ಬಂಗಾರ ಕೊಂಡುಕೊಂಡು ಮನೆಗೆ ತರಬೇಕು ಬಂಗಾರದ ಆಭರಣಗಳನ್ನು ಧರಿಸಬೇಕು ಎಂದು ಪ್ರತಿಯೊಬ್ಬರಿಗೂ ಕೂಡ ಆಸೆ ಇರುತ್ತದೆ. ಕಷ್ಟಪಟ್ಟು ದುಡಿದು ಹಣ ಕೂಡಿಟ್ಟು ಚಿನ್ನವನ್ನು ಮನೆಗೆ ತರುತ್ತಾರೆ ಆದರೆ ಯಾವುದಾದರೂ ಒಂದು ಕಷ್ಟದ ಸಮಯದಲ್ಲಿ ಹಣ ಕೈಯಲ್ಲಿ ಇರದೆ ಇದ್ದಾಗ ಬೇರೆ ಮೂಲಗಳು ತೋಚದೆ ಇದ್ದಾಗ ಗಮನ ಹೋಗುವುದೇ ಚಿನ್ನದ ಕಡೆಗೆ.
ಕ್ಷಣ ಕಾಲವು ಕೂಡ ಯೋಚಿಸದೆ ಅಥವಾ ಬಹಳ ದುಃ’ಖ ಪಟ್ಟು ಆ ಬಂಗಾರವನ್ನು ತೆಗೆದುಕೊಂಡು ಹೋಗಿ ಅಡ ಇಟ್ಟುಬಿಡುತ್ತಾರೆ. ಹೀಗೆ ಒಮ್ಮೆ ಮನೆಯಿಂದ ನಮ್ಮ ಬಂಗಾರ ಆಚೆ ಹೋದರೆ ಮತ್ತೆ ಅದು ಮನೆಗೆ ಬರುವ ಸಾಧ್ಯತೆಗಳು ಕಡಿಮೆ ಅನೇಕರ ಜೀವನದಲ್ಲಿ ಈ ರೀತಿ ನಡೆದಿದೆ ಯಾಕೆಂದರೆ ಬಂಗಾರವು ತಾಯಿ ಮಹಾಲಕ್ಷ್ಮಿಯ ಸ್ವರೂಪ.
ನಮ್ಮ ಮನೆಗೆ ಬಂದ ಮೇಲೆ ಜೋಪಾನವಾಗಿ ಕಾಯ್ದುಕೊಳ್ಳಬೇಕು ನಾವು ಅಂತಹ ಪರಿಸ್ಥಿತಿಯಲ್ಲಿ ಬೇರೆ ದಾರಿ ಕಾಣದೆ ಆತುರದ ನಿರ್ಧಾರ ಕೈಗೊಂಡು ಚಿನ್ನವನ್ನು ಆಚೆ ತೆಗೆದುಕೊಂಡು ಹೋಗಿ ಬಿಟ್ಟಿರುತ್ತೇವೆ. ಈ ರೀತಿ ಒಮ್ಮೆ ಮನೆಗೆ ಬಂದರೆ ಮತ್ತೆ ಮತ್ತೆ ಹೋಗುತ್ತಾ ಇರುವುದು ಕೊನೆಗೆ ಒಮ್ಮೆ ಹೊರಟೇ ಹೋಗುವುದು.
ಈ ಸುದ್ದಿ ಓದಿ:- ಮನೆ ಮುಖ್ಯದ್ವಾರದ ಎದುರು ಈ ವಸ್ತುಗಳು ಇದ್ದರೆ ಖಂಡಿತವಾಗಿಯೂ ಸಾಲ ತೀರುವುದಿಲ್ಲ.! ಸಾಲ ತೀರಬೇಕು ಅಂದ್ರೆ ಈ ಸಲಹೆ ಪಾಲಿಸಿ.!
ಹೀಗಾಗಬಾರದೆಂದು ನೀವು ಈಗಲೇ ಅನೇಕ ಪ್ರಾರ್ಥನೆ ಮಾಡಿದ್ದರೂ ಕೂಡ ನೀವು ಏನೇ ಪ್ರಯತ್ನ ಪಟ್ಟರು ಕೂಡ ಇದನ್ನು ತಪ್ಪಿಸಲು ಆಗುತ್ತಿಲ್ಲ ಎಂದರೆ ನೀವು ಅಡ ಇಟ್ಟಿರುವ ಚಿನ್ನವನ್ನು ಅದು ಇರುವ ಜಾಗಕ್ಕೆ ಬರುವಂತೆ ಮಾಡುವ ಶಕ್ತಿ ಒಂದು ಸರಳ ಆಚರಣೆಗೆ ಇದೆ. ಬಹಳ ನಂಬಿಕೆಯಿಂದ ದೃಢ ಮನಸ್ಸಿನಿಂದ ನೀವು ಇದನ್ನು ಮಾಡಿದ್ದಲ್ಲಿ ಖಂಡಿತವಾಗಿ ನಿಮ್ಮ ಚಿನ್ನ ಮರಳಿ ಮನೆಗೆ ಬರುತ್ತದೆ.
ನೀವು ಮಾಡಬೇಕಾಗಿರುವುದು ಇಷ್ಟೇ. ಪ್ರತಿ ಶನಿವಾರದಂದು ಮೂರು ಶನಿವಾರಗಳವರೆಗೆ ಈ ಆಚರಣೆ ಮಾಡಬೇಕು. ನೀವು ಶನಿವಾರ ಬೆಳಿಗ್ಗೆ ಅಥವಾ ಶನಿವಾರ ಸಂಜೆ ಆಂಜನೇಯ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಆಂಜನೇಯನನ್ನು ನಿಮ್ಮ ಹಣಕಾಸಿನ ಸಮಸ್ಯೆ ಪರಿಹಾರ ಮಾಡುವಂತೆ ಪ್ರಾರ್ಥಿಸಿಕೊಳ್ಳಬೇಕು ಮತ್ತು ನೀವು ಅಡವಿಟ್ಟಿರುವ ಚಿನ್ನವು ಮನೆಗೆ ಬರುವಂತೆದಯೆ ತೋರು ಎಂದು ಕೇಳಿಕೊಳ್ಳಬೇಕು.
ಆಂಜನೇಯನ ದೇವಸ್ಥಾನದಲ್ಲಿ ಪ್ರಸಾದವಾಗಿ ತುಳಸಿಯನ್ನು ಕೊಡುತ್ತಾರೆ ಈ ತುಳಸಿ ಎಲೆಯನ್ನು ಕೆಲವರು ಗಿಡದ ಬುಡಗಳಿಗೆ ಹಾಕುತ್ತಾರೆ, ಕೆಲವರು ಮುಡಿದುಕೊಳ್ಳುತ್ತಾರೆ, ಕೆಲವರು ಸೇವಿಸುತ್ತಾರೆ. ಇನ್ನು ಮುಂದೆ ಈ ರೀತಿ ಮಾಡುವ ಮುನ್ನ ಸ್ವಲ್ಪ ತುಳಸಿ ಎಲೆಯನ್ನು ತೆಗೆದುಕೊಂಡು ಈ ತುಳಸಿ ಎಲೆ ಜೊತೆಗೆ 5 ಚೆನ್ನಾಗಿರುವ ಏಲಕ್ಕಿ ಕಾಯಿಗಳನ್ನು ತೆಗೆದುಕೊಳ್ಳಿ ಮತ್ತೆ ಎರಡು ಪಚ್ಚಕರ್ಪೂರ ತೆಗೆದುಕೊಳ್ಳಿ.
ಈ ಸುದ್ದಿ ಓದಿ:-ವಸಂತ ಪಂಚಮಿ ದಿನ ನಿಮ್ಮ ಮಕ್ಕಳಿಂದ ತಪ್ಪದೇ ಈ ಮಂತ್ರವನ್ನು 11 ಬಾರಿ ಹೇಳಿಸಿ. ಏಕಾಗ್ರತೆ, ಜ್ಞಾಪಕ ಶಕ್ತಿ, ಓದಿನಲ್ಲಿ ಆಸಕ್ತಿ ಎಲ್ಲವೂ ಬರುತ್ತದೆ.!
ಒಂದು ಶುದ್ಧವಾದ ಬಟ್ಟೆಗೆ ಈ ಎಲ್ಲವನ್ನು ಹಾಕಿ ಗಂಟುಕಟ್ಟಿ ಅದನ್ನು ನೀವು ಯಾವ ಬಾಕ್ಸ್ ನಿಂದ ಬಂಗಾರದ ಒಡವೆ ತೆಗೆದುಕೊಂಡು ಹೋಗಿ ಅಡ ಇಟ್ಟಿದ್ದೀರ ಆ ಬಾಕ್ಸ್ ಒಳಗೆ ಹಾಕಿ ಅಥವಾ ನೀವು ಬೀರುವಿನಿಂದ ತೆಗೆದು ಕೊಂಡು ಹೋಗಿದ್ದರೆ ಅಲ್ಲೇ ಹಾಕಿ ಈ ರೀತಿ ಯಾವ ಸ್ಥಳದಲ್ಲಿ ತೆಗೆದುಕೊಂಡು ಹೋಗಿದ್ದೀರಾ ಅಲ್ಲಿಗೆ ಹಾಕಿ ಭಕ್ತಿಯಿಂದ ಪ್ರತಿನಿತ್ಯ ಪೂಜೆ ಮಾಡುವಾಗ ಆಂಜನೇಯನ ಸ್ಮರಿಸಿ ಮತ್ತು ನಿಮ್ಮ ಇಷ್ಟ ದೇವರ ಹಾಗೂ ಕುಲ ದೇವರನ್ನು ಪ್ರಾರ್ಥಿಸಿ.
ಮುಂದಿನ ಶನಿವಾರದ ಮತ್ತೊಂದು ಗಂಟನ್ನು ಮಾಡಿ ಇಡುವಾಗ ಹಳೆಯ ಗಂಟನ್ನು ತೆಗೆದು ಹರಿಯುವ ನೀರಿಗೆ ಬಿಡಿ ಅಥವಾ ನಿರ್ಜನ ಪ್ರದೇಶಕ್ಕೆ ಹೋಗಿ ಇದನ್ನು ವಿಸರ್ಜನೆ ಮಾಡಿ ಬನ್ನಿ. ಹೀಗೆ ಮೂರು ವಾರಗಳು ಮಾಡಿದರೆ ಈ ಸಮಯದ ಒಳಗೆ ನೀವು ನಿರೀಕ್ಷೆ ಮಾಡಿದ ಫಲ ಖಂಡಿತವಾಗಿಯೂ ಸಿಗುತ್ತದೆ.