31 ದಿನಗಳ ಕಾಲ ಅಸ್ತಂಗತರಾಗಿದ್ದ ಶನಿಯು ಮಾರ್ಚ್ 17ರಿಂದ ಮತ್ತೆ ಉದಯವಾಗುತ್ತಿದ್ದಾರೆ. ಇದು ದ್ವಾದಶ ರಾಶಿಗಳ ಮೇಲು ಕೂಡ ಪರಿಣಾಮ ಬೀರುತ್ತಿದ್ದು ಅದರಲ್ಲಿ ಮುಖ್ಯವಾಗಿ ಆರು ರಾಶಿಗಳಿಗೆ ಬಹಳ ಅದೃಷ್ಟ ತರುತ್ತಿದೆ. ಈ ಆರು ರಾಶಿಯವರು ಮತ್ತೆ ಅದೃಷ್ಟವನ್ನು ಪಡೆಯುತ್ತಿದ್ದಾರೆ ಸಂಕಷ್ಟಗಳಿಂದ ಪರಿಹಾರ, ಲಾಭ, ಜಯ, ಭಾಗ್ಯ, ಕೀರ್ತಿ, ರಾಜಯೋಗ ಎಲ್ಲವನ್ನು ಮರಳಿ ಪಡೆಯುತ್ತಿದ್ದಾರೆ.
ಅಸ್ತಂಗತನಾಗಿದ್ದ ಶನಿಯು ಅದರಿಂದ ಆಚೆ ಬಂದು ಹೆಚ್ಚಿನ ಹೊಳಪಿನೊಂದಿಗೆ ಉದಯಿಸುತ್ತಿದ್ದಾರೆ ಎಂದೇ ಹೇಳಬಹುದು. ಶನಿಯು ಅಸ್ತಂಗತರಾಗಿದ್ದ ಸಮಯದಲ್ಲಿ ಬಹಳಷ್ಟು ಮೌಢ್ಯಕ್ಕೆ ಒಳಗಾಗಿದ್ದವರು ಈಗ ಅದರಿಂದ ಆಚೆ ಬಂದು ಜ್ಞಾನೋದಯ ಪಡೆಯಲಿದ್ದಾರೆ ಎಂದೇ ಹೇಳಬಹುದು. ಆ ಆರು ರಾಶಿಗಳು ಯಾವುವು? ಯಾವ ರಾಶಿಗೆ ಏನು ಫಲ ಸಿಗುತ್ತಿದೆ? ಎನ್ನುವುದರ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಧನುರ್ ರಾಶಿಯವರು ಈ ಸಲ ಗುರಿ ತಲುಪುವುದು ಪಕ್ಕಾ.! ಹೇಗಿದೆ ಗೊತ್ತಾ ಧನು ರಾಶಿಯ ಮಾಸ ಭವಿಷ್ಯ…
* ಮೊದಲನೇದಾಗಿ ಮೇಷ ರಾಶಿಗೆ ಈ ಯೋಗ ಸಿಗುತ್ತಿದೆ. ಏಕದಶಸ್ಥಾನದಲ್ಲಿ ಶನಿಯು ಮೌಢ್ಯನಾಗಿದ್ದ ಕಾರಣ ಮೇಷ ರಾಶಿಯವರಿಗೆ ಆರ್ಥಿಕವಾಗಿ ಬಹಳ ಹೊಡೆತವಾಗಿತ್ತು ವ್ಯಾಪಾರ ವ್ಯವಹಾರಗಳು ಬಹಳ ಡಲ್ ಆಗಿತ್ತು. ಮಾರ್ಚ್ 17 ರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣುತ್ತೀರಿ. ಇದ್ದಕ್ಕಿದ್ದ ಹಾಗೆ ಈ 31 ದಿನಗಳ ಕಾಲ ನೀವು ಪಡೆದಿದ್ದ ಕಷ್ಟದಿಂದ ಈಗ ಮುಕ್ತಿ ಪಡೆಯಲಿದ್ದೀರಿ.
* ವೃಷಭ ರಾಶಿಗೂ ಕೂಡ ಇಂತಹದೇ ಸಮಸ್ಯೆಗಳು ಕಾಡಿತ್ತು. ಆದರೆ ಅಧಿಕಾರದ ವಿಚಾರವಾಗಿ ನಿಮಗೆ ಸಮಸ್ಯೆ ಆಗಿತ್ತು. ನಿಮ್ಮ ಮೇಲೆ ಇಲ್ಲಸಲ್ಲದ ಆರೋಪ, ನಿಮ್ಮ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಆಗಿತ್ತು ಆದರೆ ಈಗ ಮತ್ತೆ ಶನಿಯ ಪ್ರಭಾವದಿಂದಾಗಿ ನಿಮ್ಮ ಮೇಲೆ ಬೆಳಕು ಬೀಳಲಿದೆ ಈ ಮೂಲಕ ಸತ್ಯ ಎಲ್ಲರಿಗೂ ತಿಳಿಯಲಿದೆ. ನಿಮ್ಮ ಸ್ಥಾನ ಗೌರವ ಗಟ್ಟಿಯಾಗುತ್ತದೆ ಪ್ರತಿದಿನವೂ ಶಿವನ ಹಾಗೂ ಶನೇಶ್ವರನ ಆರಾಧನೆ ಮಾಡಿ.
ಈ ಸುದ್ದಿ ಓದಿ:-ಜೀವನಪೂರ್ತಿ ಆರೋಗ್ಯವಾಗಿರಲು ಈ ಸಲಹೆಗಳನ್ನು ಪಾಲಿಸಿ.!
* ಮಿಥುನ ರಾಶಿಯವರು ಕೂಡ ಬಹಳಷ್ಟು ಕಷ್ಟಪಟ್ಟಿದ್ದೀರಿ. ನಿಮ್ಮ ಸಹಾಯಕ್ಕೆ ಯಾರು ಬರುತ್ತಿರಲಿಲ್ಲ ಬದಲಾಗಿ ನಿಮಗೆ ನಿಂದನೆ ಮಾತುಗಳಿಂದ ನೋಯಿಸುತ್ತಿದ್ದರು. ಈಗ ಶನಿಯು ಮತ್ತೆ ಉದಯಿಸುತ್ತಿರುವುದು ನಿಮ್ಮ ಬದುಕಿಗೂ ಕೂಡ ಬೆಳಕು ತರುತ್ತಿದೆ. ರಾಶಿಯಾಧಿಪತಿಯು ರಾಶಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ ಶಿವನ ಆರಾಧನೆ ಮಾಡಿ ಹೆಚ್ಚು ಲಾಭವಾಗುತ್ತದೆ
* ಕನ್ಯಾ ರಾಶಿ:- ಕನ್ಯಾ ರಾಶಿಯಲ್ಲಿ ಆರನೇ ಸ್ಥಾನದಲ್ಲಿ ಮೌಢ್ಯನಾಗಿದ್ದರಿಂದ ಕೆಲಸ ಕಾರ್ಯಗಳಲ್ಲಿ ನಿಮಗೆ ಬಹಳ ತೊಂದರೆ ಆಗಿತ್ತು. ಎಷ್ಟೇ ಪ್ರಯತ್ನ ಪಟ್ಟರು ಅಂದುಕೊಂಡ ಕೆಲಸ ಮಾತ್ರ ಆಗುತ್ತಿಲ್ಲ ಕಳೆದ ಕೆಲವೊಂದಿಷ್ಟು ದಿನದಿಂದ ಹಗಲು-ರಾತ್ರಿ ಇದರದ್ದೇ ಚಿಂತೆ ಆಗಿತ್ತು ಎನ್ನುವವರಿಗೆ ನಿಮ್ಮ ಕಷ್ಟಕ್ಕೆ ಈಗ ಮುಕ್ತಿ ಸಿಗುವ ಸಮಯ ಬಂದಿದೆ. ಅದೇ ವೃತ್ತಿ ವಿಚಾರವಾಗಿ ಕೂಡ ಸಮಸ್ಯೆಯಲ್ಲಿದ್ದವರಿಗೆ ನಿರೀಕ್ಷೆಗೂ ಮೀರಿ ಹೆಚ್ಚಿನ ಲಾಭ ಉಂಟಾಗುವ ಸಾಧ್ಯತೆ ಕಂಡು ಬರುತ್ತದೆ.
ಈ ಸುದ್ದಿ ಓದಿ:-ಕಟಕ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಸಮಸ್ಯೆ ಹಲವು ಆದರೂ ಧೈರ್ಯಗೆಡಬೇಡಿ.!
* ತುಲಾ ರಾಶಿಯವರಿಗೆ ಕೂಡ ಪಂಚಮ ಸ್ಥಾನದಲ್ಲಿ ಶನಿಯು ಅಸ್ತನಾಗಿದ್ದರಿಂದ ಆರೋಗ್ಯ ಹಾಗೂ ಹಣಕಾಸಿನ ವಿಚಾರವಾಗಿ ತೊಂದರೆಯಾಗಿತ್ತು. ಸಾಲಗಾರರ ಕಾಟದಿಂದ ಬೇಸತ್ತಿದ್ದರು ಅಥವಾ ನಿಮ್ಮಿಂದ ಸಾಲ ತೆಗೆದುಕೊಂಡವರು ವಾಪಸ್ ಸರಿಯಾದ ಸಮಯಕ್ಕೆ ಕೊಡದೆ ತೊಂದರೆ ಕೊಟ್ಟಿದ್ದರು. ಈಗ ಇದೆಲ್ಲವೂ ಪರಿಹಾರವಾಗುವ ಸಮಯ ಆರೋಗ್ಯದಲ್ಲೂ ಕೂಡ ಸುಧಾರಣೆ ಕಂಡು ಬರಲಿದೆ.
* ಕುಂಭ ರಾಶಿ:- ಕುಂಭ ರಾಶಿಯವರೂ ಕೂಡ ಬಹಳ ಸಮಸ್ಯೆ ಪಟ್ಟಿದ್ದಾರೆ. ಎಲ್ಲದರಲ್ಲೂ ವಿಳಂಬ, ಯಾವುದರಲ್ಲೂ ಆಸಕ್ತಿ ಇಲ್ಲ
ಒಂದು ರೀತಿಯಲ್ಲಿ ಸೋಂಬೇರಿತನವೇ ಬಂದಿತ್ತು ಎನ್ನಬಹುದು. ನಿಮ್ಮ ಮನಸ್ಸಿನಲ್ಲಿ ಎಷ್ಟೇ ಆಲೋಚನೆ ಇದ್ದರೂ ಅದ್ಯಾಕೋ ಅಂದುಕೊಂಡ ಕಾರ್ಯ ಮಾತ್ರ ಮಾಡಲು ಆಗುತ್ತಿರಲಿಲ್ಲ ಈಗ ಅದೆಲ್ಲವೂ ಕಳೆದು ಮತ್ತೆ ರಾಜಯೋಗ ಸ್ಥಾಪನೆ ಆಗುತ್ತಿದೆ ನೀವು ಸಹ ಶಿವನ ಹಾಗೂ ಶನೇಶ್ವರನ ದರ್ಶನ ಮಾಡುವುದು ಒಳ್ಳೆಯದು.