ಎಲ್ಲರಿಗೂ ತಿಳಿದಿರುವಂತೆ ಜ್ಯೋತಿಷ್ಯ ಎಂದ ತಕ್ಷಣ ನಮಗೆಲ್ಲರಿಗೂ ನೆನಪಿಗೆ ಬರುವುದು 12 ಮನೆ ಅಂದರೆ ಅದನ್ನು ನಾವು 12 ಭಾವಗಳು ಎಂದು ಕರೆಯುತ್ತೇವೆ. ನಮ್ಮ ದೈನಂದಿನ ಜೀವನದಲ್ಲಿ ಬರುವಂತಹ ವಿಚಾರಗಳು ಅಂದರೆ ಓದು, ಮನೆ, ಮದುವೆ, ಮಕ್ಕಳು, ವ್ಯಾಪಾರ, ವ್ಯವಹಾರ ಹೀಗೆ ಇನ್ಯಾವುದೇ ಇರಲಿ ಇವೆಲ್ಲವನ್ನೂ ಸಹ ನಾವು ಈ 12 ಮನೆಗಳಲ್ಲಿ ಋಷಿಮುನಿಗಳು ಯಾವ ಯಾವ ಮನೆಯಲ್ಲಿ ಯಾವ ಯಾವ ವಿಚಾರಗಳು ಬರುತ್ತದೆ ಎನ್ನುವುದನ್ನು ವಿವರವಾಗಿ ಕೊಟ್ಟಿದಾರೆ.
ಜ್ಯೋತಿಷ್ಯದಲ್ಲಿ ಬರುವಂತಹ ಈ 12 ಮನೆಯ ಬಗ್ಗೆ ನಾವು ತಿಳಿದುಕೊಂಡರೆ ನಮ್ಮ ಜಾತಕ ರಾಶಿ, ಅನುಗುಣವಾಗಿ ಯಾವ ಮನೆಯಲ್ಲಿ ಯಾವ ಸಮಸ್ಯೆ ಇದ್ದರೆ ಅದನ್ನು ನಾವು ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳಬಹುದು. ಹಾಗಾದರೆ ಈ ಪ್ರತಿಯೊಂದು ಮನೆಯಲ್ಲಿ ಯಾವ ಯಾವ ವಿಚಾರಗಳಿದೆ ಹಾಗೂ ಈ ಮನೆಯು ಏನನ್ನು ಪ್ರತಿಬಿಂಬಿಸುತ್ತದೆ ಎನ್ನುವುದನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:-ತಪ್ಪಿಯೂ ಈ 10 ಆಹಾರಗಳನ್ನು ಫ್ರಿಡ್ಜ್ ನಲ್ಲಿ ಇಡಬೇಡಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.!
* ಮೊದಲನೆಯದಾಗಿ ಒಂದನೇ ಮನೆ :- ಒಂದನೇ ಮನೆಯನ್ನು ತನು ಭಾವ ಎಂದು ಕರೆಯುತ್ತೇವೆ. ಇದು ನಮ್ಮ ಸ್ವಂತ ದೇಹದ ಬಗ್ಗೆ, ನಮ್ಮ ವ್ಯಕ್ತಿತ್ವದ ಬಗ್ಗೆ, ನಮ್ಮ ಗುಣಲಕ್ಷಣದ ಬಗ್ಗೆ ಈ ಮೊದಲನೇ ಮನೆಯಲ್ಲಿ ನಾವು ತಿಳಿದುಕೊಳ್ಳಬಹುದು. ದೇಹದ ಭಾಗದಲ್ಲಿ ತಲೆ ಮತ್ತು ಮುಖವನ್ನು ಸೂಚಿಸುತ್ತದೆ.
* ಎರಡನೇ ಮನೆ :- ಎರಡನೇ ಮನೆಯನ್ನು ಧನ ಭಾವ ಎಂದು ಕರೆಯುತ್ತೇವೆ. ಅಂದರೆ ನಮ್ಮ ಹಣಕಾಸಿನ ಬಗ್ಗೆ ನಮ್ಮ ಚರ ಆಸ್ತಿ ಎಷ್ಟಿದೆ ಎನ್ನುವುದರ ಬಗ್ಗೆಯೂ ಸಹ ತಿಳಿಸುತ್ತದೆ ಹಾಗೂ ನಮ್ಮ ಕುಟುಂಬದ ಬಗ್ಗೆ ಹಾಗೂ ವಾಣಿ ಅಂದರೆ ನಾವು ಹೇಗೆ ಮಾತನಾಡುತ್ತೇವೆ ಅದು ಒಳ್ಳೆಯ ರೀತಿ ಇರುತ್ತದೆಯಾ ಕೆಟ್ಟ ರೀತಿ ಇರುತ್ತದೆಯಾ ಎನ್ನುವುದನ್ನು ತಿಳಿದುಕೊಳ್ಳಬಹುದು ದೇಹದ ಭಾಗದಲ್ಲಿ ಬಾಯಿ ಮತ್ತು ಗಂಟಲನ್ನು ಸೂಚಿಸುತ್ತದೆ.
* ಮೂರನೇ ಮನೆ :- ಮೂರನೇ ಮನೆಯನ್ನು ಭ್ರಾತೃ ಭಾವ ಅಥವಾ ಸಹಜ ಭಾವ ಎಂದು ಕರೆಯುತ್ತೇವೆ. ಅಂದರೆ ನಮ್ಮ ತಮ್ಮನ ಬಗ್ಗೆ, ಹಾಗೂ ತಂಗಿಯ ಬಗ್ಗೆ ನಮ್ಮ ಬರವಣಿಗೆಯ ಬಗ್ಗೆ, ಪರಾಕ್ರಮದ ಅಂದರೆ ಧೈರ್ಯವಂತರು ಯಾವುದೇ ವಿಚಾರವನ್ನು ಹೇಗೆ ಯಾವುದೇ ಭಯ ಇಲ್ಲದೆ ಧೈರ್ಯದಿಂದ ಎದುರಿಸುತ್ತೇವೆ ಎನ್ನುವುದರ ಬಗ್ಗೆ ತಿಳಿಸುತ್ತದೆ. ದೇಹದ ಭಾಗದಲ್ಲಿ ಎದೆ ಶ್ವಾಸಕೋಶ ಮತ್ತು ಹೆಗಲನ್ನು ಸೂಚಿಸುತ್ತದೆ.
ಈ ಸುದ್ದಿ ಓದಿ:-ಬಂತು ನೋಡಿ ಮಿನಿ ಮ್ಯಾಜಿಕ್ ಏರ್ ಕೂಲರ್ ಕೇವಲ 1300 ಕ್ಕೆ ಸಿಗುತ್ತೆ.! ಕರೆಂಟ್, ಪವರ್ ಬಂಕ್ 2 ರಲ್ಲೂ ರನ್ ಮಾಡಬಹುದು ಬೇಸಿಗೆ ಕಾಲಕ್ಕೆ ರಿಲೀಫ್ ನೀಡುತ್ತೆ
* ನಾಲ್ಕನೇ ಮನೆ :- ನಾಲ್ಕನೇ ಮನೆಯನ್ನು ಸುಖಭಾವ ಎಂದು ಕರೆಯುತ್ತೇವೆ. ಅಂದರೆ ನಾವು ಇರುವುದಕ್ಕೆ ಮನೆ ಆಸ್ತಿಪಾಸ್ತಿ ಬಂಗಲೆ ನಾವು ಚಲಾಯಿಸುವಂತಹ ವಾಹನ ಅದರಲ್ಲೂ ಬಹಳ ವಿಶೇಷವಾಗಿ ನಮ್ಮ ತಾಯಿಯನ್ನು ಇದು ಸೂಚಿಸುತ್ತದೆ ದೇಹದ ಭಾಗದಲ್ಲಿ ಇದು ಹೃದಯವನ್ನು ಸೂಚಿಸುತ್ತದೆ.
* ಐದನೇ ಮನೆ :- ಐದನೇ ಮನೆಯನ್ನು ಸಂತಾನಭಾವ ಎಂದು ಕರೆಯುತ್ತೇವೆ. ಇದರಲ್ಲಿ ನಮ್ಮ ಸಂತಾನ ಫಲದ ಬಗ್ಗೆ ಹಾಗೂ ನಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ, ಹಾಗೂ ನಮ್ಮ ಹಿಂದಿನ ಜನ್ಮದಲ್ಲಿ ಎಷ್ಟೆಲ್ಲಾ ಪುಣ್ಯವನ್ನು ಸಂಪಾದನೆ ಮಾಡಿಕೊಂಡು ಬಂದಿದ್ದೇವೆ.
ಈ ಸುದ್ದಿ ಓದಿ:-ನಿಮಗೂ ಮೊಣಕೈನಲ್ಲಿ ಈ ರೀತಿ ಗಂಟು ಇದೆಯೇ.? ಕಾರಣ ಏನು.? ಹೀಗಿದ್ದರೆ ಏನು ಮಾಡಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಹಾಗೂ ಪ್ರೀತಿ ಪ್ರೇಮ ವಿಚಾರದ ಬಗ್ಗೆ ಹಾಗೂ ನಿಮ್ಮ ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಹೀಗೆ ಈ ಎಲ್ಲಾ ವಿಷಯದ ಬಗ್ಗೆ ನಾವು ಐದನೇ ಮನೆಯಲ್ಲಿ ತಿಳಿದುಕೊಳ್ಳಬಹುದಾಗಿದೆ. ದೇಹದ ಭಾಗದಲ್ಲಿ ಇದು ಹೊಟ್ಟೆ ಬೆನ್ನು ಹಾಗೂ ಬೆನ್ನು ಮೂಳೆಯನ್ನು ಇದು ಸೂಚಿಸುತ್ತದೆ.
* ಆರನೇ ಮನೆ :- ಆರನೇ ಮನೆಯನ್ನು ಋಣ ಭಾವ ಎಂದು ಕರೆಯುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.