ಶಿವರಾತ್ರಿ ದಿನ ಶಿವನ ಪೂಜೆಗೆ ಆರಾಧನೆಗೆ ವಿಶೇಷವಾದ ದಿನ. ಲಿಂಗರೂಪಿಯಾದ ಅಭಿಷೇಕ ಪ್ರಿಯ ಶಿವನಿಗೆ ವಿಧವಿಧವಾದ ಅಭಿಷೇಕ ಮಾಡಿ ಉಪವಾಸ ಜಾಗರಣೆ ಮಾಡಿ ಶಿವನ ಕೃಪಾಕಟಾಕ್ಷಕ್ಕಾಗಿ ಬೇಡುತ್ತಾರೆ ಸಂಪೂರ್ಣವಾಗಿ ಈ ದಿನವನ್ನು ಶಿವನ ಧ್ಯಾನದಲ್ಲಿ ಕಳೆಯುತ್ತಾರೆ.
ವರ್ಷಕ್ಕೊಮ್ಮೆ ಬರುವ ಈ ಮಹಾಶಿವರಾತ್ರಿ ದಿನವು ಈ ವರ್ಷ ಮಾರ್ಚ್ 08 ಶುಕ್ರವಾರದಂದು ಬಂದಿದೆ ನೀವು ಕೂಡ ಈ ದಿನ ಶಿವನನ್ನು ವಿಶೇಷವಾಗಿ ನಾವು ಹೇಳುವ ಈ ಮೂರು ವಿಧಾನದಲ್ಲಿ ಪೂಜಿಸುವ ಮೂಲಕ ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಯಾವ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಮಾಡಿಕೊಳ್ಳಬಹುದು ಎನ್ನುವ ವಿವರ ಹೀಗಿದೆ ನೋಡಿ.
* ಮೊದಲನೇದಾಗಿ ಈಗಿನ ಕಾಲದಲ್ಲಿ ಬಹುತೇಕ ಸಮಸ್ಯೆ ಎಂದರೆ ಮದುವೆಯಾಗಲು ಒಳ್ಳೆಯ ಸಂಬಂಧ ಕೂಡಿ ಬರುತ್ತಿಲ್ಲ ಮದುವೆ ವಿಳಂಬವಾಗುತ್ತಿದೆ ಎನ್ನುವುದು. ಎಷ್ಟೋ ಜನರಿಗೆ ನಿಶ್ಚಿತಾರ್ಥದ ಹಂತಕ್ಕೆ ಬಂದು ಮದುವೆ ನಿಂತು ಹೋಗುತ್ತದೆ ಅಥವಾ ಸಾಕಷ್ಟು ವರ್ಷಗಳಿಂದ ಹೆಣ್ಣನ್ನು ಅಥವಾ ಗಂಡನ್ನು ನೋಡುತ್ತಲೇ ಇರುತ್ತಾರೆ ಸೆಟ್ ಆಗಿರುವುದಿಲ್ಲ ಇದರಿಂದ ಬಹಳ ಬೇಸರವಾಗಿರುತ್ತದೆ.
ಈ ಸುದ್ದಿ ಓದಿ:- 1 ರೂಪಾಯಿ ಬಂಡವಾಳ ಇಲ್ಲದೆ ಮನೆಯಲ್ಲಿಯೇ ಕೂತು ಲಕ್ಷ ಹಣ ಸಂಪಾದನೆ ಮಾಡಬಹುದು.!
ಯಾಕೆಂದರೆ, ಜೀವನದಲ್ಲಿ ಸರಿಯಾದ ಸಮಯಕ್ಕೆ ಎಲ್ಲವೂ ನಡೆಯಬೇಕು. ನಿಮಗೂ ಈ ರೀತಿ ಸಮಸ್ಯೆಗಳು ಇದ್ದರೆ ಶಿವರಾತ್ರಿಯ ದಿನದಂದು ಒಂದು ಲೋಟ ಹಸುವಿನ ಹಾಲಿಗೆ ಒಂದು ಚಿಟಿಕೆ ಶುದ್ಧವಾದ ಕೇಸರಿ ದಳಗಳನ್ನು ಹಾಕಿ ಶಿವಲಿಂಗಕ್ಕೆ ಅಭಿಷೇಕ ಮಾಡಲು ಶಿವ ದೇವಾಲಯಗಳಿಗೆ ಅರ್ಪಿಸಿ ಮತ್ತು ಅಲ್ಲಿ ಶಿವನನ್ನು ನಿಮ್ಮ ಸಮಸ್ಯೆ ಪರಿಹರಿಸುವಂತೆ ಪ್ರಾರ್ಥಿಸಿ, 108 ಬಾರಿ ಪಂಚಾಕ್ಷರಿ ಮಂತ್ರ ಜಪಿಸಿ ಪ್ರಾರ್ಥಿಸಿ. ಬಹಳ ಆಶ್ಚರ್ಯಕರ ರೀತಿಯಲ್ಲಿ ಮುಂದಿನ ಒಂದು ವರ್ಷದೊಳಗೆ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ.
ಹಾಗೆಯೇ ಸಂತಾನ ವಿಳಂಬ ಎನ್ನುವುದು ಅನೇಕ ಹೆಣ್ಣು ಮಕ್ಕಳ ಕ’ಣ್ಣೀ’ರಿಗೆ ಕಾರಣವಾಗಿದೆ. ಹೆಣ್ಣುಮಕ್ಕಳಲ್ಲದೆ ಆಕೆಯ ಕುಟುಂಬವೂ ಕೂಡ ಈ ಕಾರಣಕ್ಕಾಗಿ ದುಃ’ಖಿಸುತ್ತಿರುತ್ತದೆ. ಈ ರೀತಿ ನಿಮ್ಮ ಮನೆಯಲ್ಲಿ ಸಮಸ್ಯೆ ಇದ್ದರೆ ಸಂತಾನ ಫಲ ಬಯಸುವವರು ಗೋಧಿ ಹಿಟ್ಟಿನಲ್ಲಿ 11 ಶಿವಲಿಂಗಗಳನ್ನು ಮಾಡಿ ಅದನ್ನು ಒಂದು ತಟ್ಟೆಯಲ್ಲಿ ಇಟ್ಟು ಎರಡು ಕೈಗಳಲ್ಲಿ ಶುದ್ಧ ನೀರು ತೆಗೆದು ಕೊಂಡು ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ.
ಬಳಿಕ ದೀಪ ಕುಂಕುಮ ಬಿಲ್ವಪತ್ರೆ ಅಕ್ಷತೆ ಇವುಗಳಿಂದ ಪೂಜೆ ಮಾಡಿ ನೈವೇದ್ಯ ಅರ್ಪಿಸಿ 108 ಬಾರಿ ಪಂಚಾಕ್ಷರಿ ಮಂತ್ರ ಹೇಳುತ್ತಾ ನಿಮ್ಮ ಸಮಸ್ಯೆ ಪರಿಹಾರಕ್ಕಾಗಿ ಪ್ರಾರ್ಥಿಸಿ ಖಂಡಿತವಾಗಿಯೂ ನಿಮ್ಮ ಒಡಲು ತುಂಬುತ್ತದೆ. ಈ ಎರಡು ಸಮಸ್ಯೆಗಳ ಜೊತೆಗೆ ಬಹುತೇಕರ ಜೀವನದಲ್ಲಿ ಇರುವ ಮತ್ತೊಂದು ಸಮಸ್ಯೆ ಏನೆಂದರೆ ಹಣಕಾಸಿನ ಸಮಸ್ಯೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದರೆ ಎಂತಹ ಕಷ್ಟವನ್ನು ಬೇಕಾದರೂ ಜಯಿಸುವ ಧೈರ್ಯ ಬರುತ್ತದೆ.
ಈ ಸುದ್ದಿ ಓದಿ:- ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!
ನೀವು ಗೊತ್ತಿದ್ದೋ ಗೊತ್ತಿಲ್ಲದೆಯೋ ಸಾಲದ ಸುಳಿಯಲ್ಲಿ ಸಿಲುಕಿದರೆ ಅಥವಾ ಎಲ್ಲಾದರೂ ಹಣ ಹಾಕಿ ಕಳೆದುಕೊಂಡಿದ್ದರೆ ನಿಮ್ಮ ವ್ಯಾಪಾರ ವ್ಯವಹಾರ ನಷ್ಟವಾಗಿ ಹಾಕಿದ ಬಂಡವಾಳ ಕೈಗೆ ಬರುತ್ತಿಲ್ಲ ಎನ್ನುವುದಾದರೆ ನೀವು ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲು ಶಿವರಾತ್ರಿ ದಿನ ಒಂದು ಚಿಕ್ಕ ಆಚರಣೆ ಮಾಡಬೇಕು.
ನೀವು ಸ್ನಾನ ಮಾಡುವ ನೀರಿಗೆ ಐದರಿಂದ ಆರು ಕೇಸರಿ ದಳ ಅಥವಾ ಕೇಸರಿ ಇಲ್ಲದೆ ಇದ್ದರೆ ಏಲಕ್ಕಿಯ ಬೀಜಗಳನ್ನು ಐದಾರು ಹಾಕಿ ಸ್ನಾನ ಮಾಡಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮಿ ಕಳೆ ಬರುತ್ತದೆ, ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರವಾಗಿ ನೀವು ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿಯನ್ನು ಕಾಣುತ್ತೀರಿ.