ನಮ್ಮ ಅದೃಷ್ಟ ನಮ್ಮ ಕೈಗಳಲ್ಲಿಯೇ ಇದೆ. ಇದಕ್ಕೆ ಶ್ರಮದಿಂದ ಸಾಧಿಸಿ ಎನ್ನುವ ಒಳಾರ್ಥ ಇದ್ದರೂ ಹಸ್ತ ಸಾಮುದ್ರಿಕ ಶಾಸ್ತ್ರದ ಮೂಲಕ ನಮ್ಮ ಅದೃಷ್ಟದ ಸುಳಿವು ಹಾಗೂ ನಾವು ಯಾವ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಲ್ಲೆವು ಎನ್ನುವ ಮಾರ್ಗದರ್ಶನ ಸಿಗುವುದು ಸುಳ್ಳಲ್ಲ. ನಮ್ಮ ಹಸ್ತಗಳಲ್ಲಿರುವ ರೇಖೆಗಳು ನಮ್ಮ ಕೈ ಬೆರಳ ತುದಿಯಲ್ಲಿರುವ ಚಿಹ್ನೆಗಳ ಮೂಲಕವೂ ಕೂಡ ನಮ್ಮ ಹಣೆಬರಹವನ್ನು ನಿರ್ಧರಿಸಲಾಗುತ್ತದೆ.
ಇಂದು ನಾವು ಈ ವಿಶೇಷವಾದ ವಿದ್ಯೆಯಲ್ಲಿ ಪ್ರತಿಯೊಬ್ಬ ಸಾಮಾನ್ಯನಿಗೂ ತಿಳಿದಿರಬೇಕಾದ ಒಂದು ಸಂಗತಿಯ ಬಗ್ಗೆ ತಿಳಿಸುತ್ತಿದ್ದೇವೆ. ನಮ್ಮ ಕೈ ಬೆರಳ ತುದಿಯಲ್ಲಿ ಇರುವ ಚಿಹ್ನೆಗಳು ಯಾವುವು ಇವುಗಳ ಸಂಖ್ಯೆ ಆಧಾರದ ಮೇಲೆ ಏನನ್ನು ಹೇಳಬಯಸುತ್ತವೆ, ಎನ್ನುವುದನ್ನು ತಿಳಿಸುತ್ತಿದ್ದೇವೆ.
ನಮ್ಮ ಕೈ ಬೆರಳಗಳ ತುದಿಗಳಲ್ಲಿ ಶಂಖದ ರೀತಿ ರಚನೆ ಮತ್ತು ಚಕ್ರದ ರೀತಿಯ ಚಿಹ್ನೆ ಇರುತ್ತದೆ ಮತ್ತೊಂದು ಬಗೆಯಲ್ಲಿ ಇರುವುದನ್ನು ಸೀಪಾ ಕರೆಯುತ್ತಾರೆ. ಇವುಗಳನ್ನು ಗುರುತಿಸುವುದು ಹೇಗೆ? ಎಷ್ಟಿದ್ದರೆ ಏನು ಫಲ ಎನ್ನುವ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ ಇವುಗಳನ್ನು ಗುರುತಿಸಲು 10 ಬೆರಳುಗಳನ್ನು ಕೂಡ ಪರಿಗಣಿಸಬೇಕು.
ಈ ಸುದ್ದಿ ಓದಿ:- 1 ರೂಪಾಯಿ ಬಂಡವಾಳ ಇಲ್ಲದೆ ಮನೆಯಲ್ಲಿಯೇ ಕೂತು ಲಕ್ಷ ಹಣ ಸಂಪಾದನೆ ಮಾಡಬಹುದು.!
ಬೆರಳುಗಳ ತುದಿಯಲ್ಲಿ ಅಥವಾ ಪರ್ವದ ಕೊನೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿರುವ ರೇಖೆಗಳು ಯಾವ ರೀತಿ ಆಕಾರ ತಾಳುತ್ತಿದೆ ಎನ್ನುವುದನ್ನು ಕಂಡುಕೊಳ್ಳಬಹುದು. ಅದರ ಆಧಾರದ ಮೇಲೆ ಅದು ಶಂಖವೇ ಚಕ್ರವೇ ಅಥವಾ ಸೀಪವೇ ಎಂದು ಲೆಕ್ಕ ಹಾಕಿ 10 ಬೆರಳುಗಳಲ್ಲಿ ಯಾವುದು ಎಷ್ಟಿದೆ ಎಂದು ಒಂದು ಕಡೆ ಬರೆದುಕೊಳ್ಳಬೇಕು.
ಚಕ್ರ ಚಿಹ್ನೆಯ ಯೋಗ ಫಲಗಳು:-
* 10 ಬೆರಳುಗಳ ತುದಿಯಲ್ಲಿ ಕೂಡ ಚಕ್ರದ ಚಿಹ್ನೆಯನ್ನೇ ಹೊಂದಿದ್ದರೆ ಅವರು ಯೋಗಿ ಆಗುತ್ತಾರೆ
* 9 ಬೆರಳುಗಳಲ್ಲಿ ಚಕ್ರದ ಚಿಹ್ನೆಯನ್ನು ಹೊಂದಿದ್ದರೆ ಅವರು ರಾಜನಾಗುತ್ತಾರೆ ಅಥವಾ ದೊರೆ ಸಮಾನದ ಅಧಿಕಾರ ಹೊಂದಿರುವ ಅಥವಾ ಐಶ್ವರ್ಯ ಹೊಂದಿರುವಂತಹ ವ್ಯಕ್ತಿಯಾಗುತ್ತಾನೆ
* 8 ಚಕ್ರಗಳನ್ನು ಹೊಂದಿದ್ದರೆ ಅಂತ ವ್ಯಕ್ತಿಯು ರೋಗಗ್ರಸ್ಥನಾಗುತ್ತಾನೆ ಸದಾ ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಾನೆ.
* 7 ಚಕ್ರಗಳನ್ನು ಹೊಂದಿದ್ದರೆ ಅಂತಹ ವ್ಯಕ್ತಿಗೆ ಒಂದು ಒಳ್ಳೆಯ ಶುಭಯೋಗವು ಅವರ ಅದೃಷ್ಟದಲ್ಲಿ ಇದೆ ಎಂದು ಹೇಳಲಾಗಿದೆ
* 6 ಮತ್ತು 5 ಚಕ್ರ ಇದ್ದರೆ ಎರಡಕ್ಕೂ ಕೂಡ ಒಂದೇ ರೀತಿಯ ಫಲವನ್ನು ಸೂಚಿಸಲಾಗಿದೆ. ಇಂತಹ ವ್ಯಕ್ತಿಗಳು ಬಹಳ ಕಾಮಸೂಕ್ತ ಇರುವ ವ್ಯಕ್ತಿಗಳಾಗಿರುತ್ತಾರೆ ಸ್ತ್ರೀ ವಿಲಾಸಿಗಳಾಗಿರುತ್ತಾರೆ ಎಂದು ಹೇಳಲಾಗಿದೆ
* 4 ಚಕ್ರಗಳು ಇದ್ದರೆ ಅಂತವರ ಜೀವನವು ಬಹಳ ಕಷ್ಟದಿಂದ ಕೂಡಿರುತ್ತದೆ ಸದಾ ಕಾಲ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿ:- ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!
* 3 ಚಕ್ರಗಳು ಇದ್ದರೆ ಬಹಳ ಸಿರಿವಂತರಾಗಿರುತ್ತಾರೆ, ಇವರಿಗೆ ಹಣಕಾಸಿನ ಸಮಸ್ಯೆ ಬರುವುದಿಲ್ಲ
* 2 ಚಕ್ರಗಳು ಇದ್ದರೆ ಆ ವ್ಯಕ್ತಿಗಳು ಗೌರವಾನ್ವಿತ ವ್ಯಕ್ತಿಗಳಾಗಿರುತ್ತಾರೆ, ಕೀರ್ತಿವಂತರಾಗುತ್ತಾರೆ.
* 1 ಚಕ್ರ ಇದ್ದರೆ ಇವರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸಂತೋಷ ಇದ್ದು, ಬಹಳ ಸಂತೋಷದಲ್ಲಿ ಜೀವನ ಕಳೆಯುತ್ತಾರೆ ಎಂದು ಹೇಳಲಾಗಿದೆ.
ಶಂಖ ಚಿಹ್ನೆಯ ಯೋಗ ಫಲಗಳು:-
* 1 ಶಂಖ ಚಿಹ್ನೆ ಇದ್ದರೆ ಸುಖ ಸಂಪನ್ನರಾಗಿರುತ್ತಾರೆ
* 2 ಶಂಖ ಚಿಹ್ನೆಯು ಬಡತನದ ಸೂಚಕ
* 3 ಶಂಖ ಚಿಹ್ನೆ ಇರುವವರಲ್ಲಿ ದುರ್ಗುಣದ ಅಂಶ ಹೆಚ್ಚಾಗಿರುತ್ತದೆ
* 4 ಶಂಖ ಚಿಹ್ನೆ ಇರುವವರು ಸದ್ಗುಣವಂತರಾಗಿರುತ್ತಾರೆ
* 5 ಶಂಖ ಇರುವವರು ನಿರ್ಧನವಂತರಾಗಿರುತ್ತಾರೆ
* 6 ಶಂಖ ಚಿಹ್ನೆ ಇರುವವರು ಧೈರ್ಯಶಾಲಿಗಳಾಗಿರುತ್ತಾರೆ, ಸ್ವ ಸಾಮರ್ಥ್ಯದಿಂದ ಜೀವನದಲ್ಲಿ ಏಳಿಗೆಯಾಗುತ್ತಾರೆ
* 7 – 10 ಶಂಖಗಳು ಇದ್ದರೆ ಒಂದೇ ರೀತಿಯ ಫಲ ಹೊಂದಿರುತ್ತಾರೆ, ಇವರು ಆತನು ದೊರೆಯಾಗುತ್ತಾನೆ, ಶ್ರೀಮಂತಿಕೆಗೆ ಸಮನಾದ ಸುಖ ಲಭಿಸುತ್ತದೆ.
ಸೀಪ ಚಿಹ್ನೆಯ ಫಲಗಳು:-
ಶಂಖವು ಅಲ್ಲದ ಚಕ್ರವೂ ಅಲ್ಲದ ಚಿಹ್ನೆಗಳನ್ನು ಸೀಪ ಚಿಹ್ನೆಗಳು ಎನ್ನುತ್ತಾರೆ
* 1 ಸೀಪ ಚಿಹ್ನೆ ಇದ್ದರೆ ಗುಣವಂತರು
* 2 ಸೀಪ ಚಿಹ್ನೆ ಇದ್ದರೆ ವಾಕ್ಚತುರರು
* 3 ಇದ್ದರೆ ತುಂಬಾ ಸಿರಿವಂತರಾಗುತ್ತಾರೆ
* 4 ಇದ್ದರೆ ಸದ್ಗುಣವಂತರಾಗುತ್ತಾರೆ
* 5 – 10 ಸೀಪ ಚಿಹ್ನೆ ಇದ್ದರೆ ಅವರು ಬಹಳ ಧನ ಸಂಪತ್ತನ್ನು ಹೊಂದಿ ಭೋಗ ಜೀವನ ನಡೆಸುವಂತಹ ಯೋಗ ಹೊಂದಿರುತ್ತಾರೆ ಎಂದು ಹೇಳಲಾಗಿದೆ.