ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿ ಸುವ ಉದ್ದೇಶದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇತ್ತೀಚೆಗೆ ಗೃಹ ಲಕ್ಷ್ಮಿ ಯೋಜನೆಯನ್ನು ಘೋಷಿಸಿದೆ. 18 ಮಾರ್ಚ್ 2022 ರಂದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯ ಕ್ರಮವನ್ನು ಪರಿಚಯಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಮಹಿಳೆಯರಿಗೆ ಒಂದು ವರ್ಷದವರೆಗೆ ಮಾಸಿಕ ರೂ.2,000 ಪ್ರೋತ್ಸಾಹ ಧನ ನೀಡಲಾಗುತ್ತದೆ. ರಾಜ್ಯದ ಸುಮಾರು 2 ಲಕ್ಷ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದೇ ಹೇಳಬಹುದು. ಆದರೆ ಪ್ರತಿಯೊಬ್ಬ ಮಹಿಳೆಯರೂ ಕೂಡ ಇದನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾದರೆ ಯಾರೆಲ್ಲ ಪಡೆದುಕೊಳ್ಳಬಹುದು ಯಾರು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.
ಈ ಸುದ್ದಿ ಓದಿ:- ಯಾವ ರಾಶಿಯವರಿಗೆ ಮನೆ ಕಟ್ಟುವ ಯೋಗ ಫಲ ಚೆನ್ನಾಗಿದೆ…….||
ಹಾಗೇನಾದರೂ ಅನರ್ಹರು ಇದಕ್ಕೆ ಅರ್ಜಿ ಸಲ್ಲಿಸಿದರೆ ಅದು ಹೇಗೆ ರದ್ದಾಗುತ್ತದೆ ಹಾಗೂ ಯಾರಿಗೆಲ್ಲ ಇನ್ನು ಈ ಹಣ ಬಂದಿಲ್ಲ ಅವರು ಯಾವ ವಿಧಾನವನ್ನು ಅನುಸರಿಸುವುದರ ಮೂಲಕ ಪ್ರತಿ ತಿಂಗಳು 2000 ಹಣವನ್ನು ಪಡೆದುಕೊಳ್ಳಬಹುದು ಹೀಗೆ ಈ ಎಲ್ಲಾ ಮಾಹಿತಿ ಯನ್ನು ಈ ದಿನ ತಿಳಿಯೋಣ.
* ಮೊದಲನೆಯದಾಗಿ ಮನೆಯಲ್ಲಿರುವಂತಹ ಮಹಿಳಾ ಸದಸ್ಯೆ ಅಂದರೆ ಕುಟುಂಬದ ನಿರ್ವಹಣೆಯನ್ನು ಮಾಡುತ್ತಿರುವಂತಹ ಮನೆಯ ಮುಖ್ಯ ಸದಸ್ಯೆ ಹೆಸರು ನಿಮ್ಮ ರೇಷನ್ ಕಾರ್ಡ್ ನಲ್ಲಿ ಇದ್ದರೆ ಅಂತಹ ಸದಸ್ಯೆಗೆ ಪ್ರತಿ ತಿಂಗಳು 2000 ಹಣ ಬರುತ್ತದೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದರು.
ಆದರೆ ರೇಷನ್ ಕಾರ್ಡ್ ನಲ್ಲಿ ಕೆಲವೊಂದಷ್ಟು ತಪ್ಪು ಇದ್ದರೆ ಹಾಗೂ ಕೆಲವೊಂದಷ್ಟು ತಿದ್ದುಪಡಿ ಇದ್ದರೆ ಅಂತವರು ಇದನ್ನು ಪಡೆದು ಕೊಳ್ಳುವುದಕ್ಕೂ ಮೊದಲು ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿ ಆನಂತರ ಹಣವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಅದರಂತೆ ಕೆಲವೊಂದಷ್ಟು ಜನ ತಮ್ಮ ಹೆಸರು ಅಥವಾ ವಿಳಾಸ ಇವೆಲ್ಲವನ್ನು ತಿದ್ದುಪಡಿ ಮಾಡಿಸಿ ಆನಂತರ ಅರ್ಜಿಯನ್ನು ಸಲ್ಲಿಸಿದ್ದಾರೆ.
ಈ ಸುದ್ದಿ ಓದಿ:-ಕಾರ್ಮಿಕ ಕಾರ್ಡ್ ಇದ್ದವರಿಗೆ ಸಿಗಲಿದೆ 60,000 ಸಂಪೂರ್ಣ ಉಚಿತ.!
ಮೊದಲೇ ಹೇಳಿದಂತೆ ಈ ಅರ್ಜಿಯನ್ನು ಹಾಕುವುದಕ್ಕೆ ಯಾವುದೇ ರೀತಿಯ ಇನ್ಕಮ್ ಟ್ಯಾಕ್ಸ್ ಕಟ್ಟುವಂತಹ ಸದಸ್ಯರು ಅರ್ಜಿ ಸಲ್ಲಿಸುವ ಹಾಗಿಲ್ಲ. ಅವರಿಗೆ ಇದರ ಅನುಕೂಲ ಸಿಗುವುದಿಲ್ಲ ಎನ್ನುವಂತಹ ಮಾಹಿತಿ ತಿಳಿಸಿದರು. ಆದರೆ ಕೆಲವೊಂದಷ್ಟು ಜನ ಇದಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಹಾಗಾಗಿ ಕೆಲವೊಂದಷ್ಟು ಜನರ ಅರ್ಜಿಯನ್ನು ರದ್ದುಗೊಳಿಸಲಾಗಿದೆ ಅದರಂತೆಯೇ ಕೆಲವೊಂದಷ್ಟು ಜನರ ಆಧಾರ್ ಕಾರ್ಡ್ ರೇಷನ್ ಕಾರ್ಡ್ ನಲ್ಲಿ ಎಲ್ಲಾ ಸರಿ ಇದ್ದರೂ ಕೆಲವೊಂದಷ್ಟು ಅರ್ಜಿ ರದ್ದುಗೊಂಡಿದೆ ಅಂತವರು ಹೇಗೆ ಅದನ್ನು ಸರಿಪಡಿಸಿ ಹಣವನ್ನು ಪಡೆಯಬಹುದು ಎಂದು ನೋಡುವುದಾದರೆ.
ಮೊದಲನೆಯದಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಬದಲಾಗಿದ್ದರೆ ಮನೆಯ ಯಜಮಾನಿ ಸ್ಥಾನದಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನೀವು ಈ ಹಣವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅದೆಲ್ಲಾ ಸರಿ ಇದ್ದರೂ ನಿಮಗೆ ಹಣ ಬರುತ್ತಿಲ್ಲ ಎಂದರೆ ಅಂಥವರು ಮತ್ತೆ ಹೊಸ ಅರ್ಜಿಯನ್ನು ಹಾಕುವುದರ ಮೂಲಕ ಒಟ್ಟಿಗೆ 6 ಕಂತುಗಳ ಹಣವನ್ನು ಪಡೆಯಬಹುದು ಎಂದು ಹೊಸ ಆದೇಶವನ್ನು ಹೊರಡಿಸಿದ್ದಾರೆ.
ಈ ಸುದ್ದಿ ಓದಿ:-ರಾಜ್ಯದ ಯುವ ಜನತೆಗೆ ಉಪಯುಕ್ತ ಮಾಹಿತಿ, ಮೇಕೆ ಸಾಕಾಣಿಕೆಗೆ ಉಚಿತ ತರಬೇತಿ, ಪೂರ್ತಿ ಮಾಹಿತಿ ಇಲ್ಲಿದೆ ನೋಡಿ…
ಆದ್ದರಿಂದ ಯಾರಿಗೆಲ್ಲ ಹಣ ಇನ್ನು ಬಂದಿಲ್ಲ ಅಂಥವರು ಹೊಸ ಅರ್ಜಿಯನ್ನು ಹಾಕುವುದರ ಮೂಲಕ ಎಷ್ಟು ಕಂತಿನ ಹಣ ಬಂದಿಲ್ಲ ಅಷ್ಟನ್ನು ಒಟ್ಟಿಗೆ ಪಡೆಯಬಹುದಾಗಿದೆ. ಹಾಗೂ ಯಾರು ಈ ಯೋಜನೆಯ ಹಣ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರೆ ನಿಮ್ಮ ಕುಟುಂಬದಲ್ಲಿ ಯಾರಾದರೂ ಒಬ್ಬರು ಐಟಿ ಅಂದರೆ ಇನ್ಕಮ್ ಟ್ಯಾಕ್ಸ್ ಹಣ ಕಟ್ಟುತ್ತಿದ್ದರೆ ಆ ಮನೆಯ ಸದಸ್ಯೆಗೆ ಹಣ ಬರುವುದಿಲ್ಲ. ಹಾಗಾಗಿ ಇವರನ್ನು ಹೊರತುಪಡಿಸಿ ಪ್ರತಿಯೊಬ್ಬ ಸದಸ್ಯರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.