ಕಲ್ಲು ಉಪ್ಪಿಗೆ ವಾಸ್ತುಶಾಸ್ತ್ರದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಗೂ ಆಯುರ್ವೇದದಲ್ಲಿ ಕೂಡ ಬಹಳ ಮಹತ್ವದ ಸ್ಥಾನವಿದೆ. ಕಲ್ಲು ಉಪ್ಪನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಸಲಾಗುತ್ತದೆ ಕಲ್ಲು ಉಪ್ಪು ಮನೆಯ ನಕರಾತ್ಮಕ ಶಕ್ತಿಯನ್ನು ಹೊರಗೆ ಹಾಕುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಮನೆಗೆ ಯಾವುದೇ ರೀತಿಯ ದೃಷ್ಟಿ ದೋಷ ಆಗಿದ್ದರು.
ನರ ದೃಷ್ಟಿ ಆಗಿದ್ದರು ಹಣಕಾಸಿನ ಕೊರತೆ ಆಗಿದ್ದರು ವಾಸ್ತು ದೋಷದ ಕಾರಣದಿಂದಾಗಿ ಮನೆಯಲ್ಲಿ ಕಿರಿಕಿರಿ ಅ’ಶಾಂತಿ ಮುಂತಾದ ಸಮಸ್ಯೆಗಳು ಆಗಿದ್ದರೂ ಕೂಡ ಕಲ್ಲು ಉಪ್ಪಿನಿಂದ ಸರಳವಾದ ಆಚರಣೆ ಮಾಡುವ ಮೂಲಕ ನಾವು ಸಂಪೂರ್ಣವಾಗಿ ಈ ಸಮಸ್ಯೆಗಳಿಂದ ಸುಧಾರಿಸಿಕೊಳ್ಳಬಹುದು ಅದು ಹೇಗೆ ಎನ್ನುವ ಸರಳ ವಿಧಾನವನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಹೆಣ್ಣು ಮಕ್ಕಳು ತವರಿನ ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು ಮತ್ತು ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಲು ಸಾಧ್ಯವಿಲ್ಲ.!
* ಕಲ್ಲು ಉಪ್ಪು ತಾಯಿ ಮಹಾಲಕ್ಷ್ಮಿ ಸ್ವರೂಪ ಆಗಿರುವುದರಿಂದ ಪೂಜ್ಯನೀಯ ಸ್ಥಾನದಲ್ಲಿ ಕಾಣಬೇಕು. ಆದ ಕಾರಣದಿಂದಾಗಿ ಹಣಕಾಸಿನ ಸಮಸ್ಯೆ ಬರಬಾರದು ಎಂದರೆ ಅಥವಾ ಒಂದು ವೇಳೆ ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದ್ದರೂ ಕೂಡ ಅದು ಪರಿಹಾರವಾಗಲು ಮಾರ್ಗ ದೊರಕಬೇಕು.
ಮನೆಯಲ್ಲಿ ಅಷ್ಟೈಶ್ವರ್ಯ ಸಂಪತ್ತುಗಳು ಅಭಿವೃದ್ಧಿ ಆಗಬೇಕು ಎಂದು ಬಯಸುವುದಾದರೆ ನೀವು ಭಕ್ತಿಯಿಂದ ಪ್ರತಿ ತಿಂಗಳು ಸಂಬಳ ಬಂದ ಕೂಡಲೇ ಸಂಬಳದಲ್ಲಿ ಮೊದಲಿಗೆ ಇಪ್ಪತ್ತು ರೂಪಾಯಿ ತೆಗೆದು ಅದರಲ್ಲಿ ಕಲ್ಲು ಉಪ್ಪನ್ನು ಖರೀದಿಸಿ ತನ್ನಿ. ಯಾವುದೇ ಕಾರಣಕ್ಕೂ ಪುಡಿಯಾಗಿರುವ ಉಪ್ಪನ್ನು ತರಬಾರದು ಕಲ್ಲು ಉಪ್ಪನ್ನೇ ಖರೀದಿಸಬೇಕು.
ಈ ಸುದ್ದಿ ಓದಿ:- ಮಹಿಳೆಯರಿಗೆ ಪ್ರತಿ ತಿಂಗಳು 5000.! ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆ ಕೂಡಲೇ ಅರ್ಜಿ ಸಲ್ಲಿಸಿ.!
ಜೊತೆಗೆ ಪಿಂಗಾಣಿ ಅಥವಾ ಮಣ್ಣಿನ ಬಟ್ಟಲನ್ನು ಖರೀದಿಸಬೇಕು. ಆ ಕಲ್ಲು ಉಪ್ಪಿನಲ್ಲಿ ಗೋಪುರದ ರೀತಿ ಹಾಕಿ ದೇವರಕೋಣೆಯಲ್ಲಿ ಇಟ್ಟು ಪ್ರತಿನಿತ್ಯವೂ ಕೂಡ ಪೂಜೆ ಮಾಡಬೇಕು. ಒಂದು ತಿಂಗಳಾದ ನಂತರ ಆ ಉಪ್ಪನ್ನು ನಿರ್ಜನ ಪ್ರದೇಶದಲ್ಲಿ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಿ ಬರಬೇಕು ಅಥವಾ ಉಪ್ಪನ್ನು ಕರಗಿಸಿ ದೊಡ್ಡ ಮರಕ್ಕೆ ಹಾಕಿ ಆ ಪಿಂಗಾಣಿ ಬಟ್ಟಲು ಅಥವಾ ಮಣ್ಣಿನ ಬಟ್ಟಲನ್ನು ಕೂಡ ಅಲ್ಲೇ ವಿಸರ್ಜನೆ ಮಾಡಬೇಕು.
* ಒಂದು ವೇಳೆ ನರ ದೃಷ್ಟಿಯಾಗಿದ್ದರೆ ಅಥವಾ ನಕರಾತ್ಮಕ ಶಕ್ತಿಯು ಮನೆಗೆ ಪ್ರವೇಶ ಮಾಡುತ್ತಿದೆ ಎನ್ನುವ ಅನುಮಾನ ಇದ್ದರೆ ಅಥವಾ ನೀವೇ ಯಾವುದಾದರೂ ಓಡಾಡುವ ಸ್ಥಳದಲ್ಲಿ ಕೆಟ್ಟ ವಸ್ತುಗಳನ್ನು ತುಳಿದಿದ್ದರೆ, ಯಾವುದೋ ಯಂತ್ರದ ಸ್ಪರ್ಶವಾಗಿದ್ದರೆ, ಕೆಟ್ಟ ವ್ಯಕ್ತಿಗಳು ನಿಮ್ಮ ಜೊತೆ ಮಾತನಾಡಿ ಸ್ಪರ್ಶ ಮಾಡಿದ್ದರೆ ಇಂತಹ ಎಲ್ಲ ದೋಷಗಳು ನಿವಾರಣೆ ಆಗಲು ತಪ್ಪದೇ ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ಕಲ್ಲು ಉಪ್ಪಿನಿಂದ ಈ ಆಚರಣೆ ಮಾಡಿ.
ಈ ಸುದ್ದಿ ಓದಿ:- ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಆಗುತ್ತಿಲ್ಲವೇ.? ಹಾಗಾದ್ರೆ ಕೇವಲ 3 ವಾರ ಈ ಕೆಲಸ ಮಾಡಿ ಸಾಕು.! ನಿಮ್ಮ ಚಿನ್ನ ವಾಪಸ್ ಮನೆ ಸೇರುತ್ತೆ.!
ಇದಕ್ಕೂ ಕೂಡ ಕಲ್ಲು ಉಪ್ಪನ್ನೇ ಬಳಸಬೇಕು. ನೀವು ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ಕಲ್ಲು ಉಪ್ಪನ್ನು ಒಂದು ಮಣ್ಣಿನ ಅಥವಾ ಗಾಜಿನ ಅಥವಾ ಪಿಂಗಾಣಿ ಬಟ್ಟಲಿನಲ್ಲಿ ಪೂರ್ತಿ ತೆಗೆದುಕೊಂಡು ಮನೆಯ ಮೂಲೆ ಮೂಲೆಯಲ್ಲೂ ಕೂಡ ಓಡಾಡಿ ಮನೆಯ ಮುಖ್ಯದ್ವಾರಕ್ಕೆ ಬಂದು ದೃಷ್ಟಿ ತೆಗೆದು ಬಾಗಿಲ ಬಳಿ ಇಡಬೇಕು.
ಅದಕ್ಕೆ ಸ್ವಲ್ಪ ನೀರು ಹಾಕಬೇಕು ಸಂಜೆ ತನಕ ಅಲ್ಲೇ ಇದ್ದದನ್ನು ಸಂಜೆ ಕರಗಿದ ಮೇಲೆ ತೆಗೆದುಕೊಂಡು ಹೋಗಿ ಯಾವುದಾದರು ದೊಡ್ಡ ಗಿಡಕ್ಕೆ ಹಾಕಬೇಕು ಯಾವುದೇ ಕಾರಣಕ್ಕೂ ಚಿಕ್ಕ ಪುಟ್ಟ ಗಿಡಗಳಿಗೆ ಹಾಕಬೇಡಿ ಯಾಕೆಂದರೆ ನಕಾರಾತ್ಮಕ ಶಕ್ತಿಯ ಪ್ರಭಾವದಿಂದ ಗಿಡಗಳು ಒಣಗಿ ಹೋಗುತ್ತವೆ ಆದರೆ ದೊಡ್ಡ ಮರಕ್ಕೆ ಏನು ಆಗುವುದಿಲ್ಲ. ಆ ಗಾಜಿನ ಅಥವಾ ಮಣ್ಣಿನ ಬಟ್ಟಲನ್ನು ಸ್ವಚ್ಛ ಮಾಡಿ ಮತ್ತೆ ಬಳಸಬಹುದು. ಈ ರೀತಿ ತಿಂಗಳಿಗೆ ಎರಡು ದಿನ ಮಾಡಿ ಪರಿಸ್ಥಿತಿ ಬಹಳ ಸುಧಾರಿಸುತ್ತದೆ ಎಲ್ಲರಿಗೂ ಶುಭವಾಗಲಿ.