ಈಗಿನ ಕಾಲದಲ್ಲಿ ಅತಿ ಕಡಿಮೆ ವಯಸ್ಸಿಗೆ ಕಾಣಿಸಿಕೊಳ್ಳುತ್ತಿರುವ BP, ಶುಗರ್, ಒಬೆಸಿಟಿ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಮತ್ತು ಥೈರಾಯ್ಡ್ PCOD ಇಂತಹ ಸಮಸ್ಯೆಗಳಿಗೆ ದೇಹದಲ್ಲಿ ತೂಕ ಹೆಚ್ಚಾಗುತ್ತಿರುವುದೇ ಮುಖ್ಯ ಕಾರಣ ಅದರಲ್ಲೂ ಹೊಟ್ಟೆ ಭಾಗದ ತೂಕ ಹೆಚ್ಚಾಗುತ್ತಿರುವುದೇ ಮುಖ್ಯ ಕಾರಣ ಎಂದು ಹೇಳಬಹುದು.
ಈ ರೀತಿ ಹೊಟ್ಟೆಯ ಭಾಗ ದೊಡ್ಡದಾಗಲು ಆ ಭಾಗದಲ್ಲಿ ಕೊಬ್ಬು ಶೇಖರಣೆಯಾಗಲು ಕಾರಣ ಏನು ಎಂದರೆ ನಾವು ಇಂದು ಸೇವಿಸುತ್ತಿರುವ ಆಹಾರ ಪದಾರ್ಥದಲ್ಲಿ 90% ಗಿಂತ ಹೆಚ್ಚು ಕಾರ್ಬೋಹೈಡ್ರೇಟ್ ಗಳು ಇರುವುದೇ ಕಾರಣ. ನಾವು ಇಂದು 1500 ಕ್ಯಾಲೋರಿ ಶಕ್ತಿ ಬಳಸಿದರೆ ನಾವು ತಿನ್ನುತ್ತಿರುವ ಆಹಾರವು 3000 ಕ್ಕೂ ಹೆಚ್ಚು ಕ್ಯಾಲೋರಿ ನೀಡುತ್ತಿದೆ.
ಇದನ್ನು ದೇಹವು ನಾಳೆಗೆ ಎಂದು ಶೇಖರಿಸಿ ಇಡುತ್ತದೆ ಅದು ಹೆಚ್ಚಿನ ಸಮಯದಲ್ಲಿ ಹೊಟ್ಟೆಯ ಭಾಗದಲ್ಲಿಯೇ ಶೇಖರಣೆಯಾಗಿ ಇಡುವುದರಿಂದ ಈ ರೀತಿ ಒಟ್ಟು ಊದಿಕೊಂಡಂತೆ ಕಾಣುತ್ತಿದೆ ಈ ರೀತಿ ಹೊಟ್ಟೆಯು ದಪ್ಪಗಾಗುವುದು ನೋಡುವುದಕ್ಕೂ ಕೂಡ ಬಹಳ ಅಸಹ್ಯವಾಗಿ ಕಾಣುತ್ತದೆ ಹಾಗಾಗಿ ಅನೇಕರು ತಮ್ಮ ತೂಕ ಇಳಿಸಿಕೊಳ್ಳಬೇಕು.
ಹೊಟ್ಟೆ ಭಾಗವನ್ನು ಎದೆ ಭಾಗಕಾಕೆ ಸಮ ಮಾಡಿಕೊಳ್ಳಬೇಕು ಎಂದು ನಾನಾ ರೀತಿಯ ಕಸರತ್ತು ಮಾಡುತ್ತಾರೆ. ಅವರಿಗೆಲ್ಲ ಉಪಯುಕ್ತವಾಗುವಂತ ಕೆಲವು ಟಿಪ್ ಗಳನ್ನು ಇಂದು ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಮೊದಲಿಗೆ ಹೊಟ್ಟೆಗೆ ತಾನು ಸ್ವಯಂ ರಿಕವರ್ ಆಗಲು ಸಮಯಾವಕಾಶ ಕೊಡದಂತೆ ಪ್ರತಿ ಎರಡು ತಾಸಿಗೊಮ್ಮೆ ಏನಾದರೂ ತಿಂದು ತುಂಬಿಸುತ್ತಿದ್ದೇವೆ. ಜೀರ್ಣಕ್ರಿಯೆ ಒಂದೇ ಅದರ ಕೆಲಸ ಎನ್ನುವಂತೆ ಆಗಿಬಿಟ್ಟಿದೆ, ಇದು ತಪ್ಪು ಇದನ್ನು ತಪ್ಪಿಸಬೇಕು. ಒಂದು ಶಿಸ್ತುಬದ್ಧ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಮತ್ತು ಕಟ್ಟುನಿಟ್ಟಿನಿಂದ ಅದನ್ನು ಪಾಲಿಸಬೇಕು.
* ರಾಗಿ, ಜೋಳ, ಅಕ್ಕಿ, ಸಜ್ಜೆ, ಸಿರಿಧಾನ್ಯಗಳು ಇವುಗಳಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೇರಳವಾಗಿ ಇರುತ್ತದೆ ಹಾಗಾಗಿ ಇವುಗಳನ್ನು ಆದಷ್ಟು ಕಡಿಮೆ ಮಾಡಬೇಕು ಸಾಧ್ಯವೇ ಇಲ್ಲ ಎನ್ನುವವರು 40% ಅಷ್ಟೇ ಈ ಕಾರ್ಬೋಹೈಡ್ರೇಟ್ಸ್ ಗಳನ್ನು ಆಹಾರದಲ್ಲಿ ಸೇರಿಸಬೇಕು.
* ಬೆಳಿಗ್ಗೆ ಟಿಫನ್ ಸಮಯದಲ್ಲಿ ಹಸಿ ತರಕಾರಿ ಸಲಾಡ್ ಅಥವಾ ಹಣ್ಣುಗಳ ಸಲಾಡ್ ಸೇವಿಸಬೇಕು
* ದಿನದಲ್ಲಿ ಮೂರು ಬಾರಿ ಊಟ ಮಾಡುವ ಬದಲು ಅದನ್ನು ಎರಡು ಬಾರಿ ಮಾಡಿದರೆ ಇನ್ನು ಉತ್ತಮ. ಈ ರೀತಿ ಊಟ ಮಾಡುವ 15 ನಿಮಿಷಗಳ ಮುನ್ನ ಆಪಲ್ ಸೀಡ್ ವಿನೆಗರ್ ತೆಗೆದುಕೊಳ್ಳಬೇಕು ಒಂದು ಲೋಟ ನೀರಿಗೆ ಒಂದು ಚಮಚ ಆಪಲ್ ವಿನಗರ್ ಹಾಕಿ ಮಿಕ್ಸ್ ಮಾಡಿ ಕುಡಿಯಬೇಕು.
* ಆಹಾರದಲ್ಲಿ ಸೊಪ್ಪು ತರಕಾರಿ ನಾರಿನಾಂಶ ಇರುವಂತಹ ಪದಾರ್ಥಗಳೇ ಹೆಚ್ಚಾಗಿರಬೇಕು.
* ಮಧ್ಯಾಹ್ನ ಸಮಯವೂ ಕೂಡ ಮೊದಲಿಗೆ ಹಸಿ ತರಕಾರಿ ಅಥವಾ ಬೆಂದ ತರಕಾರಿ ಸೇವಿಸಿ ಸೂಪ್ ಕುಡಿದು ಅರ್ಧ ಭಾಗ ಹೊಟ್ಟೆ ತುಂಬಿಸಿ, ಇನ್ನು ಬೇಕೆಂದಿದ್ದರೆ ಮಾತ್ರ 40% ಕಾರ್ಬೋಹೈಡ್ರೇಟ್ಸ್ ಅಂದರೆ ಒಂದು ಹಿಡಿ ಅನ್ನ ಅಥವಾ ಒಂದು ಚಪಾತಿ ಈ ರೀತಿ ತಿನ್ನಬೇಕು.
* ರಾತ್ರಿ ಸಮಯ ಒಂದು ಲೋಟ ಹಾಲಿಗೆ 5 ಬಾದಾಮಿ ಹಾಕಿ ಒಂದು ಆಪಲ್ ಹಾಕಿ ಶೇಕ್ ಮಾಡಿ ಕುಡಿದರೆ ಸಾಕು ಇದು ರಾತ್ರಿ 7:00ರ ಒಳಗೆ ಆಗಬೇಕು. ಸಾಧ್ಯವಾದಷ್ಟು ನೀವು ಹೊಟ್ಟೆಯನ್ನು ಹದಿನಾರು ತಾಸು ಖಾಲಿ ಇಡಬೇಕು. ಬೆಳಗ್ಗೆ ಹತ್ತು ಗಂಟೆಗೆ ಟಿಫನ್ ಮಾಡಿದರೆ, ಸಂಜೆ 6:00ರ ಸಮಯದ ಒಳಗೆ ನಿಮ್ಮ ಊಟ ಮುಗಿದಿರಬೇಕು ಮತ್ತು ಟಿಫನ್ ಹಾಗೂ ಊಟದ ಸಮಯದಲ್ಲಿ ಈ ಮೇಲೆ ತಿಳಿಸಿದ ರೀತಿ ಸೊಪ್ಪು ತರಕಾರಿ ಇವುಗಳನ್ನು ಸೇವಿಸಬೇಕು. ಶುದ್ಧವಾದ ಕೊಬ್ಬರಿ ಎಣ್ಣೆ ತುಪ್ಪ ಮೊಸರು ಮಜ್ಜಿಗೆ ಇವುಗಳನ್ನು ಬೇಕಾದರೆ ಸೇವಿಸಬಹುದು ಹೇರಳವಾಗಿ ನೀರು ಕುಡಿಯಬೇಕು.
* ಹೊಟ್ಟೆ ಭಾಗದ ಬೊಜ್ಜು ಕರಗಿಸಲು ಇರುವ ವ್ಯಾಯಾಮ ಎಂದರೆ ಎರಡು ಕಾಲುಗಳನ್ನು 20% ಮೇಲೆ ಎತ್ತಿ 1-10ನ್ನು ಎಣಿಸಿ ಕೆಳಗೆ ಬಿಡಬೇಕು. ಆರಂಭದಲ್ಲಿ 10 ರಿಂದ ಶುರು ಮಾಡಿ ಪ್ರತಿದಿನ ಹೆಚ್ಚಿಗೆ ಮಾಡಿಕೊಂಡು ದಿನಕ್ಕೆ 50 ಬಾರಿ ಬೆಳಗ್ಗೆ ಹಾಗೂ ಸಂಜೆ ಈ ಎಕ್ಸಸೈಜ್ ಮಾಡುವುದರಿಂದ ಹೊಟ್ಟೆ ಭಾಗಕ್ಕೆ ವ್ಯಾಯಾಮ ಆಗಿ ಹೊಟ್ಟೆ ಕರಗುತ್ತದೆ.