Home Useful Information ವಸಂತ ಪಂಚಮಿ ದಿನ ನಿಮ್ಮ ಮಕ್ಕಳಿಂದ ತಪ್ಪದೇ ಈ ಮಂತ್ರವನ್ನು 11 ಬಾರಿ ಹೇಳಿಸಿ. ಏಕಾಗ್ರತೆ, ಜ್ಞಾಪಕ ಶಕ್ತಿ, ಓದಿನಲ್ಲಿ ಆಸಕ್ತಿ ಎಲ್ಲವೂ ಬರುತ್ತದೆ.!

ವಸಂತ ಪಂಚಮಿ ದಿನ ನಿಮ್ಮ ಮಕ್ಕಳಿಂದ ತಪ್ಪದೇ ಈ ಮಂತ್ರವನ್ನು 11 ಬಾರಿ ಹೇಳಿಸಿ. ಏಕಾಗ್ರತೆ, ಜ್ಞಾಪಕ ಶಕ್ತಿ, ಓದಿನಲ್ಲಿ ಆಸಕ್ತಿ ಎಲ್ಲವೂ ಬರುತ್ತದೆ.!

0
ವಸಂತ ಪಂಚಮಿ ದಿನ ನಿಮ್ಮ ಮಕ್ಕಳಿಂದ ತಪ್ಪದೇ ಈ ಮಂತ್ರವನ್ನು 11 ಬಾರಿ ಹೇಳಿಸಿ. ಏಕಾಗ್ರತೆ, ಜ್ಞಾಪಕ ಶಕ್ತಿ,  ಓದಿನಲ್ಲಿ ಆಸಕ್ತಿ ಎಲ್ಲವೂ ಬರುತ್ತದೆ.!

 

ಫೆಬ್ರವರಿ 14ನೇ ತಾರೀಕು ವಸಂತ ಪಂಚಮಿ. ವಸಂತ ಪಂಚಮಿ ಎಂದರೆ ವಸಂತ ಋತುವು ಆರಂಭವಾಗುವ ದಿನವಾಗಿದೆ, ಈ ದಿನ ತಾಯಿ ಸರಸ್ವತಿಗೆ ವಿಶೇಷವಾದ ದಿನವಾಗಿದೆ. ವಸಂತ ಪಂಚಮಿಯ ಈ ದಿನ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರು, ಶಿಕ್ಷಕರು, ಸಂಗೀತ-ಸಾಹಿತ್ಯ ಈ ರೀತಿ ಕಲೆಗೆ ಸಂಬಂಧಪಟ್ಟ ಹಾಗೆ.

ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ತಾಯಿ ವಿದ್ಯಾ ದೇವತೆ ಸರಸ್ವತಿ ಮಾತೆಯನ್ನು ಆರಾಧಿಸುವುದಕ್ಕೆ ಮತ್ತು ವರ್ಷ ಪೂರ್ತಿ ಅವರ ಕೃಪಾಕಟಾಕ್ಷವನ್ನು ಕೋರಿಕೊಳ್ಳುವುದಕ್ಕೆ ಅತ್ಯಂತ ಶುಭ ದಿನವಾಗಿದೆ. ಈ ಒಂದು ದಿನದಂದು ಮಕ್ಕಳ ವಿದ್ಯಾಭ್ಯಾಸ ಆರಂಭ ಮಾಡಲು ಪೋಷಕರು ಕಾಯುತ್ತಿರುತ್ತಾರೆ.

ಅಕ್ಷರಭ್ಯಾಸ ಆರಂಭ ಮಾಡುವುದಕ್ಕೆ ಮಾತ್ರವಲ್ಲದೆ ಈಗಾಗಲೇ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದರು ಕೂಡ ಅವರಿಗೆ ಓದಿನಲ್ಲಿ ಆಸಕ್ತಿ ಇಲ್ಲ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬರುತ್ತಿವೆ, ಜ್ಞಾಪಕ ಶಕ್ತಿ ಇಲ್ಲ, ಏಕಾಗ್ರತೆ ಇಲ್ಲ, ಶಿಸ್ತು ಇಲ್ಲ ಈ ರೀತಿ ಸಮಸ್ಯೆಗಳು ಇದ್ದರೆ ಅಥವಾ ಮಕ್ಕಳು ಇನ್ನೂ ಉತ್ತಮವಾಗಿ ಓದಬೇಕು ಎಂದು ಆಸೆಪಟ್ಟರೆ.

ಈ ಸುದ್ದಿ ಓದಿ:- ಶುಕ್ರನ ರಾಶಿ ಪರಿವರ್ತನೆ, ಕನ್ಯಾ ರಾಶಿಯಲ್ಲಿ 06 ಮಾರ್ಚ್ 2024 ರವರೆಗೆ ಭಾರಿ ಬದಲಾವಣೆ.!

ಈ ಮೇಲೆ ತಿಳಿಸಿದಂತೆ ಹಾಡುಗಾರಿಕೆ ನೃತ್ಯ ಕಲೆ ಕರಕುಶಲತೆ ಅಥವಾ ಇನ್ಯಾವುದೇ ತಾಯಿ ಕಲಾದೇವತೆ ಶಾರದೆಯ ಕೃಪ ಕಟಾಕ್ಷದಿಂದ ದೊರಕುವ ಯಾವುದೇ ವಿದ್ಯೆಯನ್ನು ಒಲಿಸಿಕೊಳ್ಳಬೇಕು ಎಂದರು ಕೂಡ ಈ ದಿನದಂದು ಸರಸ್ವತಿ ಮಾತೆಗೆ ಆರಾಧನೆ ಮಾಡುವುದರಿಂದ ಹೆಚ್ಚಿನ ಆಶೀರ್ವಾದ ದೊರಕುತ್ತದೆ ಎನ್ನುವುದು ಪುರಾಣಗಳಿಂದ ನಂಬಿಕೊಂಡು ಬಂದಿರುವ ನಂಬಿಕೆ ಆಗಿದೆ.

ಈ ದಿನದಂದು ಏನು ಮಾಡಲು ಸಾಧ್ಯವಾಗದೇ ಇದ್ದರೂ ಕೂಡ ನಾವು ಹೇಳುವ ಸರಳ ವಿಧಾನದಲ್ಲಿ ತಾಯಿ ಸರಸ್ವತಿ ಮಾತೆಯನ್ನು ಆರಾಧಿಸಿ ಒಂದು ವಿಶೇಷ ಮಂತ್ರವನ್ನು 11 ಬಾರಿ ಪಠಿಸಿದರು ಕೂಡ ನಿಮಗೆ ಸಂಪೂರ್ಣ ಫಲ ದೊರೆಯುತ್ತದೆ.

ಅಮವಾಸ್ಯೆ ಮುಗಿದ ಐದನೇ ದಿನಕ್ಕೆ ಬರುವ ಈ ವಸಂತ ಪಂಚಮಿ ದಿನದಂದು ಬೆಳಗ್ಗೆ ಬೇಗ ಎದ್ದು ಸ್ಥಾನ ಮಾಡಿ ಹಳದಿ ಬಣ್ಣದ ಅಥವಾ ಬಿಳಿಯ ಬಣ್ಣದ ಬಟ್ಟೆಯುಟ್ಟು ತಾಯಿ ಸರಸ್ವತಿ ಮಾತೆಗೆ ಉತ್ತರಾಭಿಮುಖವಾಗಿ ಅಥವಾ ಪೂರ್ವಾಭಿಮುಖವಾಗಿ ಕುಳಿತು ಹಳದಿ ಹೂವುಗಳನ್ನು ಅರ್ಪಿಸಿ ಹಳದಿ ಬಣ್ಣದ ಫಲ ಹಾಗೂ ಹಳದಿ ಬಣ್ಣದ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಮಾಡಿ ಭಕ್ತಿಯಿಂದ ಬೇಡಿಕೊಳ್ಳುವುದರಿಂದ ತಾಯಿ ಸರಸ್ವತಿ ಆಶೀರ್ವಾದ ದೊರೆಯುತ್ತದೆ.

ಈ ಸುದ್ದಿ ಓದಿ:- ಇನ್ಮುಂದೆ ಉಚಿತ ಕರೆಂಟ್ ಬೇಕು ಎಂದರೆ ಮತ್ತೆ ಈ ರೀತಿ ಅರ್ಜಿ ಹಾಕಬೇಕು, ಇಲ್ಲ ಎಂದರೆ ಉಚಿತ ಕರೆಂಟ್ ಕ್ಯಾನ್ಸಲ್.!

ಮತ್ತು ಜೀವದಲ್ಲಿ ಶಿಸ್ತಿನ ಸಮೇತವಾಗಿ ಬಹಳ ವಿಶೇಷ ಬದಲಾವಣೆಗಳು ಕೂಡ ಆಗುತ್ತವೆ ಮತ್ತು ಈ ಪೂಜೆ ಜೊತೆಗೆ ತಪ್ಪದೆ ಈ ಕೆಳಗೆ ನಾವು ತಿಳಿಸುವ ಎರಡು ಮಂತ್ರಗಳಲ್ಲಿ ಯಾವುದಾದರೂ ಒಂದು ಮಂತ್ರವನ್ನು ಕನಿಷ್ಠ 11 ಬಾರಿ ಅಥವಾ 108 ಬಾರಿ ಭಕ್ತಿಯಿಂದ ಸರಸ್ವತಿ ಮಾತೆಯನ್ನು ಮನಸ್ಸಿನಲ್ಲಿ ನೆನೆಯುತ್ತಾ ಪಠಿಸಬೇಕು.

ವಸಂತ ಪಂಚಮಿ ದಿನ ಈ ರೀತಿ ಮಾಡಿದರೆ ತಾಯಿ ಪ್ರಸನ್ನಳಾಗಿ ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ. ಇದು ಅನೇಕರ ಜೀವನದಲ್ಲಿ ನಿಜವು ಕೂಡ ಆಗಿದೆ. ಈ ದಿನದಂದು ಮಾತ್ರವಲ್ಲದೆ ಓದಿಗೆ ಕುಳಿತುಕೊಳ್ಳುವ ಮುನ್ನ ಅಥವಾ ಸಂದರ್ಶನಗಳಿಗೆ ಹೋಗುವಾಗ ಅಥವಾ ಯಾವುದೇ ಸ್ಪರ್ಧೆಗಳಿಗೆ ಹೋಗುವಾಗ ಕೂಡ ಈ ಮಂತ್ರವನ್ನು 11 ಬಾರಿ ಅಥವಾ 16, 21 ಅಥವಾ 108 ಬಾರಿ ಪಟಣೆ ಮಾಡುವುದರಿಂದ ಖಂಡಿತವಾಗಿಯೂ ನಿರೀಕ್ಷಿತ ಫಲ ಸಿಗುತ್ತದೆ ಆ ಮಂತ್ರಗಳು ಹೀಗಿದೆ.

ಸರಸ್ವತಿ ಮಂತ್ರ:-
ಸರಸ್ವತಿ ಮಹಾಭಾಗೇ ವಿದ್ಯೆ ಕಮಾಲೋಚನೆ| ವಿದ್ಯಾರೂಪೇ ವಿಶಾಲಾಕ್ಷಿ ವಿದ್ಯಾದೇಹಿ ನಮೋಸ್ತುತೆ ||
ಸರಸ್ವತಿ ಬೀಜ ಮಂತ್ರ:- ಓಂ ಕ್ರೀಂ ಐಂ ಕ್ರೀಂ ಸರಸ್ವತೈ ನಮಃ

LEAVE A REPLY

Please enter your comment!
Please enter your name here