ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸಮಸ್ಯೆ ಎನ್ನುವುದು ಹೆಚ್ಚಾಗಿ ಎಲ್ಲೆಡೆ ಕೇಳಿ ಬರುತ್ತಿದೆ. ಹಿಂದೆ ವಯೋಸಹಜ ಕಾಯಿಲೆ, ಬಿಪಿ ಶುಗರ್ ಇರುವವರಿಗೆ ಮಾತ್ರ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಈಗ ಚಿಕ್ಕ ವಯಸ್ಸಿನವರೆಗೂ ಕೂಡ ಕಿಡ್ನಿ ಗೆ ಸಂಬಂಧಿಸಿದ ರೋಗಗಳು ಕಾಡುತ್ತಿವೆ.
ಕಿಡ್ನಿಗಿರುವ ಅತಿ ದೊಡ್ಡ ಜವಾಬ್ದಾರಿ ಎಂದರೆ ನಮ್ಮ ದೇಹದ ರಕ್ತವನ್ನು ಶುದ್ಧೀಕರಣ ಮಾಡುವುದು ಮತ್ತು ದೇಹದಲ್ಲಿರುವ ಎಲ್ಲಾ ಕಲ್ಮಶಗಳನ್ನು ಕೂಡ ಹೊರ ಹಾಕುತ್ತದೆ. ನಾವು ತಿನ್ನುವ ಆಹಾರದಲ್ಲಿ ನಮ್ಮ ದೇಹಕ್ಕೆ ಬೇಡದ ಅನೇಕ ಅಂಶಗಳು ಸೇರ್ಪಡೆ ಆಗಿರುತ್ತದೆ ಇವುಗಳನ್ನು ಟಾಕ್ಸಿನ್ ಗಳು, ಮೆಡಿಸನ್ ಗಳಲ್ಲಿರುವ ಮೆಟಬಾಲೈಟ್ಸ್ ಇವುಗಳನ್ನು ದೇಹದಿಂದ ಹೊರ ಹಾಕುವ ಜವಾಬ್ದಾರಿ ಕಿಡ್ನಿಯದ್ದು.
ರಕ್ತದಲ್ಲಿರುವ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚು ಮಾಡುವ ಹಾರ್ಮೋನ್ ಉತ್ಪತ್ತಿ ಮಾಡಿ ರಕ್ತ ಕಣಗಳ ಆರೋಗ್ಯ ಕಾಪಾಡುವುದು ಕೂಡ ಕಿಡ್ನಿಯ ಒಂದು ಫಂಕ್ಷನ್ ಆಗಿದೆ. ದೇಹದ ಉಪ್ಪಿನಂಶವನ್ನು ಹೊರಹಾಕಲು ಕಿಡ್ನಿ ಆರೋಗ್ಯವಾಗಿರಬೇಕು ಹಾಗಾಗಿ ಇದು ರಕ್ತದೊತ್ತಡಕ್ಕೂ ಸಂಬಂಧಪಟ್ಟಿದೆ ದೇಹಕ್ಕೆ ಬೇಕಾಗಿರುವ ಇನ್ನಿತರ ಖನಿಜಾಂಶಗಳ ಮತ್ತು ಮುಖ್ಯವಾಗಿ ನೀರಿನ ಬ್ಯಾಲೆನ್ಸ್ ಮಾಡುವುದು ಕೂಡ ಕಿಡ್ನಿಯೇ ಆಗಿದೆ.
ಈ ಸುದ್ದಿ ಓದಿ:- ಗರ್ಭಕೋಶದಲ್ಲಿ ಗಡ್ಡೆ ಎಂದರೇನು.? ಇದು ಮರಣಾಂತಿಕ ಆರೋಗ್ಯ ಸಮಸ್ಯೆಯೇ? ಪ್ರತಿ ಹೆಣ್ಣು ಮಗಳು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.!
ಇಷ್ಟು ಮುಖ್ಯವಾದ ಆರ್ಗನ್ ಆಗಿರುವ ಕಿಡ್ನಿಯು ಹಾಳಾದರೆ ಇಡೀ ದೇಹದ ಎಲ್ಲಾ ವ್ಯವಸ್ಥೆಯು ಕೂಡ ಕಂಟ್ರೋಲ್ ತಪ್ಪುತ್ತದೆ. ಹಾಗಾಗಿ ಕಿಡ್ನಿಯನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಒಂದು ವೇಳೆ ಕಿಡ್ನಿ ಆರೋಗ್ಯ ಹಾಳಾಗಿದ್ದರೆ ಅದು ಕೆಲವು ಸೂಚನೆಗಳನ್ನು ಕೊಡುವ ಮೂಲಕ ಗುರುತಿಸಿಕೊಳ್ಳುತ್ತದೆ ಯಾವ ಯಾವ ಲಕ್ಷಣಗಳಿಂದ ಇದನ್ನು ಗುರುತಿಸಬಹುದು ಎನ್ನುವ ಅಂಶವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಕಿಡ್ನಿ ಸಮಸ್ಯೆಗೆ ಸಂಬಂಧಿಸಿದ ಲಕ್ಷಣಗಳು ಇನ್ನಿತರ ಸಮಸ್ಯೆಗಳ ಲಕ್ಷಣವೂ ಆಗಿರುವುದರಿಂದ ಇದನ್ನು ಅನೇಕರು ಗುರುತಿಸುವಲ್ಲಿ ವಿಫಲಗೊಳ್ಳುತ್ತಾರೆ ಆದರೆ ಕೆಲ ಸಾಮಾನ್ಯ ಲಕ್ಷಣಗಳ ಬಗ್ಗೆ ತಿಳಿಸುತ್ತಿದ್ದೇವೆ.
* ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಕಾಲಿನಲ್ಲಿ ನೀರು ಹಾಗೂ ಉಪ್ಪಿನಾಂಶ ಸೇರಿಕೊಂಡು ಅದು ಕಿಡ್ನಿ ಸಮಸ್ಯೆಯಿಂದಾಗಿ ಸರಿಯಾಗಿ ಫಿಲ್ಟರ್ ಆಗಿ ಹೊರ ಹೋಗದೆ ಇದ್ದರೆ ಕಿಡ್ನಿ ಸಮಸ್ಯೆ ಎಂದು ಗುರುತಿಸಬಹುದು.
* ನಾರ್ಮಲ್ ಕೆಲಸಗಳನ್ನು ಕೂಡ ಮಾಡಲಾಗದಷ್ಟು ಅತಿಯಾದ ಸುಸ್ತು ಕಾಡುತ್ತಿದ್ದರೆ ಇದು ಸಹ ಕಿಡ್ನಿಯಲ್ಲಿರುವ ಸಮಸ್ಯೆಯನ್ನು ಸೂಚಿಸುತ್ತದೆ. ರಕ್ತ ಕಣಗಳ ಕೊರತೆ ಉಂಟಾಗಲು ಕಿಡ್ನಿಯಲ್ಲಿರುವ ಸಮಸ್ಯೆಯೇ ಕಾರಣವಾಗುವುದರಿಂದ ಇದು ಕೂಡ ಒಂದು ಲಕ್ಷಣವೇ.
* ಇದ್ದಕ್ಕಿದ್ದಂತೆ ಮೆಡಿಸನ್ ತೆಗೆದುಕೊಳ್ಳುತ್ತಿದ್ದರೂ ಕೂಡ ರಕ್ತದೊತ್ತಡ ಬ್ಯಾಲೆನ್ಸ್ ತಪ್ಪಿದ್ದರೆ ಇದು ಕೂಡ ಒಂದು ಲಕ್ಷಣ.
ಈ ಸುದ್ದಿ ಓದಿ:-ಇದರ ಬೆಲೆ ಕೇವಲ 2 ರೂಪಾಯಿ ಆದರೆ ಕೋಟಿ ಸಾಲ ಇದ್ದರೂ ಕೂಡ ತೀರಿಸುತ್ತದೆ.!
* ಮೂತ್ರದಲ್ಲಿ ರಕ್ತ ಕಾಣಿಸಿಕೊಂಡರೆ, ಅಥವಾ ಯೂರಿನ್ ಬಣ್ಣ ಬಹಳ ಗಾಢವಾಗುತ್ತಿದ್ದರೆ ಇದು ಸಹ ಕಿಡ್ನಿ ಸಮಸ್ಯೆಯನ್ನು ಸೂಚಿಸುತ್ತದೆ
* ದೇಹದ ಟಾಕ್ಸಿನ್ ಅಂಶಗಳನ್ನು ಹೊರಹಾಕಲು ಕಿಡ್ನಿ ಸರಿಯಾಗಿ ವರ್ಕ್ ಮಾಡದ ಕಾರಣ ಇದರ ಸೈಡ್ ಎಫೆಕ್ಟ್ ಗಳು ಕೂಡ ಉಂಟಾಗುತ್ತದೆ ಪರಿಣಾಮವಾಗಿ ಬೆಳಗ್ಗೆ ಬ್ರಷ್ ಮಾಡುವಾಗ ವಾಂತಿ ಬಂದ ರೀತಿ ಆಗುತ್ತದೆ, ಸರಿಯಾಗಿ ಹಸಿವಾಗುವುದಿಲ್ಲ, ತಿಂದ ಆಹಾರವು ಜೀರ್ಣವಾಗುವುದಿಲ್ಲ ವಿಪರೀತ ತಲೆನೋವು ಇಂತಹ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತವೆ.
* ಕಿಡ್ನಿಯಲ್ಲಿ ಸಮಸ್ಯೆ ಉಂಟಾದರೆ ಕೆಲವರಿಗೆ ಚರ್ಮದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತವೆ. ಚರ್ಮದಲ್ಲಿ ತುರಿಕೆ ಅಥವಾ ಇನ್ನಿತರ ಚರ್ಮ ಸಮಸ್ಯೆ ಕೂಡ ಕಿಡ್ನಿ ಸಮಸ್ಯೆಯಿಂದ ಬರುತ್ತದೆ.
* ಈ ರೀತಿ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಸೂಕ್ತ ವೈದ್ಯರನ್ನು ಭೇಟಿಯಾಗಿ ಒಮ್ಮೆ ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಟೆಸ್ಟ್ ಮಾಡಿಸಿಕೊಳ್ಳಿ.