ಹಸುವನ್ನು ಕಾಮಧೇನು, ಗೋ ಮಾತೆ, ಬಸವ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ದೇವತೆಗಳಿಗೆ ನೀಡುವಷ್ಟೇ ಸ್ಥಾನವನ್ನು ಈ ಪಶುಗಳಿಗೂ ಕೂಡ ನೀಡಲಾಗಿದೆ. ಯಾಕೆಂದರೆ ಹಸುವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ.
ಈ ರೀತಿಯಾಗಿ ಹಸುವಿನ ಯಾವ ಯಾವ ಭಾಗದಲ್ಲಿ ಯಾವ ದೇವರುಗಳು ನೆಲೆಸಿದ್ದಾರೆ ಎನ್ನುವ ಫೋಟೋಗಳನ್ನು ಕೂಡ ನಾವು ನೋಡಿದ್ದೇವೆ. ಕಲ್ಪವಕ್ಷ, ಬಾಳೆ ಮರದಂತೆ ಹಸುವಿನಿಂದ ಸಿಗುವ ಪ್ರತಿಯೊಂದು ಕೂಡ ಮೌಲ್ಯಯುತವಾದದ್ದೇ ಎಸ್.ಜಿ ನರಸಿಂಹಚಾರ್ಯರು ಬರೆದ ನೀನಾರಿಗಾದೆಯೋ ಎಲೆ ಮಾನವ ಈ ಪದ್ಯದಲ್ಲಿ ನೋಡಬಹುದು.
ಹಾಗಾಗಿ ದೈವೀಗುಣ ಹೊಂದಿರುವ ಹಸುವನ್ನು ಪೂಜಿಸುವುದರಿಂದ ನಮ್ಮ ಅನೇಕ ದೋಷಗಳಿಗೆ ಪರಿಹಾರವನ್ನು ಕಾಣಬಹುದು, ಇದನ್ನು ಪುರಾಣ ಮತ್ತು ಉಪನಿಷತ್ತುಗಳಲ್ಲಿ ವಿವರಿಸಲಾಗಿದೆ. ಯಾವ ರೀತಿ ಗೋವಿನ ಪೂಜೆ ಮಾಡಬೇಕು ಮತ್ತು ಯಾವ ರೀತಿಯ ದೋಷಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!
* ಹಸುವಿಗೆ ನಮ್ಮ ಸಂಸ್ಕೃತಿಯಲ್ಲಿ ತಾಯಿಯ ಸ್ಥಾನವನ್ನು ಕೊಡಲಾಗಿದೆ. ಎಷ್ಟೋ ಕುಟುಂಬಗಳು ಹಸುವಿನ ಹಾಲಿನ ಮೇಲೆ ಡಿಪೆಂಡ್ ಆಗಿ ಜೀವನ ಕಳೆಯುತ್ತಿರುವುದನ್ನು ಕೂಡ ನಾವು ನೋಡಬಹುದು ಮತ್ತು ಹಸುವನ್ನು ತಾಯಿ ಮಹಾಲಕ್ಷ್ಮಿಯ ರೂಪ ಎಂದು ಹೇಳಲಾಗುತ್ತದೆ.
ಈ ಹಸುವನ್ನು ವಿಧಿ ವಿಧಾನದಿಂದ ಪೂಜಿಸುವುದರಿಂದ ವಾಸ್ತುದೋಷಗಳು ಸಂತಾನ ದೋಷಗಳು ಅಥವಾ ವಿವಾಹಕ್ಕೆ ಸಂಬಂಧ ಪಟ್ಟ ಅಡೆತಡೆಗಳು ಆರೋಗ್ಯ ಸಮಸ್ಯೆಗಳು ಈ ಬಗೆಯ ಎಲ್ಲಾ ಸಮಸ್ಯೆಗಳಿಗೂ ಕೂಡ ಪರಿಹಾರ ಕಾಣಬಹುದು
* ನಿಮಗೆ ಮದುವೆ ವಿಳಂಬ ಆಗುತ್ತಿದ್ದರೆ ಐದು ಶುಕ್ರವಾರದಂದು ಹಸುವಿಗೆ ಪೂಜೆ ಮಾಡಿ ಹಸುವಿಗೆ ಬಾಳೆಹಣ್ಣು ಅಕ್ಕಿ ಮತ್ತು ಬೆಲ್ಲವನ್ನು ಹಾಗೂ ಸಿಹಿ ಪದಾರ್ಥವನ್ನು ತಿನ್ನಲು ನೀಡಿ ಇದರಿಂದ ನಿಮ್ಮ ದೋಷ ಪರಿಹಾರವಾಗಿ ಕಂಕಣ ಬಲ ಕೂಡಿ ಬರುತ್ತದೆ. ಇದೇ ರೀತಿಯ ಪರಿಹಾರವನ್ನು ನೀವು ಸಂತಾನ ಫಲಕ್ಕಾಗಿ ಕೂಡ ಮಾಡಬಹುದು.
ಈ ಸುದ್ದಿ ಓದಿ:-ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ಸುಲಭ ಟಿಪ್ಸ್ ಗಳನ್ನು ಫಾಲೋ ಮಾಡಿ.!
* ಹಸುವನ್ನು ಅಸಹಾಯಕರ ಕುಟುಂಬಕ್ಕೆ ದಾನವಾಗಿ ನೀಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತದೆ ಒಳ್ಳೆಯ ಆರೋಗ್ಯವಂತ ಹಸುವನ್ನು ಕರು ಸಮೇತ ದಾನ ನೀಡುವುದರಿಂದ ಅನೇಕ ಗೃಹ ದೋಷಗಳಿಂದ ಕೂಡ ಪರಿಹಾರ ಸಿಗುತ್ತದೆ.
* ಮನೆಯಲ್ಲಿ ಹಸುವನ್ನು ಸಾಕಿ ಅದರ ಹಾರೈಕೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮತ್ತು ಕುಟುಂಬದ ವಾಸ್ತು ದೋಷಗಳು ನಿವಾರಣೆಯಾಗಿ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಮನೆಯಲ್ಲಿ ಹಸು ಕರು ಇದ್ದರೆ ಮತ್ತು ಮಕ್ಕಳ ಬಹಳು ಲವಲವಿಕೆಯಿಂದ ಬೆಳೆಯುತ್ತಾರೆ ಮತ್ತು ಅವರಿಗೆ ಭೂಮಿ, ಮೂಕ ಪ್ರಾಣಿಗಳು ಇವುಗಳ ಬಗ್ಗೆ ಕನೆಕ್ಷನ್ ಬೆಳೆಯುತ್ತದೆ ಮತ್ತು ಆ ಸಂಸ್ಕಾರ ಕೊನೆಯವರೆಗೂ ಕೂಡ ಉಳಿದು ಅವರ ಬದುಕಿಗೆ ದಾರಿ ದೀಪವಾಗುತ್ತದೆ
* ಮನೆಯಲ್ಲಿ ಹಸು ಸಾಕುವ ಅನುಕೂಲತೆ ಇಲ್ಲದೆ ಇದ್ದವರು ನಿಮ್ಮ ಮನೆ ಬಳಿ ಬರುವ ಪಶುಗಳಿಗೆ ಯಾವುದೇ ಸಮಯದಲ್ಲಿ ಬಾಳೆಹಣ್ಣುಗಳನ್ನು ತರಕಾರಿಗಳನ್ನು ತಿನ್ನಲು ಕೊಡುವುದರಿಂದ ಮತ್ತು ನೀರು ಕುಡಿಸುವುದರಿಂದ ಕೂಡ ನಿಮ್ಮ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ. ನೀವು ಸಾಲದ ಸುಳಿಯಲ್ಲಿ ಸಿಲುಕಿದ್ದರೆ ಅಥವಾ ನಿಮ್ಮ ಹಣ ಬೇರೆ ಎಲ್ಲೋ ಸಿಲುಕು ಕೊಂಡಿದ್ದರೆ ಈ ಗೊಂದಲ ಬಗೆಹರಿದು ಶುಭವಾಗುತ್ತದೆ.
ಈ ಸುದ್ದಿ ಓದಿ:-ಸಿಂಹ ರಾಶಿಯವರಿಗೆ ಏಪ್ರಿಲ್ 2024ರ ಶುಕ್ರ ಪ್ರಭಾವ ನಿಮ್ಮ ಜೀವನದಲ್ಲಿ ನೀವು ಊಹಿಸದ ಒಂದು ಅದ್ಭುತ ಬದಲಾವಣೆಯಾಗಲಿದೆ.!
* ಮನೆಯಲ್ಲಿ ಯಾವುದೇ ಶುಭ ಕಾರ್ಯ ಮಾಡುವ ಹಸುವಿಗೆ ಪೂಜೆ ಮಾಡಿ ನಂತರ ಶುಭ ಕಾರ್ಯವನ್ನು ಆರಂಭಿಸುವುದರಿಂದ ನಿರ್ವಿಘ್ನವಾಗಿ ಕಾರ್ಯ ಸಾಗುತ್ತದೆ.