗದಗಳನ್ನು ಹಾಗೂ ವಿಶೇಷವಾದ ಬಣ್ಣಗಳನ್ನು ಬಳಸಲಾಗುತ್ತದೆ. ಜರ್ಮನಿ ಜಪಾನ್ ಹಾಗೂ ಚೀನಾದ ಸೀನ್ ಎನ್ನುವ ಕಂಪನಿಯಿಂದ ಕಾಗದವನ್ನು, ಸ್ವಿಝರ್ ಲ್ಯಾಂಡ್ ನ SICPA ಎನ್ನುವ ಕಂಪನಿಯಿಂದ ಬಣ್ಣವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆಮದು ಮಾಡಿದ ಕಾಗದವನ್ನು ಮಿಷನ್ ಗೆ ಹಾಕಿ ಮತ್ತೊಂದು ಮಷೀನ್ ನಲ್ಲಿ ಬಣ್ಣದ ಅಚ್ಚನ್ನು ಸೆಟ್ ಮಾಡಲಾಗಿರುತ್ತದೆ.
ಒಂದು ಶೀಟ್ ನಲ್ಲಿ 25-28 ನೋಟ್ ಪ್ರಿಂಟ್ ಆಗುತ್ತದೆ. ವಿಶೇಷ ರೀತಿಯ ಮಿಷನ್ ಬಳಸಿ ನೋಟುಗಳ ಮಧ್ಯೆ ಇರುವ ಸಿಲ್ವರ್ ಥ್ರೆಡ್ ಹಾಕಲಾಗುತ್ತದೆ ಮತ್ತು ವಾಟರ್ ಪ್ರೂಫ್ ಮಾಡಲಾಗುತ್ತದೆ. ಪ್ರತಿ ನೋಟ್ ಗೂ ಯೂನಿಕ್ ನಂಬರ್ ಇರುತ್ತದೆ, ಹೀಗೆ ತಯಾರಾದ ನೋಟುಗಳನ್ನು RBI ತನ್ನ 18 ಬ್ರಾಂಚ್ ಗಳ ಮೂಲಕ ಎಲ್ಲಾ ಬ್ಯಾಂಕ್ ಗಳಿಗೂ ಸರಬರಾಜು ಮಾಡುತ್ತದೆ.
ಈ ಸುದ್ದಿ ಓದಿ:- ರೈತರಿಗೆ 80% ಸಹಾಯಧನದಲ್ಲಿ ಸೌರ ಪಂಪ್ಸೆಟ್ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ.?
ಒಂದು ನೋಟ್ ತಯಾರಿಸಲು ತಗಲುವ ಖರ್ಚು
* ರೂ.10 ಮತ್ತು ರೂ.50 – 1.01 ರುಪಾಯಿ
* ರೂ.100 – 1.51 ಪೈಸೆ
* ರೂ.500 – 2.57 ಪೈಸೆ
ರೂ.2000 – 4.57 ಪೈಸೆ