* ಬೇಗ ಮಲಗಿ ಬೇಗ ಎದ್ದು ಹಲ್ಲು ಬಾಯಿ ಸ್ವಚ್ಛವಾಗಿ ತೊಳೆದು ಕೊಂಡು ಒಂದು ಗ್ಲಾಸ್ ನೀರು ಕುಡಿಯಿರಿ.
* ಚಹಾ ಕಾಫಿ ಬೀಡಿ ಸಿಗರೇಟು ತಂಬಾಕು ಸೇವಿಸದೆ ಸ್ವಚ್ಛವಾಗಿ ಶೌಚ ಕಾರ್ಯ ಮುಗಿಸಿ ಮಣ್ಣು ಅಥವಾ ಬೂದಿಯಿಂದ ಕೈ ತೊಳೆದುಕೊಳ್ಳಿ.
* ಶೌಚಕ್ಕೆ ಕುಳಿತಾಗ ಹೆಚ್ಚು ಉಗುಳುವುದಾಗಲಿ ಹೆಚ್ಚು ಉಸಿರು ತಡೆಯುವುದಾಗಲಿ ಒಳ್ಳೆಯದಲ್ಲ.
* ಶೌಚಕ್ಕೆ ಹೋಗಿ ಬಂದ ಕೂಡಲೇ ನೀರು, ಚಹಾ, ಕಾಫಿ, ತಿಂಡಿ ಊಟ ಸೇವಿಸುವುದು ಒಳ್ಳೆಯದಲ್ಲ.
* ತಮ್ಮ ಶಕ್ತಿಗನುಸಾರವಾಗಿ ಸ್ವಚ್ಛಂದ ಸ್ಥಳದಲ್ಲಿ ಸೂರ್ಯ ನಮಸ್ಕಾರ ಗಳನ್ನು ರೂಢಿಯಲ್ಲಿಡಿ.
* ದೇಹದ ಪೋಷಣೆ ಬೆಳವಣಿಗೆಗೆ ಆಹಾರ ಅವಶ್ಯವಾದಷ್ಟೇ, ಚೈತನ್ಯ ಸ್ಪೂರ್ತಿಗೆ ಸೂರ್ಯ ನಮಸ್ಕಾರ ಅತ್ಯವಶ್ಯವಾಗಿದೆ.
* ಸೂರ್ಯ ನಮಸ್ಕಾರ ಮುಗಿಸುವಾಗ ಶವಾಸನದಲ್ಲಿ ವಿಶ್ರಾಂತಿ ಪಡೆಯುವುದು ಹಿತ.
ಈ ಸುದ್ದಿ ನೋಡಿ:- ಸಿಂಹ ರಾಶಿಯವರು ಜೀವನಪೂರ್ತಿ ಈ ದೇವರನ್ನು ಪೂಜಿಸಬೇಕು…||
* ಸೂರ್ಯ ನಮಸ್ಕಾರ ಮುಗಿಸಿದ ಅರ್ಧ ತಾಸು ಅಥವಾ ಒಂದು ತಾಸಿನ ನಂತರ ಸ್ನಾನ ಮಾಡಬೇಕು.
* ಸ್ನಾನ ಮಾಡುವಾಗ ಕೈ ಕಾಲು ತೋಳು ತೊಡೆ ಕಿಬ್ಬೊಟ್ಟೆ ಚೆನ್ನಾಗಿ ಹಸ್ತದಿಂದ ತಿಕ್ಕಬೇಕು.
* ಶರೀರ ಸ್ವಚ್ಛತೆ ಕಾಂತಿ ಮತ್ತು ಆರೋಗ್ಯಕ್ಕೆ ಕಡಲೆಹಿಟ್ಟು ಸೀಗೆಕಾಯಿ ಪುಡಿ ಸ್ನಾನದಲ್ಲಿ ಉಪಯೋಗಿಸಬೇಕು. ವರಕ್ಕೊಮ್ಮೆ ಅಭ್ಯಂಗ ಸ್ನಾನ ಮಾಡುವುದು ಒಳ್ಳೆಯದು.
* ದಿನಾಲು ಕೈ ಕಾಲು ಮುಖ ತೊಳೆದು ಕೊಳ್ಳುವಾಗ ಕಣ್ಣು ತೆರೆದು ನೀರನ್ನು ಮುಖಕ್ಕೆ ಉಗ್ಗಿಕೊಳ್ಳಬೇಕು. ಬಾಯಿಯಲ್ಲಿ ನೀರು ಬಹಳ ಸಲ ಮುಕ್ಕಳಿಸಬೇಕು.
* ಸ್ನಾನದ ನಂತರ ನಮಗೆಲ್ಲವನ್ನು ದಯಪಾಲಿಸಿದ ದೇವರಿಗೆ ಕೃತಜ್ಞತೆ ಸಲ್ಲಿಸಲು ಪ್ರಾರ್ಥನೆ ಮಾಡಬೇಕು.
* ಸ್ನಾನವಾದ ನಂತರ ಅರ್ಧ ತಾಸು ಅಥವಾ ಒಂದು ತಾಸಿನ ಅವಧಿ ಮುಗಿಸಿ ಅಲ್ಪ ಉಪಹಾರ ಇಲ್ಲವೇ ಊಟ ಮಾಡಬೇಕು.
ಈ ಸುದ್ದಿ ನೋಡಿ:- ಈ 5 ವೇಳೆಗಳಲ್ಲಿ ಶೃಂಗಾರ ಮಾಡಿದ್ರೆ ದಾರಿದ್ರ್ಯ ಖಂಡಿತ ಅನುಭವಿಸಬೇಕು. ದಂಪತಿಗಳು ಈ ವಿಷಯಗಳನ್ನು ತಿಳಿದುಕೊಳ್ಳಿ
* ಚೆನ್ನಾಗಿ ಹಸಿವಾದಾಗ ಊಟ ಮಾಡಬಾರದು ಹಸಿದಾಗ ಹೆಚ್ಚು ವೇಳೆ ತಡೆಯಬಾರದು.
* ಊಟ ಮಾಡುವಾಗ ಮನಸ್ಸು ಪ್ರಸನ್ನವಾಗಿರಲಿ ಆನಂದ ಸಂತೃಪ್ತಿ ಯಿಂದ ಆಹಾರವನ್ನು ಪ್ರಸಾದವೆಂದು ಸ್ವೀಕರಿಸಬೇಕು.
* ಮಾದಕ ಪೇಯ ತಂಬಾಕು ಬೀಡಿ, ಸಿಗರೇಟು, ಚಹಾ, ಕಾಫಿ, ಮುಂತಾದವುಗಳು ಆರೋಗ್ಯ ಹಾಗೂ ಆರ್ಥಿಕ ದೃಷ್ಟಿಯಿಂದ ಹೆಚ್ಚು ಹಾನಿಕಾರಕವಾಗಿವೆ.
* ಸಾತ್ವಿಕ ಸಸ್ಯಹಾರವೇ ಸರ್ವಶ್ರೇಷ್ಠವಾದದಾಗಿದೆ ಆಹಾರದಂತೆ ವಿಚಾರ ಆಚರಣೆ ಸಾಧ್ಯ.
* ತಪ್ಪಲು ಪಲ್ಲೆ ಹಸಿ ತರಕಾರಿ, ನೆನೆಸಿದ ಬೇಳೆ ಕಾಳು, ಹಣ್ಣು ಹಂಪಲು ಮುಂತಾದವು ನಿತ್ಯ ಆಹಾರದಲ್ಲಿ ಉಪಯೋಗಿಸುವುದು ಹೆಚ್ಚು ಹಿತಕರ ವಾಗಿರುತ್ತದೆ.
* ಆಹಾರವನ್ನು ಚೆನ್ನಾಗಿ ನೀರಾಗುವಂತೆ ನುರಿಸಿ ನುಂಗಬೇಕು.
* ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು.
ಈ ಸುದ್ದಿ ನೋಡಿ:- ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತದೆ.!
* ಊಟವಾದ ಕೂಡಲೇ ಮಲಗಬಾರದು ಕನಿಷ್ಠ ಅರ್ಧ ಗಂಟೆ ಅಥವಾ ಒಂದು ಗಂಟೆಯ ನಂತರ ನೀರು ಕುಡಿದು ಮಲಗಬೇಕು.
* ಬಲ ಭುಜ ಮೇಲೆ ಮಾಡಿ ಮುಖ ತೆರೆದು ಕೊಂಡು ಮಲಗಬೇಕು. ಮೂಗಿನಿಂದಲೇ ಉಸಿರಾಡಬೇಕು ಶವಾಸನ ಸ್ಥಿತಿಯಲ್ಲಿ ಇದ್ದುಕೊಂಡೇ ನಿದ್ದೆ ಹೋಗಬಾರದು.
* ಬೇಗ ಮಲಗಿ ಬೇಗ ಏಳಿ. ಹಗಲು ನಿದ್ದೆ ಮಾಡಬಾರದು ರಾತ್ರಿ ನಿದ್ದೆ ಕೆಡಬಾರದು.
ಹೀಗೆ ಮೇಲೆ ಹೇಳಿದ ಇಷ್ಟು ವಿಷಯವೂ ಕೂಡ ನಿಮ್ಮ ಆರೋಗ್ಯದ ವಿಷಯವಾಗಿದ್ದು. ಇವುಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಬಹುದು. ಅದರಂತೆಯೇ ಮೇಲೆ ಹೇಳಿದಂತೆ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದೇ ತಿಳಿಸಲಾಗಿದೆ.
ಈ ಸುದ್ದಿ ನೋಡಿ:- ಮನೆಯಲ್ಲಿ ತುಳಸಿ ಗಿಡವಿದ್ರೆ ಈ ತಪ್ಪು ಮಾಡಬೇಡಿ.!
ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ದಿನ ನಾವು ಮೇಲೆ ಹೇಳಿದ ಅಷ್ಟು ವಿಷಯಗಳನ್ನು ತಿಳಿದುಕೊಂಡು ಅವುಗಳನ್ನು ಅನುಸರಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಬೆಳಗಿನ ಸಮಯ ಬೇಗ ಏಳುವುದು ಆನಂತರ ಕೆಲವೊಂದಷ್ಟು ಸಮಯ ಯೋಗಾಸನ ಪ್ರಾಣಾಯಾಮ ವಾಕಿಂಗ್ ಇಂತಹ ಕೆಲವೊಂದಷ್ಟು ಒಳ್ಳೆಯ ಅಭ್ಯಾಸಗಳನ್ನು ಮಾಡುವುದರಿಂದಲೂ ಕೂಡ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ.