ಯುಗಾದಿ ಎಂದರೆ ಯುಗದ ಆದಿ. ಹಿಂದೂ ಪಂಚಾಂಗದ ಪ್ರಕಾರವಾಗಿ ಹೊಸ ವರ್ಷ ಆರಂಭವಾಗುವುದೇ ಈ ದಿನದಿಂದ. ಪ್ರಕೃತಿಗೂ ಕೂಡ ಈ ಸಮಯವೇ ಹೊಸ ವರ್ಷ ಸರಿ. ಚಳಿಗಾಲದ ಕೊರೆ ಕಳೆದು ಬೇಸಿಗೆಯ ಬಿಸಿಲಿನ ಜೊತೆ ಸುತ್ತಲೂ ಹಚ್ಚಹಸಿರಿನ ಚಿಗುರು ಬೆಳೆಯುವ ವಸಂತ ಮಾಸದ ಈ ಸಂಭ್ರಮವು ಏಪ್ರಿಲ್ 9, 2024ರಂದು ಅಧಿಕೃತವಾಗಿ ಆರಂಭವಾಗುತ್ತಿದೆ.
ನೂತನ ಕ್ರೋಧಿ ಸಂವತ್ಸರದ ಯುಗಾದಿ ಹಬ್ಬವನ್ನು ಅಂದಿನಿಂದ ಆಚರಿಸುತ್ತೇವೆ ಈ ದಿನ ಹೇಗೆ ಆರಂಭವಾಗುತ್ತದೆಯೋ ಅದೇ ರೀತಿ ಫಲವು ವರ್ಷ ಪೂರ್ತಿ ಇರುತ್ತದೆ ಮತ್ತು ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ದಿನ ಮಾಡಿದ ಒಂದು ತಪ್ಪಿಗಾಗಿ ವರ್ಷಪೂರ್ತಿ ಕ’ಷ್ಟ ಪಡಬೇಕಾಗುತ್ತದೆ ಎನ್ನುವ ಮಾತುಗಳು ಇವೆ. ಹಾಗಾಗಿ ಇಂದು ಈ ಅಂಕಣದಲ್ಲಿ ಯುಗಾದಿ ಹಬ್ಬದ ಆಚರಣೆ ಹೇಗಿರಬೇಕು ಎನ್ನುವುದರ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:-ವಯಸ್ಸಾದವರು ಬೀಳಬಾರದೆಂದರೆ ಈ 5 ವ್ಯಾಯಾಮ ಮಾಡಿ ಸಾಕು.!
* ಈ ದಿನ ಆದಷ್ಟು ಸೂರ್ಯೋದಯಕ್ಕಿಂತ ಮುಂಚೆ ಏಳಬೇಕು, ಬೇವಿನಕಡ್ಡಿಯಲ್ಲಿ ಹಲ್ಲು ತಿಕ್ಕಬೇಕು ಹಾಗೆಯೇ ಹರಳೆಣ್ಣೆ, ಕಡಲೆ ಹಿಟ್ಟು, ಜೇನುತುಪ್ಪ ಮತ್ತು ಅರಿಶಿನ ಮಿಕ್ಸ್ ಮಾಡಿ ಮೈ ಕೈಗೆ ಹಚ್ಚಿಕೊಂಡು ಸೀಗೆಪುಡಿ ಹಚ್ಚಿ ಸ್ನಾನ ಮಾಡಬೇಕು ಮತ್ತು ಆ ಸ್ನಾನದ ನೀರಿಗೆ ಬೇವಿನ ಎಲೆ ಹಾಕುವುದನ್ನು ಮರೆಯಬಾರದು.
* ಯುಗಾದಿ ಹಬ್ಬದ ಸಮಯದಲ್ಲಿ ಮಾತ್ರವಲ್ಲದೇ ಯಾವುದೇ ಹಬ್ಬವನ್ನು ಆಚರಣೆ ಮಾಡಿದರು ಕೂಡ ಆದಷ್ಟು ಅಚ್ಚುಕಟ್ಟಾಗಿ ಮಡಿಯಿಂದ ಆಚರಣೆ ಮಾಡಬೇಕು. ಈ ರೀತಿ ಆಚರಣೆ ಮಾಡಿದರೆ ಇನ್ನೂ ಹೆಚ್ಚಿನ ಫಲಗಳು ಸಿಗುತ್ತವೆ. ಅದರಲ್ಲೂ ಯುಗಾದಿ ಹಬ್ಬದಂದು ಈ ರೀತಿ ಮನೆಯನ್ನು ಪೂರ್ತಿ ಸ್ವಚ್ಛಗೊಳಿಸಿ ಆರಂಭಿಸಿದರೆ ಹಳೆ ಕೊಳೆ, ಹಳೆ ಕಹಿ, ಕೆ’ಟ್ಟ ನೆನಪು ಮರೆತು ಹೊಸ ಬದುಕಿಗೆ ಕಾಲಿಟ್ಟ ಅನುಭವ ಬರುತ್ತದೆ.
ಈ ಸುದ್ದಿ ಓದಿ:-ಅಂಜೂರದ ಹಣ್ಣು ಹೇಗೆ ತಯಾರಾಗುತ್ತದೆ.? ಇದು ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.!
* ಯುಗಾದಿ ಹಬ್ಬವನ್ನು ಹೊಸ ಬಟ್ಟೆಗಳನ್ನು ಹಾಕಿಕೊಂಡು ಆಚರಿಸಬೇಕು ಯುಗಾದಿ ಹಬ್ಬದ ದಿನದಂದು ಶುಚಿಯಾದ ತಕ್ಷಣ ದೇವರ ಕೋಣೆಗೆ ಹೋಗಿ ವಿಘ್ನ ವಿನಾಶಕ ವಿಘ್ನೇಶ್ವರನನ್ನು ಮತ್ತು ಕಾಲಪುರುಷನನ್ನು ಸ್ಮರಿಸಬೇಕು. ನಿಮ್ಮ ಇಷ್ಟ ದೇವರು, ಕುಲ ದೇವರನ್ನು ನೆನೆದು ಆಶೀರ್ವಾದಕ್ಕಾಗಿ ಪ್ರಾರ್ಥಿಸಿ, ವರ್ಷಪೂರ್ತಿ ಸುಖಕರವಾಗಿರುವಂತೆ ಕಾಪಾಡಿ ಎಂದು ಕೇಳಿಕೊಳ್ಳಬೇಕು.
ಹಾಗೆಯೇ ಮೊದಲಿಗೆ ಬೇವು-ಬೆಲ್ಲವನ್ನು ಸೇವಿಸಿ ನಂತರ ಇತರ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಮನೆಯ ಹೊಸ್ತಿಲಿಗೆ ಕೂಡ ತಪ್ಪದೆ ಪ್ರತಿಯೊಬ್ಬರು ಮಾವಿನ ತೋರಣವನ್ನು ಕಟ್ಟಬೇಕು ಮನೆ ಮುಂದೆ ರಂಗೋಲಿಯಂತೂ ಇರಲೇಬೇಕು ಹೊಸತನ ಸ್ವಾಗತಿಸುತ್ತಿರುವುದು ಮನೆ ಮನಕ್ಕೆ ಸಂಭ್ರಮ ತುಂಬಬೇಕು.
ಈ ಸುದ್ದಿ ಓದಿ:-ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!
* ಈ ದಿನ ಪಂಚಾಂಗ ಶ್ರವಣ ಮಾಡಿ ವರ್ಷ ಭವಿಷ್ಯ ಕೇಳುವ ಅಭ್ಯಾಸ ಹಲವರಲ್ಲಿ ಇದೆ. ಈ ರೀತಿ ಮಾಡುವವರು ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ಮುಖ ಮಾಡಿ ಕೇಳಬಾರದು, ಪಂಚಾಂಗ ಶ್ರವಣ ಮಾಡುವವರು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಆ ವರ್ಷದ ಅವರ ಆಯ-ವ್ಯಯ, ಲಾಭ-ನಷ್ಟ ಏನಿದೆ ಎಂದು ಕೇಳಿ ತಿಳಿದುಕೊಳ್ಳಬೇಕು.
ಹೊಸ ವರ್ಷದ ಈ ದಿನ ಮನೆಯಲ್ಲಿ ಸಿಹಿ ತಿನಿಸು ಮಾಡಬೇಕು ಮತ್ತು ಕೈಲಾದಷ್ಟು ಅಸಹಾಯಕರಿಗೆ ಸಿಹಿ ಹಾಗೂ ಹೊಸ ಬಟ್ಟೆಗಳನ್ನು ದಾನ ಮಾಡಬೇಕು. ಯಾವುದೇ ಕಾರಣಕ್ಕೂ ಈ ದಿನ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಆಗಲಿ ಚಿಕ್ಕ ಮಕ್ಕಳಿಗೆ ಆಗಲಿ ಬೈದು ಕ’ಣ್ಣೀ’ರಿಡುವಂತೆ ಮಾಡಬಾರದು.
ಈ ಸುದ್ದಿ ಓದಿ:-ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!
* ಯುಗಾದಿ ಹಬ್ಬವೇ ಆಗಲಿ ಅಥವಾ ಇನ್ನಿತರ ಯಾವುದೇ ಹಬ್ಬ ಆಗಲಿ, ಯಾವುದೇ ಕಾರಣಕ್ಕೂ ಹಬ್ಬದ ದಿನಗಳಂದು ಮಧ್ಯಪಾನ ಧೂಮಪಾನ ಮತ್ತು ಮಾಂಸ ಆಹಾರ ಸೇವನೆಗಳನ್ನು ಮಾಡಬಾರದು. ಈ ರೀತಿ ಮಾಡಿದ್ದೇ ಆದರೆ ನೀವು ವರ್ಷಪೂರ್ತಿ ದಟ್ಟ ದರಿದ್ರವನ್ನು ಕ’ಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಈ ರೀತಿ ಕೆಟ್ಟ ಅಭ್ಯಾಸ ಬಿಟ್ಟು ಒಳ್ಳೆಯ ರೀತಿಯಲ್ಲಿ ಹೊಸ ವರ್ಷ ಆರಂಭಿಸಿ ಶುಭವಾಗಲಿ.