ಪ್ರತಿಯೊಬ್ಬರು ಕೂಡ ಕಾಟನ್ ಬಟ್ಟೆಗಳನ್ನು ಉಪಯೋಗಿಸುತ್ತೇವೆ ಏಕೆ ಎಂದರೆ ಕಾಟನ್ ಬಟ್ಟೆ ನಮಗೆ ಒಂದು ರಕ್ಷಣೆಯ ಕವಚದಂತೆ ನಮ್ಮನ್ನು ಕಾಪಾಡುತ್ತದೆ. ಅಂದರೆ ಬಿಸಿಲಿನ ತಾಪಮಾನವನ್ನು ನಮಗೆ ಕಡಿಮೆ ಮಾಡುತ್ತದೆ ಹಾಗೂ ನಮ್ಮ ದೇಹಕ್ಕೆ ತಂಪನ್ನು ಉಂಟುಮಾಡುತ್ತದೆ.
ಆದ್ದರಿಂದ ಹೆಚ್ಚಾಗಿ ಪ್ರತಿಯೊಬ್ಬರು ಕೂಡ ಕಾಟನ್ ಬಟ್ಟೆಗಳನ್ನು ಉಪಯೋಗಿಸುವುದು ಒಳ್ಳೆಯದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕಾಟನ್ ಬಟ್ಟೆಯನ್ನು ಒಗೆಯು ವಂತಹ ಸಂದರ್ಭದಲ್ಲಿ ನಾವು ಯಾವ ರೀತಿಯ ಕೆಲವು ವಿಧಾನಗಳನ್ನು ಅನುಸರಿಸಬೇಕು.
ಹಾಗೂ ನಾವು ಯಾವ ವಿಧಾನ ಅನುಸರಿಸುವುದ ರಿಂದ ಕಾಟನ್ ಬಟ್ಟೆಯನ್ನು ಎಷ್ಟೇ ಒಗೆದರೂ ಕೂಡ ಅದು ಸುಕ್ಕು ಆಗುವುದಿಲ್ಲ ಬದಲಿಗೆ ಐರನ್ ಆಗಿರುವ ಹಾಗೆಯೇ ಹೊಸದರಂತೆ ಇರುತ್ತದೆ. ಹಾಗಾದರೆ ಯಾವ ಕೆಲವು ವಿಧಾನಗಳನ್ನು ನಾವು ಕಾಟನ್ ಬಟ್ಟೆಯನ್ನು ಒಗೆಯುವಂತಹ ಸಂದರ್ಭದಲ್ಲಿ ಅನುಸರಿಸಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಇಂದು ಶಕ್ತಿಶಾಲಿ ಹುಣ್ಣಿಮೆ ಹಾಗೂ ಕೂರ್ಮ ಜಯಂತಿ ಇದೆ ಈ ಕೆಲಸ ಮಾಡಿ ಧನಲಾಭ ಲಭಿಸುತ್ತೆ.!
* ಬಹಳ ಹಿಂದಿನ ದಿನಗಳಲ್ಲಿ ಅಂದರೆ ಹಿಂದಿನ ಕಾಲದಲ್ಲಿ ಯಾವುದೇ ರೀತಿಯ ಕಾಟನ್ ಬಟ್ಟೆಯನ್ನು ಒಗೆದಂತಹ ಸಂದರ್ಭದಲ್ಲಿ ಅದನ್ನು ಗಂಜಿಯಲ್ಲಿ ಅದ್ದಿ ಅನಂತರ ಬಟ್ಟೆಯನ್ನು ಒಣಗಿಸುವುದರ ಮೂಲಕ ಕಾಟನ್ ಬಟ್ಟೆಯನ್ನು ಹೊಸದರಂತೆ ಆಗುವ ಹಾಗೆ ಉಪಯೋಗಿಸುತ್ತಿದ್ದರು.
ಆದರೆ ಇತ್ತೀಚಿನ ದಿನದಲ್ಲಿ ನಾವೆಲ್ಲರೂ ಕೂಡ ಅನ್ನವನ್ನು ಕುಕ್ಕರ್ ನಲ್ಲಿ ಹಾಕಿ ಮಾಡುತ್ತೇವೆ ಇದರಿಂದ ನಮಗೆ ಯಾವುದೇ ರೀತಿಯಾದಂತಹ ಅನ್ನದ ಗಂಜಿ ಎನ್ನುವುದು ಸಿಗುವುದಿಲ್ಲ. ಹಾಗಾದರೆ ಈ ದಿನ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಎಂದು ನೋಡುವುದಾದರೆ.
* ಮೊದಲು ಒಂದು ಪಾತ್ರೆಗೆ ಒಂದು ಲೀಟರ್ ನಷ್ಟು ನೀರನ್ನು ತೆಗೆದು ಕೊಳ್ಳಬೇಕು ಅಂದರೆ ನಿಮ್ಮ ಬಟ್ಟೆ ಎಷ್ಟು ಇದೆಯೋ ಅಷ್ಟು ಪ್ರಮಾಣ ವನ್ನು ನೋಡಿಕೊಂಡು ನೀವು ನೀರನ್ನು ತೆಗೆದುಕೊಳ್ಳಬೇಕು. ಆನಂತರ ಆ ನೀರನ್ನು ಬಿಸಿ ಮಾಡಲು ಇಡಬೇಕು ಆನಂತರ ಒಂದು ಚಿಕ್ಕ ಬೌಲಿಗೆ ಒಂದು ಲೋಟದಷ್ಟು ನೀರನ್ನು ಹಾಕಿಕೊಂಡು ಅದಕ್ಕೆ ಒಂದು ಚಮಚ ದಷ್ಟು ಕಾನ್ಫ್ಲೋರ್ ಅನ್ನು ಹಾಕಿಕೊಂಡು ಚೆನ್ನಾಗಿ ಗಂಟು ಇಲ್ಲದ ಹಾಗೆ ಮಿಶ್ರಣ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- ಎಷ್ಟೇ ಕೊಳೆಯಿರುವ ದಿಂಬು, ತೆಳ್ಳಗಾಗಿರುವ ದಿಂಬನ್ನು ಕಸಕ್ಕೆ ಎಸೆಯಬೇಡಿ ಸುಲಭವಾಗಿ ನಿಮಿಷದಲ್ಲಿ ಹೊಸದಾಗಿಸಿ…….||
ನೀವು ಕಾನ್ಫ್ಲೋರ್ ಬದಲು ಮೈದಾ ಹಿಟ್ಟನ್ನು ಸಹ ಉಪಯೋಗಿಸಬಹುದು. ಮೇಲೆ ಒಂದು ಬೌಲ್ ನಲ್ಲಿ ಕಾನ್ಫ್ಲೋರ್ ಅನ್ನು ಮಿಶ್ರಣ ಮಾಡಿದಂತಹ ನೀರನ್ನು ಬಿಸಿ ಮಾಡಲು ಇಟ್ಟಂತಹ ನೀರಿಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಅನ್ನವನ್ನು ಬಸಿದರೆ ಗಂಜಿ ಯಾವ ರೀತಿ ಇರುತ್ತದೆಯೋ ಅದೇ ಹದದಲ್ಲಿ ಇದನ್ನು ತಯಾರಿಸಿಕೊಳ್ಳಬೇಕು.
* ಆನಂತರ ಒಂದು ಬಕೆಟ್ ನಲ್ಲಿ ಅರ್ಧದಷ್ಟು ನೀರನ್ನು ತುಂಬಿಸಿ ಅದಕ್ಕೆ ಈ ನೀರನ್ನು ಹಾಕಿ ತಕ್ಷಣವೇ ನೀವು ಕಾಟನ್ ಬಟ್ಟೆಗಳನ್ನು ಅದರಲ್ಲಿ ಅದ್ದಿ ಮೆಲ್ಲಗೆ ಹಿಂಡಬೇಕು. ಜೋರಾಗಿ ಹಿಂಡುವುದರಿಂದ ಬಟ್ಟೆ ಮುದುರಿಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೂ ಕೆಲವೊಮ್ಮೆ ನಾವು ಹೆಚ್ಚಾಗಿ ಕಾಟನ್ ಬಟ್ಟೆಯನ್ನು ಉಪಯೋಗಿಸಿದ ತಕ್ಷಣವೇ ಅದನ್ನು ಚೆನ್ನಾಗಿ ಸೋಪು ಡಿಟರ್ಜೆಂಟ್ ಇವುಗಳನ್ನು ಹಾಕಿ ಬ್ರಷ್ ನಲ್ಲಿ ಚೆನ್ನಾಗಿ ಉಜ್ಜಿ ಅದನ್ನು ಒಗೆಯುತ್ತೇವೆ.
ಆದರೆ ಯಾವುದೇ ಕಾರಣಕ್ಕೂ ಕೂಡ ಕಾಟನ್ ಬಟ್ಟೆಯನ್ನು ಈ ರೀತಿ ಒಗೆಯಬಾರದು. ಬದಲಿಗೆ ಮೊದಲು ಕೈಯಿಂದ ಅದನ್ನು ನಿಧಾನವಾಗಿ ಒಗೆದು ಆನಂತರ ಅದನ್ನು ಮೇಲೆ ಹೇಳಿದ ವಿಧಾನದಲ್ಲಿ ಗಂಜಿಯನ್ನು ಅದ್ದಿ ಆನಂತರ ಬಿಸಿಲಿನಲ್ಲಿ ಒಣಗಿಸಬೇಕು ಈ ರೀತಿ ಮಾಡುವುದರಿಂದ ಬಟ್ಟೆಗಳು ಹಾಳಾಗುವುದಿಲ್ಲ ಬಟ್ಟೆ ಹೊಸದರಂತೆ ಚೆನ್ನಾಗಿ ಕಾಣಿಸುತ್ತದೆ ಹಾಗೂ ಅದರಲ್ಲಿ ಯಾವುದೇ ರೀತಿಯ ಬಣ್ಣಗಳು ಸಹ ಹೋಗುವುದಿಲ್ಲ.