ರಾಜ್ಯ ಸರ್ಕಾರ ನೀಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ (Gruhajyothi Scheme) ಕೂಡ ಒಂದು, ಈ ಯೋಜನೆ ಮೂಲಕ ಕರ್ನಾಟಕದ ಪ್ರತಿ ಕುಟುಂಬವು ಗರಿಷ್ಠ 200 ಯೂನಿಟ್ ವರೆಗೆ ತಮ್ಮ ವಾರ್ಷಿಕ ಬಳಕೆಯ ಸರಾಸರಿ ಆಧಾರದ ಮೇಲೆ ಉಚಿತ ವಿದ್ಯುತ್ (free Current) ಪಡೆಯಬಹುದಾಗಿದೆ.
ಸ್ವಂತ ಮನೆ ಬಾಡಿಗೆ ಮನೆ ಈ ರೀತಿ ಯಾವುದೇ ಮನೆಯಲ್ಲಿ ವಾಸವಿದ್ದರೂ ಕೂಡ ಪ್ರತಿಯೊಂದು ಮನೆಗೂ ಗೃಹಜ್ಯೋತಿ ಯೋಜನೆ ಅನ್ವಯವಾಗುತ್ತಿರುವುದು ಕರ್ನಾಟಕದ ಕೋಟ್ಯಂತರ ಕುಟುಂಬಗಳಿಗೆ ಅನುಕೂಲವಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ ಇದುವರೆಗೂ ಕರ್ನಾಟಕದ 1.60 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆ ವ್ಯಾಪ್ತಿಗೆ ಬರುತ್ತಿದ್ದು ಕಳೆದ ಆರು ತಿಂಗಳಿನಿಂದ ಯೋಜನೆ ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದೆ.
ಈ ಸುದ್ದಿ ಓದಿ:- ಮದುವೆ ನೋಂದಣಿ ಪ್ರಮಾಣ ಪತ್ರಗೆ ಅರ್ಜಿಸಲ್ಲಿಸುವ ವಿಧಾನ.!
ಈಗ ಈ ಯೋಜನೆಯಲ್ಲಿ ಕೆಲ ಮಹತ್ವದ ಬದಲಾವಣೆಗಳಾಗುತ್ತಿವೆ, ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ ಕೆಲ ದಿನಗಳ ಹಿಂದೆಯಷ್ಟೇ ಇದುವರೆಗೂ ಇದ್ದ ನಿಯಮವಾದ ಮನೆಯ ವಾರ್ಷಿಕ ವಿದ್ಯುತ್ ಬಳಕೆಯ ಶೇ. 10 ರಷ್ಟು ಹೆಚ್ಚುವರಿ ವಿದ್ಯುತ್ ಉಚಿತವಾಗಿ ನೀಡುವ ನಿಯಮ ಬದಲಾಯಿಸಿ 10 ಯೂನಿಟ್ ಹೆಚ್ಚುವರಿ ನೀಡಲು ಆದೇಶ ಹೊರಡಿಸಿತ್ತು.
ಇದರಿಂದ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಅನುಕೂಲತೆಯಾಗಿ ಅನವಶ್ಯಕವಾಗಿ ವಿದ್ಯುತ್ ಪೋಲಾಗುವಿಕೆಗೆ ಕಡಿವಾಣ ಬಿದ್ದಂತಾಗಿತ್ತು. ಈಗ ಈ ಯೋಜನೆಗಿದ್ದ ಮತ್ತೊಂದು ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಉಚಿತ ವಿದ್ಯುತ್ ಯೋಜನೆಯ ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಈ ಸುದ್ದಿ ಓದಿ:-ಮಕರ ರಾಶಿಯವರಿಗೆ ಮನೆ ಕಟ್ಟುವ ಯೋಗ ಫಲ ಜಾತಕದಲ್ಲಿ ಇದೆಯಾ.? ಇಲ್ಲಿದೆ ನೋಡಿ ಮಾಹಿತಿ.!
ಬಾಡಿಗೆ ಅಥವಾ ಭೋಗ್ಯದ ಮನೆಗಳಲ್ಲಿ ವಾಸವಾಗಿದ್ದವರು ಮನೆ ಖಾಲಿ ಮಾಡಿದಾಗ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ ವಾಸವಿದ್ದ ಮನೆಯ ವಿದ್ಯುತ್ ಖಾತೆ ಲಿಂಕ್ ಮಾಡಿದ್ದ ಕಾರಣ ಅದನ್ನು ಕ್ಯಾನ್ಸಲ್ ಮಾಡಿಸಿ ಹೊಸ ಮನೆಯ ಕನೆಕ್ಷನ್ ಪಡೆಯಲು ಕಷ್ಟವಾಗುತ್ತಿತ್ತು.
ಅನೇಕ ದಿನಗಳಿಂದ ಇದರ ಪರಿಹಾರಕ್ಕೆ ಮನವಿ ಕೂಡ ಸಲ್ಲಿಕೆಯಾಗಿತ್ತು, ಈಗ ಸರ್ಕಾರ ಇಂಥದೊಂದು ಆಯ್ಕೆ ನೀಡಲು ನಿರ್ಧರಿಸಿದ್ದು ಯೋಜನೆ ಫಲಾನುಭವಿಗಳಿಗೆ ಡಿ ಲಿಂಕ್ (de-Link) ಮಾಡಲು ಅವಕಾಶ ನೀಡಲಾಗಿದೆ. ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಇನ್ನು ಮುಂದೆ ಬಾಡಿಗೆ ಮನೆ ಬದಲಾವಣೆ ಮಾಡಿದರೆ.
ಈ ಸುದ್ದಿ ಓದಿ:-60 ವರ್ಷ ಮೇಲ್ಪಟ್ಟ ಎಲ್ಲರಿಗು ಗುಡ್ ನ್ಯೂಸ್ ಪ್ರತಿ ತಿಂಗಳು 3000 ಪಿಂಚಣಿ ಸಿಗಲಿದೆ.!
ಮನೆ ಬದಲಾಯಿಸಿದ ತಕ್ಷಣ ಹಳೆ ಮನೆಯ ವಿಳಾಸದ ವಿದ್ಯುತ್ ಖಾತೆ ಲಿಂಕ್ ಆಗಿದ್ದನ್ನು ರದ್ದುಪಡಿಸಿ, ಹೊಸ ಮನೆಯ ವಿದ್ಯುತ್ ಖಾತೆಯನ್ನು ಆಧಾರ್ ನೊಂದಿಗೆ ಗೃಹಲಕ್ಷ್ಮಿ ಯೋಜನೆಗಾಗಿ ರೀ ಲಿಂಕ್ (Re-link) ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಇಂಧನ ಇಲಾಖೆಯ ಸ್ವತಃ ಈ ಬಗ್ಗೆ ಘೋಷಿಸಿದೆ.
ಗ್ರಾಹಕರು ತಮ್ಮ ಮನೆ ಬದಲಾಯಿಸಿದ ಹಾಗೂ ಇತರ ಸಂದರ್ಭಗಳಲ್ಲಿ ಈಗಾಗಲೇ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸ್ಥಾವರದಿಂದ ಸೇವೆ ಸ್ಥಗಿತಗೊಳಿಸಿ ಮತ್ತೊಂದು ಸ್ಥಾವರಕ್ಕೆ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲು ಡಿ ಲಿಂಕ್ ಮಾಡಿಕೊಡಬೇಕು.
ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಇಲ್ಲದಿದ್ದರು ದಂಡ ಬೀಳಬಾರದು ಅಂದ್ರೆ ಈ 2 ಕೆಲಸ ಮಾಡಿ.!
ಈ ಸಂಬಂಧ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಇಂಧನ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಬಲವಾದ ಮೂಲಗಳ ಮಾಹಿತಿಯ ಪ್ರಕಾರ ಫೆಬ್ರವರಿ ಅಂತ್ಯದಿಂದಲೇ ಈ ಡಿ-ಲಿಂಕ್ ಆಪ್ಷನ್ ಓಪನ್ ಆಗಲಿದೆ.