ನಾವೆಲ್ಲರೂ ಕೂಡ ಐಸ್ ಕ್ರೀಮ್ ಮಾಡುವುದಕ್ಕೆ ಹಲವಾರು ರೀತಿಯ ಪದಾರ್ಥಗಳನ್ನು ಉಪಯೋಗಿಸಿ ಐಸ್ ಕ್ರೀಮ್ ಮಾಡುತ್ತೇವೆ ಆದರೆ ಈ ದಿನ ಎರಡು ಕಪ್ ಹಾಲು ಇದ್ದರೆ ಸಾಕು. ನೀವು ಸುಲಭವಾಗಿ ಐಸ್ ಕ್ರೀಮ್ ಅನ್ನು ನೀವೇ ನಿಮ್ಮ ಮನೆಯಲ್ಲಿ ತಯಾರಿಸಬಹುದು.
ಅದೇ ರೀತಿಯಾಗಿ ಯಾವುದೇ ಐಸ್ ಕ್ರೀಮ್ ಮೋಲ್ಡ್ ಇಲ್ಲದೆಯೇ ಬಾಳೆ ಎಲೆಯನ್ನು ಉಪಯೋಗಿಸುವುದರ ಮೂಲಕ ಆರೋಗ್ಯಕರವಾದ ರುಚಿಯಾದಂತಹ ಚಾಕೋ ಬಾರ್ ಐಸ್ ಕ್ರೀಮ್ ಅನ್ನು ನೀವು ನಿಮ್ಮ ಮನೆಯಲ್ಲಿ ತಯಾರಿಸಬಹುದಾಗಿದೆ. ಇದಕ್ಕೆ ಬೇಕಾಗಿರುವುದು ಕೇವಲ ಎರಡು ಕಪ್ ಹಾಲು ಅಷ್ಟೇ ಯಾವುದೇ ರೀತಿಯ ಫುಡ್ ಕಲರ್ ಯಾವುದು ಇದಕ್ಕೆ ಅಗತ್ಯವಿರುವುದಿಲ್ಲ.
ಹಾಗಾದರೆ ಈ ಚಾಕೋ ಬಾರ್ ಐಸ್ ಕ್ರೀಮ್ ಅನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹಾಗೂ ಯಾವ ವಿಧಾನ ಅನುಸರಿಸಿ ಐಸ್ ಕ್ರೀಮ್ ತಯಾರಿಸಬೇಕಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:-ಒಂದು ನಿಂಬೆಹಣ್ಣು ಮತ್ತೆ ಕೇವಲ 3 ಸಾಮಗ್ರಿಯಲ್ಲಿ ಸುಲಭವಾಗಿ ಐಸ್ ಕ್ಯಾಂಡಿ ಮಾಡಿ.! ಈ ಬೇಸಿಗೆಗೆ ಮನೆಯಲ್ಲೇ ಮಾಡಿ ಆರೋಗ್ಯಕರ ಐಸ್ ಕ್ರೀಮ್
ಈ ಕೋನ್ ಐಸ್ ಕ್ರೀಮ್ ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳನ್ನು ನೋಡುವುದಾದರೆ.
• ಬಾಳೆ ಎಲೆ
• ಅರ್ಧ ಲೀಟರ್ ಹಾಲು
• ಸಕ್ಕರೆ
• ಎರಡು ಚಮಚ ಹಾಲು ಪೌಡರ್
• ಎರಡು ಚಮಚ ಕಾರ್ನ್ ಫ್ಲೋರ್
• ಚಾಕ್ಲೆಟ್
ಮೊದಲನೆಯದಾಗಿ ಇದನ್ನು ಮಾಡುವುದಕ್ಕೆ ಮೊದಲು ಯಾವ ರೀತಿಯ ತಯಾರಿ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಯೋಣ.
* ಮೊದಲು ಶುದ್ಧವಾದoತಹ ಚೆನ್ನಾಗಿರುವಂತಹ ಬಾಳೆ ಎಲೆಯನ್ನು ತೆಗೆದುಕೊಳ್ಳಬೇಕು ಆನಂತರ ಅದನ್ನು ಸ್ಟವ್ ಮೇಲೆ ಸ್ವಲ್ಪ ಮಟ್ಟಿಗೆ ಬಿಸಿ ಮಾಡಬೇಕು ಬಾಳೆ ಎಲೆ ತನ್ನ ಬಣ್ಣವನ್ನು ಬದಲಿಸುವ ತನಕ ಅದನ್ನು ಸ್ವಲ್ಪ ಮಟ್ಟಿಗೆ ಬಿಸಿ ಮಾಡಿ ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಬಾಳೆಎಲೆ ತುಂಬಾನೇ ಮೃದುವಾಗುತ್ತದೆ ಹಾಗೂ ಅದನ್ನು ನೀವು ಹೇಗೆ ಮಡಚಿದರೂ ಕೂಡ ಅದು ಹರಿಯುವುದಿಲ್ಲ.
* ಆನಂತರ ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು ಆನಂತರ ಅದನ್ನು ಕೊನ್ ಐಸ್ ಕ್ರೀಮ್ ಹೇಗೆ ಮಾಡುತ್ತೇವೋ ಆ ಒಂದು ಅಳತೆಯಲ್ಲಿ ಬಾಳೆಎಲೆಯನ್ನು ಕತ್ತರಿಸಿ ಇಟ್ಟುಕೊಳ್ಳಬೇಕು.
* ಆನಂತರ ಬಾಳೆ ಎಲೆಯನ್ನು ಕೋನ್ ರೀತಿ ಮಡಚಿ ಅದನ್ನು ಬಿಗಿಯಾಗಿ ಇರುವಂತೆ ಇಡಲು ಟೇಪ್ ಸಹಾಯದಿಂದ ಅದನ್ನು ಬಿಗಿಯಾಗಿ ಹಾಕಬೇಕು ಈ ರೀತಿ ಎಲ್ಲ ಬಾಳೆ ಎಲೆಯನ್ನು ಮಾಡಿಟ್ಟುಕೊಳ್ಳಬೇಕು.
ಈ ಸುದ್ದಿ ಓದಿ:-ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!
ಮಾಡುವ ವಿಧಾನ :- ಮೊದಲು ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ನಷ್ಟು ಹಾಲನ್ನು ಹಾಕಿ ಬಿಸಿ ಮಾಡಲು ಬಿಡಬೇಕು ಆನಂತರ ಅದಕ್ಕೆ ಸಕ್ಕರೆಯನ್ನು ಹಾಕಿ ಸಂಪೂರ್ಣವಾಗಿ ಕರಗಿಸಿಕೊಳ್ಳಬೇಕು ಆನಂತರ ಆ ಹಾಲಿಗೆ ಎರಡು ಚಮಚ ಹಾಲಿನ ಪುಡಿಯನ್ನು ಹಾಕಿ ಗಂಟು ಇಲ್ಲದ ರೀತಿ ಅದನ್ನು ಮಿಶ್ರಣ ಮಾಡಿಕೊಳ್ಳಬೇಕು.
ನಂತರ ಕೊನೆಯಲ್ಲಿ ಎರಡು ಚಮಚ ಕಾರ್ನ್ ಫ್ಲೋರ್ ಗೆ ಸ್ವಲ್ಪ ಹಾಲನ್ನು ಹಾಕಿ ಅದನ್ನು ಸಹ ಚೆನ್ನಾಗಿ ಮಿಶ್ರಣ ಮಾಡಿ ಹಾಲಿನ ಜೊತೆ ಹಾಕಿ ಅದನ್ನು ಮಿಶ್ರಣ ಮಾಡಿಕೊಳ್ಳಬೇಕು ಈ ರೀತಿ ಹಾಕಿದಮೇಲೆ ಹಾಲು ಸ್ವಲ್ಪ ಪ್ರಮಾಣವಾಗಿ ಗಟ್ಟಿಯಾಗಲು ಪ್ರಾರಂಭಿಸುತ್ತದೆ ಆನಂತರ ಅದನ್ನು ಸಂಪೂರ್ಣವಾಗಿ ಆರಲು ಬಿಡಬೇಕು.
ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಬಿಸಿ ಮಾಡಲು ಇಡಬೇಕು ಆನಂತರ ಅದರ ಮೇಲೆ ಒಂದು ಚಿಕ್ಕ ಬೌಲ್ ಇಟ್ಟು ಅದರ ಒಳಗಡೆ ಚಾಕಲೇಟ್ ಹಾಕಿ ಒಂದು ಚಮಚ ಸೂರ್ಯಕಾಂತಿ ಎಣ್ಣೆಯನ್ನು ಹಾಕಿ ಅದನ್ನು ಕರಗಿಸಿಕೊಳ್ಳಬೇಕು.
ನಂತರ ಕೋನ್ ರೀತಿ ತಯಾರಿಸಿದಂತಹ ಬಾಳೆ ಎಲೆಯ ಒಳಗಿನ ಭಾಗಕ್ಕೆ ಅದನ್ನು ಹಾಕಿ ಫ್ರಿಡ್ಜ್ ನಲ್ಲಿ ಐದು ನಿಮಿಷ ಹಾಗೆ ಬಿಟ್ಟರೆ ಅದು ಗಟ್ಟಿಯಾಗುತ್ತದೆ ಆನಂತರ ಅದರ ಒಳಗಡೆ ಮೇಲೆ ತಯಾರಿಸಿದಂತಹ ಹಾಲಿನ ಮಿಶ್ರಣ ಅದನ್ನು ಆ ಒಂದು ಬಾಳೆ ಎಲೆಯ ಕೋನ್ ಒಳಗಡೆ ಹಾಕಿ ಐಸ್ ಕ್ರೀಮ್ ಸ್ಟಿಕ್ ಅನ್ನು ಮಧ್ಯಕ್ಕೆ ಇಟ್ಟು ಫ್ರಿಡ್ಜ್ ನಲ್ಲಿ 8 ರಿಂದ 10 ಗಂಟೆಗಳ ತನಕ ಬಿಟ್ಟರೆ ನಿಮಗೆ ಚಾಕೋ ಬಾರ್ ಕೊನ್ ಐಸ್ ಕ್ರೀಮ್ ತಯಾರಾಗುತ್ತದೆ.