
ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಕಟಾಕ್ಷ ದೊರೆತರೆ ಜೀವನದಲ್ಲಿ ಎಂತಹ ಕಷ್ಟಗಳಿದ್ದರೂ ಕೂಡ ಮಂಜಿನಂತೆ ಕರಗುತ್ತವೆ. ಆದರೆ ಬಹಳ ಶಿಸ್ತಿನ ಕಟ್ಟುನಿಟ್ಟಿನ ದೇವರಾದ ಸುಬ್ರಹ್ಮಣ್ಯ ಸ್ವಾಮಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಸುಬ್ರಹ್ಮಣ್ಯ ಸ್ವಾಮಿಯ ಪೂಜೆಗೆ ಕೆಲವು ನಿಯಮಗಳಿವೆ. ಅವುಗಳನ್ನು ಪಾಲಿಸಿ ಶ್ರದ್ಧಾ ಭಕ್ತಿಯಿಂದ ಮನಸ್ಪೂರ್ತಿಯಾಗಿ ಪ್ರಾಮಾಣಿಕತೆಯಿಂದ ಪೂಜಿಸಿದಾಗ ಮಾತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹವಾಗುತ್ತದೆ.
ಸುಬ್ರಹ್ಮಣ್ಯ ಸ್ವಾಮಿಯನ್ನು ಸಂತಾನ ಫಲಕ್ಕಾಗಿ, ವಿವಾಹ ಭಾಗ್ಯಕ್ಕಾಗಿ ಹೆಚ್ಚಿನ ಜನರು ಪೂಜಿಸುತ್ತಾರೆ. ಈ ಒಂದು ಕಾರಣಕ್ಕಾಗಿ ಮಾತ್ರ ಅಲ್ಲದೆ ನಿಮಗೆ ವಿದೇಶಕ್ಕೆ ಹೋಗುವ ಕನಸಿದ್ದರೆ ಅಥವಾ ಜೀವನದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಬೇಕೆನ್ನುವ ಅಭಿಲಾಷೆಗಳಿದ್ದರೆ ಮತ್ತು ಭೂಮಿ, ಆಸ್ತಿ, ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಇವೆಲ್ಲವೂ ನಿರ್ವಿಘ್ನವಾಗಿ ನಡೆಯಲು ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಬಹುದು.
ಒರಿಜಿನಲ್ ರುದ್ರಾಕ್ಷಿ ಇದಕ್ಕೆ ಎಷ್ಟು ಪವರ್ ಇದೆ ಗೊತ್ತಾ.!
ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳಿಗೆ ಗುಣವಾಗಲು ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸುತ್ತಾರೆ ಜೊತೆಗೆ ಇನ್ನು ಅನೇಕ ದೋಷಗಳ ಪರಿಹಾರಕ್ಕಾಗಿ ಈತನ ಮೊರೆ ಹೋಗುತ್ತಾರೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಎಷ್ಟು ಶಕ್ತಿಯುತವಾದ ದೇವರು ಎಂದರೆ ಒಮ್ಮೆ ಈ ಸ್ವಾಮಿ ನಮ್ಮ ಮೇಲೆ ಕೃಪೆ ತೋರಿದರೆ ಅವರ ಆಶೀರ್ವಾದದಿಂದ ಎಲ್ಲಾ ಕೆಲಸಗಳು ಕೂಡ ಸರಾಗವಾಗಿ ನಡೆಯುತ್ತವೆ.
ನಾವು ಸುಬ್ರಮಣ್ಯ ಸ್ವಾಮಿಯನ್ನು ಆರಾಧಿಸುವುದರಿಂದ ಮಾನಸಿಕವಾಗಿ ಬಹಳ ಪ್ರಶಾಂತತೆಯನ್ನು ಅನುಭವಿಸುತ್ತೇವೆ, ಜೀವನದ ಮೌಲ್ಯ ಅರಿವಾಗುವುದರ ಜೊತೆಗೆ ಶ್ರೇಷ್ಠತೆಯ ಬದುಕು ನಮ್ಮದಾಗುತ್ತದೆ. ನೀವು ಕೂಡ ಸುಬ್ರಹ್ಮಣ್ಯ ಸ್ವಾಮಿಯ ಕೃಪೆಗೆ ಒಳಗಾಗಬೇಕು ಎಂದರೆ ನಾವು ಹೇಳುವ ವಿಧಾನದಿಂದ ಪೂಜಿಸಿ ನಿಮ್ಮ ಎಲ್ಲಾ ಕಷ್ಟಗಳು ಕೂಡ ನಿವಾರಣೆ ಆಗುವುದನ್ನು ಈ ಪೂಜೆ ಆರಂಭಿಸಿದ 21 ದಿನಗಳಲ್ಲಿಯೇ ಕಾಣುತ್ತೀರಿ.
ಶ್ರೀಮಂತರಾಗಲು ಐದು ಸುಲಭ ದಾರಿಗಳು, ನಿದ್ದೆ ಮಾಡುವಾಗಲೂ ಕೂಡ ಹಣ ಗಳಿಸಬಹುದು.!
ಈ ಪೂಜೆ ಆರಂಭಿಸುವುಕ್ಕೂ ಮುನ್ನ ಸುಬ್ರಮಣ್ಯ ಸ್ವಾಮಿಯ ಮೇಲೆ ನಿಮಗೆ ಅಪಾರವಾದ ನಂಬಿಕೆ ಹಾಗೂ ಶ್ರದ್ಧೆ ಇರಬೇಕಾದದ್ದು ಬಹಳ ಮುಖ್ಯ. ನೀವು ಮಂಗಳವಾರದಿಂದ ಇದನ್ನು ಆರಂಭಿಸಿದರೆ ಇನ್ನು ಶುಭ ಯಾಕೆಂದರೆ ಮಂಗಳವಾರದ ದಿನವೂ ಸುಬ್ರಹ್ಮಣ್ಯ ಸ್ವಾಮಿಗೆ ಬಹಳ ಇಷ್ಟವಾದ ದಿನ.
ಆ ದಿನ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುದ್ಧವಾಗಿ ದೇವರಕೋಣೆಗೆ ಹೋಗಿ ದೇವರ ಕೋಣೆಯಲ್ಲಿ ಒಂದು ಸುಬ್ರಹ್ಮಣ್ಯ ಸ್ವಾಮಿಯ ಫೋಟೋ ಇದ್ದರೆ ಅದನ್ನು ಹೂವಿನಿಂದ ಅಲಂಕರಿಸಿ ಮತ್ತು ಸುಬ್ರಹ್ಮಣ್ಯ ಸ್ವಾಮಿಗೆ ಇಷ್ಟವಾದ ನವಿಲುಗರಿಯನ್ನು ತೆಗೆದುಕೊಂಡು ಅದರ ಪಕ್ಕ ಊದುಗಡ್ಡಿಯನ್ನು ಹಚ್ಚಿ ಇಡಿ. ಈಗ ಎಡಗೈಯಲ್ಲಿ ಅಕ್ಷತೆ ಹಿಡಿದುಕೊಂಡು ಬಲಗೈ ಸಹಾಯದಿಂದ ಅದನ್ನು ಮುಚ್ಚಿ ನಿಮ್ಮ ಯಾವ ಕಷ್ಟ ನಿವಾರಣೆ ಆಗಬೇಕು, ಅದರ ಸಂಕಲ್ಪ ಮಾಡಿಕೊಳ್ಳಿ.
ನಿಮ್ಮ ಮನೆ ಮೇಲೆ ಯಾರಾದರೂ ಮಾ-ಟ ಮಂ-ತ್ರ ಪ್ರಯೋಗ ಮಾಡಿದ್ದರೆ ಈ ರೀತಿ ನೀವು ಕಂಡುಹಿಡಿಯಬಹುದು.!
ಇದಕ್ಕಿಂತ ಮುಖ್ಯವಾದ ಮತ್ತೊಂದು ವಿಷಯ ಏನೆಂದರೆ ನೀವು ಈ ಸಮಯದಲ್ಲಿ ತಪ್ಪದೆ ಸುಬ್ರಮಣ್ಯ ಸ್ವಾಮಿಯ ಒಂದು ಮಂತ್ರವನ್ನು ಕೂಡ ಹೇಳಬೇಕು. ಮಂತ್ರವನ್ನು 21 ಬಾರಿ ಪಠಣೆ ಮಾಡಬೇಕು. ಆ ಮಂತ್ರವು ಹೀಗಿದೆ “ಓಂ ಐಂ ಕ್ಲೀಂ ಸೌಂ ರೀಂ ಶ್ರೀ ಷಣ್ಮುಗ ದೇವ ವಸಿ ವಸಿ ಸ್ವಾಹಾ” ಇದನ್ನು ಪಠಿಸಿ.
ನೀವು ಇದನ್ನು ಆರಂಭಿಸಿದ 21 ದಿನದ ಒಳಗಡೆ ಯಾವ ರೀತಿ ಬದಲಾವಣೆ ಆಗುತ್ತದೆ ಎನ್ನುವುದನ್ನು ನೀವೇ ಕಣ್ಣಾರೆ ನೋಡುತ್ತೀರಿ, ಅದು ನಿಮ್ಮ ಅನುಭವಕ್ಕೆ ಬಂದ ನಂತರ ನೀವು ಇನ್ನಷ್ಟು ಶ್ರದ್ಧೆಯಿಂದ ಇದನ್ನು ಮುಂದುವರಿಸಿ. ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಅದರಲ್ಲೂ ನಿಮಗೆ ಹಣಕಾಸಿನ ಸಮಸ್ಯೆ ಆಗಿದ್ದರೆ ಯಾರಾದರೂ ಹಣವನ್ನು ತೆಗೆದುಕೊಂಡು ಮೋಸ ಮಾಡಿದ್ದರೆ ಅವರೇ ಹುಡುಕಿಕೊಂಡು ಬಂದು ಹಣ ಕೊಡುತ್ತಾರೆ.