ನಾಳೆ ಮೇ 23ನೇ ತಾರೀಕು ಗುರುವಾರದ ದಿನ ವಿಶೇಷವಾದ ವೈಶಾಖ ಹುಣ್ಣಿಮೆ ಹಾಗೂ ಕೂರ್ಮ ಜಯಂತಿ ಇದೆ. ಹಾಗಾಗಿ ನಾಳೆಯ ದಿನ ಲಕ್ಷ್ಮಿ ದೇವಿ ಹಾಗೂ ವಿಷ್ಣು ದೇವರ ಪ್ರೀತಿಗೋಸ್ಕರ ನಾವು ಯಾವ ನಿಯಮಗಳನ್ನು ಪಾಲಿಸಬೇಕು ಜಾತಕ ದೋಷಗಳು ದೂರವಾಗಿ ದಾರಿದ್ರ್ಯ ಹಾಗೂ ಮಾಡಿದ ಪಾಪಗಳು ದೂರವಾಗಲು ನಾವು ಸ್ನಾನ ಮಾಡುವಂತಹ ಸಂದರ್ಭದಲ್ಲಿ ಯಾವ ಒಂದು ಹೆಸರನ್ನು ಹೇಳಿಕೊಳ್ಳಬೇಕು.
ವಿಷ್ಣುದೇವರ ಹಾಗೂ ಲಕ್ಷ್ಮಿ ದೇವಿಯ ಕೃಪೆಯಿಂದ ವರ್ಷ ಪೂರ್ತಿ ಧನಾಗಮನ ಆಗಲು ಅರಳಿ ವೃಕ್ಷಕ್ಕೆ ನೀರಿಗೆ ಯಾವ ಒಂದು ವಸ್ತುವನ್ನು ಸೇರಿಸಿ ಅರ್ಪಿಸಬೇಕು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ. ನಾಳೆ ಸಾಕ್ಷಾತ್ ವಿಷ್ಣು ದೇವರು ಕೂರ್ಮ ಅಂದರೆ ಆಮೆಯ ಅವತಾರ ವನ್ನು ತಾಳಿದಂತಹ ವಿಶೇಷವಾದ ದಿನ. ಆದ್ದರಿಂದಲೇ ಈ ದಿನವನ್ನು ಶ್ರೀ ಕೂರ್ಮ ಜಯಂತಿ ಎಂದು ಕರೆಯಲಾಗುತ್ತದೆ.
ಈ ದಿನದಂದು ಹುಣ್ಣಿಮೆಯ ನಿಯಮಗಳನ್ನು ಪಾಲಿಸುವುದರ ಜೊತೆಗೆ ವಿಷ್ಣು ಅಂದರೆ ಕೂರ್ಮ ಅವತಾರದಲ್ಲಿ ಇರುವಂತಹ ವಿಷ್ಣು ಶಕ್ತಿಯಿಂದ ಲಕ್ಷ್ಮಿ ದೇವಿಯ ಅನುಗ್ರಹ ಕೂಡ ಪ್ರಾಪ್ತಿಯಾಗಲು ಆಮೆಯ ಮೂರ್ತಿಯನ್ನು ಮನೆಯಲ್ಲಿ ಈ ರೀತಿಯಾಗಿ ಕೂರ್ಮ ಜಯಂತಿಯ ದಿನ ಏರ್ಪಾಡು ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- ಎಷ್ಟೇ ಕೊಳೆಯಿರುವ ದಿಂಬು, ತೆಳ್ಳಗಾಗಿರುವ ದಿಂಬನ್ನು ಕಸಕ್ಕೆ ಎಸೆಯಬೇಡಿ ಸುಲಭವಾಗಿ ನಿಮಿಷದಲ್ಲಿ ಹೊಸದಾಗಿಸಿ…….||
ಮನೆಯ ಉತ್ತರ ದಿಕ್ಕಿನಲ್ಲಿ ಆಮೆಯ ಮೂರ್ತಿ ಯನ್ನು ಇಟ್ಟು ವಿಶೇಷವಾಗಿ ಪೂಜಿಸುತ್ತಾ ಬಂದರೆ ಕುಬೇರ ದೇವನ ಜೊತೆಗೆ ಲಕ್ಷ್ಮೀದೇವಿಯ ವಿಶೇಷವಾದ ಅನುಗ್ರಹ ಎನ್ನುವುದು ನಿಮಗೆ ಸಿಗುತ್ತದೆ. ಹಾಗಾದರೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಎಂದು ಈ ಕೆಳಗೆ ತಿಳಿಯೋಣ.
ಒಂದು ತಟ್ಟೆ ಅಥವಾ ಬಟ್ಟಲಿನ ಮೇಲೆ ಸ್ವಲ್ಪ ನೀರನ್ನು ಹಾಕಿ ಅದರ ಮೇಲೆ ಚಿಕ್ಕದಾಗಿರುವಂತಹ ಒಂದು ಆಮೆಯ ಮೂರ್ತಿಯನ್ನು ಇಡಬೇಕು. ಈ ಒಂದು ತಟ್ಟೆಯನ್ನು ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಏರ್ಪಾಡು ಮಾಡಿಕೊಳ್ಳಬೇಕು. ಇದರಿಂದ ಮನೆಯಲ್ಲಿ ದುಡ್ಡು ಚೆನ್ನಾಗಿ ಓಡಾಡುತ್ತದೆ. ಅಂದರೆ ನಿಮಗೆ ಯಾವುದೇ ಸಂದರ್ಭದಲ್ಲಿಯೂ ಕೂಡ ಹಣಕಾಸಿನ ಸಮಸ್ಯೆಗಳು ಎದುರಾಗುವುದಿಲ್ಲ.
* ಮನೆಯಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಏನಾದರೂ ಹಿಂದೆ ಉಳಿದಿದ್ದರೆ ಅವರು ಮುಂದಿನ ದಿನದಲ್ಲಿ ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವ ಎಲ್ಲಾ ಸಾಧ್ಯತೆಗಳು ಕೂಡ ಇದೆ.
* ಇನ್ನು ಗಂಡ ಹೆಂಡತಿ ನಡುವೆ ಪದೇ ಪದೇ ಮಾತಿನ ಜಗಳಗಳು ಏರ್ಪಡುತ್ತಿದ್ದರೆ ದಂಪತಿಗಳು ಜೋಡಿ ಆಮೆಯನ್ನು ಅಕ್ಕಪಕ್ಕದಲ್ಲಿ ಇಟ್ಟು ಅದನ್ನು ನೀವು ಮಲಗುವಂತಹ ಕೋಣೆಯಲ್ಲಿ ಏರ್ಪಾಡುಕೊಳ್ಳಬೇಕು.
ಈ ಸುದ್ದಿ ಓದಿ:- ಗಡಿಯಾರದ ಹಿಂದೆ ಇದನ್ನು ಬರೆಯಿರಿ ಖರ್ಚು 5 ರೂಪಾಯಿ ಲಾಭ ಮಾತ್ರ ಲಕ್ಷ ರೂಪಾಯಿ.!
ಈ ರೀತಿ ಮಾಡುವುದರಿಂದ ನಿಮ್ಮಿಬ್ಬರ ನಡುವೆ ಯಾವುದೇ ರೀತಿಯ ಮನಸ್ತಾಪ ಜಗಳ ಉಂಟಾಗಿದ್ದರು ಕೂಡ ಅದೆಲ್ಲವೂ ಸಹ ದೂರವಾಗು ತ್ತದೆ. ಬದಲಿಗೆ ನಿಮ್ಮಿಬ್ಬರ ನಡುವೆ ಉತ್ತಮವಾದ ಪ್ರೀತಿ ಬಾಂಧವ್ಯ ವಿಶ್ವಾಸ ಎನ್ನುವುದು ಹೆಚ್ಚಾಗುತ್ತದೆ.
* ಇನ್ನು ವ್ಯಾಪಾರ ವ್ಯವಹಾರ ಮಾಡುವಂತಹ ಸ್ಥಳದಲ್ಲಿ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತಿದ್ದರೆ. ವ್ಯಾಪಾರಸ್ಥರು ಬೆಳ್ಳಿ ಲೋಹದಿಂದ ತಯಾರು ಮಾಡಿರುವಂತಹ ಆಮೆಯ ಮೂರ್ತಿಯನ್ನು ತಂದು ನೀವು ವ್ಯಾಪಾರ ವ್ಯವಹಾರ ಮಾಡುವಂತಹ ಸ್ಥಳದಲ್ಲಿ ಇಡಬೇಕು.
ಈ ರೀತಿ ಮಾಡುವುದರಿಂದ ಅಕ್ಕ ಪಕ್ಕದವರ ದೃಷ್ಟಿ, ಶತ್ರು ಭಾದೆ, ಹಾಗೂ ನಿಮ್ಮ ವ್ಯಾಪಾರದಲ್ಲಿ ಆಗುತ್ತಿರುವಂತಹ ನಷ್ಟ ಇವೆಲ್ಲವೂ ಕೂಡ ಹಂತ ಹಂತವಾಗಿ ದೂರವಾಗುತ್ತಾ ಬರುತ್ತದೆ. ಹಾಗೂ ಮುಂದಿನ ದಿನದಲ್ಲಿ ನಿಮ್ಮ ವ್ಯಾಪಾರ ಮತ್ತಷ್ಟು ಅಭಿವೃದ್ಧಿಯಾಗುವ ಎಲ್ಲ ಬಲವಾದ ಸಾಧ್ಯತೆಗಳು ಕೂಡ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.