ಕರ್ನಾಟಕದಲ್ಲಿ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನ ಆದಮೇಲೆ ರೇಷನ್ ಕಾರ್ಡಿಗೆ (Ration card) ವಿಪರೀತವಾದ ಬೇಡಿಕೆ ಸೃಷ್ಟಿಯಾಗಿದೆ. ಯಾರೆಲ್ಲಾ ರೇಷನ್ ಕಾರ್ಡ್ ಗಳನ್ನು ಹೊಂದಿಲ್ಲ (new Ration card) ಅವರು ಅರ್ಜಿ ಸಲ್ಲಿಸುತ್ತಿದ್ದಾರೆ ಮತ್ತು ರೇಷನ್ ಕಾರ್ಡ್ ಗಳಲ್ಲಿ ತಿದ್ದುಪಡಿ (Ration card correction) ಮಾಡಿಕೊಳ್ಳಬೇಕಾದವರು ಕೂಡ ಕಾಯುತ್ತಿದ್ದಾರೆ.
ಚುನಾವಣೆ ನೀತಿ ಸಂಹಿತೆ (Code of Conduct) ಜಾರಿಯಲ್ಲಿದ್ದ ಕಾರಣ ಮೂರು ತಿಂಗಳ ಅರ್ಜಿ ಸಲ್ಲಿಸಿದವರಿಗೂ ಕೂಡ ರೇಷನ್ ಕಾರ್ಡ್ ವಿತರಣೆಯಾಗಿಲ್ಲ. ಆದರೆ ಈಗ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (Food and Civil supply Minister K.H Muniyappa) ಅವರು ಈ ಕುರಿತು ರಾಜ್ಯದ ಜನತೆಗೆ ಸಿಹಿಸುದ್ದಿ ನೀಡಿದ್ದಾರೆ.
ಶೀಘ್ರದಲ್ಲಿ ಆಗಸ್ಟ್ 15 ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗುವುದು ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ. ಇದರ ಪ್ರಕಾರವಾಗಿ ಸಿಟಿಜನ್ ಲಾಗಿನ್ (citizen log in) ಮೂಲಕ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಸರ್ಕಾರ ಸೂಚಿಸುವ ಸೇವಾಕೇಂದ್ರಗಳಾದ.
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹೋಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು. ಅಥವಾ ಈಗಾಗಲೇ ರೇಷನ್ ಕಾರ್ಡ್ ಹೊಂದಿದ್ದು ಅದು ಸ್ಥಗಿತಗೊಂಡಿದ್ದಾರೆ ಅಥವಾ ಅದರಲ್ಲಿ ತಿದ್ದುಪಡಿಗಳಿದ್ದರೆ ಸರಿಯಾದ ದಾಖಲೆಗಳನ್ನು ಸಲ್ಲಿಸಿ ಅದನ್ನು ಸರಿಪಡಿಸಿಕೊಳ್ಳಬಹುದು ಎಂದಿದ್ದಾರೆ.
ರೈತರಿಗೆ ಸಿಹಿ ಸುದ್ದಿ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಎಲ್ಲಾ ಜಮೀನುಗಳಿಗೂ ರಸ್ತೆ ಭಾಗ್ಯ.!
ಇದರ ಜೊತೆಗೆ ಆಹಾರ ಸಚಿವರು ಮತ್ತೊಂದು ಪ್ರಮುಖವಾದ ವಿಷಯವನ್ನು ತಿಳಿಸಿದ್ದಾರೆ ಅದೇನೆಂದರೆ BPL ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಹಲವು ಯೋಜನೆಗಳು ಸಿಗುವುದರಿಂದ ಅನುಕೂಲಸ್ಥರು ಕೂಡ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮರೆಮಾಚಿ BPL ಕಾರ್ಡ್ಗಳನ್ನು ಹೊಂದಿರುವುದು ಆಹಾರ ಇಲಾಖೆ ಗಮನಕ್ಕೂ ಬಂದಿದೆ.
ಅಂತವರ ಮೇಲೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ ಮತ್ತು ಮುಂದೆಯೂ ಕೂಡ ಇದರ ಕುರಿತು ಪರಿಶೀಲನೆ ನಡೆಸಿ ಕಾರ್ಡ್ ರದ್ದುಪಡಿಸಿ ಕ್ರಮ ಕೈಗೊಳ್ಳಲಿದ್ದೇವೆ. ಈಗಲೂ ಅನುಕೂಲಸ್ಥರಾಗಿದ್ದರೂ ಕೂಡ BPL ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿರುವುದರಿಂದ ರೇಷನ್ ಕಾರ್ಡ್ ಪಡೆಯಲು ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿರುವ ಬಗ್ಗೆ ತಿಳಿಸಿದ್ದಾರೆ.
ಸರ್ಕಾರ 2016ರಲ್ಲಿ ರೂಪಿಸಿದ್ದ ಮಾನದಂಡಗಳನ್ನು ಮೀರಿ ಯಾರು ಸಹ BPL ಕಾರ್ಡ್ ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅದರ ಜೊತೆ ಈಗ ಆಹಾರ ಸಚಿವರು ಯಾರು ಸ್ವಂತ ವೈಟ್ ಬೋರ್ಡ್ ಕಾರುಗಳನ್ನು ಹೊಂದಿದ್ದಾರೆ ಅವರಿಗೂ ಸಹ BPL ಕಾರ್ಡ್ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ ಜೀವನೋಪಾಯಕ್ಕಾಗಿ ಹಳದಿ ಬೋರ್ಡ್ ವಾಹನಗಳನ್ನು ಹೊಂದಿರುವವರಿಗೆ ಸಮಸ್ಯೆ ಇಲ್ಲ ಎನ್ನುವುದನ್ನು ಸಹ ಉಲ್ಲೇಖಿಸಿದ್ದಾರೆ.
ಹಾಗಾದರೆ ಸರ್ಕಾರದ ನಿಯಮದ ಪ್ರಕಾರ ಯಾರೆಲ್ಲಾ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಅರ್ಹರು ಮತ್ತು BPL ಕಾರ್ಡ್ ಪಡೆಯಲು ಸರ್ಕಾರದ ಮನದಂಡ ಏನು ಎನ್ನುವ ಎನ್ನುವ ಪಟ್ಟಿ ಇಲ್ಲಿದೆ ನೋಡಿ.
ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಘೋಷಣೆ ಮಾಡಿದ ಸರ್ಕಾರ.!
● ಕರ್ನಾಟಕದ ನಿವಾಸಿಗಳಾಗಿರಬೇಕು
● ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ಕೂಡ ಹೊಂದಿರಬೇಕು.
● BPL ರೇಷನ್ ಕಾರ್ಡ್ ಪಡೆಯಲು ಆದಾಯ ಪ್ರಮಾಣ ಪತ್ರ ಕಡ್ಡಾಯ
● ಸರ್ಕಾರಿ ಹುದ್ದೆಯಲ್ಲಿರುವ ಕುಟುಂಬಗಳು ಮತ್ತು ಆದಾಯ ತೆರಿಗೆ, ವೃತ್ತಿ ತೆರಿಗೆ, GST ಕಟ್ಟುವ ಕುಟುಂಬಸ್ಥರು BPL ಕಾರ್ಡಿಗೆ ಅರ್ಹರಲ್ಲ.
● ಸರ್ಕಾರಿ ವಲಯದ ಉದ್ಯಮಗಳು, ಮಂಡಳಿಗಳು, ಸ್ವಾಯತ್ತ ಮಂಡಳಿಗಳು, ಸಂಸ್ಥೆಗಳು, ನಿಗಮಗಳು, ಸಹಕಾರಿ ಸಂಸ್ಥೆಗಳ ಖಾಯಂ ಉದ್ಯೋಗಿಗಳು BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ
● ವೈದ್ಯರು, ವಕೀಲರು, ಲೆಕ್ಕಪರಿಶೋಧಕರು BPL ಕಾರ್ಡ್ ಹೊಂದಲು ಅರ್ಹರಲ್ಲ
● ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ನೌಕರರು ಕೂಡ ಅರ್ಹರಲ್ಲ.
● 3 ಹೆಕ್ಟರ್ ಅಂದರೆ 7.5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ಕುಟುಂಬಗಳು ಅರ್ಹರಲ್ಲ
● ಜೀವನೋಪಾಯಕ್ಕಾಗಿ ಬಳಸುವ ಹಳದಿ ಬೋರ್ಡ್ ವಾಹನಗಳನ್ನು ಹೊರತುಪಡಿಸಿ ಸ್ವಂತ ಕಾರು ಅಥವಾ 100CC ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ವಾಹನಗಳನ್ನು ಹೊಂದಿರುವವರು BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ
● ಅಧಿಸೂಚಿತ ಗುತ್ತಿಗೆದಾರರು, APMC ವ್ಯಾಪಾರಿಗಳು ಕಮಿಷನ್ ಏಜೆಂಟ್ ಗಳು BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದು ಸರ್ಕಾರದ ನಿಯಮಾವಳಿಯಲ್ಲಿದೆ.