ಎಲ್ಲರಿಗೂ ತಿಳಿದಿರುವಂತೆ ಹೆಣ್ಣು ಮಕ್ಕಳಿಗೂ ಕೂಡ ತಮ್ಮ ತಂದೆಯ ಆಸ್ತಿಯಲ್ಲಿ ಹಕ್ಕು ಇದೆ ಎಂಬ ಮಾಹಿತಿ ತಿಳಿದಿದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ತವರಿನ ಆಸ್ತಿಯಲ್ಲಿ ಕೆಲವೊಂದು ಆಸ್ತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಆಸ್ತಿಗಳಲ್ಲಿ ಹಕ್ಕನ್ನು ಪಡೆಯಲು ಅವಕಾಶ ಇರುವುದಿಲ್ಲ ಎಂದೇ ಹೇಳಬಹುದು.
ಹಾಗಾದರೆ ಈ ದಿನ ಹೆಣ್ಣು ಮಕ್ಕಳು ತಮ್ಮ ತವರಿನ ಆಸ್ತಿಯಲ್ಲಿ ಯಾವ ಯಾವ ಆಸ್ತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಹಾಗೂ ಯಾವ ಆಸ್ತಿಯನ್ನು ಪಡೆಯುವುದಕ್ಕೆ ಅರ್ಹರಲ್ಲ ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
ಈ ಸುದ್ದಿ ಓದಿ:-ಮಹಿಳೆಯರಿಗೆ ಪ್ರತಿ ತಿಂಗಳು 5000.! ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆ ಕೂಡಲೇ ಅರ್ಜಿ ಸಲ್ಲಿಸಿ.!
* ಮೊದಲನೆಯದಾಗಿ ಹೆಣ್ಣು ಮಕ್ಕಳು ತಮ್ಮ ತಂದೆಯ ಆಸ್ತಿಯಲ್ಲಿ ಅಂದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಪಾಲು ಸಿಗುತ್ತದೆಯೋ ಅಷ್ಟೇ ಸಂಪೂರ್ಣವಾದ ಪಾಲನ್ನು ಹೆಣ್ಣು ಮಕ್ಕಳು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಪಿತ್ರಾರ್ಜಿತ ಆಸ್ತಿ ಎಂದರೆ ವಂಶ ಪಾರಂಪರ್ಯವಾಗಿ ಬಂದಿರುವ ಆಸ್ತಿ, ತಂದೆ,ತಾತ, ಮುತ್ತಾತ ಮೂರು ತಲೆಮಾರಿನಿಂದ ಬಂದಿರುವ ಆಸ್ತಿ ಆಗಿರುತ್ತದೆ.
* ಇನ್ನು ಎರಡನೆಯದಾಗಿ ಒಟ್ಟು ಕುಟುಂಬವಾಗಿ ಅಂದರೆ ಜಂಟಿಯಿಂದ ಅಣ್ಣ ತಮ್ಮಂದಿರು ಒಟ್ಟಿಗೆ ಜೊತೆ ಇದ್ದು ಆ ಒಂದು ಸಂದರ್ಭದಲ್ಲಿ ಸಂಪಾದನೆ ಮಾಡಿರುವಂತಹ ಒಟ್ಟು ಆಸ್ತಿಯನ್ನು ಆ ಮನೆಯ ಹೆಣ್ಣು ಮಕ್ಕಳು ಪಡೆಯಬಹುದು. ಅಂದರೆ ಆ ಒಂದು ಆಸ್ತಿಯಲ್ಲಿ ಪಾಲನ್ನು ಕೇಳುವಂತಹ ಹಕ್ಕನ್ನು ಹೆಣ್ಣು ಮಕ್ಕಳು ಹೊಂದಿರುತ್ತಾರೆ. ಹಾಗೂ ಈ ಒಂದು ಆಸ್ತಿಯನ್ನು ಜಂಟಿ ಕುಟುಂಬದ ಆಸ್ತಿ ಎಂದು ಕೂಡ ಕರೆಯಲಾಗುತ್ತದೆ.
ಈ ಸುದ್ದಿ ಓದಿ:-ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಆಗುತ್ತಿಲ್ಲವೇ.? ಹಾಗಾದ್ರೆ ಕೇವಲ 3 ವಾರ ಈ ಕೆಲಸ ಮಾಡಿ ಸಾಕು.! ನಿಮ್ಮ ಚಿನ್ನ ವಾಪಸ್ ಮನೆ ಸೇರುತ್ತೆ.!
* ಅದೇ ರೀತಿಯಾಗಿ ಒಟ್ಟು ಆಸ್ತಿಯ ಲಾಭದಿಂದ ಬಂದಿರುವಂತಹ ಹಣವನ್ನು ಮತ್ತೆ ಬೇರೆ ಒಂದು ಆಸ್ತಿಯನ್ನು ಖರೀದಿ ಮಾಡಿದ್ದರೆ ಅದನ್ನು ಮತ್ತೆ ಬೇರೊಂದು ಬಂಡವಾಳಕ್ಕೆ ಹೂಡಿಕೆ ಮಾಡಿದರೆ ಆ ಒಂದು ಆಸ್ತಿ ಯಲ್ಲಿಯೂ ಕೂಡ ಪಾಲನ್ನು ಕೇಳುವಂತಹ ಹಕ್ಕನ್ನು ಹೆಣ್ಣು ಮಕ್ಕಳು ಹೊಂದಿರುತ್ತಾರೆ.
* ಪಿತ್ರಾರ್ಜಿತ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿ ಆ ಒಂದು ಹಣದಿಂದ ಬೇರೆ ಆಸ್ತಿಯನ್ನು ಕೊಂಡುಕೊಂಡಿದ್ದರೂ ಕೂಡ ಆ ಒಂದು ಆಸ್ತಿಯಲ್ಲಿ ಪಾಲು ಕೇಳುವಂತಹ ಹಕ್ಕನ್ನು ಹೆಣ್ಣು ಮಕ್ಕಳು ಹೊಂದಿರುತ್ತಾರೆ.
* 2005ರ ನಂತರ ಯಾವುದೇ ರೀತಿಯ ಆಸ್ತಿ ಭಾಗ ಆಗದೇ ಇದ್ದರೂ ಕೂಡ ಅಂತಹ ಆಸ್ತಿಯಲ್ಲಿಯೂ ಕೂಡ ಹೆಣ್ಣು ಮಕ್ಕಳು ಪಾಲನ್ನು ಕೇಳಬಹುದು.
ಈ ಸುದ್ದಿ ಓದಿ:-ಮನೆ ಮುಖ್ಯದ್ವಾರದ ಎದುರು ಈ ವಸ್ತುಗಳು ಇದ್ದರೆ ಖಂಡಿತವಾಗಿಯೂ ಸಾಲ ತೀರುವುದಿಲ್ಲ.! ಸಾಲ ತೀರಬೇಕು ಅಂದ್ರೆ ಈ ಸಲಹೆ ಪಾಲಿಸಿ.!
* ಒಟ್ಟು ಆಸ್ತಿಯಲ್ಲಿ ಒಬ್ಬ ಪುರುಷ ತನ್ನ ಸಂಪಾದನೆಯಲ್ಲಿ ಬೇರೆ ಆಸ್ತಿ ಖರೀದಿ ಮಾಡಿ ಅದನ್ನು ಒಟ್ಟು ಕುಟುಂಬಕ್ಕೆ ವಹಿಸಿದ್ದರೆ ಅದರಲ್ಲಿಯೂ ಕೂಡ ಹೆಣ್ಣು ಮಕ್ಕಳು ಆಸ್ತಿಯ ಪಾಲನ್ನು ಕೇಳಬಹುದು.
ಇನ್ನು ಯಾವ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲನ್ನು ಕೇಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ನೋಡುವುದಾದರೆ.
* ತಾಯಿಗೆ ಬಂದಿರುವಂತಹ ಆಸ್ತಿಯಲ್ಲಿ ಪಾಲನ್ನು ಕೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ ಅದು ಅವರ ತವರಿನಿಂದ ಬಂದಿರು ವಂತಹ ಆಸ್ತಿ ಆಗಿರುತ್ತದೆ ಅದನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು.
* ಅದೇ ರೀತಿ ತಂದೆಗೂ ಕೂಡ ಯಾವುದಾದರೂ ದಾನದ ರೂಪದಲ್ಲಿ ಬಂದಿರುವಂತಹ ಆಸ್ತಿ ಆಗಿರಬಹುದು, ಅವರ ತಂದೆಯ ಆಸ್ತಿಯಾಗಿರ ಬಹುದು ಅದರಲ್ಲಿಯೂ ಕೂಡ ಹೆಣ್ಣು ಮಕ್ಕಳು ಪಾಲನ್ನು ಕೇಳಲು ಸಾಧ್ಯವಾಗುವುದಿಲ್ಲ.
* ತಂದೆ ಸ್ವಯಾರ್ಜಿತವಾಗಿ ಆಸ್ತಿಯನ್ನು ಸಂಪಾದನೆ ಮಾಡಿದ್ದರೆ ಅದರಲ್ಲಿಯೂ ಕೂಡ ಪಾಲನ್ನು ಕೇಳಲು ಸಾಧ್ಯವಾಗುವುದಿಲ್ಲ ಅದೇ ರೀತಿಯಾಗಿ ಸರ್ಕಾರದಿಂದ ಯಾವುದಾದರು ಆಸ್ತಿ ಬಂದಿದ್ದರೂ ಕೂಡ ಅದನ್ನು ಪಡೆಯಲಾಗುವುದಿಲ್ಲ.
* 2005ರ ಹಿಂದೆಯೇ ಆಸ್ತಿಯಲ್ಲಿ ತಂದೆ ಮತ್ತು ಗಂಡು ಮಕ್ಕಳು ಪಾಲನ್ನು ಹಂಚಿಕೊಂಡಿದ್ದರೆ ಆ ಒಂದು ಆಸ್ತಿಯಲ್ಲಿಯೂ ಕೂಡ ಹೆಣ್ಣು ಮಕ್ಕಳು ಪಾಲನ್ನು ಕೇಳಲು ಬರುವುದಿಲ್ಲ. ಬದಲಿಗೆ ತಂದೆಯ ಅವಧಿಯ ನಂತರ ಆಸ್ತಿಯಲ್ಲಿ ನೀವು ಪಾಲನ್ನು ಪಡೆಯಬಹುದು.
ಈ ಸುದ್ದಿ ಓದಿ:-ಇನ್ಮುಂದೆ ಉಚಿತ ಕರೆಂಟ್ ಬೇಕು ಎಂದರೆ ಮತ್ತೆ ಈ ರೀತಿ ಅರ್ಜಿ ಹಾಕಬೇಕು, ಇಲ್ಲ ಎಂದರೆ ಉಚಿತ ಕರೆಂಟ್ ಕ್ಯಾನ್ಸಲ್.!
* ತಂದೆ ಸ್ವಯಾರ್ಜಿತವಾಗಿ ಸಂಪಾದನೆ ಮಾಡಿದಂತಹ ಆಸ್ತಿಯನ್ನು ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳಾಗಲಿ, ಪಾಲನ್ನು ಕೇಳಲು ಬರುವುದಿಲ್ಲ ಅವರು ಯಾರಿಗೆ ಬೇಕಾದರೂ ಕೊಡಬಹುದು.
* ಹೆಣ್ಣು ಮಕ್ಕಳು ಮೊದಲೇ ಹಕ್ಕು ಬಿಡುಗಡೆ ಪತ್ರದ ಮೂಲಕ ಸಹಿ ಮಾಡಿಕೊಟ್ಟಿದ್ದರೆ ಆನಂತರ ಮತ್ತೆ ಆಸ್ತಿ ಬೇಕು ಎಂದು ಕೇಳಿದರು ಅವರು ಪಡೆಯಲು ಸಾಧ್ಯವಾಗುವುದಿಲ್ಲ.