ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದಿಂಬು ಇದ್ದೇ ಇರುತ್ತದೆ. ಕೆಲವೊಂದಷ್ಟು ಜನರಿಗೆ ದಿಂಬು ಇಲ್ಲದೆ ಇದ್ದರೆ ನಿದ್ದೆಯೇ ಬರುವುದಿಲ್ಲ ಎನ್ನುವಂತಹ ಮಾತುಗಳನ್ನು ಹೇಳುತ್ತಿರುತ್ತಾರೆ. ಅದೇ ರೀತಿಯಾಗಿ ಆ ದಿಂಬುಗಳನ್ನು ನಾವು ಹೆಚ್ಚು ದಿನಗಳವರೆಗೆ ಉಪಯೋಗಿಸುತ್ತಾ ಇದ್ದರೆ ಆ ದಿಂಬು ತೆಳ್ಳಗಾಗಿರುತ್ತದೆ ಹಾಗೂ ಹೆಚ್ಚು ಕೊಳೆಯಿಂದ ಕೂಡಿರುತ್ತದೆ.
ಆದರೆ ಕೆಲವೊಂದು ಜನ ಹಾಸಿಗೆಯನ್ನು ಸ್ವಚ್ಛ ಮಾಡುತ್ತಾರೆ ಆದರೆ ದಿಂಬಿನ ಬಗ್ಗೆ ಯೋಚನೆಯು ಕೂಡ ಮಾಡುವುದಿಲ್ಲ. ಇಂಥ ಒಂದು ಸಂದರ್ಭದಲ್ಲಿ ಆ ದಿಂಬಿನಿಂದ ವಾಸನೆ ಕೂಡ ಬರುತ್ತಿರುತ್ತದೆ. ಆದರೆ ಈ ರೀತಿ ದಿಂಬು ತೆಳ್ಳಗಾದ ನಂತರ ಅದು ಹೆಚ್ಚು ಕೊಳೆಯಾದ ನಂತರ ಕೆಲವೊಂದಷ್ಟು ಜನ ಅದನ್ನು ಆಚೆ ಬಿಸಾಡುತ್ತಾರೆ.
ಆದರೆ ಇನ್ನು ಮುಂದೆ ಆ ದಿಂಬನ್ನು ಆಚೆ ಬಿಸಾಡುವ ಅಗತ್ಯ ಇರುವುದಿಲ್ಲ. ಬದಲಿಗೆ ಅದನ್ನು ಮತ್ತೆ ಹೊಸದಾಗಿಸಿ ಮತ್ತೆ ಹೊಸ ದಿಂಬಿನ ಹಾಗೆ ತಯಾರಿಸಬಹುದು ಹಾಗಾದರೆ ಯಾವ ಕೆಲವು ವಿಧಾನಗಳನ್ನು ಅನು ಸರಿಸುವುದರ ಮೂಲಕ ಹಳೆ ದಿಂಬನ್ನು ಹೊಸ ದಿಂಬನ್ನಾಗಿಸಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ಮೊದಲು ಯಾವ ದಿಂಬು ಕೊಳೆಯಾಗಿರುತ್ತದೆಯೋ ಅದನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿಕೊಳ್ಳಬೇಕು ಕೆಲವೊಮ್ಮೆ ಕೆಲವೊಂದಷ್ಟು ಜನ ಅದರಲ್ಲಿರುವ ಹತ್ತಿಯನ್ನು ಆಚೆ ತೆಗೆಯುವದರ ಮೂಲಕ ಅದನ್ನು ತೆಗೆದು ಆಚೆ ಬಿಸಿಲಿನಲ್ಲಿ ಒಣಗಿಸಿ ಅದನ್ನು ಇಟ್ಟುಕೊಳ್ಳುತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಜನ ಅದನ್ನು ವಾಷಿಂಗ್ ಮಷೀನ್ ಗೆ ಹಾಕಿ ಒಟ್ಟಿಗೆ ದಿಂಬಿನ ಸಮೇತ ಒಣಗಿಸಿಕೊಳ್ಳುತ್ತಾರೆ.
ನೀವು ಹೇಗೆ ಮಾಡಿದರೂ ಸರಿಯೇ ನಿಮಗೆ ಅನುಕೂಲವಾಗುವಂತೆ ಎರಡನ್ನು ಸಹ ಸಂಪೂರ್ಣವಾಗಿ ಸ್ವಚ್ಛ ಮಾಡಿಕೊಳ್ಳಿ. ಈ ರೀತಿ ಸ್ವಚ್ಛ ಮಾಡಿಕೊಂಡಂತಹ ಹತ್ತಿ ಹಾಗೂ ಆ ಒಂದು ಬಟ್ಟೆ ಯನ್ನು ಒಂದು ಕಡೆ ಇಟ್ಟುಕೊಳ್ಳಿ, ಆನಂತರ ಹತ್ತಿಯನ್ನು ಚೆನ್ನಾಗಿ ಒಣಗಿ ಸಿದ ತಕ್ಷಣ ಅದನ್ನು ಸಂಪೂರ್ಣವಾಗಿ ಎಳೆಎಳೆಯಾಗಿ ಬಿಡಿಸಿಕೊಳ್ಳ ಬೇಕು. ಈ ರೀತಿ ಮಾಡಿದರೆ ದಿಂಬು ತೆಳ್ಳಗಾಗಿರುವುದನ್ನು ನಾವು ಸರಿ ಪಡಿಸಿದಂತಾಗುತ್ತದೆ.
ಆನಂತರ ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆಯ ಪಿಲ್ಲೋ ಕವರ್ ಇದ್ದರೆ ಅದನ್ನು ತೆಗೆದುಕೊಂಡು ಅದಕ್ಕೆ ಈ ಹತ್ತಿಯನ್ನು ಸಂಪೂರ್ಣವಾಗಿ ತುಂಬಬೇಕು ಆನಂತರ ಕೊನೆಯಲ್ಲಿ ಒಂದು ಸೂಜಿಯ ಸಹಾಯದಿಂದ ಅದನ್ನು ಹೊಲಿಗೆ ಹಾಕಿಕೊಂಡು ಆನಂತರ ಅದಕ್ಕೆ ಹೊಸ ದಿಂಬಿನ ಕವರ್ ಅನ್ನು ಹಾಕಿ ಮತ್ತೆ ಹೊಸದಾದ ರೀತಿಯಲ್ಲಿ ದಿಂಬನ್ನು ಉಪಯೋಗಿಸಬಹುದು.
ಹೀಗೆ ಈ ರೀತಿಯಾಗಿ ನೀವು ತೆಳ್ಳಗಾಗಿರುವಂತಹ ಹಾಗೂ ಹೆಚ್ಚು ಕೊಳೆಯಾಗಿರುವಂತಹ ದಿಂಬನ್ನು ಪುನರ್ ಬಳಕೆ ಮಾಡಿಕೊಳ್ಳುವುದ ರಿಂದ ದಿಂಬಿನ ಸಂಪೂರ್ಣ ವಾದಂತಹ ಪ್ರಯೋಜನವನ್ನು ಪಡೆಯ ಬಹುದು. ಹಾಗೂ ಇಂತಹ ಕೆಲವೊಂದಷ್ಟು ವಿಚಾರಗಳನ್ನು ಮನೆಯಲ್ಲಿ ಇರುವಂತಹ ಪ್ರತಿಯೊಬ್ಬ ಮಹಿಳೆಯು ಕೂಡ ಅನುಸರಿಸುವುದರಿಂದ.
ನಿಮ್ಮ ಮನೆಯಲ್ಲಿ ಬೇಡದೆ ಇರುವಂತಹ ವಸ್ತುಗಳನ್ನು ಮತ್ತೆ ಕೆಲವೊಂದು ವಿಚಾರಗಳನ್ನು ತಿಳಿದು ಕೊಳ್ಳುವುದರ ಮೂಲಕ ಅದನ್ನು ಮತ್ತೆ ಪುನರ್ ಬಳಕೆ ಮಾಡಿಕೊಳ್ಳಬಹುದು. ಆದರೆ ಕೆಲವೊಂದಷ್ಟು ಜನ ಇಂತಹ ಯಾವುದೇ ವಿಚಾರಗಳನ್ನು ತಿಳಿಯದೆ ಅದನ್ನು ಆಚೆ ಬಿಸಾಡುತ್ತಿರುತ್ತಾರೆ.
ಆದರೆ ಈ ಮಾಹಿತಿ ತಿಳಿದ ನಂತರ ಪ್ರತಿಯೊಬ್ಬರೂ ಕೂಡ ಈ ವಿಧಾನವನ್ನು ಅನುಸರಿಸುತ್ತಾರೆ ಎನ್ನುವುದು ಸತ್ಯವಾದ ಮಾತಾಗಿದೆ. ಒಟ್ಟಾರೆಯಾಗಿ ಈ ಮಾಹಿತಿ ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವನ್ನು ಉಂಟುಮಾಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.