ವಾಸ್ತುಶಾಸ್ತ್ರ ಎನ್ನುವುದು ಜನರ ನಂಬಿಕೆಯ ಜ್ಯೋತಿಷ್ಯವಾಗಿದೆ. ಈ ಕಾರಣಕ್ಕಾಗಿಯೇ ಇದು ಮುನ್ನೆಲೆಗೂ ಬಂದಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಹಾಗೂ ಮನೆಯಲ್ಲಿರುವ ವಸ್ತುಗಳು ಆ ಮನೆಯಲ್ಲಿ ವಾಸಿಸುವವರ ಸಾಮಾಜಿಕ ಆರ್ಥಿಕ ಮತ್ತು ಕೌಟುಂಬಿಕ ಜೀವನದ ಮೇಲೆ ಬಹಳ ಆಳವಾದ ಪ್ರಭಾವವನ್ನು ಬೀರುತ್ತವೆ, ವರ್ತಮಾನ ಹಾಗೂ ಭವಿಷ್ಯವನ್ನು ನಿರ್ಧರಿಸುತ್ತವೆ.
ಇದನ್ನು ನಂಬಿ ಅನೇಕರು ತಮ್ಮ ಗ್ರಹಗಳಲ್ಲಿ ಇದ್ದ ಈ ವಾಸ್ತುದೋಷಗಳನ್ನು ಸರಿಪಡಿಸಿಕೊಂಡ ನಂತರ ವ್ಯಾಪಾರ ವ್ಯವಹಾರದಲ್ಲಿದ್ದ ಸಮಸ್ಯೆಗಳು ಪರಿಹಾರವಾಗಿರುವುದು ಕುಟುಂಬದಲ್ಲಿದ್ದ ತೊಂದರೆಗಳು ನಿವಾರಣೆಯಾಗಿ ನೆಮ್ಮದಿಯ ಜೀವನ ನಡೆಸಿರುವ ಉದಾಹರಣೆಗಳು ಕೂಡ ಇವೆ.
ಹಾಗಾಗಿ ಇಂದು ಈ ಅಂಕಣದಲ್ಲಿ ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಕೆಲ ಅಂಶಗಳನ್ನು ತಿಳಿಸುತ್ತಿದ್ದೇವೆ. ಇವುಗಳನ್ನು ಅನುಸರಿಸಿ ನಡೆದರೆ ನಿಮ್ಮ ಜೀವನದ ಕೆಲ ಸಮಸ್ಯೆಗಳು ಪರಿಹಾರ ಆಗುವುದು ಗ್ಯಾರೆಂಟಿ.
* ಮನೆ ಮುಖ್ಯ ದ್ವಾರದ ಮುಂದೆ ಕೆಲವು ವಸ್ತುಗಳನ್ನು ಇಡುವುದು ಬಹಳ ಕೆಟ್ಟದ್ದು, ಇದು ಹಣಕಾಸಿನ ಪರಿಸ್ಥಿತಿಯನ್ನು ಹದಗೆಡಿಸಿ ಸಾಲ ಹೆಚ್ಚಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಈ ಸುದ್ದಿ ಓದಿ:- ವಸಂತ ಪಂಚಮಿ ದಿನ ನಿಮ್ಮ ಮಕ್ಕಳಿಂದ ತಪ್ಪದೇ ಈ ಮಂತ್ರವನ್ನು 11 ಬಾರಿ ಹೇಳಿಸಿ. ಏಕಾಗ್ರತೆ, ಜ್ಞಾಪಕ ಶಕ್ತಿ, ಓದಿನಲ್ಲಿ ಆಸಕ್ತಿ ಎಲ್ಲವೂ ಬರುತ್ತದೆ.!
* ಮನೆಯ ಉತ್ತರ ದಿಕ್ಕಿನಲ್ಲಿ ದೋಷಗಳು ಇದ್ದಾಗಲೂ ಕೂಡ ಸಾಲ ಹೆಚ್ಚಾಗುತ್ತದೆ. ಉತ್ತರ ದಿಕ್ಕು ದೇವಮೂಲೆ, ಈ ದಿಕ್ಕಿನಲ್ಲಿ ಭಾರವಾದ ಪೀಠೋಪಕರಣಗಳನ್ನು ಇಡಬಾರದು. ಉತ್ತರ ದಿಕ್ಕು ಯಾವಾಗಲೂ ಮುಕ್ತವಾಗಿರಬೇಕು, ಉತ್ತರ ದಿಕ್ಕಿನ ಗೋಡೆಗೆ ಹಾನಿ ಆಗಬಾರದು ಮತ್ತು ಮನೆಯಲ್ಲಿ ಉತ್ತರ ದಿಕ್ಕು ಎದುರಿನ ದಿಕ್ಕಿಗಿಂತ ದೊಡ್ಡ ಗಾತ್ರದಲ್ಲಿ ದೊಡ್ಡದಾಗಿದ್ದರೂ ಕೂಡ ದೋಷ ಎಂದು ಹೇಳಲಾಗುತ್ತದೆ, ಮನೆ ಕಟ್ಟುವಾಗ ಉತ್ತರ ದಿಕ್ಕನ್ನು ದೊಡ್ಡದಾಗಿಸಿ ದಕ್ಷಿಣ ದಿಕ್ಕನ್ನು ಖಾಲಿ ಬಿಡುವುದರಿಂದ ಕೂಡ ವಾಸ್ತುದೋಷಗಳಾಗುತ್ತವೆ.
* ನೈರುತ್ಯ ದಿಕ್ಕಿನಲ್ಲಿ ಏನಾದರೂ ವಾಟರ್ ಟ್ಯಾಂಕ್ ಇದ್ದರೆ ಹೆಚ್ಚು ಸಾಲ ಮಾಡಬೇಕಾಗುತ್ತದೆ.
* ಮನೆಯ ಈಶಾನ್ಯ ದಿಕ್ಕಿನಲ್ಲಿ ಹೆಚ್ಚಿನ ಶಾಖವನ್ನು ಹೊರಸೂಸುವಂತಹ ಯಂತ್ರಗಳನ್ನು ಇಟ್ಟಿದ್ದರೆ ಅದೊಂದು ದೊಡ್ಡ ನ್ಯೂನತೆ ಈ ಕಾರಣದಿಂದ ಕೆಲಸದಲ್ಲಿ ಹಾಗೂ ವ್ಯಾಪಾರದಲ್ಲೂ ಕೂಡ ಅಡಚಣೆಗಳಾಗುತ್ತವೆ.
ಈಶಾನ್ಯದಿಕ್ಕಿನಲ್ಲಿ ಅಸ್ತವ್ಯಸ್ತತೆ, ಕಸದ ಬುಟ್ಟಿ, ಶೌಚಾಲಯ, ಒಳ ಚರಂಡಿ ಗುಂಡಿ, ಪೊರಕೆ ಇಂತಹ ವಸ್ತುಗಳು ಇದ್ದರೆ ಅವು ನಿಮ್ಮ ಆರ್ಥಿಕಾಭಿವೃದ್ಧಿ ಮೇಲೆ ಪರಿಣಾಮ ಬೀರುತ್ತವೆ, ನೀವು ಸಾಲದ ಸುಳಿಗೆ ಸಿಲುಕುತ್ತೀರಿ ಬದಲಾಗಿ ಈಶಾನ್ಯ ದಿಕ್ಕಿನಲ್ಲಿ ಪೂಜಾ ಕೊಠಡಿ ಅಥವಾ ಧ್ಯಾನದ ಕೊಠಡಿ ಇದ್ದರೆ ಇದು ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದಕ್ಕೆ ಸಹಕಾರಿಯಾಗಿರುತ್ತದೆ.
ಈ ಸುದ್ದಿ ಓದಿ:-ಶುಕ್ರನ ರಾಶಿ ಪರಿವರ್ತನೆ, ಕನ್ಯಾ ರಾಶಿಯಲ್ಲಿ 06 ಮಾರ್ಚ್ 2024 ರವರೆಗೆ ಭಾರಿ ಬದಲಾವಣೆ.!
* ಕೆಲಸಗಾರರು ತಮ್ಮ ಮೇಲಾಧಿಕಾರಿಗಳ ಹಾಗೂ ಸಹೋದ್ಯೋಗಿಗಳ ನಡುವೆ ಭಿನ್ನಾಭಿಪ್ರಾಯ ಕಿರಿಕಿರಿ ಹೊಂದಲು ಅಥವಾ ವ್ಯಾಪಾರಸ್ಥರಿಗೆ ತಮ್ಮ ಕ್ಲೈಂಟ್ ಜೊತೆ ಮನಸ್ತಾಪವಾಗಲು ವಾಟರ್ ಟ್ಯಾಂಕ್, ನೀರಿನ ತೊಟ್ಟಿ ತಪ್ಪಾದ ದಿಕ್ಕಿನಲ್ಲಿ ಇರುವುದೇ ಕಾರಣವಾಗಿರುತ್ತದೆ. ಆಗ್ನೇಯ ದಿಕ್ಕಿನಲ್ಲಿ ನೀವೇನಾದರೂ ವಾಟರ್ ಟ್ಯಾಂಕ್ ಇಟ್ಟಿದ್ದರೆ ನಿಮಗೆ ಇಂತಹ ಸಮಸ್ಯೆಗಳು ಗ್ಯಾರಂಟಿ ಏಕೆಂದರೆ ಆಗ್ನೇಯ ದಿಕ್ಕನ್ನು ಅಗ್ನಿ ಮೂಲೆ ಎಂದು ಕರೆಯಲಾಗುತ್ತದೆ, ನೀರು ಮತ್ತು ಅಗ್ನಿಷತ್ತುಗಳಾಗಿರುವುದರಿಂದ ಈ ರೀತಿ ದೋಷಗಳು ಉಂಟಾಗುತ್ತವೆ.
* ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಎಲ್ಲಾ ವಸ್ತುಗಳು ಕೂಡ ಸರಿಯಾದ ಸ್ಥಳದಲ್ಲಿಯೇ ಇರಬೇಕು. ನೀವು ತಪ್ಪಾದ ಜಾಗದಲ್ಲಿ ಕಸದ ಬುಟ್ಟಿ ಇಡುವುದರಿಂದ ಕೂಡ ನಿಮ್ಮ ಅದೃಷ್ಟ ಕೆಡುತ್ತದೆ, ಮನೆಯ ಮುಖ್ಯದ್ವಾರದ ಬಳಿ ಯಾವುದೇ ಕಾರಣಕ್ಕೂ ಕಸದ ಬುಟ್ಟಿ ಇಡಬೇಡಿ. ತಾಯಿ ಮಹಾಲಕ್ಷ್ಮಿ ಕೋಪಕ್ಕೆ ಗುರಿಯಾಗುತ್ತೀರಿ, ಸಮಾಜದಲ್ಲಿ ನಿಮ್ಮ ಗೌರವ ಕಡಿಮೆ ಆಗುತ್ತದೆ ಇನ್ನಿತರ ಸಮಸ್ಯೆಗಳಾಗುತ್ತವೆ. ಆದಕಾರಣ ಮನೆಯ ಮುಖ್ಯದ್ವಾರವನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಿ.
* ವಾಸ್ತು ಶಾಸ್ತ್ರದ ಪ್ರಕಾರ ಹಾಲು, ಮೊಸರು, ಉಪ್ಪು, ಧಾನ್ಯ ಇವುಗಳನ್ನು ಸಂಜೆಯಾದ ಮೇಲೆ ದಾನ ಮಾಡಬಾರದು
* ಶೌಚಾಲಯದಲ್ಲಿ ಅಥವಾ ಸ್ಥಾನದ ಮನೆಯಲ್ಲಿ ಬಕೆಟ್ ಗಳು ಖಾಲಿ ಇರಬಾರದು ಯಾವಾಗಲೂ ಒಂದು ಬಕೆಟ್ ನೀರು ತುಂಬಿದಂತೆ ಇರಬೇಕು. ಹಾಗೆ ನಮ್ಮ ವ್ಯಾಲೆಟ್ ಮತ್ತು ಬೀರುವನ್ನು ಖಾಲಿ ಇಡಬಾರದು, ಸ್ವಲ್ಪ ಮೊತ್ತದ ಕ್ಯಾಶ್ ನ್ನು ನಮ್ಮ ಜೊತೆಗೆ ಯಾವಾಗಲೂ ಇಟ್ಟುಕೊಂಡಿರಬೇಕು.