ದೀಪ ಎನ್ನುವುದು ಬೆಳಗಿನ ಸಂಕೇತ ಮತ್ತು ಬೆಳಕು ಎನ್ನುವುದು ಮಾರ್ಗದರ್ಶನ ಎನ್ನುವುದನ್ನು ಸೂಚಿಸುತ್ತದೆ. ಅಜ್ಞಾನದಿಂದ ಜ್ಞಾನದತ್ತ, ಕತ್ತಲೆಯಿಂದ ಬೆಳಕಿನ ತರುವ ಈ ಶಕ್ತಿಯನ್ನು ಜ್ಯೋತಿ ಎಂದು ಕರೆಯುತ್ತೇವೆ. ಪ್ರತಿಯೊಂದು ಮನೆಗಳಲ್ಲಿ ದೇವಸ್ಥಾನಗಳಲ್ಲಿ ಯಾವುದೇ ಶುಭ ಸಮಾರಂಭಗಳ ಆರಂಭದ ಮುನ್ನ ಕಾರ್ಯಕ್ರಮಗಳ ಉದ್ಘಾಟನೆಯನ್ನು ದೀಪಾರಾಧನೆ ಮಾಡುವುದು ನಮ್ಮ ಪದ್ಧತಿ, ಅದರಲ್ಲೂ ಮನೆಗಳಲ್ಲಿ ದೀಪ ಹಚ್ಚುವುದಕ್ಕೆ ನಿಯಮವೇ ಇದೆ.
ಆ ರೀತಿ ಹಿರಿಯರು ತಿಳಿಸಿ ಕೊಟ್ಟಿರುವ ನಿಯಮದ ಪ್ರಕಾರವಾಗಿ ದೀಪ ಹಚ್ಚಿ ಆರಾಧನೆ ಮಾಡಿದರೆ ದೀಪದ ರೂಪದಲ್ಲಿ ತಾಯಿ ಮಹಾಲಕ್ಷ್ಮಿಯ ಹಾಗೂ ದೀಪವು ಆಗಿರುವ ತ್ರಿಮೂರ್ತಿಗಳ ಅನುಗ್ರಹವಾಗಿ ಬದುಕಿಗೆ ದೊರೆತು ಬಹಳ ಒಳ್ಳೆಯದಾಗುತ್ತದೆ ಎನ್ನುವ ನಿಯಮ ಇದೆ. ಹಾಗೆ ದೀಪ ಹಚ್ಚುವಾಗ ಆಗುವ ಕೆಲವು ಅವಘಡಗಳ ಬಗ್ಗೆ ಅಷ್ಟೇ ಭಯವೂ ಕೂಡ ಇದೆ.
ಈ ಸುದ್ದಿ ಓದಿ:- ನಿಮ್ಮ ಕೈಯಲ್ಲಿರುವ ಸಂತಾನ ರೇಖೆಯ ಬಗ್ಗೆ ಅರಿಯುವುದು ಹೇಗೆ ನೋಡಿ.!
ನಾವು ದೀಪ ಹಚ್ಚುವಾಗ ಅದು ಹತ್ತದೇ ಇದ್ದರೆ ಅಥವಾ ಎಣ್ಣೆ ಇದ್ದರೂ ನಂದಿ ಹೋದರೆ ಅಥವಾ ಚಿಟಪಟ ಸದ್ದು ಬರುತ್ತಿದ್ದರೆ ಅಪಶಕುನ ಎಂದು ಭಯ ಪಡುತ್ತಾರೆ. ಇದರ ಅರ್ಥ ನಿಜಕ್ಕೂ ಇದೇ ಆಗಿರುತ್ತದೆಯಾ? ಯಾಕಾಗಿ ಈ ಸೂಚನೆ ಸಿಗುತ್ತದೆ? ಯಾವ ಅಪಾಯದ ಬಗ್ಗೆ ಹೇಳುತ್ತದೆ ಎಂದು ಹೇಳುವುದಾದರೆ ಮೊದಲಿಗೆ ದೀಪ ಹಚ್ಚುವ ಮುನ್ನವೇ ನಾವು ಕೆಲ ಎಚ್ಚರಿಕೆ ವಹಿಸಬೇಕು.
ದೀಪದ ಎಣ್ಣೆ ಶುದ್ಧವಾಗಿರಬೇಕು ಯಾವುದೇ ಕಲಬೆರಿಕೆ ಎಣ್ಣೆಗಳನ್ನು ಮಿಕ್ಸ್ ಮಾಡಬಾರದು ಮತ್ತು ದೀಪದ ಬತ್ತಿಯನ್ನು ಹತ್ತಿಯಿಂದ ಚೆನ್ನಾಗಿ ಹೊಸೆದು ಎರಡು ಬತ್ತಿಗಳನ್ನು ಜೋಡಿ ಮಾಡಿ ಹಾಕಬೇಕು, ದೀಪದ ತುದಿಯಲ್ಲಿ ಸ್ವಲ್ಪ ಕರ್ಪೂರದಿಂದ ಪುಡಿ ಹಚ್ಚಿದರೆ ದೀಪ ಹಚ್ಚುವುದಕ್ಕೆ ಸುಲಭವಾಗುತ್ತದೆ ಈ ರೀತಿಯಾದ ಅಗತ್ಯ ಕ್ರಮ ಕೈಗೊಳ್ಳಬೇಕು.
ಇದೆಲ್ಲ ಮಾಡಿಯೂ ಎಷ್ಟೇ ಪ್ರಯತ್ನ ಪಟ್ಟರು ಹತ್ತುತ್ತಿಲ್ಲ ಎಂದರೆ ಯಾವುದೋ ಕೆಟ್ಟ ಸುದ್ದಿಯನ್ನು ನಾವು ಆ ದಿನ ಕೇಳಬೇಕಾಗುತ್ತದೆ ನೋವಿನ ಸಂಗತಿ ನಮಗೆ ಉಂಟಾಗುತ್ತದೆ ಎನ್ನುವುದರ ಅರ್ಥ. ಅದಕ್ಕಾಗಿ ನಾವು ಮಾನಸಿಕವಾಗಿ ಸಿದ್ದರಾಗಲೇಬೇಕಾಗುತ್ತದೆ, ಇದು ಅನೇಕರ ಬದುಕಿನಲ್ಲಿ ನಿಜವಾಗಿದೆ.
ಈ ಸುದ್ದಿ ಓದಿ:- ಸಿಂಹ ರಾಶಿ ಮೇಲೆ ಗುರು ಪರಿವರ್ತನೆ ಯಾವ ರೀತಿ ಪರಿಣಾಮ ಬೀರಲಿದೆ ಗೊತ್ತಾ.?
ಒಂದು ವೇಳೆ ಎಣ್ಣೆ ಬದಲಾಯಿಸಿ ನೋಡಿದಾಗ ಅಥವಾ ಬತ್ತಿಯನ್ನು ಬದಲಾಯಿಸಿ ನೋಡಿದಾಗ ದೀಪ ಸರಿಯಾಗಿ ಉರಿದಾಗ ವಸ್ತುಗಳ ದೋಷದಿಂದ ಉಂಟಾಗಿದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ದೀಪಗಳಲ್ಲಿ ಎಣ್ಣೆ ಇದ್ದರೂ ಕೂಡ ದೀಪ ನಂದು ಹೋದರೆ, ಗಾಳಿ ಕಾರಣ ಇರಬಹುದು ಅಥವಾ ಯಾವುದೇ ಗಾಳಿಯೂ ಬೀಸುತಿಲ್ಲ ಆದರೂ ಈ ರೀತಿ ದೀಪ ನಂದಿದೆ ಎಂದರೆ ಅದು ಕೂಡ ಇದೇ ರೀತಿಯ ಫಲಗಳನ್ನು ಕೊಡುತ್ತದೆ ಎಂದು ಅರ್ಥ.
ನೀವು ಆಗ ಆದಷ್ಟು ಎಚ್ಚರಿಕೆಯಿಂದ ಇರಬೇಕು ಯಾರ ಜೊತೆಯಾದರೂ ವ್ಯವಹಾರ ಮಾಡುವಾಗ ಎಚ್ಚರಿಕೆ, ಮನೆ ಜನರ ಜೊತೆ ಚಿಕ್ಕ ಪುಟ್ಟ ಕಾರಣಕ್ಕೆ ಮನಸ್ತಾಪ ಮಾಡಿಕೊಳ್ಳುವುದನ್ನು ತಪ್ಪಿಸುವುದು ಈ ರೀತಿ ನಿಮ್ಮ ಎಚ್ಚರಿಕೆಯಲ್ಲಿ ನೀವು ಇದ್ದರೆ ಅಪಾಯ ತಪ್ಪುತ್ತದೆ.
ಈ ಸುದ್ದಿ ಓದಿ:- ರಾಶಿಗಳ ಪ್ರಕಾರವಾಗಿ ನಿಮ್ಮ ಪ್ರೀತಿ ಹಾಗೂ ಪ್ರೀತಿಸುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ನೋಡಿ.!
ಕೆಲವೊಮ್ಮೆ ದೀಪದಲ್ಲಿ ಚಿಟಪಟ ಶಬ್ದ ಕೂಡ ಬರುತ್ತದೆ ನೀವು ಎಣ್ಣೆಗೆ ನೀರು ತಾಕಿಸಿದ್ದರೆ ಅಥವಾ ಬತ್ತಿಗೆ ನೀರು ತಾಗಿಸಿ ನಿಮ್ಮ ಕೈ ತಪ್ಪಿನಿಂದ ಆಗಿದ್ದರೆ ಈ ರೀತಿ ಆಗುವ ಸಾಧ್ಯತೆ ಇರುತ್ತದೆ, ಆಗ ಮಾತ್ರ ಇಂತಹ ಶಬ್ದ ಬರುತ್ತದೆ. ಹಾಗಾಗಿ ಈ ರೀತಿ ಯಾವುದೇ ಸೂಚನೆ ಬಂದರೂ ಮೊದಲು ಅದನ್ನು ಸೂಕ್ಷ್ಮವಾಗಿ ಗಮನಿಸಿ ಅರ್ಥ ಮಾಡಿಕೊಳ್ಳಬೇಕು. ನಾವು ಏನಾದರೂ ತಪ್ಪು ಮಾಡಿದೆ ಎಲ್ಲವೂ ಸರಿಯಿದ್ದು, ಈ ರೀತಿ ಸೂಚನೆಗಳು ಸಿಗುತ್ತಿವೆ ಎಂದರೆ ಭಗವಂತನನ್ನೇ ಪ್ರಾರ್ಥಿಸಿ ಕಾಪಾಡು ಎಂದು ಕೇಳಿಕೊಳ್ಳಿ.