ಸಂಪತ್ತಿನ ಗ್ರಹ ಮತ್ತು ಸಂತೋಷದ ಗ್ರಹ ಶುಕ್ರ. ಶುಕ್ರನ ಸ್ಥಾನದಿಂದ ಮತ್ತು ಅನುಗ್ರಹದಿಂದಲೇ ಕುಟುಂಬ ಸೌಖ್ಯ, ಹಣಕಾಸಿನ ಅಭಿವೃದ್ಧಿ, ಮನೆಯಲ್ಲಿ ಶಾಂತಿ, ಸಂತಾನ ಅಭಿವೃದ್ಧಿ, ವ್ಯಾಪಾರ ವ್ಯವಹಾರದಲ್ಲಿ ಲಾಭ ಇವೆಲ್ಲವೂ ಸರಾಗವಾಗಿ ಸಾಗಲು ಸಾಧ್ಯ. ವೃಷಭ ಹಾಗು ತುಲಾ ರಾಶಿಗಳ ಅಧಿಪತಿ ಶುಕ್ರ. ಶುಕ್ರನ ಸಂಚಾರ, ಸ್ಥಾನ ಬದಲಾವಣೆ ದ್ವಾದಶ ರಾಶಿಗಳೆಲ್ಲದರ ಮೇಲೂ ವಿವಿಧ ರೀತಿಯ ಪರಿಣಾಮವನ್ನು ಉಂಟು ಮಾಡುತ್ತದೆ.
ಈಗ ಮಕರ ಸಂಕ್ರಾಂತಿಯ ಸಮಯದಲ್ಲಿ ಶುಕ್ರನು ಸಹ ಫೆಬ್ರವರಿ 12, 2024ರಂದು ಧನು ರಾಶಿಯಿಂದ ಮಕರ ರಾಶಿಗೆ ಸಂಚರಿಸುತ್ತಾನೆ. ಸೂರ್ಯ, ಮಂಗಳ, ಬುಧ ಕೂಡ ಇದೇ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಮಕರ ರಾಶಿಯಲ್ಲಿ ಈ ಎಲ್ಲಾ ಗ್ರಹಗಳು ಒಟ್ಟುಗೂಡುತ್ತಿರುವುದು ಮಕರ ರಾಶಿಯವರಿಗೆ ಅಪಾರವಾದ ಶುಭಫಲ ನೀಡುತ್ತಿದೆ. ಬುಧ ಹಾಗೂ ಶುಕ್ರನ ಮುಂದೆ ಮನೆಯಲ್ಲಿ ಸೇರುತ್ತಿರುವುದನ್ನು ಲಕ್ಷ್ಮಿ ನಾರಾಯಣ ಯೋಗ ಎಂದು ಕೂಡ ಕರೆಯುತ್ತಾರೆ.
ಅದರಲ್ಲಿ ಶುಕ್ರನ ಈ ಸಂಚಾರವು ಕನ್ಯಾ ರಾಶಿಯ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಲಿದೆ ಎನ್ನುವ ಅಂಶವನ್ನು ಇಂದು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಕನ್ಯಾ ರಾಶಿಗೆ ಶುಕ್ರನು 2ನೇ ಮತ್ತು 9ನೇ ಮನೆಯನ್ನು ಆಳುವವರಾಗಿದ್ದಾರೆ. ಈ ಸ್ಥಾನ ಕುಟುಂಬ, ಸಂಪತ್ತು, ಆಧ್ಯಾತ್ಮ, ಧರ್ಮ ಹಾಗೂ ದೂರದ ಪ್ರಯಾಣದ ಸ್ಥಾನವಾಗಿದೆ.
ಈ ಸುದ್ದಿ ಓದಿ:- ಇನ್ಮುಂದೆ ಉಚಿತ ಕರೆಂಟ್ ಬೇಕು ಎಂದರೆ ಮತ್ತೆ ಈ ರೀತಿ ಅರ್ಜಿ ಹಾಕಬೇಕು, ಇಲ್ಲ ಎಂದರೆ ಉಚಿತ ಕರೆಂಟ್ ಕ್ಯಾನ್ಸಲ್.!
ಇದರ ಜೊತೆಗೆ ಮಕರ ರಾಶಿಯಲ್ಲಿ ಶುಕ್ರನ ಸಂಕ್ರಮಣವಾಗಿರುವುದು ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ಆಸಕ್ತಿಯನ್ನು ಇಮ್ಮಡಿಗೊಳಿಸುತ್ತದೆ, ಕನ್ಯಾ ರಾಶಿಯವರು ಈ ಆಸಕ್ತಿಗಳನ್ನು ಪೋಷಿಸುವ ಮೂಲಕ ಬಹಳ ಸಮಾಧಾನವನ್ನು ಪಡೆದುಕೊಂಡು ಸಂತೋಷದಿಂದ ಇರುತ್ತಾರೆ.
ಪ್ರೀತಿ ಪ್ರಣಯ ಹಾಗೂ ಸಂತಾನದ 5ನೇ ಮನೆಯಲ್ಲಿ ಶುಕ್ರನ ಸಂಕ್ರಮಣವಾಗಿರುವುದು ಸ್ವಂತ ಉದ್ಯೋಗ ಆರಂಭಿಸುವ, ಈಗಾಗಲೇ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡಿರುವ ಕನ್ಯಾ ರಾಶಿಯವರಿಗೆ ಹೆಚ್ಚಿನ ಆರ್ಥಿಕ ಲಾಭ ತರುತ್ತದೆ ಎನ್ನುವ ಸೂಚನೆಯನ್ನು ಕೂಡ ಕೊಡುತ್ತದೆ.
ಈ ವರ್ಷ ಕನ್ಯಾ ರಾಶಿಯವರಿಗೆ ಶುಕ್ರನ ಈ ಪ್ರಭಾವದಿಂದ ಹಣಕಾಸಿನ ವಿಚಾರದಲ್ಲಿ ಬಹುತೇಕ ಯಾವುದೇ ರೀತಿಯ ತೊಡಕಗಳು ಬರುವುದಿಲ್ಲ ಎಂದು ಬಲವಾಗಿ ಹೇಳಬಹುದು ಮತ್ತು ತಮ್ಮ ನಿರೀಕ್ಷೆಗಳಿಗೂ ಮೀರಿ ಹೆಚ್ಚು ಆದಾಯವನ್ನು ಗಳಿಸುತ್ತಾರೆ ಎಂದು ಕೂಡ ಹೇಳಬಹುದು. ಉದ್ಯೋಗಸ್ಥರಾಗಿದ್ದರೂ ಕೂಡ ತಮ್ಮ ಶ್ರಮದ ಹಾಗೂ ಅದೃಷ್ಟದ ಬಲದಿಂದ ಈ ಸಮಯದಲ್ಲಿ ಬಡ್ತಿಗಳನ್ನು ಹೊಂದುವ ಅಥವಾ ತಮ್ಮ ಇಚ್ಛೆಯ ಸ್ಥಳಕ್ಕೆ ವರ್ಗಾವಣೆ ಆಗುವ ಎಲ್ಲ ಸಾಧ್ಯತೆಗಳನ್ನು ಕೂಡ ಪಡೆದಿದ್ದಾರೆ.
ಈ ಸುದ್ದಿ ಓದಿ:- ಮದುವೆ ನೋಂದಣಿ ಪ್ರಮಾಣ ಪತ್ರಗೆ ಅರ್ಜಿಸಲ್ಲಿಸುವ ವಿಧಾನ.!
ವಿದೇಶಿ ಪಯಾಣದ ಆಸಕ್ತಿ ಇದ್ದವರಿಗೆ ಇದು ಕೂಡ ಫಲಿಸಲಿದೆ. ಹೂಡಿಕೆಯ ವಿಷಯದಲ್ಲೂ ಕೂಡ ಲಾಭವನ್ನು ತರಲಿದೆ. ಶುಕ್ರನ ಕುಟುಂಬ ಸೌಖ್ಯವನ್ನು ಕೂಡ ಪ್ರತಿಪಾದಿಸುವುದರಿಂದ ಗೃಹಶಾಂತಿ ಇರುತ್ತದೆ ಮಡದಿ ಹಾಗೂ ಮಕ್ಕಳೊಂದಿಗೆ ಬಹಳ ಸಂತೋಷದ ಸಮಯವನ್ನು ಕಳೆಯುತ್ತೀರಿ ಪ್ರೀತಿ ಪ್ರೇಮದ ವಿಚಾರದಲ್ಲೂ ಕೂಡ ಬಹಳ ಉತ್ತಮ ಬದಲಾವಣೆಗಳಾಗುತ್ತವೆ.
ಸಂತಾನ ವಿಳಂಬ ವಿವಾಹ ವಿಳಂಬ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸ್ಥಳೀಯರಿಗೆ ಶುಕ್ರನ ಈ ಸಂಚಾರದಿಂದ ಬದಲಾವಣೆಯ ಪರ್ವ ಆರಂಭವಾಗುತ್ತಿದೆ ಎಂದು ನಂಬಬಹುದು ಮತ್ತು ಕೆಲ ದಿನಗಳಲ್ಲಿ ಅವರು ಈ ಬಗ್ಗೆ ಶುಭ ಸಮಾಚಾರವನ್ನು ಕೂಡ ಕೇಳಲಿದ್ದಾರೆ.
ಆದರೆ ಈ ಅವಧಿಯಲ್ಲಿ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗೆ ಎಚ್ಚರ ಇರಲಿ, ಮುಂದಿನ ತಿಂಗಳು ಮಾರ್ಚ್ 06, 2024ರವರೆಗೂ ಕೂಡ ಇದೇ ಪ್ರಭಾವ ಮುಂದುವರೆಯಲಿದೆ. ಇನ್ನು ಹೆಚ್ಚಿನ ಶುಭ ಫಲಕ್ಕಾಗಿ ಸದಾ ಪರ್ಸ್ ನಲ್ಲಿ ಬೆಳ್ಳಿಯ ಯಾವುದಾದರೂ ಒಂದು ವಸ್ತುವನ್ನು ಇಟ್ಟುಕೊಂಡಿರಿ.