Friday, June 9, 2023
HomeEntertainmentಅಪ್ಪುಗೆ ಕೊಟ್ಟ ಕರ್ನಾಟಕ ರತ್ನ ಪ್ರಶಸ್ತಿ ಎಷ್ಟು ಬೆಲೆ ಬಾಳುತ್ತೆ ಗೊತ್ತ.? ಇದರ ನಿಖರ ಬೆಲೆ...

ಅಪ್ಪುಗೆ ಕೊಟ್ಟ ಕರ್ನಾಟಕ ರತ್ನ ಪ್ರಶಸ್ತಿ ಎಷ್ಟು ಬೆಲೆ ಬಾಳುತ್ತೆ ಗೊತ್ತ.? ಇದರ ನಿಖರ ಬೆಲೆ ತಿಳಿದ್ರೆ ನಿಜಕ್ಕೂ ಬೆರಗಾಗುತ್ತಿರ.!

ಸ್ನೇಹಿತರೆ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಕಲಾವಿದರು ಹಾಗೂ ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರ ಮುದ್ದಿನ ಮಗನಾಗಿದ್ದು ಕನ್ನಡ ಚಿತ್ರರಂಗದಲ್ಲಿ ಹಾಗೂ ಬೇರೆ ಭಾಷೆಯ ಚಿತ್ರರಂಗದಲ್ಲೂ ಕೂಡ ಇವರ ಪ್ರಖ್ಯಾತಿ ದೊಡ್ಡದು. ಪುನೀತ್ ರಾಜಕುಮಾರ್ ಅವರಿಗೆ ಅಭಿಮಾನ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಇದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಅವರ ನಗು ಮುಖವು ಎಲ್ಲರ ಮನಸ್ಸಲ್ಲಿ ಇದ್ದೇ ಇರುತ್ತದೆ ಹಾಗೂ ಅವರಿಗೆ ಪರಿಸರದ ಮೇಲೆ ಹೆಚ್ಚಿನ ಕಾಳಜಿ, ಹಿರಿಯರ ಮೇಲೆ ಗೌರವ ಭಾವದಿಂದ ಸದಾ ಇರುತ್ತಿದ್ದರು. ಪುನೀತ್ರವರ ಈ ಗುಣವೂ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಅವರು ಚಿತ್ರರಂಗದಲ್ಲಿ ಅವರದೇ ಆದ ಶೈಲಿ ಹಾಗೂ ನಟನೆಯಿಂದ ಅಭಿಮಾನಿಗಳನ್ನು ಮನರಂಜಿಸುತ್ತಿದ್ದರು ಅದಲ್ಲದೆ ಅಭಿಮಾನಿಗಳ ಮೇಲೆ ಹೆಚ್ಚಿನ ಪ್ರೀತಿಯನ್ನು ಪುನೀತ್ ರವರು ಇಟ್ಟಿದ್ದರು ಹಾಗಾಗಿ ಅಭಿಮಾನಿಗಳು ಇವರಿಗೆ ಅಪ್ಪು ಎಂದು ಕರೆಯುತ್ತಿದ್ದರು.

ಪುನೀತ್ ರಾಜಕುಮಾರ್ ಅವರು ಹೃದಯಾಘಾತದಿಂದ ಈಗಾಗಲೇ ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಗಿದೆ, ಅವರು ಅಕ್ಟೋಬರ್ 29 2021 ರಂದು ನಿ.ಧಾ.ನ.ವಾಗದರೂ ಕೂಡ ಒಂದು ವರ್ಷದಿಂದ ಅಪ್ಪು ಅವರನ್ನು ನೆನೆಯದೇ ಇರುವ ದಿನವೇ ಇಲ್ಲ. ಪುನೀತ್ ರವರು ಡಾಕ್ಟರ್ ರಾಜ್ ಕುಮಾರ್ ಅಂತೆ ಸರಳತೆಯ ಸ್ವಭಾವವನ್ನು ಹೊಂದಿದ್ದಾರೆ ಪುನೀತ್ ರವರು ನಟನೆ ಅಲ್ಲದೆ ಸಮಾಜ ಸೇವೆಯಲ್ಲೂ ತೊಡಗಿದ್ದರು, ಆದರೆ ಈ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಎಲ್ಲೂ ತೋರಿಸಿಕೊಳ್ಳದೆ ಸಮಾಜ ಸೇವೆಯನ್ನು ಯಾರಿಗೂ ಕಾಣದ ಹಾಗೆ ಮಾಡುತ್ತಿದ್ದರು.

ಈ ವ್ಯಕ್ತಿತ್ವವೇ ಜನರು ಅಪ್ಪುವನ್ನು ಪೂಜಿಸಲು ಕಾರಣ, ಅವರ ಈ ಗುಣವೂ ಎಲ್ಲಾ ಯುವಕರಿಗೂ ಮಾದರಿಯಾಗಿದೆ ಹಾಗೂ ಈ ವ್ಯಕ್ತಿತ್ವವನ್ನು ಹಿಂಬಾಲಿಸಿದರೆ ನಮ್ಮ ರಾಜ್ಯದಲ್ಲಿ ಬಡತನ ನಿರ್ಮೂಲವು ಸುಲಭವಾಗಿ ಆಗುತ್ತದೆ. ಪುನೀತ್ ರವರು ಯಾರೊಂದಿಗೂ ಶತ್ರುತ್ವವನ್ನು ಬೆಳೆಸಿರಲಿಲ್ಲ, ಹಾಗಾಗಿ ಪುನೀತ್ ರವರನ್ನು ಅಜಾತಶತ್ರು ಎಂದು ಕರೆಯುತ್ತಾರೆ. ಪುನೀತ್ ರಾಜಕುಮಾರ್ ಅವರು ಈವರೆಗೂ ಬರೋಬ್ಬರಿ 26 ಅನಾಥಾಶ್ರಮಗಳು, 16 ವೃದ್ದಾಶ್ರಮಗಳು, 46 ಉಚಿತ ಶಾಲೆಗಳು, 19 ಗೋ ಶಾಲೆಗಳು, 1800 ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಇವರು ತೆಗೆದುಕೊಂಡಿದ್ದಾರೆ.

ಇವುಗಳ ಜೊತೆಗೆ ಮೈಸೂರಿನಲ್ಲಿರುವಂತಹ ಹೆಣ್ಣು ಮಕ್ಕಳ ವಸತಿ ಶಾಲೆಯಾದ ಶಕ್ತಿ ಧಾಮದ ಸಂಪೂರ್ಣ ಜವಾಬ್ದಾರಿಯನ್ನು ಪುನೀತ್ ರವರು ತೆಗೆದುಕೊಂಡಿದ್ದಾರೆ. ಈ ಎಲ್ಲಾ ಜವಾಬ್ದಾರಿಯನ್ನು ಯಾರಿಗೂ ಕಾಣದ ರೀತಿ ಮಾಡುತ್ತಿದ್ದರು, ಅಪ್ಪುರವರು ಇದಲ್ಲದೆ ಮನೆಯ ಬಾಗಿಲಿಗೆ ಬಂದ ಅಭಿಮಾನಿಗಳಿಗೆ ಮಾತನಾಡಿಸದೆ ಕಳಿಸಿದ್ದು ಇಲ್ಲವಂತೆ.

ಅಪ್ಪುರವರ ಈ ಸ್ವಭಾವದಿಂದ ಹಾಗೂ ಸಮಾಜಸೇವೆಯ ಪ್ರತೀಕವಾಗಿ ಕರ್ನಾಟಕ ಸರ್ಕಾರ ಪುನೀತ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಿದ್ದಾರೆ. ಈ ಪ್ರಶಸ್ತಿಯನ್ನು ಸ್ವತಃ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜೂನಿಯರ್ ಎನ್ಟಿಆರ್ ಹಾಗೂ ತಮಿಳ್ ತಲೈವಾ ರಜನಿಕಾಂತ್ ರವರು ಪುನೀತ್ ರವರ ಬದಲಾಗಿ ಪುನೀತ್ ಪತ್ನಿಯಾದ ಅಶ್ವಿನಿ ಅವರಿಗೆ ನೀಡಿದ್ದಾರೆ.

ಆದರೆ ಸದ್ಯ ಈ ಪ್ರಶಸ್ತಿಯ ಬೆಲೆ ಎಷ್ಟಿರಬಹುದು ಎಂದು ಸೋಶಿಯಲ್ ಮೀಡಿಯಾ ಗಳಲ್ಲಿ ಗೊಂದಲಗಳನ್ನು ಹುಟ್ಟಿಸಿವೆ. ಸದ್ಯ ಈ ಪ್ರಶಸ್ತಿಯು 6 ಲಕ್ಷ ರೂಪಾಯಿಗಳ ಬೆಲೆಯೂ ಇರುವಂತಾಗಿದೆ. ಕರ್ನಾಟಕ ರತ್ನ ಪ್ರಶಸ್ತಿಯ ಮೂಲಕ 24 ಕ್ಯಾರೆಟ್ ಚಿನ್ನದ ಸರವು ಸಿಕ್ಕಿದೆ ಎಂದು ತಿಳಿಸಲಾಗಿದೆ. ಪುನೀತ ರವರಿಗೆ ಈ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಹಾಗೂ ಪುನೀತ ರವರ ಅಭಿಮಾನಿಗಳಲ್ಲಿ ಸಂತೋಷವನ್ನು ತಂದಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.