
ಭಗವಂತನ ಅನುಗ್ರಹ ಇದ್ದರೆ ಜೀವನದಲ್ಲಿ ಯಾವುದು ಯಾವಾಗ ಬೇಕಾದರೂ ಯಾವ ರೀತಿಯಲ್ಲಾದರೂ ಬದಲಾಗಬಹುದು. ಈ ರೀತಿ ದೇವರ ಕೃಪೆ ಆಗುವುದನ್ನು ಅದೃಷ್ಟ ಎಂದು ಕರೆದರೂ ಕೂಡ ತಪ್ಪಾಗುವುದಿಲ್ಲ. ನಾವು ನಮ್ಮ ಪ್ರಯತ್ನದಿಂದ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಆದರೆ ಸತತ ಪ್ರಯತ್ನದಿಂದ ಕೂಡ ಸಾಧಿಸಲು ಆಗುತ್ತಿದ್ದದ್ದು ಅದೃಷ್ಟದಿಂದ ಸಾಧ್ಯವಾಗುತ್ತದೆ ಅದನ್ನು ಭಗವಂತನ ಅನುಗ್ರಹ ಎಂದು ನಾವು ಒಪ್ಪಲೇಬೇಕು.
ಕೆಲವೊಮ್ಮೆ ಅದೃಷ್ಟ ಎನ್ನುವುದು ಹೇಳದೆ ಬಂದರೆ ಕೆಲವೊಮ್ಮೆ ತಾನು ಬರುವ ಸೂಚನೆಯನ್ನು ಕೂಡ ಕೊಡುತ್ತದೆ. ಆಗ ಎಚ್ಚೆತ್ತುಕೊಂಡು ಅದರ ಪ್ರಕಾರವಾಗಿ ನಡೆದುಕೊಂಡರೆ ಮುಂದೆ ನಮ್ಮ ಜೀವನ ಬಹಳ ಆಶ್ಚರ್ಯಕರ ರೀತಿಯಲ್ಲಿ ಒಂದೊಳ್ಳೆ ತಿರುವನ್ನು ಪಡೆದುಕೊಳ್ಳುತ್ತದೆ. ಹಾಗಾಗಿ ಅಂತಹ ಅದೃಷ್ಟ ತರುವ ಕೆಲವು ಸೂಚನೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಪತ್ನಿಯಾದವಳು ಪ್ರತಿನಿತ್ಯ ಈ ನಾಲ್ಕು ಕೆಲಸಗಳನ್ನು ಮಾಡಲೇಬೇಕು.! ಇಲ್ಲದಿದ್ರೆ ಆ ಮನೆ ಏಳಿಗೆ ಆಗಲ್ಲ.!
1. ಬೆಳಗ್ಗೆ ಎದ್ದ ಕೂಡಲೇ ನಮ್ಮ ಮನಸ್ಸು ಪ್ರಶಾಂತವಾಗಿದ್ದರೆ ಪಾಸಿಟಿವ್ ಆಗಿದ್ದರೆ ದಿನ ಪೂರ್ತಿ ಅದೇ ರೀತಿ ಇರುತ್ತದೆ. ಆ ಮನಸ್ಥಿತಿ ನಮ್ಮ ದಿನದ ಎಲ್ಲಾ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ಒಳ್ಳೆಯ ವಿಷಯಗಳನ್ನು ಗಮನಿಸುವುದು ಬಹಳ ಮುಖ್ಯ. ನಿಮಗೆ ಏನಾದರೂ ಬೆಳಗ್ಗೆ ಏಳುತ್ತಿದ್ದ ಕೂಡಲೇ ಗೋವಿನ ದರ್ಶನ, ಗಂಟೆನಾದ, ಪಕ್ಷಿಗಳ ಧ್ವನಿ, ಮುತ್ತೈದರ ದರ್ಶನ ಮತ್ತು ಬೆಳಗ್ಗೆ ಎದ್ದ ಕೂಡಲೇ ಧನಾಗಮನವಾದರೆ ಅದು ಶುಭ ಸೂಚನೆಯಾಗಿದೆ.
ಹಾಗೆಯೇ ಯಾವುದಾದರೂ ಒಂದು ಒಳ್ಳೆಯ ಉದ್ದೇಶದಿಂದ ಆ ಕೆಲಸಕ್ಕೆ ಹೊರಟಾಗ ಎದುರಿನಿಂದ ತುಂಬಿದ ಕೊಡ ಕಂಡರೆ ಹಾಲು ತುಂಬಿದ ಪಾತ್ರೆ ಅಥವಾ ಎಳನೀರನ್ನು ಕಂಡರೂ ಕೂಡ ಅದು ನಿಮಗೆ ಮುಂದೆ ಅದೃಷ್ಟ ಬರುವ ಸೂಚನೆ ಆಗಿದೆ.
● ಕೆಲವೊಮ್ಮೆ ನಾವು ಕೆಲವು ಪ್ರಯತ್ನಗಳ ಮೂಲಕ ಅದೃಷ್ಟವನ್ನು ಪಡೆದುಕೊಳ್ಳಬಹುದು. ಕೆಲವೊಮ್ಮೆ ವಸ್ತುಗಳ ಮೂಲಕ ಅಥವಾ ನಾವು ಮಾಡುವ ಕೆಲಸದ ಮೂಲಕ ದೈವಾನುಗ್ರಹವಾಗುತ್ತದೆ. ಅದರ ಬಗ್ಗೆ ಹೇಳುವುದಾದರೆ ಸತ್ಯನಾರಾಯಣ ಪೂಜೆ ಬಗ್ಗೆ ಹೇಳಲೇಬೇಕು. ಯಾಕೆಂದರೆ ಯಾರೇ ಸತ್ಯನಾರಾಯಣ ಪೂಜೆಗೆ ಕರೆದರೂ ಕೂಡ ತಪ್ಪದೆ ಹೋಗಬೇಕು.
ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ಕದ್ದಾದರೂ ತಿನ್ನಬೇಕು ಎನ್ನುವ ಮಾತೇ ಇದೆ. ಯಾಕೆಂದರೆ ಸತ್ಯನಾರಾಯಣ ಪೂಜೆಯ ಪ್ರಸಾದ ಸಿಕ್ಕಿದರೆ ಶ್ರೀ ವಿಷ್ಣುವಿನ ಆಶೀರ್ವಾದವೇ ಸಿಕ್ಕಿದಂತೆ ಆ ಮೂಲಕ ನಮ್ಮ ಬದುಕು ಬದಲಾಗುತ್ತದೆ. ಹಾಗಾಗಿ ಸತ್ಯನಾರಾಯಣ ಪೂಜೆಗೆ ಹೋಗಲು ಹಾಗೂ ಪ್ರಸಾದವನ್ನು ಸ್ವೀಕರಿಸಲು ಎಂದು ನಿರಾಕರಿಸಬೇಡಿ.
ಪೂಜೆ ಮಾಡುವ ಮುನ್ನ ಎಚ್ಚರ. ಇವೆಲ್ಲ ನಿಷಿದ್ಧ ಕಾರ್ಯಗಳು, ಪ್ರತಿಯೊಬ್ಬರೂ ಕೂಡ ಇದನ್ನು ತಿಳಿದುಕೊಂಡಿರಲೇಬೇಕು.!
● ಶಿವನ ಪೂಜೆ ಕೂಡ ಇದೇ ರೀತಿ ಫಲವನ್ನು ಹೊಂದಿದೆ ಶಿವನ ಪೂಜೆ ಮಾಡಲು ಅಥವಾ ನೋಡಲು ಸಾಧ್ಯವಾಗದಿದ್ದರೂ ಕೂಡ ಪೂಜೆ ಮಾಡಿದ ನಂತರ ಯಾರಾದರೂ ಪ್ರಸಾದ ನೀಡಿದರೆ ಅದನ್ನು ಸೇವನೆ ಮಾಡಿ. ಆಗ ಕೂಡ ಶಿವನ ಪೂಜೆ ಮಾಡಿದಷ್ಟೇ. ಪುಣ್ಯ ಲಭಿಸುತ್ತದೆ ಹಾಗೂ ಶಿವನ ಅನುಗ್ರಹ ಸಿಗುತ್ತದೆ.
● ದಾರಿಯಲ್ಲಿ ಹಣ ಸಿಗುವುದು ಕೂಡ ಅದೃಷ್ಟದ ಸಂಕೇತವಾಗಿದೆ. ಇದು ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಹಾಗಾಗಿ ಈ ಹಣವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
● ಗೋವುಗಳು ಮನೆ ಬಾಗಿಲಿಗೆ ಬರುವುದು ಅದೃಷ್ಟದ ಸಂಕೇತ. ಇದ ನಿಂತು ಹೋಗಿದ್ದ ಯಾವುದೋ ಕೆಲಸ ಪುನರಾರಂಭವಾಗುತ್ತದೆ ಹಾಗೂ ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ ಎಂದು ಸೂಚಿಸುತ್ತದೆ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ಕೂಡ ನೆಲೆಸಿರುತ್ತಾರೆ. ಹಾಗಾಗಿ ಹಸುಗಳ ಮನೆಗೆ ಬಂದರೆ ಅಕ್ಕಿ ಬೆಲ್ಲ ಬಾಳೆಹಣ್ಣು ನೀಡಿ ಅರಿಶಿನ ಕುಂಕುಮ ಇಟ್ಟು ಕೈಮುಗಿರಿ.
● ನೀವು ಊಟ ಮಾಡುವಾಗ ಯಾರಾದರೂ ಬಂದರೆ ಅವರನ್ನು ಹಾಗೆ ಕಳುಹಿಸಬೇಡಿ. ಮನೆಗೆ ಬಿಕ್ಷುಕರು ಬಂದಾಗ ಆಹಾರ ಇಲ್ಲದಿದ್ದರೆ ನಿಮ್ಮ ಕೈಲಾದಷ್ಟು ಹಣವಾದರೂ ಕೊಟ್ಟು ಕಳಿಸಿ
● ಮನೆ ಹಿರಿಯರ ಕಾಲಿಗೆ ಬಿದ್ದು ಹಾಗೂ ಮನೆಗೆ ಬರುವ ಹಿರಿಯರು ಮತ್ತು ಗುರುಗಳ ಕಾಲಿಗೆ ಎರಗಿ ಆಶೀರ್ವಾದ ಪಡೆದುಕೊಳ್ಳುವುದು ಒಳ್ಳೆಯದು. ಹಿರಿಯರ ಆಶೀರ್ವಾದದಿಂದ ಅದೃಷ್ಟ ಬದಲಾಗುತ್ತದೆ.