ವಿದ್ಯಾವಂತರಾಗಿ ಪಡೆವ ಉದ್ಯೋಗದಿಂದ ಮಾತ್ರವಲ್ಲ, ತನ್ನ ಸ್ವಂತ ಬುದ್ಧಿಶಕ್ತಿಯಿಂದ ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅನ್ನೋರಿಗೆ ಹಣ ಸಂಪಾದನೆಗೆ ನೂರಾರು ದಾರಿಗಳಿವೆ. ಹಠ ತೊಟ್ಟು ಕಷ್ಟವನ್ನು ಎದುರಿಸಿ ಮುಂದೆ ಸಾಗುವವನಿಗೆ ಯಶಸ್ಸು ಖಂಡಿತ. ದೇಶಕ್ಕೆ ಮಾರಣಾಂತಿಕ ಕೋವಿಡ್ ಕಾಲಿಟ್ಟಾಗಿನಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಯುವಜನತೆ ಉದ್ಯೋಗಕ್ಕಾಗಿ ಅಲೆಯುವಂತಾಗಿದೆ.
ಈಗಾಗಲೇ ಉದ್ಯೋಗದಲ್ಲಿರುವವರ ಕೆಲಸವೂ ಗ್ಯಾರಂಟಿ ಇಲ್ಲ. ಅವರಲ್ಲೂ ನಮ್ಮನ್ನು ಯಾವಾಗ ಬೇಕಾದ್ರೂ ಕೆಲಸದಿಂದ ತೆಗೆಯಬಹುದು ಎಂಬ ಆತಂಕ ಮನೆ ಮಾಡಿದೆ. ದೊಡ್ಡ ದೊಡ್ಡ ಕಂಪನಿಗಳಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಆದ್ರೆ, ಇದನ್ನೇ ನಂಬಿಕೊಂಡು ಕೆಲವರು ಉಳಿತಿಲ್ಲ ಎಂಬ ಹಲವು ಉದಾಹರಣೆಗಳು ಕಣ್ಣೆದುರಿಗೆ ಗೋಚರಿಸುತ್ತವೆ. ಉದ್ಯೋಗ ಇಲ್ಲದಿದ್ರೇನು ಸ್ವಯಂ ಬ್ಯುಸಿನೆಸ್ ಮಾಡ್ತೀನಿ ಅಂತಾ ಅನೇಕರು ತಮ್ಮ ಕಾಲ ಮೇಲೆ ನಿಂತಿದ್ದಾರೆ.
LIC ಯಿಂದ ಬಂಪರ್ ಆಫರ್ ಘೋಷಣೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗಲಿದೆ 16,000/-
ಇದಕ್ಕೆ ಸರ್ಕಾರವೂ ಸಾಥ್ ನೀಡುತ್ತಿದೆ. ಇದರಲ್ಲಿ ಜಿಮ್ ತೆರೆಯುವ ಯೋಜನೆಯೂ ಒಂದು. ಈ ಜಿಮ್ ಬ್ಯುಸಿನೆಸ್ ಮೂಲಕ ಅಧಿಕ ಹಣ ಸಂಪಾದನೆ ಮಾಡಬಹುದಾಗಿದೆ. ಇದಕ್ಕೆ ಸರ್ಕಾರವು ಸಹಾಯ ಧನ ನೀಡಲಿದೆ. ಇದು ಆರ್ಥಿಕ ಸಂಕಷ್ಟಲ್ಲಿರುವ ಯುವ ಜನತೆಗೆ ನೆರವಾಗಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪಯೋಜನೆ ಅಡಿಯಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಕ್ರೀಡಾಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು ಜಿಮ್ ಸ್ಥಾಪನೆಗಾಗಿ ಸಹಾಯಧನಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಹೌದು, ಕರ್ನಾಟಕ ರಾಜ್ಯ ಸರ್ಕಾರದ ಹೊಸ ಯೋಜನೆ ಇದಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದ ಯುವ ಸ್ವಯಂ ಉದ್ಯೋಗ ಸಹಾಯಕ ಯೋಜನೆ 2023-24 ಸಾಲಿನಲ್ಲಿ ಪ್ರಾರಂಭವಾಗುವುದು. ಈ ಯೋಜನೆಯ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ಗಳಿಸಿದ ವಿಜೇತರಾಗಿರಬೇಕು, ಅವರು ಸ್ವಯಂ ಉದ್ಯೋಗ ಹೊಂದಲು ಜಿಮ್ ಸ್ಥಾಪನೆಗಾಗಿ ಸಹಾಯಧನ ಪಡೆಯಬಹುದು.
ಎಲ್ಲಾ ವಾಹನ ಸಾವರರಿಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್ ಜಾರಿ ಈ ರೂಲ್ಸ್ ಫಾಲೋ ಮಾಡಿದ್ರೆ ದಂಡ ಫಿಕ್ಸ್
ಯೋಜನೆಗೆ ಅರ್ಹರಾದ ಕ್ರೀಡಾಪಟುಗಳು ನಿಗದಿತ ನಮೂನೆಯ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಅರ್ಜಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯವರು ಬೆಂಗಳೂರು ನಗರ ಜಿಲ್ಲೆಯಿಂದ, ಕಸ್ತೂರಬಾ ರಸ್ತೆಯ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದ ಕೊಠಡಿ ಸಂಖ್ಯೆ 17 ಮತ್ತು 18 ನಲ್ಲಿ ಸಂಪರ್ಕಿಸಬಹುದು.
ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿಯ ಕರ್ನಾಟಕದ ಕ್ರೀಡಾಪಟುಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ಆಯಾ ಜಿಲ್ಲೆಯ ಉಪ/ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೆಪ್ಟೆಂಬರ್ 7 ರೊಳಗಾಗಿ ಸಲ್ಲಿಸಬೇಕು.
ಅಸಂಘಟಿತ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ.!
ಹೌದು, ಆಸಕ್ತ ಕ್ರೀಡಾಪಟುಗಳು ಅರ್ಜಿ ಮತ್ತು ಮಾರ್ಗಸೂಚಿಗಳನ್ನು ಅಥವಾ ಅರ್ಜಿಗಳನ್ನು ಸೆಪ್ಟೆಂಬರ್ 7 ರವರೆಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಸಂಖ್ಯೆಗಳು: 7204266766, 9480886545 ಗೆ ಸಂಪರ್ಕಿಸಬಹುದು. ಇದು ಬೆಂಗಳೂರು ನಗರ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಯೋಜನೆಯ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ ಯುವರು ಕ್ರೀಡೆಗೆ ಮತ್ತು ಉದ್ಯೋಗಕ್ಕೆ ಹೊಂದುವ ಹೆಸರಿನಲ್ಲಿ ಬೃಹತ್ ಹಂತ ಸಾಧಿಸುತ್ತಿದ್ದಾರೆ.
ಅರ್ಜಿಗಳನ್ನು ನೇರವಾಗಿ ಕೇಂದ್ರ ಕಛೇರಿಯಲ್ಲಿ ಸ್ವೀಕರಿಸಲಾಗುವುದಿಲ್ಲ ಹಾಗೂ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಜಿಲ್ಲೆಯ ಉಪನಿರ್ದೇಶಕರು/ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.