ಕಲಿಯುಗದಲ್ಲಿ ನರ ಮನುಷ್ಯರನ್ನು ಕಾಡುವಂತಹ ನೂರಾರು ರೀತಿ ಸಮಸ್ಯೆಗಳನ್ನು ಎದುರಿಸುವ ಶಕ್ತಿಯು ಆಂಜನೇಯ ಸ್ವಾಮಿಯನ್ನು ಆರಾಧಿಸುವ ಮೂಲಕ ಸಿಗುತ್ತದೆ. ಆಂಜನೇಯನನ್ನು ಪ್ರಾರ್ಥಿಸುವವರಿಗೆ, ಪ್ರತಿನಿತ್ಯ ಪೂಜಿಸುವವರಿಗೆ, ಆಂಜನೇಯ ಸ್ವಾಮಿಯಂತೆ ತೀಕ್ಷ್ಣ ಬುದ್ಧಿ ಧೈರ್ಯ ಆರೋಗ್ಯ ಚುರುಕುತನ ಎಲ್ಲವೂ ಕೂಡ ಇರುತ್ತದೆ.
ಆಂಜನೇಯ ಸ್ವಾಮಿಯ ಅನುಗ್ರಹ ಇರುವವರನ್ನು ಕಲಿಪುರುಷ ಹಿಡಿಯಲಾರ ಮತ್ತು ಶನಿಭಾದೆಯಿಂದ ಕೂಡ ಮುಕ್ತಿ ಸಿಗುತ್ತದೆ. ಹಾಗಾಗಿ ಆಂಜನೇಯ ಸ್ವಾಮಿಯ ಕೃಪೆಗಾಗಿ ಪ್ರತಿನಿತ್ಯವು ಆಂಜನೇಯನನ್ನು ಪ್ರಾರ್ಥಿಸಿ, ಹನುಮಾನ್ ಚಾಲೀಸಾ ಪಠಿಸಿ ಜೊತೆಗೆ ಮಾರುತಿಗೆ ಇಷ್ಟವಾದ ಈ ಒಂಬತ್ತು ಬಗೆಯ ವಸ್ತುಗಳಿಂದ ಆಂಜನೇಯನನ್ನು ಪೂಜಿಸಿದರೆ ಇನ್ನು ಹೆಚ್ಚಿನ ಫಲ ಸಿಗುತ್ತದೆ. ಆಂಜನೇಯನಿಗೆ ಇಷ್ಟವಾದ ಆ ವಸ್ತುಗಳು ಯಾವುವು ಗೊತ್ತಾ?
* ರಾಮನಾಮ – ಶ್ರೀ ರಾಮ ಜೈ ರಾಮ ಜಯ ಜಯ ರಾಮ ಎಂದು ಯಾರು ರಾಮ ನಾಮ ಜಪ ಮಾಡುತ್ತಾರೆಯೋ ಖಂಡಿತವಾಗಿಯೂ ಅಂತಹ ಭಕ್ತರ ಮನೆಗೆ ಆಂಜನೇಯ ಬಂದೇ ಬರುತ್ತಾರೆ. ರಾಮಾಯಣದ ಕೊನೆಯಲ್ಲಿ ಇದರ ಬಗ್ಗೆ ಉಲ್ಲೇಖಿಸಿರುವ ಶ್ಲೋಕಗಳು ಸಿಗುತ್ತವೆ ರಾಮ ನಾಮ ಹಾಡುವ ಕಡೆ ರಾಮನ ಜಪ ನಡೆಯುವ ಕಡೆ, ಕೀರ್ತನೆಯೇ ಆಗಲಿ ಹರಿಕಥೆಯೇ ಆಗಲಿ ಅಲ್ಲಿಗೆ ಮಾರುತಿ ಬಂದೇ ಬರುತ್ತಾರೆ.
ಈ ಸುದ್ದಿ ಓದಿ:- ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ.!
* ಸಿಂಧೂರ – ಸಿಂಧೂರವನ್ನು ತಂದು ಅದನ್ನು ತುಪ್ಪದ ಜೊತೆ ಮಿಕ್ಸ್ ಮಾಡಿ ಪ್ರತಿನಿತ್ಯ ಹಣೆಗೆ ಇಟ್ಟುಕೊಂಡರೆ ಆಂಜನೇಯನ ಕೃಪಾಕಟಾಕ್ಷ ದೊರೆಯುತ್ತದೆ. ಮನೆಯಲ್ಲಿ ಆಂಜನೇಯ ವಿಗ್ರಹ ಅಥವಾ ಫೋಟೋ ಇದ್ದರೂ ಮೊದಲಿಗೆ ಸಿಂಧೂರ ಹಚ್ಚಿ ಆಮೇಲೆ ಸ್ವಲ್ಪ ಕುಂಕುಮ ಇಡಬೇಕು ಆಂಜನೇಯ ಸ್ವಾಮಿಯ ವಿಗ್ರಹಕ್ಕೆ ಅಕ್ಷತೆ ಹಾಕಿದರು ಅದನ್ನು ಅರಿಶಿನದ ಬದಲು ಸಿಂಧಕರದಲ್ಲಿ ಸಿದ್ಧಪಡಿಸಿಕೊಳ್ಳಬೇಕು.
ಆಗ ಆಂಜನೇಯ ಸ್ವಾಮಿಯ ಪ್ರಸನ್ನರಾಗುತ್ತಾರೆ ಇದಕ್ಕೆ ಕೇಸರಿ ಬಣ್ಣದಲ್ಲಿ ಇರುತ್ತದೆ. ಆಂಜನೇಯನಿಗೆ ಇಷ್ಟವಾದ ಬಣ್ಣ ಕೂಡ ಕೇಸರಿ ಆಂಜನೇಯ ಸ್ವಾಮಿ ದರ್ಶನಕ್ಕೆ ಹೋಗುವುದಾದರೆ ಕೇಸರಿ ಬಣ್ಣದ ವಸ್ತುದಲ್ಲಿ ಹೋದರೆ ಬಹಳ ಬೇಗ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ.
* ಉದ್ದಿನ ವಡೆ – ಉದ್ದಿನ ವಡೆಯು ಆಂಜನೇಯ ಸ್ವಾಮಿಗೆ ಇಷ್ಟವಾದ ಆಹಾರ. ನೀವು ಹತ್ತಿರದ ಯಾವುದೇ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋದರು ಉದ್ದಿನ ವಡೆಯಿಂದ ಹಾರ ಹಾಕಿರುವುದನ್ನು ಕಾಣಬಹುದು. ಈ ರೀತಿ ಆಂಜನೇಯ ಸ್ವಾಮಿಗೆ ಉಪ್ಪಿನ ವಡೆ ಹಾರ ಅರ್ಪಿಸುವುದರಿಂದ ಗೃಹ ದೋಷ, ಅಂಗಾರಕ ದೋಷ, ರಾಹು ಕೇತು ದೋಷ ಈ ರೀತಿ ದೋಷಗಳು ನಿವಾರಣೆ ಆಗುತ್ತದೆ.
ಈ ಸುದ್ದಿ ಓದಿ:- ಇದುವರೆಗೂ ನಿಮಗೆ ಗೊತ್ತಿರದ, ಆಹಾರದ ಬಗ್ಗೆ ಅತಿ ಮುಖ್ಯವಾದ ಕೆಲವು ಉಪಯುಕ್ತ ಮಾಹಿತಿಗಳು.!
* ವೀಳ್ಯದೆಲೆ – ಆಂಜನೇಯ ಸ್ವಾಮಿಗೆ ಬಹಳ ಇಷ್ಟವಾದ ಮತ್ತೊಂದು ವಸ್ತು ಎಂದರೆ ವೀಳ್ಯದೆಲೆ ಹಾರ. ಸಾಧ್ಯವಾದರೆ ಈ ವೀಳ್ಯದೆಲೆಯಲ್ಲಿ ಕೇಸರಿ ಯಿಂದ ಶ್ರೀರಾಮ್ ಎಂದು ಬರೆದು ಹಾರ ಮಾಡಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅರ್ಪಿಸಿದರೆ ಅಥವಾ ಆಂಜನೇಯ ಸ್ವಾಮಿಗೆ ಫೋಟೋಗೆ ಹಾಕಿದರೆ ಖಂಡಿತವಾಗಿಯೂ ಆಂಜನೇಯ ಸ್ವಾಮಿಯ ಸಂಪೂರ್ಣ ಕೃಪಾಕಟಾಕ್ಷ ನಿಮಗೆ ದೊರೆಯುತ್ತದೆ
* ಪಾರಿಜಾತ ಹಾಗೂ ತುಳಸಿ ಆಂಜನೇಯ ಸ್ವಾಮಿಗೆ ಬಹಳ ಇಷ್ಟವಾದ ವಸ್ತುಗಳು ಪ್ರತಿ ಮಂಗಳವಾರ ಅಥವಾ ಶನಿವಾರ ಪಾರಿಜಾತ ಹೂಗಳನ್ನು ಮತ್ತು ತುಳಸಿ ಹೂಗಳನ್ನು ಅರ್ಪಿಸಿ ಅರ್ಚನೆ ಮಾಡಿಸಿದರೆ ಸ್ವಾಮಿಯ ಅನುಗ್ರಹ ದೊರೆಯುತ್ತದೆ.
* ನೈವೇದ್ಯ – ಆಂಜನೇಯ ಸ್ವಾಮಿಗೆ ಬಾಳೆಹಣ್ಣು ಎಂದರೆ ಬಹಳ ಇಷ್ಟ ಮತ್ತು ಆಂಜನೇಯನಿಗೆ ಇಷ್ಟವಾದ ಸಂಖ್ಯೆ ಐದು ಹಾಗಾಗಿ ಐದು ಬಾಳೆಹಣ್ಣನ್ನು ನೈವೇದ್ಯವಾಗಿ ಅರ್ಪಿಸುವುದರಿಂದ, ತೆಂಗಿನಕಾಯಿ ಒಡೆದು ಚಿಪ್ಪನ್ನು ನೈವೇದ್ಯ ಮಾಡುವುದರಿಂದ ಆಂಜನೇಯ ಸ್ವಾಮಿ ತೃಪ್ತರಾಗುತ್ತಾರೆ ಮತ್ತು ಆಶೀರ್ವದಿಸುತ್ತಾರೆ. ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲು ಕೂಡ ಐದು ಪ್ರದಕ್ಷಿಣೆ ಹಾಕಬೇಕು.
ಈ ಸುದ್ದಿ ಓದಿ:- ಎಷ್ಟೇ ವರ್ಷಗಳಿಂದ ಥೈರಾಯ್ಡ್ ಇರಲಿ, ಈ ಶಂಖ ಮುದ್ರೆ ಮಾಡಿದ್ರೆ ಥೈರಾಯ್ಡ್ ಸಂಪೂರ್ಣ ಗುಣಮುಖವಾಗುತ್ತೆ.!
* ಹನುಮಾನ್ ಚಾಲೀಸಾ – ಜೀವನದಲ್ಲಿ ಯಾವುದೇ ರೀತಿಯ ಕ’ಷ್ಟ, ಸಮಸ್ಯೆ, ದುಃ’ಖ ಇದ್ದರು ತುಳಸಿದಾಸರು ರಚಿಸಿರುವ ಹನುಮಾನ್ ಚಾಲೀಸವನ್ನು 21 ಬಾರಿ ಪ್ರತಿದಿನ ಸಂಜೆ ಶ್ರದ್ಧಾ ಭಕ್ತಿಯಿಂದ ಪಠಿಸಿದರೆ ಖಂಡಿತವಾಗಿಯೂ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.