ಮಕ್ಕಳಿಗೆ ನಾವು ಇಡುವಂತಹ ಹೆಸರು ಅವರ ಜೀವನದಲ್ಲಿ ಬಹಳ ಪ್ರಮುಖವಾದಂತಹ ಪಾತ್ರ ವಹಿಸುತ್ತದೆ. ನೀವು ನಿಮ್ಮ ಮಕ್ಕಳಿಗೆ ಇಡುವಂತಹ ಹೆಸರೇ ನಾಳೆ ಅವರು ಜೀವನದಲ್ಲಿ ಒಳ್ಳೆಯ ದಿಕ್ಕಿನಲ್ಲಿ ನಡೆಯಬೇಕು ಎಂದರು, ಜೀವನದಲ್ಲಿ ಅದ್ಭುತವಾದಂತಹ ಬದಲಾವಣೆ ಕಾಣಬೇಕು ಎಂದರು, ಸುಖ ಸಂತೋಷದಿಂದ ಬದುಕಬೇಕು ಎಂದರು, ಹೀಗೆ ಎಲ್ಲಾ ರೀತಿಯಲ್ಲೂ ಅವರಿಗೆ ಸಹಾಯ ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಮಕ್ಕಳಿಗೆ ಹೊಸದಾದಂತಹ ಹೆಸರು ಅಂದರೆ ಎಲ್ಲ ಹೆಸರುಗಳಿಗಿಂತ ನಮ್ಮ ಮಗುವಿನ ಹೆಸರು ವಿಭಿನ್ನವಾಗಿರ ಬೇಕು ಎನ್ನುವುದರ ಕಡೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದರೆ ಕೆಲವು ಸಂದರ್ಭದಲ್ಲಿ ಕೆಲವೊಂದು ಹೆಸರುಗಳನ್ನು ಎಂತಹ ಸಂದರ್ಭದಲ್ಲಿ ಯೂ ಇಡಬಾರದು ಎಂದು ಪಂಡಿತರು ಸೂಚಿಸುತ್ತಾರೆ.
ಹಾಗಾಗಿ ನಿಮ್ಮ ಮಕ್ಕಳಿಗೆ ಹೆಸರಿಡುವ ಮುಂಚೆ ಕೆಲವು ಮುಖ್ಯವಾದ ವಿಷಯಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಹಾಗಾದರೆ ಆ ವಿಷಯಗಳು ಯಾವುದು ಎಂದು ಈ ಕೆಳಗೆ ಒಂದೊಂದಾಗಿ ತಿಳಿಯೋಣ. ಹಿಂದೂ ಶಾಸ್ತ್ರದ ಪ್ರಕಾರ ಹೆಸರಿಡುವ ಮುಂಚೆ ಗ್ರಹ ತಿಥಿ ನೋಡ ಬೇಕು ಅವರ ಜನ್ಮ ಜಾತಕದ ಪ್ರಕಾರ ರಾಶಿ ಯಾವುದು ಎಂದು ತಿಳಿದುಕೊಂಡ ನಂತರ ಮಾತ್ರವೇ ಹೆಸರನ್ನು ಸೂಚಿಸಬೇಕು. ಅಷ್ಟಮಿ ಅಮಾವಾಸ್ಯೆ ಚತುರ್ದಶಿ ತಿಥಿಗಳಲ್ಲಿ ಮಾತ್ರ ಮಕ್ಕಳಿಗೆ ಹೆಸರನ್ನು ಇಡಬಾರದು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಹಣ ಬಂದಿಲ್ವ ಒಟ್ಟಿಗೆ ಹಣ ಪಡೆಯಲು ಸುವರ್ಣ ಅವಕಾಶ/ 5 ಕಂತುಗಳ ಹಣ 10,000.!
* ಮಕ್ಕಳಿಗೆ ನೀವಿಡುವಂತಹ ಹೆಸರು ಅಪರೂಪವಾಗಿರಬೇಕು ಪ್ರತ್ಯೇಕವಾಗಿರಬೇಕು ಎಂತಹ ಪರಿಸ್ಥಿತಿಯಲ್ಲೂ ನೀವು ಇಡುವಂತಹ ಹೆಸರು ತಮಾಷೆಯ ರೀತಿಯಲ್ಲಿ ಇರಬಾರದು. ಅಂತಹ ಹೆಸರನ್ನು ನೀವಿಟ್ಟರೆ ನಿಮ್ಮ ಮಗುವಿನ ಭವಿಷ್ಯತ್ತಿನಲ್ಲಿ ತುಂಬಾ ಕಷ್ಟಗಳು ಉಂಟಾಗುತ್ತದೆ.
* ಕೆಲವರು ಅವರ ಪೂರ್ವಿಕರು ಹಾಗೂ ಹಿರಿಯರ ಹೆಸರುಗಳನ್ನು ಸೇರಿಸಿ ಮಕ್ಕಳಿಗೆ ಹೆಸರನ್ನು ಇಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಹಿರಿಯರ ಹೆಸರುಗಳನ್ನು ನಿಮ್ಮ ಮಕ್ಕಳ ಹೆಸರಿನ ಜೊತೆ ಸೇರಿಸಿ ಹೆಸರಿಡಬಾರದು ಎಂದು ಪಂಡಿತರು ಹೇಳುತ್ತಾರೆ. ಇಂತಹ ಹೆಸರುಗಳನ್ನು ನೀವು ಇಡುವುದರಿಂದ ನಿಮ್ಮ ಮಕ್ಕಳು ಬೆಳೆದ ನಂತರ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಪಂಡಿತರು ಹೇಳುತ್ತಾರೆ.
ಹಾಗಾಗಿ ನಿಮ್ಮ ಪೂರ್ವಕ್ಕೆ ಯಾವುದೇ ಸಂಬಂಧ ಇಲ್ಲದ ರೀತಿಯಲ್ಲಿ ನೀವು ನಿಮ್ಮ ಮಗುವಿಗೆ ಹೆಸರನ್ನು ಇಡಬೇಕು. ಮಕ್ಕಳ ಕೀರ್ತಿ ಮತ್ತು ಪ್ರತಿಷ್ಠೆ ಬಯಸುವಂತಹ ತಂದೆ ತಾಯಿಗಳು ಮಗುವಿಗೆ ಎರಡು ಅಕ್ಷರದ ಹೆಸರನ್ನು ಇಡುವುದು ಒಳ್ಳೆಯದು ಎಂದು ಪಂಡಿತರು ಹೇಳುತ್ತಾರೆ. ಮಕ್ಕಳಿಗೆ ದೇವರ ಹೆಸರನ್ನು ಇಟ್ಟರೆ ತುಂಬಾ ಒಳ್ಳೆಯದು ಎಂದು ಪಂಡಿತರು ಹೇಳುತ್ತಾರೆ.
ಈ ಸುದ್ದಿ ಓದಿ:- ಯಾವ ರಾಶಿಯವರಿಗೆ ಮನೆ ಕಟ್ಟುವ ಯೋಗ ಫಲ ಚೆನ್ನಾಗಿದೆ…….||
ಇದರಿಂದ ಮಕ್ಕಳಿಗೆ ತಮ್ಮ ಜೀವನದಲ್ಲಿ ಶುಭಫಲ ಹಾಗೂ ಆ ಮಕ್ಕಳ ಜೀವನದಲ್ಲಿ ಪ್ರತಿಯೊಂದರಲ್ಲಿಯೂ ಕೂಡ ಒಳ್ಳೆಯ ಅವಕಾಶಗಳು ಸಿಗುತ್ತದೆ ಎನ್ನುತ್ತಾರೆ. ಆದರೆ ಇತ್ತೀಚಿನ ದಿನದಲ್ಲಿ ಇಂತಹ ಹೆಸರನ್ನು ಇಡುವುದಕ್ಕೆ ಪ್ರತಿಯೊಬ್ಬರು ಮುಜುಗರ ಪಡುತ್ತಾರೆ. ಹೆಣ್ಣು ಮಗುವಿನ ಹೆಸರನ್ನು ಬೆ ಹಾಗೂ ಸಿ ಅಕ್ಷರದಿಂದ ಇಟ್ಟರೆ ತುಂಬಾ ಒಳ್ಳೆಯದು ಅದೇ ರೀತಿ ಗಂಡು ಮಕ್ಕಳಿಗೆ ಬೆ ಹಾಗೂ ಸಿ ಅಕ್ಷರದಿಂದ ಹೆಸರು ಇಡುವುದು ಒಳ್ಳೆಯದಲ್ಲ ಎಂದು ಸಂಖ್ಯಾ ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಹಾಗಾಗಿ ಈ ಅಕ್ಷರ ಬಿಟ್ಟು ಗು, ಬ, ಸ, ಸು ಈ ರೀತಿ ಅಕ್ಷರಗಳನ್ನು ಆಯ್ಕೆ ಮಾಡಿ ಹೆಸರನ್ನು ಇಡುವುದು ಸೂಕ್ತ. ಹಾಗೆ ನೀವು ಮಕ್ಕಳಿಗೆ ಇಡುವಂತಹ ಹೆಸರಿನ ಮಧ್ಯದಲ್ಲಿ ಸೊನ್ನೆ ಅಂದರೆ ಒ ಅಕ್ಷರ ಇಲ್ಲದೆ ಇರುವ ಹಾಗೆ ಇಟ್ಟರೆ ಒಳ್ಳೆಯದು ಎಂದು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.